ನವದೆಹಲಿ, ಜೂನ್ 22: ವಿಮೆ ಕೊಳ್ಳುವ ಸಮಯದಲ್ಲಿ ಸಿಂಗಲ್ ಪ್ರೀಮಿಯಂ ಪಾಲಿಸಿ ಕೊಳ್ಳುವಂತೆ ನಿಮಗೆ ಏಜೆಂಟರಿಂದ ಅಥವಾ ನಿಮ್ಮದೇ ಬ್ಯಾಂಕ್ ನಿಂದಲೂ ಸಲಹೆ ಬರಬಹುದು. ಅಂಥ ಸಂದರ್ಭದಲ್ಲಿ ನೀವು ಯಾವ ನಿರ್ಧಾರ ತೆಗೆದುಕೊಳ್ಳಬೇಕು? ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.
ಭಾರತದಲ್ಲಿ ಖಾಸಗಿ ವಲಯಗಳು ಸ್ಥಿರ ಉದ್ಯೋಗ ನೀಡುವಲ್ಲಿ ವಿಫಲವಾಗುತ್ತಿದೆ. ಅಲ್ಲದೇ ಸ್ವಂತ ಉದ್ಯೋಗ ಮಾಡುವವರಿಗೂ ಕೂಡ ನಿಯಮಿತ ಆದಾಯದ ಗ್ಯಾರೆಂಟಿ ಇರುವುದಿಲ್ಲ. ಹೀಗಾಗಿ ಜನರಿಗೆ ವ್ಯವಹಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ಜನರು ನಿಯಮಿತವಾಗಿ ಪ್ರೀಮಿಯಂ ಪಾವತಿಸಲು ಅಗತ್ಯವಾದ ಹಣ ಹೊಂದಿರುತ್ತಾರೋ ಇಲ್ಲವೋ ಆದರೂ ಸಹ ಪ್ರೀಮಿಯಂ ಪಾಲಿಸಿ ಕೊಂಡುಕೊಳ್ಳಲು ಬಯಸುತ್ತಾರೆ. ಅದಕ್ಕಾಗಿಯೇ ವಿಮಾ ವಲಯವು ಸಿಂಗಲ್ ಪ್ರೀಮಿಯಂ ಇನ್ಶೂರೆನ್ಸ್ ಪಾಲಿಸಿಗಳ ಬೇಡಿಕೆ ಸಹ ಹೆಚ್ಚಿಸಿದೆ.

ಒಂದು ಮಾಹಿತಿಯ ಜೀವ ವಿಮಾ ವ್ಯವಹಾರದಲ್ಲಿ ಸಿಂಗಲ್ ಪ್ರೀಮಿಯಂ ಪಾಲಿಸಿಗಳು ಶೇಕಡಾ 70ರಷ್ಟು ಪಾಲು ಪಡೆದುಕೊಂಡಿವೆ. ಇದರಲ್ಲಿ ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅಂದರೆ ಎಲ್ಐಸಿ ಮುಂಚೂಣಿಯಲ್ಲಿದೆ.
ನಿಮ್ಮ ಪಾಲಿಸಿ 10 ಅಥವಾ 20 ವರ್ಷದ್ದು ಆಗಿದ್ದರೆ ಆಗ ನೀವು ಪ್ರೀಮಿಯಂ ಅನ್ನು ಒಂದೇ ಸಾರಿ ಕಟ್ಟುವ ಮೂಲಕ ವಾರ್ಷಿಕ, ಅರ್ಧ ವಾರ್ಷಿಕ ಅಥವಾ ತ್ರೈಮಾಸಿಕ ಪ್ರೀಮಿಯಂ ಪಾವತಿಗಳಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ನೀವು ಈ ಪಾಲಿಸಿಯನ್ನು ಉತ್ತಮ ಅಂತ ತಿಳಿದುಕೊಳ್ಳಬಹುದು. ಆದ್ರೆ ಇದು ಪ್ರತಿಯೊಬ್ಬರಿಗೂ ಉಪಯುಕ್ತವಾಗುತ್ತದೆ ಎಂದು ತಿಳಿದುಕೊಳ್ಳೋದು ತಪ್ಪು. ಸಾಮಾನ್ಯವಾಗಿ ಇನ್ಶೂರೆನ್ಸ್ ಏಜೆಂಟ್ ಗಳು ಸಿಂಗಲ್ ಪ್ರೀಮಿಯಂ ಪಾಲಿಸಿಯನ್ನು ಉತ್ತಮ ಅಂತ ಹೇಳುತ್ತಾರೆ.
