For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಯೊನೊ ಮೂಲಕ ಪಡೆಯಿರಿ ಸಾಲ: ಇಲ್ಲಿದೆ ಸರಳ ವಿಧಾನ

|

ಎಸ್‌ಬಿಐ ಗ್ರಾಹಕರಿಗೆ ಸಿಹಿ ಸುದ್ದಿ ಒಂದಿದೆ. ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೊಬೈಲ್‌ ಆಪ್‌ ಎಸ್‌ಬಿಐ ಯೊನೊ ಮೂಲಕವೇ ಇನ್ನೂ ಸರಳವಾಗಿ ಸಾಲವನ್ನು ಪಡೆಯಬಹುದಾಗಿದೆ. ನಿಮ್ಮ ಮನೆಯಲ್ಲಿ ಆರಾಮವಾಗಿ ಕುಳಿತು ಎಸ್‌ಬಿಐ ಯೊನೊ ಆಪ್‌ ಮೂಲಕ ಪೂರ್ವ ಅನುಮೋದಿತ ಸಾಲವನ್ನು ಪಡೆಯಬಹುದಾಗಿದೆ. ಈ ಎಸ್‌ಬಿಐ ಆಪ್‌ ಯೊನೊದಲ್ಲಿ ಸಾಲ ಸೌಲಭ್ಯವು ದಿನದ 24 ಗಂಟೆಗಳು ಕೂಡಾ ಇರಲಿದೆ. ಹಾಗೆಯೇ ತ್ವರಿತವಾಗಿ ಸಾಲ ದೊರೆಯಲಿದೆ.

ಇನ್ನೂ ಮುಖ್ಯವಾಗಿ ಈ ಎಲ್ಲಾ ವಿಧಾನವು ಡಿಜಿಟಲ್‌ ಮೂಲಕವೇ ನಡೆಯಲಿದ್ದು ಗ್ರಾಹಕರು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಹಾಗೆಯೇ ಎಸ್‌ಬಿಐ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಇನ್ನು ನಿಮಗೆ ಇನ್ನೊಂದು ಸಿಹಿ ಸುದ್ದಿ ಇದೆ. ಈ ಹಬ್ಬದ ಸೀಸನ್‌ನಲ್ಲಿ ಆಫರ್‌ ಆಗಿ ಭಾರತದ ಪ್ರಮುಖ ಸಾಲದಾತ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅನುಮೋದಿತ ಸಾಲ ಪಡೆಯಲು ಪ್ರೋಸೆಸಿಂಗ್‌ ಫೀ (ಪ್ರಕ್ರಿಯೆ ಶುಲ್ಕ) ವನ್ನು ಮನ್ನಾ ಮಾಡಿದೆ. ಜನವರಿ 31, 2022 ರವರೆಗೆ ಅನುಮೋದಿತ ಸಾಲವನ್ನು ಪಡೆಯುವವರಿಗೆ ಎಸ್‌ಬಿಐ ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿದೆ.

 ರೂ. 256 ಇಎಂಐನಲ್ಲಿ ಎಸ್‌ಬಿಐ ದ್ವಿಚಕ್ರ ವಾಹನ ಸಾಲ: ಬಡ್ಡಿದರ, ಅರ್ಹತೆ, ಇತರೆ ಮಾಹಿತಿ ರೂ. 256 ಇಎಂಐನಲ್ಲಿ ಎಸ್‌ಬಿಐ ದ್ವಿಚಕ್ರ ವಾಹನ ಸಾಲ: ಬಡ್ಡಿದರ, ಅರ್ಹತೆ, ಇತರೆ ಮಾಹಿತಿ

ಬ್ಯಾಂಕ್‌ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ತುರ್ತಾಗಿ ಹಣ ಬೇಕಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕರು ಪೂರ್ವ ಅನುಮೋದಿತ ವೈಯಕ್ತಿಕ ಸಾಲ (ಪ್ರೀ ಅಪ್ರೋವ್ಡ್‌ ಪರ್ಸನಲ್‌ ಲೋನ್‌-ಪಿಎಪಿಎಲ್‌) ಅನ್ನು ಎಸ್‌ಬಿಐನ ಯೊನೊ ಆಪ್‌ ಮೂಲಕ ಬರೀ ನಾಲ್ಕು ಕ್ಲಿಕ್‌ಗಳ ಮೂಲಕ ಪಡೆಯಬಹುದು. ಬ್ಯಾಂಕುಗಳು ಸಾಮಾನ್ಯವಾಗಿ ಉತ್ತಮ ಕ್ರೆಡಿಟ್‌ ಹಿಸ್ಟರಿ ಹೊಂದಿರುವವರಿಗೆ ಹಾಗೂ ಸಾಲವನ್ನು ಮರುಪಾವತಿ ಮಾಡಿದ ವಿಚಾರದಲ್ಲಿ ಉತ್ತಮವಾದ ಸ್ಥಾನವನ್ನು ಹೊಂದಿರುವವರಿಗೆ ಎಸ್‌ಬಿಐ ಪೂರ್ವ ಅನುಮೋದಿತ ವೈಯಕ್ತಿಕ ಸಾಲವನ್ನು ನೀಡಲಿದೆ ಎಂದು ತಿಳಿಸಿದೆ. ಹಾಗಾದರೆ ನಮಗೆ ಸಾಲವನ್ನು ಪಡೆಯಲು ಸಾಧ್ಯವೇ ಎಂದು ತಿಳಿಯುವುದು ಹೇಗೆ, ಈ ಸಾಲ ಪಡೆಯುವ ನಾಲ್ಕು ಹಂತಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...

