ಬೆಂಗಳೂರು, ಜೂನ್ 28: ಇನ್ನೇನು ಜೂನ್ ತಿಂಗಳು ಮುಗಿಯಲಿದ್ದು ಜುಲೈ ತಿಂಗಳು ಆರಂಭಕ್ಕೆ ಇನ್ನೆರೆಡು ದಿನಗಳಷ್ಟೇ ಇದೆ.. ಜುಲೈ ತಿಂಗಳು ತನ್ನೊಂದಿಗೆ ಕೆಲ ಹೊಸ ನಿಯಮಗಳನ್ನು ತರುತ್ತಿದ್ದು ಇದು ನಮ್ಮ ಬಜೆಟ್ ಮತ್ತು ಜೀವನಕ್ಕೆ ನೇರವಾಗಿ ಸಂಬಂಧಿಸಿದೆ. ಪ್ರತಿ ತಿಂಗಳ ಮೊದಲ ದಿನಾಂಕದ ಜೊತೆಗೆ, ಈ ಬಾರಿಯೂ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಕ್ರೆಡಿಟ್ ಕಾರ್ಡ್, ಸಿಮ್ ಕಾರ್ಡ್, ಎಲ್‌ಪಿಜಿ ಸಿಲಿಂಡರ್ ಬೆಲೆ ಮುಂತಾದವುಗಳು ಒಳಗೊಂಡಿದೆ.
ಜುಲೈ 1 ರಿಂದಾಗುವ ಬದಲಾವಣೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ:
ಸಿಮ್ ಕಾರ್ಡ್‌ನ ಹೊಸ ನಿಯಮ
ಟೆಲಿಕಾಂ ನಿಯಂತ್ರಕ ಟ್ರಾಯ್ SIM ಸ್ವಾಪ್ ವಂಚನೆಯನ್ನು ತಡೆಯಲು ಜುಲೈ 1, 2024 ರಿಂದ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ ನಿಯಮಗಳನ್ನು ಬದಲಾಯಿಸಲು ನಿರ್ಧರಿಸಿದೆ. ಸಿಮ್ ಕಾರ್ಡ್ ಕಳ್ಳತನ ಅಥವಾ ಹಾನಿಯ ಸಂದರ್ಭದಲ್ಲಿ, ಲಾಕ್ ಅವಧಿಯನ್ನು ಏಳು ದಿನಗಳವರೆಗೆ ಹೆಚ್ಚಿಸಲಾಗಿದೆ. ಮೊದಲು ಹೊಸ ಸಿಮ್ ತಕ್ಷಣವೇ ಲಭ್ಯವಾಗುತ್ತಿತ್ತು.

ಕ್ರೆಡಿಟ್ ಕಾರ್ಡ್ ಪಾವತಿಯ ಹೊಸ ನಿಯಮ
ಆರ್‌ಬಿಐ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಜುಲೈ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ, ಎಲ್ಲಾ ಬ್ಯಾಂಕುಗಳು ಭಾರತದಲ್ಲಿನ ಒಂದು ಸಂಯೋಜಿತ ಬಿಲ್ ಪಾವತಿ ವ್ಯವಸ್ಥಯಾಗಿರುವ "ಭಾರತ್ ಬಿಲ್ ಪಾವತಿ ವ್ಯವಸ್ಥೆ"(BBPS )ಯ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಬೇಕಾಗುತ್ತದೆ. ಆದರೆ, ಈ ಸೂಚನೆಗಳನ್ನು ಬ್ಯಾಂಕ್‌ಗಳು ಇನ್ನೂ ಪಾಲಿಸಿಲ್ಲ. ಇಲ್ಲಿಯವರೆಗೆ ಕೇವಲ 8 ಬ್ಯಾಂಕ್‌ಗಳು BBPS ನಲ್ಲಿ ಬಿಲ್ ಪಾವತಿಯನ್ನು ಸಕ್ರಿಯಗೊಳಿಸಿವೆ.
LPG, ATF ನ ಹೊಸ ಬೆಲೆಗಳು
ಪ್ರತಿ ತಿಂಗಳ ಮೊದಲನೆಯ ದಿನ, ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಎಟಿಎಫ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ವಾಣಿಜ್ಯ ಜತೆಗೆ 14 ಕೆಜಿ ಎಲ್‌ಪಿಜಿ ಸಿಲಿಂಡರ್ ದರವೂ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಿರುವಾಗ ಜುಲೈ 1ರಂದು ಗ್ಯಾಸ್ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಪರಿಹಾರ ಸಿಗುತ್ತದೋ ಇಲ್ಲವೋ ಕಾದು ನೋಡಬೇಕಿದೆ.
ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳು
ಸರ್ಕಾರಿ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನೂ ನವೀಕರಣ ಮಾಡಲಿದ್ದು, ಗ್ಯಾಸ್ ಸಿಲಿಂಡರ್‌ಗಳ ಜೊತೆಗೆ, ಜುಲೈ 1 ರ ಮುಂಜಾನೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಮಾನ್ಯ ಜನರು ರಿಲೀಪ್ ಪಡೆಯುತ್ತಾ ಕಾದುನೋಡಬೇಕಿದೆ.


Click it and Unblock the Notifications