ಸಿಂಗಲ್ ಪ್ರೀಮಿಯಂ ಪಾಲಿಸಿಗಳ ಪ್ರೀಮಿಯಂ ಮೊತ್ತ ಜಾಸ್ತಿ ಇರುವುದರಿಂದ ಪಾಲಿಸಿದಾರರಿಗೆ ಲಾಂಗ್ ಟರ್ಮ್ ಇನ್ಶೂರೆನ್ಸ್ ಕವರೇಜ್ ನೀಡುತ್ತದೆ. ಸಿಂಗಲ್ ಪ್ರೀಮಿಯಂ ಪಾಲಿಸಿಯ ಪ್ರಮುಖ ಲಾಭ ಏನೆಂದರೆ ನೀವು ಪೇ ಮಾಡುತ್ತಿರುವ ಪ್ರೀಮಿಯಂ ಸಮಯ ಕಳೆದಂತೆ ಅಥವಾ ದಿನಕಳೆದಂತೆ ಹೆಚ್ಚಾಗುವುದಿಲ್ಲ.
ಸ್ಯಾಲರಿ ಪಡೆಯುವ ವ್ಯಕ್ತಿಗಳಿಗೆ ಇದು ಸೂಕ್ತವಲ್ಲ ಎಂದೇ ಹೇಳಬಹುದು. ಕಾಲಕ್ಕೆ ತಕ್ಕನಾಗಿ ಮಾಡುವ ಪಾವತಿಗಳು ಉತ್ತಮ ಆಯ್ಕೆಯಾಗಿದೆ. ಒಂದೇ ಸಾರಿ ಪ್ರೀಮಿಯಂ ಪಾವತಿಸುವವರಿಗೆ ಸಿಂಗಲ್ ಪ್ರೀಮಿಯಂ ಪಾಲಿಸಿಗಳು ಉತ್ತಮ ಆಯ್ಕೆಯಾಗಿದೆ.
ಸಾಮಾನ್ಯವಾಗಿ ಯಾರಿಗೆ ಏಕಕಾಲಕ್ಕೆ ದೊಡ್ಡ ಮೊತ್ತದ ಹಣ ಸಿಗುತ್ತದೆ ಅಂತವರು ಇಂತಹ ಪಾಲಿಸಿಗಳನ್ನು ಕೊಂಡುಕೊಳ್ಳುತ್ತಾರೆ. ಕೆಲವೊಮ್ಮೆ ಏಜೆಂಟರು ಸಿಂಗಲ್ ಪ್ರೀಮಿಯಂ ಪಾಲಿಸಿಯನ್ನು ಹೂಡಿಕೆಯ ಮಾರ್ಗ ಎಂದು ಹೇಳುವುದಿದ್ದು ಇದು ನಿಜವಲ್ಲ. ಒಂದೇ ಸಾರಿ ನಿಮ್ಮ ಬಳಿ ಸಾಕಷಞ್ಟು ಹಣ ಹೂಡಿಕೆಗೆ ಲಭ್ಯವಿದ್ದರೆ ಸಿಂಗಲ್ ಪ್ರೀಮಿಯಂ ಪಾಲಿಸಿಯ ಬದಲಾಗಿ ಮ್ಯೂಚುವಲ್ ಫಂಡ್ ನಂತಹ ಹೂಡಿಕೆ ಕಡೆ ಗಮನ ಹರಿಸುವುದು ಒಳ್ಳೆಯದು.


Click it and Unblock the Notifications