ಸಾಧಿಸಿದರೆ ಸಬಲ ನುಂಗಬಹುದು ಎಂಬ ಮಾತು ಎಷ್ಟೊಂದು ಅರ್ಥಗರ್ಭಿತವಾಗಿದೆ ಎಂದು ನಮಗೆ ಹಲವು ಬಾರಿ ಮನದಟ್ಟಾಗುತ್ತದೆ. ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಎಲ್ಲವೂ ಸಾಧಿಸಲು ಸಾಧ್ಯ ಎಂಬ ಮಾತು ಅಕ್ಷರಶಃ ನಿಜ ಎಂದರೆ ಅತಿಶಯೋಕ್ತಿಯಾಗಲಾರದು. ಸದ್ಯ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ತೆಲಂಗಾಣದ ರೈತರೊಬ್ಬರ ಕಥೆಯೇ ಸಾಕ್ಷಿಯಾಗಿದೆ. ತೆಲಂಗಾಣದ ರೈತರೊಬ್ಬರು ಹೂವಿನ ವ್ಯಾಪಾರವನ್ನು ಮಾಡಿ, ಸದ್ಯ ವರ್ಷಕ್ಕೆ ಬರೊಬ್ಬರಿ 70 ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಸದ್ಯ ಅವರ ಯಶಸ್ಸಿನ ಜೀವನಕ್ಕೂ ಹಿಂದಿನ ಅವರ ಹೋರಾಟದ ಬದುಕಿಗೂ ಸಾಕಷ್ಟು ವ್ಯತ್ಯಾಸವಿತ್ತು. ಹಿಂದೆ ಅವರು ಇತರರ ಬಳಿ ತಿಂಗಳಿಗೆ ಒಂದು ಸಾವಿರ ರೂ. ಸಂಬಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಸದ್ಯ ತಿಂಗಳಿಗೆ ಕೋಟಿ ರೂ.ಗಳ ಲೆಕ್ಕಾಚಾರದಲ್ಲಿ ಲಾಭ ಗಳಿಸುತ್ತಿದ್ದಾರೆ. ಬಾಲ್ಯದಲ್ಲಿ ಬಡತನದಿಂದ ಕಳೆದ ಅವರು ಸದ್ಯ ಯಶಸ್ವಿ ರೈತನಾಗಿ ಬದಲಾದ ಕಥೆ ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.
ಹೂವಿನ ಕೃಷಿಯಿಂದಲೂ ಕೋಟಿ ವ್ಯವಹಾರ
ಸಾಮಾನ್ಯವಾಗಿ ಕೆಲವು ರೈತರು ತೋಟಗಾರಿಕೆ ಅಡಿಯಲ್ಲಿ ಬರುವ ಹೂವಿನ ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ ಎಂಬ ಮಾತು ಕೂಡ ಇದೆ. ಆದರೆ ಸರಿಯಾದ ವ್ಯವಸ್ಥೆ ಹಾಗೂ ತಿಳುವಳಿಕೆ ಹೊಂದಿದ್ದರೆ ಹೂವಿನ ಕೃಷಿಯಿಂದಲೂ ಕೋಟಿ ರೂ. ಲಾಭ ಗಳಿಸಬಹುದು ಎಂಬುದನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀಕಾಂತ್ ಬೊಳ್ಳಪಲ್ಲಿ ಅವರು ಸಾಬೀತುಪಡಿಸಿದ್ದಾರೆ. ಸದ್ಯ ಅವರು ವಾರ್ಷಿಕವಾಗಿ ಸುಮಾರು 70 ಕೋಟಿ ರೂ. ವ್ಯವಹಾರವನ್ನು ಇದೇ ಕೃಷಿಯಲ್ಲಿ ನಡೆಸುತ್ತಿದ್ದು, ಯಶಸ್ವಿ ರೈತನಾಗಿ ಹೊರಹೊಮ್ಮಿದ್ದಾರೆ. ಆದರೆ ಹಿಂದೆ ಇದೇ ಶ್ರೀಕಾಂತ್ ಅವರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ 1000 ರೂಪಾಯಿ ಸಂಬಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸದ್ಯ ಶ್ರೀಕಾಂತ್ ಅವರು ಸುಮಾರು 200 ಮಂದಿಗೆ ಉದ್ಯೋಗ ಕೂಡ ನೀಡಿದ್ದು, ದೇಶಾದ್ಯಂತ ಇವರು ತಮ್ಮ ಉದ್ಯಮವನ್ನು ವಿಸ್ತರಿಸಿ, ಎಲ್ಲಾ ರೈತರಿಗೂ ಮಾದರಿಯಾಗಿದ್ದಾರೆ.

ಆರಂಭಿಕ ಜೀವನ ಹೇಗಿತ್ತು?