ಎಸ್‌ಬಿಐ ಯೊನೊ ಮೂಲಕ ಪಡೆಯಿರಿ ಸಾಲ: ಇಲ್ಲಿದೆ ಸರಳ ವಿಧಾನ

ನಿಮಗೆ ಸಾಲವನ್ನು ಪಡೆಯಲು ಸಾಧ್ಯವೇ?, ತಿಳಿಯಿರಿ ಹೀಗೆ..

ನೀವು ಎಸ್‌ಬಿಐ ಮೂಲಕ ಶೀಘ್ರವೇ ಸಾಲವನ್ನು ಪಡೆಯಬೇಕಾದರೆ ನೀವು ನಿಮ್ಮ ಅರ್ಹತೆಯನ್ನು ತಿಳಿಯುವುದು ಮುಖ್ಯ. ಅದಕ್ಕಾಗಿ ನೀವು PAPL ಟೈಪ್‌ ಮಾಡಿ 567676 ಗೆ ಎಸ್‌ಎಮ್‌ಎಸ್‌ ಕಳುಹಿಸಿ. ನಿಮಗೆ ಅರ್ಹತೆ ಇದೆಯೇ ಎಂದು ಇಲ್ಲವೇ ಎಂದು ಎಸ್‌ಎಮ್‌ಎಸ್‌ ಬರಲಿದೆ. ನಮಗೆ ಅರ್ಹತೆ ಇದೆ ಎಂದಾದರೆ ನಾವು ಸಾಲವನ್ನು ಪಡೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...

 SBI YONO ಆ್ಯಪ್ ಬಳಸಿ ಎಫ್‌ಡಿ ಅಕೌಂಟ್ ಆರಂಭಿಸುವುದು ಹೇಗೆ? SBI YONO ಆ್ಯಪ್ ಬಳಸಿ ಎಫ್‌ಡಿ ಅಕೌಂಟ್ ಆರಂಭಿಸುವುದು ಹೇಗೆ?

ಎಸ್‌ಬಿಐ ಯೊನೊ ಆಪ್‌ ಮೂಲಕ ನಾಲ್ಕು ಕ್ಲಿಕ್‌ನಲ್ಲೇ ಸಾಲ ಪಡೆಯುವುದು ಹೇಗೆ?

* ಮೊದಲು ನೀವು ಯೊನೊ ಆಪ್‌ ತೆರೆದು ಲಾಗಿನ್‌ ಆಗಿ
* ಮೆನುವಿನಲ್ಲಿರುವ Avail Now ಆಯ್ಕೆಯನ್ನು ಕ್ಲಿಕ್‌ ಮಾಡಿ
* ಸಾಲ ಎಷ್ಟು ಹಾಗೂ ಅವಧಿ ಎಷ್ಟು ಎಂದು ಉಲ್ಲೇಖಿಸಿ
* ನಿಮ್ಮ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ

ಇಲ್ಲಿಗೆ ನೀವು ಸಾಲ ಪಡೆಯುವುದ ಪ್ರಕ್ರಿಯೆ ಕೊನೆಗೊಳಲಿದೆ. ಈ ಸಾಲ ಪಡೆಯುವ ಪ್ರಕ್ರಿಯೆಯು ಮುಗಿದು ನಿಮ್ಮ ಬ್ಯಾಂಕಿನ ಖಾತೆಗೆ ಸಾಲದ ಹಣ ಜಮೆ ಆಗಲಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೊಬೈಲ್‌ ಆಪ್‌ ಎಸ್‌ಬಿಐ ಯೊನೊ ಮೂಲಕವೇ ನೀವು ಹಲವಾರು ಸೇವೆಯನ್ನು ಪಡೆಯಬಹುದಾಗಿದೆ. ಡಿಜಿಟಲ್‌ ಇಂಡಿಯಾದಲ್ಲಿ ಈಗ ಎಲ್ಲವೂ ಸುಲಭಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದೆ. ನಾವು ಎಸ್‌ಬಿಐ ಯೊನೊ ಆಪ್‌ ಮೂಲಕವೇ ಫಿಕ್ಸಿಡ್‌ ಡೆಪಾಸಿಟ್‌ ಅನ್ನು ಆರಂಭ ಮಾಡಬಹುದಾಗಿದೆ. ಎಫ್‌ಡಿ ಮಾಡಿಸಲು ಐಡಿ ಪ್ರೂಫ್, ಅಡ್ರೆಸ್ ಪ್ರೂಫ್, ಪ್ಯಾನ್ ಕಾರ್ಡ್ ಮುಂತಾದ ಕಾಗದಗಳನ್ನು ಹಿಡಿದುಕೊಂಡು ನಾವು ಬ್ಯಾಂಕ್‌ ಶಾಖೆಗೆ ಹೋಗಬೇಕಾಗಿಲ್ಲ. ಕೇಲವ ವಿಡಿಯೋ ಕೆವೈಸಿ ಮೂಲಕವೇ ಪ್ರಕ್ರಿಯೆಯನ್ನು ಪೂರ್ಣ ಮಾಡಿ, ಎಫ್‌ಡಿ ಖಾತೆಯನ್ನು ತೆರೆಯಬಹುದು.

English summary

SBI customers can get pre-approved loan on YONO app in 4 simple steps, Here's Detail

SBI customers can get pre-approved loan on YONO app in 4 simple steps, Here's Detail.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X