ಬೆಂಗಳೂರು, ಜೂನ್ 27: ಹಲವಾರು ಜನರಿಗೆ ಸೇವಿಂಗ್ಸ್ ಅಕೌಂಟ್ ಮತ್ತು ಸ್ಯಾಲರಿ ಅಕೌಂಟ್ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ. ಎರಡನ್ನೂ ಒಂದೇ ಎಂದು ಭಾವಿಸಿರುತ್ತಾರೆ. ನೀವು ನಿಮ್ಮ ಕೆಲಸವನ್ನು ಬದಲಾಯಿಸಿದಾಗ, ಹೊಸ ಕಂಪನಿಯು ನಿಮಗೆ ಸಂಬಳದ ಖಾತೆಯನ್ನು ತೆರೆಯುತ್ತದೆ. ಉಳಿತಾಯ ಖಾತೆಗೆ ಹೋಲಿಸಿದರೆ, ಸಂಬಳದ ಖಾತೆಯು ವಿವಿಧ ಹೆಚ್ಚುವರಿ ವೈಶಿಷ್ಟ್ಯಗಳನ್ನು ಉಚಿತವಾಗಿ ನೀಡುತ್ತದೆ. ಉಳಿತಾಯ ಖಾತೆಯಲ್ಲಿ, ಹಲವು ವಿಧದ ಶುಲ್ಕಗಳನ್ನು ವಿಧಿಸಲಾಗುತ್ತದೆ. ಉದಾಹರಣೆಗೆ, ಸಂಬಳದ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಯಾವುದೇ ಷರತ್ತುಗಳಿಲ್ಲ. ಇದು ಚೆಕ್ ಬುಕ್, ಎಟಿಎಂ ವಹಿವಾಟು ಮತ್ತು ಡಿಮ್ಯಾಂಡ್ ಡ್ರಾಫ್ಟ್‌ನ ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಬ್ಯಾಂಕ್‌ಗಳು ಸಹ ಸಂಬಳದ ಖಾತೆದಾರರಿಗೆ ಅಗ್ಗದ ಮತ್ತು ಸುಲಭವಾಗಿ ಸಾಲ ನೀಡುತ್ತಾ ಬಂದಿವೆ.
ಸಂಬಳದ ಖಾತೆಯನ್ನು ಶೂನ್ಯ ಬ್ಯಲೆನ್ಸ್ ನಲ್ಲಿ ತೆರೆಯಲಾಗುತ್ತದೆ. ಮೂರು ತಿಂಗಳವರೆಗೆ ಸಂಬಳವನ್ನು ಕ್ರೆಡಿಟ್ ಮಾಡದಿದ್ದರೆ, ಅದು ಉಳಿತಾಯ ಖಾತೆಯ ವರ್ಗಕ್ಕೆ ಸೇರುತ್ತದೆ. ನಿಯಮಗಳ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು, ಅದು 500 ರಿಂದ 10,000 ರೂಪಾಯಿಗಳವರೆಗೆ ಇರಬಹುದು. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸುತ್ತದೆ.

ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಯಾವುದೇ ಪ್ರತ್ಯೇಕ ಶುಲ್ಕವಿಲ್ಲದಿದ್ದರೂ, ಅನೇಕ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ಗಳ ಮೇಲೆ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕವು ವರ್ಷಕ್ಕೆ 100 ರಿಂದ 1,000 ರೂಪಾಯಿಗಳವರೆಗೆ ಇರುತ್ತದೆ. ನಿಮ್ಮ ಖಾತೆಯನ್ನು ನೀವು ಬಳಸದಿದ್ದರೂ ಸಹ, ನೀವು ಇನ್ನೂ ಡೆಬಿಟ್ ಕಾರ್ಡ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್‌ಗಳು SMS ಕಳುಹಿಸಲು ಶುಲ್ಕವನ್ನು ವಿಧಿಸುತ್ತವೆ, ಇದು ಪ್ರತಿ ತ್ರೈಮಾಸಿಕಕ್ಕೆ 45 ರೂ. ಈ ಮೊತ್ತದ ಮೇಲೆ ಪ್ರತ್ಯೇಕವಾಗಿ ಶೇಕಡಾ 18ರಷ್ಟು GST ವಿಧಿಸಲಾಗುತ್ತದೆ.