ಇನ್ನು ಸಾಂಪ್ರದಾಯಿಕ ರೈತ ಕುಟುಂಬದಲ್ಲಿ ಜನಿಸಿದ ಶ್ರೀಕಾಂತ್ ಅವರು ತಮ್ಮ ಬಾಲ್ಯವನ್ನು ಕಡು ಬಡತನದಲ್ಲಿ ಕಳೆದಿದ್ದರು. ಆದರೆ ಶ್ರೀಕಾಂತ್ ಅವರು ಬಡತನದಿಂದ ಹೊರಬರಲು ಸಾಕಷ್ಟು ಹೋರಾಟ ನಡೆಸಿದ್ದರು. ಇದೇ ಕಾರಣಕ್ಕೆ ಇಂದು ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, 52 ಎಕರೆಯಲ್ಲಿ ಹೂ ಕೃಷಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಇಲ್ಲಿಗೆ ತಲುಪುವ ಅವರ ದಾರಿ ಅಷ್ಟು ಸುಲಭವಾಗಿರಲಿಲ್ಲ. ರೈತ ಕುಟುಂಬದಲ್ಲಿ ಹುಟ್ಟಿದ ಇವರು ಸದಾ ಸಾಲದ ಸುಳಿಯಲ್ಲಿಯೇ ಇರುತ್ತಿದ್ದರು. ಉನ್ನತ ಶಿಕ್ಷಣ ಪಡೆಯಲು ಶ್ರೀಕಾಂತ್ ಹೆಚ್ಚಿನ ಆಸಕ್ತಿ ಹೊಂದಿದ್ದರೂ ಪೋಷಕರ ಬಡತನದಿಂದಾಗಿ 10 ತರಗತಿ ಬಳಿಕ ಶಿಕ್ಷಣ ಮುಂದುವರೆಸಲು ಅವರಿಗೆ ಸಾಧ್ಯವಾಗಲಿಲ್ಲ.
16ನೇ ವಯಸ್ಸಿನಲ್ಲೇ ಬೆಂಗಳೂರಿನಲ್ಲಿ ಉದ್ಯೋಗ
16 ನೇ ವಯಸ್ಸಿನಲ್ಲಿ, ಅವರು ತಮ್ಮ ಬಡತನದ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಂಬಂಧಿಕರೊಂದಿಗೆ ವಾಸಿಸಲು ಬೆಂಗಳೂರಿಗೆ ತೆರಳಿದರು. ಅಲ್ಲಿ ಅವರು ತಮ್ಮ ಸಂಬಂಧಿಗೆ ಹೂವಿನ ಕೃಷಿ ಮತ್ತು ಸಂಬಂಧಿತ ವ್ಯವಹಾರದಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ಇದಕ್ಕಾಗಿ ತಿಂಗಳಿಗೆ ಒಂದು ಸಾವಿರ ರೂಪಾಯಿ ಪಡೆಯುತ್ತಿದ್ದರು. ಸಂಬಳ ಬಹಳ ಕಡಿಮೆ ಇದ್ದರೂ ಬೇರೆ ಆಯ್ಕೆ ಇರದ ಹಿನ್ನೆಲೆಯಲ್ಲಿ ಅವರು ಅದೇ ಕೆಲಸದಲ್ಲಿ ಮುಂದುವರೆದಿದ್ದರು ಒಂದು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ ನಂತರ, ಶ್ರೀಕಾಂತ್ ಅವರು ಹೂವಿನ ಕೃಷಿ ಮತ್ತು ಅದರ ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದರು. ಇದರ ನಂತರ ಅವರು ಹೂವಿನ ಕೃಷಿ ಕ್ಷೇತ್ರದಲ್ಲಿ ಯಶಸ್ಸಿನ ಅಪಾರ ಸಾಧ್ಯತೆಗಳನ್ನು ಕಂಡುಕೊಂಡರು. ಇದನ್ನು ನೋಡಿದ ಅವರು ಧೈರ್ಯದಿಂದ ಸ್ವಂತವಾಗಿ ಏನನ್ನಾದರೂ ಮಾಡಲು ನಿರ್ಧರಿಸಿದರು. ಯಾರಿಂದಲೂ ಆರ್ಥಿಕ ಸಹಾಯವಿಲ್ಲದೆ ರೈತರಿಂದ ನೇರವಾಗಿ ಹೂ ಖರೀದಿಸಿ ಅತಿ ಕಡಿಮೆ ಬಂಡವಾಳದಲ್ಲಿ ವ್ಯಾಪಾರ ಮಾಡತೊಡಗಿದರು. ಇದಾದ ನಂತರ 1997ರಲ್ಲಿ ಬೆಂಗಳೂರು ನಗರದಲ್ಲಿ ಸಣ್ಣ ಹೂವಿನ ಅಂಗಡಿ ತೆರೆದರು. ಅವರು ಸುಮಾರು 10 ವರ್ಷಗಳ ಕಾಲ ಈ ಅಂಗಡಿಯನ್ನು ನಡೆಸುತ್ತಿದ್ದರು. ಇಲ್ಲಿ ಲಾಭವು ಉತ್ತಮವಾಗಿದ್ದರೂ, ಅವರು ಇನ್ನೂ ಏನಾದರೂ ದೊಡ್ಡದನ್ನು ಮಾಡುವ ಆಸೆಯನ್ನು ಹೊಂದಿದ್ದರು. ಅವರು ಹೂವುಗಳನ್ನು ಬೆಳೆಸಲು ಬಯಸಿದ್ದರು. ಹೂವಿನ ವ್ಯಾಪಾರಕ್ಕೆ ಸಂಬಂಧಿಸಿದ ಶ್ರೀಕಾಂತ್ ಅವರು ಹಲವರ ಸಂಪರ್ಕ ಹೊಂದಿದ್ದರು.. ಹೀಗಾಗಿ ಹೂವಿನ ಕೃಷಿಯಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಯೋಚಿಸಿದ ಶ್ರೀಕಾಂತ್ ಹೂವಿನ ಕೃಷಿಗೆ ಮುಂದಾದರು.
