ನೌಕರರ, ಉದ್ಯೋಗಸ್ಥರ ವೇತನದ ಅಲ್ಪ ಮೊತ್ತವನ್ನು ಪ್ರತಿ ತಿಂಗಳು ಕಡಿತಗೊಳಿ ಈ ಹಣವನ್ನು ಪಿಎಫ್‌ಗಾಗಿ ಠೇವಣಿ ಮಾಡಲಾಗುತ್ತದೆ. ಪಿಎಫ್ ನೌಕರರ ಭವಿಷ್ಯವನ್ನು ಭದ್ರಪಡಿಸುವ ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ. ಆದರೆ, ನಮ್ಮಲ್ಲಿ ಹಲವರಿಗೆ ತಮ್ಮ ಪಿಎಫ್ ಖಾತೆಯನ್ನು ಪರಿಶೀಲಿಸುವುದು, ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿದಿಲ್ಲ. ಇದಕ್ಕಾಗಿ ನೀವು ಹಲವಾರು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಬೇಕಿಲ್ಲ. ನಿಮ್ಮ ಮೊಬೈಲ್ ನಲ್ಲಿ ಈಗಾಗಲೇ ಉಮಂಗ್ ಆಪ್ ಇದ್ದರೆ ಈ ಮೂಲಕ ನೀವು ಪಿಎಫ್ ಗೆ ಸಂಬಂಧಿಸಿದ ಯಾವುದೇ ಕೆಲಸವನ್ನಾದರೂ ಮಾಡಬಹುದು.
ಉಮಂಗ್ ಭಾರತ ಸರ್ಕಾರದಿಂದ ರಚಿಸಲಾದ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಅದು ಆಲ್-ಇನ್-ಒನ್, ಸಿಂಗಲ್, ಏಕೀಕೃತ, ಸುರಕ್ಷಿತ, ಬಹು-ಚಾನಲ್, ಬಹು-ಪ್ಲಾಟ್‌ಫಾರ್ಮ್, ಬಹು-ಭಾಷೆಯನ್ನು ಒದಗಿಸುತ್ತದೆ. ಬಳಕೆದಾರರಿಗೆ ಸೌಲಭ್ಯ ನೀಡುತ್ತದೆ. ಉಮಂಗ್ ಅಪ್ಲಿಕೇಶನ್‌ನ ಸಹಾಯದಿಂದ EPFO ಸಂಬಂಧಿತ ಕೆಲಸಗಳನ್ನು ತುಂಬಾ ಸುಲಭವಾಗಿ ಮಾಡಬಹುದು. EPFO ತನ್ನ ಗ್ರಾಹಕರಿಗೆ ಹಲವಾರು ಆನ್‌ಲೈನ್ ಸೌಲಭ್ಯಗಳನ್ನು ನೀಡುತ್ತದೆ.

ಬಳಕೆದಾರ ಸ್ನೇಹಿ ಉಮಂಗ್ ಅಪ್ಲಿಕೇಶನ್ ಮೂಲಕ ಪಿಎಫ್ ನ ಅನೇಕ UMANG ಅಪ್ಲಿಕೇಶನ್ ಮೂಲಕ ಆನ್‌ಲೈನ್ ಸೇವೆಗಳನ್ನು ಪ್ರವೇಶಿಸಬಹುದು. ಇದಕ್ಕಾಗಿ ನೀವು ಇ-ನಾಮನಿರ್ದೇಶನವನ್ನು ಪೂರ್ಣಗೊಳಿಸುವುದು ಅವಶ್ಯಕ.
ಉಮಂಗ್ ಆಪ್ ಅನ್ನು ಹೇಗೆ ಬಳಸುವುದು?
ಉಮಂಗ್ ಆ್ಯಪ್‌ನ ಸಹಾಯದಿಂದ ನೀವು ಇಪಿಎಫ್‌ಒಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಬೇಕು ಅಂದರೆ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ, ಇದಕ್ಕಾಗಿ ನೀವು ಮೊದಲು ಪ್ಲೇ ಸ್ಟೋರ್‌ನಿಂದ ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಮುಂದಿನ ಹಂತವಾಗಿ ನೀವು ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ ಮತ್ತು ನ್ಯೂ ಯೂಸರ್ ಮೇಲೆ ಕ್ಲಿಕ್ ಮಾಡಿ.