ಆದ್ದರಿಂದ, ಬ್ಯಾಂಕ್ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸುತ್ತಲೇ ಇರುತ್ತದೆ. ಖಾತೆಯಲ್ಲಿನ ಬ್ಯಾಲೆನ್ಸ್ ಶೂನ್ಯವಾದಾಗ, ಬ್ಯಾಂಕ್‌ಗಳು ಪ್ರಕ್ರಿಯೆಯ ಹಣವನ್ನು ಕಡಿತಗೊಳಿಸಬಹುದು. ದಂಡ ಸಂಗ್ರಹವಾಗುತ್ತಲೇ ಇರುತ್ತದೆ. ನೀವು ಈ ಮೊತ್ತವನ್ನು ಠೇವಣಿ ಮಾಡದಿದ್ದರೆ, ಬ್ಯಾಂಕ್ ನಿಮ್ಮನ್ನು ಡೀಫಾಲ್ಟರ್ ಎಂದು ಘೋಷಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ CIBIL ಮೇಲೆ ಪರಿಣಾಮ ಬೀರಬಹುದು. ಇನ್ನು ಇತ್ತೀಚೆಗೆ, ಖಾತೆಯು ಮೈನಸ್ ಬ್ಯಾಲೆನ್ಸ್ ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು ವಿಧಿಸದಂತೆ ಬ್ಯಾಂಕ್‌ಗಳಿಗೆ RBI ಸೂಚನೆ ನೀಡಿದೆ.
ಸತತ 12 ತಿಂಗಳವರೆಗೆ ನೀವು ಯಾವುದೇ ವಹಿವಾಟು ನಡೆಸದಿದ್ದರೆ ಮಾಡದಿದ್ದರೆ, ಬ್ಯಾಂಕ್ ನಿಮ್ಮ ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸುತ್ತದೆ. ಮುಂದಿನ 12 ತಿಂಗಳವರೆಗೆ ಇದರಲ್ಲಿ ಯಾವುದೇ ವಹಿವಾಟು ಇಲ್ಲದಿದ್ದರೆ, ಈ ಖಾತೆಯು ಡಾರ್ಮೆಂಟ್ ಅಕೌಂಟ್ಗೆ ಸೇರುತ್ತದೆ. ನಿಷ್ಕ್ರಿಯ ಖಾತೆಗಳಲ್ಲಿನ ವಹಿವಾಟುಗಳನ್ನು ಬ್ಯಾಂಕುಗಳು ನಿಷೇಧಿಸದಿದ್ದರೂ ಕೂಡ ನೀವು ನಿಷ್ಕ್ರಿಯ ಖಾತೆಯಿಂದ ನೆಟ್ ಬ್ಯಾಂಕಿಂಗ್, ಎಟಿಎಂ ವಹಿವಾಟುಗಳು ಅಥವಾ ಮೊಬೈಲ್ ಬ್ಯಾಂಕಿಂಗ್‌ನಂತಹ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ. ಜೊತೆಗೆ ಡೆಬಿಟ್ ಕಾರ್ಡ್, ಚೆಕ್ ಬುಕ್ ಮತ್ತು ವಿಳಾಸ ಬದಲಾವಣೆ ವಿನಂತಿಯನ್ನ ನೀಡಲು ಬ್ಯಾಂಕ್ ನಿರಾಕರಣೆ ಮಾಡಬಹುದು.
ಆದ್ದರಿಂದ ಬ್ಯಾಂಕ್ಗಳ ಅನಗತ್ಯ ದಂಡಗಳನ್ನ ತಪ್ಪಿಸಲು ನೀವು ನಿಮ್ಮ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಡಿ. ನೀವು ಕೆಲಸವನ್ನು ಬದಲಾಯಿಸುತ್ತಿದ್ದರೆ ಅಥವಾ ನೀವು ಬೇರೆ ನಗರಕ್ಕೆ ಹೋಗಬೇಕಾದರೆ, ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಿ. ನೀವು ಹಲವಾರು ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ಪರಿಶೀಲಿಸಿ. ಅಗತ್ಯವಿಲ್ಲದ ಖಾತೆ ಕ್ಲೋಸ್ ಮಾಡಿ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ.


Click it and Unblock the Notifications