ಕಾರ್ಮಿಕರಿಗೆ ಸರ್ಕಾರದಿಂದ ಸಿಹಿಸುದ್ದಿ: ಇಪಿಎಫ್ಒ ಬಡ್ಡಿದರ ಪ್ರಕಟ

ಬೆಂಗಳೂರು, ಜುಲೈ 24: ಸುಮಾರು 6 ಕೋಟಿ ಕಾರ್ಮಿಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 2022-23ರ ಆರ್ಥಿಕ ವರ್ಷದಲ್ಲಿ ಶೇಕಡಾ 8.15 ರಷ್ಟು ಇಪಿಎಫ್ ಬಡ್ಡಿದರ ನೀಡುವುದಾಗಿ ಹೇಳಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಶಿಫಾರಸು ಮಾಡಿರುವ ಶೇಕಡಾ 8.15 ರ ಬಡ್ಡಿ ದರವನ್ನು ಸರ್ಕಾರ ಇದೀಗ ಅನುಮೋದನೆ ನೀಡಿದೆ.

ಕಾರ್ಮಿಕರಿಗೆ ಸರ್ಕಾರದಿಂದ ಸಿಹಿಸುದ್ದಿ: ಇಪಿಎಫ್ಒ ಬಡ್ಡಿದರ ಪ್ರಕಟ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೋಮವಾರ ಹೊರಡಿಸಿದ ಸುತ್ತೋಲೆಯಲ್ಲಿ ಇಪಿಎಫ್ ಬಡ್ಡಿದರವನ್ನು ಸದಸ್ಯರ ಖಾತೆಗಳಿಗೆ ಜಮಾ ಮಾಡಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ರವಾನಿಸಿದೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ತಿಳಿಸಿದೆ.

ಒಪ್ಪಂದದ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬಡ್ಡಿ ದರದ ಶಿಫಾರಸನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ. ಬಡ್ಡಿ ದರಕ್ಕೆ ಸರ್ಕಾರದ ಒಪ್ಪಿಗೆಯ ನಂತರ, ಇಪಿಎಫ್‌ಒ ಈಗ ಇಪಿಎಫ್‌ ಚಂದಾದಾರರಿಗೆ ಹಿಂದಿನ ಹಣಕಾಸಿನ ಬಡ್ಡಿದರವನ್ನು ಖಾತೆಗೆ ಹಾಕಲಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿದ್ದೇನು?

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1952 ರ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 1952 ರ ಪ್ಯಾರಾ 60 (1) ರ ಅಡಿಯಲ್ಲಿ ಇಪಿಎಫ್ ಸ್ಕೀಮ್, 1952 ರ ಇಪಿಎಫ್ ಸ್ಕೀಮ್‌ನ ಪ್ಯಾರಾ 60 ರ ಅಡಿಯಲ್ಲಿ ಇಪಿಎಫ್ ಯೋಜನೆ ನಿಬಂಧನೆಗಳ ಪ್ರಕಾರ 2022-23 ರ ಸಾಲಿನಲ್ಲಿ 8.15% ಬಡ್ಡಿದರವನ್ನು ಇಪಿಎಫ್ ಯೋಜನೆಯ ಪ್ರತಿ ಸದಸ್ಯರ ಖಾತೆಗೆ ಹಾಕುವಂತೆ ಅನುಮೋದನೆ ನೀಡಿದೆ ಎಂದು ಸಚಿವಾಲಯ ಹೇಳಿದೆ.

2023ರ ಮಾರ್ಚ್‌ನಲ್ಲಿ, ಇಪಿಎಫ್‌ಒ ದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು (CBT) ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 6 ಕೋಟಿಗೂ ಹೆಚ್ಚು ಚಂದಾದಾರರಿಗೆ ಶೇಕಡಾ 8.15 ರ ಬಡ್ಡಿದರವನ್ನು ಶಿಫಾರಸು ಮಾಡಿದೆ. ಕಳೆದ ವರ್ಷ 8.1 ಪ್ರತಿಶತ ಬಡ್ಡಿದರ ನೀಡಲಾಗಿತ್ತು.

8.15 ರಷ್ಟು ಬಡ್ಡಿ ಪಾವತಿಯ ನಂತರ, ನಿವೃತ್ತಿ ನಿಧಿ ಸಂಸ್ಥೆಯು 663.91 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆಯಾಗಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಪಿಎಫ್ ಅಡಿಯಲ್ಲಿ ನಿಗದಿಗಿಂದ ಹೆಚ್ಚಿನ ಮೊತ್ತದ ಪಿಂಚಣಿ ನೀಡಬೇಕು ಎಂದು ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್‌ಒ ವಿಸ್ತರಿಸಿತ್ತು. ಈ ಮೊದಲು ಅರ್ಜಿ ಸಲ್ಲಿಸಲು ಜೂನ್ 26 ಕೊನೆಯ ದಿನವಾಗಿತ್ತು. ನಂತರ ಗಡುವನ್ನು ಜುಲೂ 11ರ ತನಕ ವಿಸ್ತರಿಸಲಾಗಿತ್ತು. ಈ ಗಡುವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+