ನಂತರ ನೋಂದಣಿ Registration ಆಯ್ಕೆಗೆ ಹೋಗಿ ಮತ್ತು ಅಲ್ಲಿ ಪ್ರೊಸೀಡ್ (Proceed) ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಇದರ ನಂತರ, ನೀವು MPIN ಅನ್ನು ಸೆಟ್ ಮಾಡಬೇಕು ಮತ್ತು ಇಲ್ಲಿ MPIN ಅನ್ನು ನಮೂದಿಸುವ ಮೂಲಕ Confirm ಮಾಡಬೇಕು.
ಇದರ ನಂತರ Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ Profile Information Screen ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಇದರ ನಂತರ ಸೇವ್ ಮತ್ತು ಪ್ರೊಸೀಡ್ (Save and Proceed)ಆಯ್ಕೆಯನ್ನು ಕ್ಲಿಕ್ ಮಾಡಿ.
ಇದರ ನಂತರ ನಿಮ್ಮ ನೋಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಇದಲ್ಲದೆ, ನೀವು ಈ ಅಪ್ಲಿಕೇಶನ್‌ನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಸಹ ಪೂರ್ಣಗೊಳಿಸಬಹುದು. ಈ ಅಪ್ಲಿಕೇಶನ್‌ನ ಸಹಾಯದಿಂದ ನೀವು ಪಿಎಫ್ ಹಿಂಪಡೆಯುವ ರಿಕ್ವೆಸ್ಟ್ ಗಳನ್ನು ಸಹ ಟ್ರ್ಯಾಕ್ ಮಾಡಬಹುದು
ಉಮಂಗ್ ಅಪ್ಲಿಕೇಶನ್‌ನಲ್ಲಿ EPFO ಸಂಬಂಧಿಸಿದ ಹಲವು ಫೀಚರ್ ಗಳನ್ನು ಬಳಸಬಹುದು
ಪಿ.ಎಫ್ ಚಂದಾದಾರರು ಮೇಲೆ ತಿಳಿಸಿದ ಲಾಗಿನ್ ವಿವರಗಳನ್ನು ಭರ್ತಿ ಮಾಡಿದ ನಂತರ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.
ಉಮಂಗ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದ ನಂತರ, ನೀವು ಪಟ್ಟಿಯಿಂದ 'ಇಪಿಎಫ್‌ಒ' ಸೇವೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ನಂತರ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸೇವೆಯನ್ನು ಆಯ್ಕೆ ಮಾಡಬಹುದು.
ನಿಮ್ಮ ಇಪಿಎಫ್ ಖಾತೆಯಿಂದ ನೀವು ಹಣವನ್ನು ವಿದ್ ಡ್ರಾ ಮಾಡಲು ನೀವು 'ರೈಸ್ ಕ್ಲೈಮ್' ಆಯ್ಕೆ ಮಾಡಬೇಕಾಗುತ್ತದೆ.
ನಂತರ ನೀವು ನಿಮ್ಮ UAN ಸಂಖ್ಯೆಯನ್ನು ನಮೂದಿಸಬೇಕು. ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
ಅದರ ನಂತರ ನೀವು ಹಿಂಪಡೆಯುವ ಪ್ರಕಾರವನ್ನು ಆರಿಸಬೇಕಾಗುತ್ತದೆ.
ನಂತರ ನೀವು ಎಲ್ಲಾ ವಿವರಗಳನ್ನು ನಮೂದಿಸಬೇಕು.
ಅದರ ನಂತರ ರಿಕ್ವೆಸ್ಟ್ ನ್ನು ಸಲ್ಲಿಸಬೇಕಾಗುತ್ತದೆ. ನಂತರ ನೀವು ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.


Click it and Unblock the Notifications