ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು, ಬ್ಯಾಂಕ್ ಅಕೌಂಟ್‌ವರೆಗೆ ಯಾವುದನ್ನೂ ಓಪನ್ ಮಾಡಬೇಕೆಂದರೂ ಆಧಾರ್ ಕಾರ್ಡ್ (Aadhaar Card) ಬೇಕೇಬೇಕು. ಪಿವಿಸಿ ಆಧಾರ್ ಕಾರ್ಡ್ (PVC Aadhaar Card) ಎಂದರೆ ಆಧಾರ್ ಕಾರ್ಡ್‌ನ ಒಂದು ಆಧುನಿಕ ಮತ್ತು ಬಾಲಿಕೆ ಬರುವ ಹೊಸ ಕಾರ್ಡ್. ಸಾಮಾನ್ಯ ಆಧಾರ್ ಕಾರ್ಡ್‌ನಂತೆಯೇ ಕಾಗದದ ಮೇಲೆ ಪ್ರಿಂಟ್ ಆಗಿದ್ದರೂ, ಪಿವಿಸಿ ಕಾರ್ಡ್ ಪಾವಿ ವಿನೈಲ್ ಕ್ಲೋರೈಡ್ (PVC) ಎಂಬ ಪ್ಲಾಸ್ಟಿಕ್ ಮೆಟೀರಿಯಲ್‌ನಿಂದ ತಯಾರಿಸಲಾಗುತ್ತದೆ. ಅಂದರೆ ಇದು ಎಟಿಯಂ, ಡೆಬಿಟ್ ಕಾರ್ಡ್‌ನಂತೆಯೇ ಕೆಲಸ ಮಾಡುತ್ತದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೀಗ ಪಿವಿಸಿ ಆಧಾರ್ ಕಾರ್ಡ್‌ಗಳ ಶುಲ್ಕವನ್ನು ಹೆಚ್ಚಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. myAadhaar ಪೋರ್ಟಲ್ ಅಥವಾ mAadhaar ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸುವವರು ಈಗ 50 ರೂಪಾಯಿ ಬದಲಿಗೆ 75 ರೂಪಾಯಿ (ತೆರಿಗೆ ಸಹಿತ) ಪಾವತಿ ಮಾಡಬೇಕಾಗುತ್ತದೆ. ಈ ಹೊಸ ದರಗಳು 2026ರ ಜನವರಿ 1 ರಿಂದ ಜಾರಿಗೆ ಬಂದಿದ್ದು, ಈ ಮೂಲಕ ಹೊಸ ಪಿವಿಸಿ ಆಧಾರ್ ಕಾರ್ಡ್ ಪಡೆಯುವವರ ಜೇಬಿಗೆ ಕತ್ತರಿ ಬೀಳಲಿದೆ.
ಪಿವಿಸಿ ಆಧಾರ್ ಕಾರ್ಡ್ ಎಂದರೇನು?
ಪಿವಿಸಿ ಆಧಾರ್ ಕಾರ್ಡ್ ಎಂದರೆ ಆಧಾರ್ ಕಾರ್ಡ್‌ನ ಮತ್ತೊಂದು ರೂಪ. ಇದು ಕ್ರೆಡಿಟ್ ಕಾರ್ಡ್ ಮಾದರಿಯ ಸುರಕ್ಷಿತ, ಗಟ್ಟಿಮುಟ್ಟಾದ ಗುರುತಿನ ಚೀಟಿಯಾಗಿ ಗುರುತಿಸಿಕೊಂಡಿದೆ. ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಈ ಕಾರ್ಡ್ ಕೆಲಸ ಮಾಡುತ್ತದೆ. ಕಾರ್ಡ್ ಉತ್ಪಾದನೆ, ಮುದ್ರಣ, ಸುರಕ್ಷಿತ ವಿತರಣೆಯ ವೆಚ್ಚಗಳು ಇತ್ತೀಚೆಗೆ ಹೆಚ್ಚಾಗಿರುವ ಹಿನ್ನೆಲೆ, ಸೇವಾ ಗುಣಮಟ್ಟ ಕಾಪಾಡಲು UIDAI ಈ ಶುಲ್ಕವನ್ನು ಹೆಚ್ಚಿಸಿದೆ.
ಏನಿದರ ವಿಶೇಷತೆ?
ಪಿವಿಸಿ ಆಧಾರ್ ಕಾರ್ಡ್‌ಗೂ, ಹಳೆಯ ಮಾದರಿಗೂ ಯಾವುದೇ ವ್ಯತ್ಯಾಸಗಳಿಲ್ಲ. ಇದು ಕೇವಲ ಹೆಚ್ಚು ಬಾಳಿಕೆ ಬರುವ ಹಾಗೂ ಸಣ್ಣ ಆಧಾರ್ ಕಾರ್ಡ್ ರೂಪವಾಗಿದೆ. ಇ-ಆಧಾರ್ ಮತ್ತು ಕಾಗದ ಆಧಾರಿತ ಕಾರ್ಡ್‌ಗಳಂತೆಯೇ ಇದೂ ಕೂಡಾ ಅರ್ಹತೆ ಹೊಂದಿದೆ. ಆರ್ಡರ್ ಸ್ವೀಕರಿಸಿದ 5 ದಿನಗಳಲ್ಲಿ UIDAI ಕಾರ್ಡ್ ಮುದ್ರಿಸಿ, ಸ್ಪೀಡ್ ಪೋಸ್ಟ್ ಮೂಲಕ ನೋಂದಾಯಿತ ವಿಳಾಸಕ್ಕೆ ತಲುಪಿಸುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪಿವಿಸಿ ಆಧಾರ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸುಲಭ. ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'My Aadhaar' ವಿಭಾಗದಲ್ಲಿ 'Order Aadhaar PVC Card' ಸೆಲೆಕ್ಟ್ ಮಾಡಬೇಕು. ನಿಮ್ಮ ಆಧಾರ್/ನೋಂದಣಿ ಐಡಿ/ವರ್ಚುವಲ್ ಐಡಿ ಮತ್ತು ಕ್ಯಾಪ್ಚಾ ನಮೂದಿಸಿ OTP ಗಾಗಿ ಪಡೆಯಬೇಕು.
ಆ ನಂತರ ನಿಮ್ಮ ಮೊಬೈಲ್‌ಗೆ OTP ನಮೂದಿಸುತ್ತದೆ, ವಿವರಗಳನ್ನು ಪರಿಶೀಲಿಸಿ 75 ರೂಪಾಯಿ ಶುಲ್ಕ ಪಾವತಿಸಬೇಕು. ಪಾವತಿ ಯಶಸ್ವಿಯಾದ ನಂತರ, ರಶೀದಿಯನ್ನು ಡೌನ್‌ಲೋಡ್ ಮಾಡಿ ಸೇವಾ ವಿನಂತಿ ಸಂಖ್ಯೆ (SRN) ಸೇವ್ ಮಾಡಿಟ್ಟುಕೊಳ್ಳಿ. ಕಾರ್ಡ್ ಸಾಮಾನ್ಯವಾಗಿ 15 ಕೆಲಸದ ದಿನಗಳಲ್ಲಿ ನೀಡಲಾಗುತ್ತದೆ.
ನಿಮ್ಮ ಪಿವಿಸಿ ಆಧಾರ್ ಕಾರ್ಡ್‌ನ ಸ್ಥಿತಿಗತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು, ಯುಐಡಿಎಐ ವೆಬ್‌ಸೈಟ್‌ನಲ್ಲಿ 'My Aadhaar' ಅಡಿಯಲ್ಲಿ 'Check Aadhaar PVC Card Status' ಸೆಲೆಕ್ಟ್ ಮಾಡಬೇಕು. ಅದಕ್ಕಾಗಿ ನೀವು 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಟೈಪ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗದೇ ಇದ್ದರೆ, 'My mobile number is not registered' ಆಯ್ಕೆ ಮಾಡಿ ಬೇರೆ ನಂಬರ್ ಆಡ್ ಮಾಡಬೇಕು. ನಂತರ OTP ಹಾಕಿ. ಡಿಸ್‌ಪ್ಲೇ ಮೇಲೆ ನಿಮ್ಮ SRN ಸಂಖ್ಯೆ ಮತ್ತು ಪಿವಿಸಿ ಆಧಾರ್ ಕಾರ್ಡ್ ಸ್ಥಿತಿ ಕಾಣಿಸುತ್ತದೆ.


Click it and Unblock the Notifications