ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6 ರೂಪಾಯಿ ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಯಂತೆ ರೈತರ ಖಾತೆಗೆ ಹಾಕಲಾಗುತ್ತದೆ. ಈಗಾಗಲೇ 17 ಕಂತುಗಳು ರೈತರ ಖಾತೆಗೆ ಜಮಾವಣೆಯಾಗಿದ್ದು 18ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ.
ಇದೀಗ ಕೇಂದ್ರ ಸರ್ಕಾರ ದಸರಾ ಹಬ್ಬದ ಸಂಭ್ರಮಕ್ಕೆ ರೈತರ ಖುಷಿಯನ್ನು ಡಬಲ್ ಮಾಡುವ ಯೋಜನೆಯಲ್ಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ 18 ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಪಿಎಂ ಕಿಸಾನ್ ವೆಬ್‌ಸೈಟನ್‌ನಲ್ಲಿ ಲಭ್ಯವಿರುವ ಫಲಾನುಭವಿ ಪಟ್ಟಿಯನ್ನು ಪರಿಶೀಲನೆ ಮಾಡುವ ಮೂಲಕ ನಿಮ್ಮ ಖಾತೆಗೆ ಹಣ ಬರುತ್ತದೆಯೇ ಇಲ್ಲವೇ ಎನ್ನುವುದನ್ನು ನೊಡಬಹುದು.

ಈ ತಪ್ಪು ಮಾಡಿದ್ದರೆ ಹಣ ಸಿಗಲ್ಲ
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡುವಾಗ ಯಾವುದೇ ಮಾಹಿತಿಯನ್ನು ಭರ್ತಿ ಮಾಡುವಲ್ಲಿ ತಪ್ಪು ಮಾಡಿದ್ದರೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರದೇ ಇರಬಹುದು. ತಪ್ಪಾದ ವಿಳಾಸ, ತಪ್ಪಾದ ಬ್ಯಾಂಕ್ ಖಾತೆಯ ಮಾಹಿತಿ, ಎನ್‌ಪಿಸಿಐನಲ್ಲಿ ಆಧಾರ್ ಜೋಡಣೆ ಮಾಡದೇ ಇರುವುದು, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್‌ಎಂಎಸ್) ಮೂಲಕ ದಾಖಲೆಯನ್ನು ಸ್ವೀಕರಿಸದಿರುವುದು ಅಥವಾ ಕೆವೈಸಿ ಮಾಡದ ರೈತರ ಖಾತೆಗಳಿಗೆ 18ನೇ ಕಂತಿನ ಹಣ ಸಂದಾಯವಾಗದೇ ಇರಬಹುದು. ರೈತರು ಈ ಮಾಹಿತಿ ಸರಿಯಾಗಿದೆಯಾ ಎಂದು ಪರಿಶೀಲನೆ ಮಾಡಬೇಕಾಗುತ್ತದೆ.
ಫಲಾನುಭವಿಗಳ ಪಟ್ಟಿ ನೋಡುವುದು ಹೇಗೆ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಬಹುದು. ಇದರಿಂದ ಈ ಬಾರಿ ಹಣ ಬರುವ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ನೋಡಬಹುದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನಿಡಿ
ಫಾರ್ಮರ್ ಕಾರ್ನರ್ (Farmer Corner) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಫಲಾನುಭವಿ ಪಟ್ಟಿ (Benificiary List) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಬಳಿಕ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಗ್ರಾಮವನ್ನು ಆಯ್ಕೆ ಮಾಡಿದ ಬಳಿಕ Get Report ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಸಿಗುತ್ತದೆ, ನಿಮ್ಮ ಹೆಸರು ಇದೆಯಾ ಎನ್ನುವುದನ್ನು ನೀವು ಸುಲಭವಾಗಿ ಪರಿಶೀಲನೆ ಮಾಡಬಹುದು. ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನಿಮ್ಮ ಖಾತೆಗೆ ಹಣವೂ ಬರುತ್ತದೆ.
ಇನ್ನು ಪಿಎಂ ಕಿಸಾನ್ ಯೋಜನೆಗೆ ಸಂಬಂಧಪಟ್ಟಂತೆ ನಿಮಗೆ ಯಾವುದೇ ಸಮಸ್ಯೆ ಇದ್ದರೂ ರೈತರು [email protected] ಇಮೇಲ್ ಐಡಿಗೆ ಸಂಪರ್ಕ ಮಾಡಬಹುದು. ಸಹಾಯವಾಣಿ ಸಂಖ್ಯೆ - 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಸಂಖ್ಯೆಗೆ ಕರೆಮಾಡಬಹುದು.


Click it and Unblock the Notifications