10 ಎಕರೆಯಲ್ಲಿ ಕೃಷಿ ಆರಂಭ
ಆರಂಭಿಕ ಹಂತದಲ್ಲಿ ಶ್ರೀಕಾಂತ್ ಅವರ ನಿರ್ಧಾರವು ಸವಾಲುಗಳಿಂದ ಕೂಡಿತ್ತು. ಈ ಪೈಕಿ ಮೊದಲ ಸವಾಲು ಬಂಡವಾಳವಾಗಿತ್ತು. ಸಾಂಪ್ರದಾಯಿಕ ಕೃಷಿಗಿಂತ ಹೂವಿನ ಕೃಷಿಯಲ್ಲಿ ಎಕರೆಗೆ ಹೂಡಿಕೆ ಹೆಚ್ಚು ಅಗತ್ಯವಿರುತ್ತದೆ. ಅದೂ ಅಲ್ಲದೆ ಹೂಡಿಕೆ ಹೆಚ್ಚು ಮತ್ತು ಆದ್ದರಿಂದ ಅಪಾಯವೂ ಹೆಚ್ಚು. ಆದರೂ ಶ್ರೀಕಾಂತ್ ಸ್ವಲ್ಪ ಉಳಿತಾಯ ಮಾಡಿದ್ದರು. ಹೆಚ್ಚಿನ ಸಹಾಯಕ್ಕಾಗಿ ಅವರು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯನ್ನು ಸಂಪರ್ಕಿಸಿದರು. ಉಳಿತಾಯದ ಹಣವನ್ನೆಲ್ಲ ಹೂಡಿ 10 ಎಕರೆ ಜಮೀನಿನಲ್ಲಿ ಹೂ ಕೃಷಿ ಆರಂಭಿಸಿದ್ದು, ಸದ್ಯ ಇದು 52 ಎಕರೆಗೆ ಏರಿಕೆಯಾಗಿದೆ.
52 ಎಕರೆಗೆ ವಿಸ್ತರಿಸಿದ ವ್ಯಾಪಾರ
ಇಂದು ಬೆಂಗಳೂರಿನ ದೊಡ್ಡಬಳ್ಳಾಪುರ ಬಳಿಯ ತಮ್ಮ 52 ಎಕರೆ ಜಮೀನಿನಲ್ಲಿ ಶ್ರೀಕಾಂತ್ 12 ಬಗೆಯ ಹೂವುಗಳನ್ನು ಬೆಳೆಸಿದ್ದಾರೆ. ಈ ಹೂವುಗಳಲ್ಲಿ ಗುಲಾಬಿ, ಜರ್ಬೆರಾಗಳು, ಕಾರ್ನೇಷನ್‌ಗಳು, ಜಿಪ್ಸೊಫಿಲಾ ಮತ್ತು ಇತರ ಹೂವುಗಳು ಕೂಡ ಸೇರಿವೆ. ಎಲ್ಲಾ ಹೂವುಗಳನ್ನು ಅವರು ಸಾವಯವವಾಗಿ ಬೆಳೆಯುತ್ತಿದ್ದು, ಇದರಿಂದ ಕೃಷಿ ಭೂಮಿ ಕೂಡ ಆರೋಗ್ಯದಿಂದ ಇರುತ್ತದೆ. ಶ್ರೀಕಾಂತ್ ಕೇವಲ ಕರ್ನಾಟಕದಿಂದಲೇ ಅಲ್ಲದೆ ದೇಶಾದ್ಯಂತ ತನ್ನ ಉದ್ಯಮದ ಜಾಲವನ್ನು ವಿಸ್ತರಿಸಿದ್ದು, ಉತ್ತಮ ಲಾಭ ಗಳಿಸುತ್ತಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications