ಡಾ. ರೆಡ್ಡಿ ಯಶೋಗಾಥೆ: ಕಾಡಿದ ರೋಗಿಯ ಸಾವು, ಅಪೋಲೋ ಆಸ್ಪತ್ರೆಯ ಹುಟ್ಟು

ಡಾ. ಪ್ರತಾಪ್ ಸಿ. ರೆಡ್ಡಿ ಅವರು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟುಮಾಡಿದ ದೂರದೃಷ್ಟಿಯುಳ್ಳ ಉದ್ಯಮಿ ಮತ್ತು ಹೃದಯರೋಗ ತಜ್ಞರು. 1983ರಲ್ಲಿ ಅವರು ಸ್ಥಾಪಿಸಿದ ಅಪೋಲೋ ಆಸ್ಪತ್ರೆಗಳು, ಭಾರತದ ಮೊತ್ತ ಮೊದಲ ಕಾರ್ಪೊರೇಟ್ ಆಸ್ಪತ್ರೆಯಾಗಿದ್ದು, ದೇಶದಲ್ಲಿ ಖಾಸಗಿ ಆರೋಗ್ಯ ರಕ್ಷಣೆಯ ಕಲ್ಪನೆಗೆ ನಾಂದಿ ಹಾಡಿತು. ಇಂದು 26,858 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ, ಡಾ. ರೆಡ್ಡಿ ಬೆಟ್ಟದಷ್ಟು ಸಾಧನೆಗಳನ್ನು ಮಾಡಿರುವಾಗ ವಿಶ್ರಾಂತಿ ಪಡೆಯಬಹುದು.

ಆದರೆ ಡಾ. ಪ್ರತಾಪ್ ಸಿ. ರೆಡ್ಡಿ ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಾರೆ. 91 ವರ್ಷ ವಯಸ್ಸಿನಲ್ಲಿ, ಡಾ. ಪ್ರತಾಪ್ ಸಿ. ರೆಡ್ಡಿ ಅವರು ತಮ್ಮ ಕೆಲಸದ ದಿನವನ್ನು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಿ ಸಂಜೆ 5 ಗಂಟೆಗೆ ಮುಗಿಸುತ್ತಾರೆ, ಆರು ದಿನಗಳ ಕೆಲಸದ ವಾರವನ್ನು ನಿರ್ವಹಿಸುತ್ತಾರೆ. ಅವರ ಸಮರ್ಪಣೆ ಮತ್ತು ಯುವ ಶಕ್ತಿಯು 90 ರ ದಶಕದಲ್ಲಿರುವ ಯಾರಿಗಾದರೂ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ.

ಅಪೋಲೋ ಸ್ಥಾಪಕ ಡಾ. ಪ್ರತಾಪ್ ರೆಡ್ಡಿ ಸ್ಪೂರ್ತಿದಾಯಕ ಕಥೆ

ಡಾ. ರೆಡ್ಡಿ ಹುಟ್ಟು ಮತ್ತು ವಿದ್ಯಾಭ್ಯಾಸ

ಡಾ. ಪ್ರತಾಪ್ ಸಿ. ರೆಡ್ಡಿ ಅವರು 1933 ರಲ್ಲಿ ಆಂಧ್ರಪ್ರದೇಶದ ಅರಗೊಂಡ ಗ್ರಾಮದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಜನರ ಕಷ್ಟಗಳನ್ನು ಕಂಡ ಅವರು, ಅವುಗಳನ್ನು ನಿವಾರಿಸುವ ಆಶಯದಿಂದ ವೈದ್ಯರಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಪ್ರಾರ್ಥಮಿಕ ವಿದ್ಯಾಭ್ಯಾಸ ಬಳಿಕ ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಹಾಗೂ ಎಂಬಿಬಿಎಸ್ ಪಡೆದರು. ಬಳಿಕ, ಹೃದ್ರೋಗಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಯುಕೆ ಮತ್ತು ಯುಎಸ್‌ಗೆ ತೆರಳಿದರು. ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಿಂದ ಮತ್ತು ಯುಕೆ ರಾಯಲ್ ಕಾಲೇಜಿನಿಂದ ಫೆಲೋಶಿಪ್ ಪಡೆದರು. ಅಮೆರಿಕದ ಮಿಸೌರಿ ಸ್ಟೇಟ್ ಚೆಸ್ಟ್ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸಂಶೋಧನಾ ಕಾರ್ಯಕ್ರಮಗಳನ್ನು ಮುನ್ನಡೆಸಿದರು ಮತ್ತು ಅಲ್ಲಿ ಕಾರ್ಯನಿರ್ವಹಿಸಿತೊಡಗಿದ್ದರು.

ಅವರ ಹುಟ್ಟುಹಬ್ಬದಂದು ತಂದೆಯವರಿಂದ ಬಂದ ಪತ್ರವು ಅವರ ಜೀವನದ ಸ್ಮರಣೀಯ ಕ್ಷಣಗಳಲ್ಲಿ ಒಂದಾಯಿತು. ಆ ಪತ್ರದಲ್ಲಿ, ತಮ್ಮ ಪುತ್ರ ಯಾವುದೇ ಉತ್ತಮ ಕಾರ್ಯ ಮಾಡಿದ್ರೂ ಅದು ತಂದೆ ತಾಯಿಯವರಿಗೆ ಸಂತೋಷವನ್ನು ನೀಡುತ್ತದೆ ಎಂದು ಹೃದಯಸ್ಪರ್ಶಿಯಾಗಿ ಉಲ್ಲೇಖಿಸಿದ್ದರು. ಈ ಮಾತುಗಳು ಡಾ. ರೆಡ್ಡಿ ಅವರಲ್ಲಿ ಯೋಚನೆಗೆ ಹಚ್ಚಿತ್ತು. ಆ ಪತ್ರವು ಭಾರತಕ್ಕೆ ಹಿಂತಿರುಗುವ ಸ್ಪಷ್ಟ ಸೂಚನೆಯನ್ನು ನೀಡದಿದ್ದರೂ, ಅವರು ಮತ್ತು ಅವರ ಪತ್ನಿ ಸುಚರಿತ ಅವರು ಭಾರತಕ್ಕೆ ಮರಳಲು ನಿರ್ಧರಿಸಿದರು. ಅದೃಷ್ಟವಶಾತ್, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಹೆಣ್ಣುಮಕ್ಕಳಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ನಂತರ, 1971 ರಲ್ಲಿ ಅವರು ಭಾರತಕ್ಕೆ ಮರಳಿದರು.

ರೋಗಿಯ ಸಾವು ಮತ್ತು ಆಸ್ಪತ್ರೆಯ ಹುಟ್ಟು:

ಡಾ. ರೆಡ್ಡಿ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೈದ್ಯಕೀಯ ತರಬೇತಿ ಪಡೆದು ಭಾರತಕ್ಕೆ ಮರಳಿದಾಗ, ಗುಣಪಡಿಸಬಹುದಾದ ಕಾಯಿಲೆಗಳಿಂದ ಬಳಲುತ್ತಿದ್ದ ಜನರು ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಸಾಯುತ್ತಿರುವುದನ್ನು ಕಂಡು ತೀವ್ರವಾಗಿ ನೊಂದರು. ನಿರ್ದಿಷ್ಟವಾಗಿ, ಹೃದಯ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಸಾಧ್ಯವಾಗದ ಯುವ ರೋಗಿಯೊಬ್ಬನ ಸಾವು ಅವರ ಮನಕಲಕಿತ್ತು. ಈ ಘಟನೆಯು ಭಾರತೀಯರಿಗೆ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ತಮ್ಮ ದೇಶದಲ್ಲೇ ಒದಗಿಸುವ ದೃಢ ಸಂಕಲ್ಪವನ್ನು ಅವರಿಗೆ ಮೂಡಿಸಿತ್ತು.

ಅಪೋಲೋ ಆಸ್ಪತ್ರೆಗಳ ಜನನ

ಹಲವಾರು ಶ್ರಮ ಓಡಾಟದ ಬಳಿಕ 1983 ರಲ್ಲಿ, ಅಪೋಲೋ ಆಸ್ಪತ್ರೆಗಳು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಬೆಂಬಲದೊಂದಿಗೆ ಚೆನ್ನೈನಲ್ಲಿ ತನ್ನ ಬಾಗಿಲು ತೆರೆಯಿತು. ಇದು ಕೇವಲ ಆಸ್ಪತ್ರೆಯಾಗಿರಲಿಲ್ಲ - ಇದು ಭರವಸೆಯ ದಾರಿದೀಪವಾಗಿತ್ತು, ಹಿಂದೆ ಅಂತಹ ಪ್ರವೇಶವಿಲ್ಲದ ಭಾರತೀಯರಿಗೆ ವಿಶ್ವ ದರ್ಜೆಯ ಆರೋಗ್ಯ ರಕ್ಷಣೆಯನ್ನು ನೀಡಿತು. ಡಾ. ರೆಡ್ಡಿ ಈ ಆಸ್ಪತ್ರೆ ಸ್ಥಾಪಿಸಲು ತಮ್ಮ ಕುಟುಂಬದ 3 ಕೋಟಿ ರೂ. ಮೌಲ್ಯದ ಭೂಮಿಯನ್ನು ಅಡಮಾನ ಇಡಬೇಕಾಯಿತು. ಇದರೊಂದಿಗೆ ಅವರು ಚೆನ್ನೈನಲ್ಲಿ ಕೇವಲ 150 ಹಾಸಿಗೆಗಳೊಂದಿಗೆ ಮೊದಲ ಅಪೊಲೊ ಆಸ್ಪತ್ರೆಯನ್ನು ನಿರ್ಮಿಸಿದರು. ಆರಂಭದಲ್ಲಿ ಹೃದಯ ಆರೈಕೆಯ ಮೇಲೆ ಕೇಂದ್ರೀಕರಿಸಿದ ಅಪೋಲೋ ತ್ವರಿತವಾಗಿ ಆರೋಗ್ಯ ರಕ್ಷಣಾ ದೈತ್ಯವಾಗಿ ಬೆಳೆಯಿತು.

ಡಾ. ರೆಡ್ಡಿ ಅವರು ಅಮೆರಿಕದಿಂದ ಪರಿಣಿತ ಮತ್ತು ಹೆಚ್ಚು ಅರ್ಹತೆ ಹೊಂದಿರುವ ಭಾರತೀಯ ವೈದ್ಯರನ್ನು ನೇಮಿಸಿಕೊಂಡರು. ಕೇವಲ ಒಂದು ಶಾಖೆಯೊಂದಿಗೆ ಪ್ರಾರಂಭವಾದ ಅಪೊಲೊ ಆಸ್ಪತ್ರೆಗಳು ಶೀಘ್ರದಲ್ಲೇ ಭಾರಿ ಯಶಸ್ಸನ್ನು ಗಳಿಸಿತು. ನಂತರ, ಅವರು ಅಹಮದಾಬಾದ್, ಬಿಲಾಸ್ಪುರ್, ಮೈಸೂರು ಮತ್ತು ಕೋಲ್ಕತ್ತಾಗಳಿಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಯಾವುದೇ ದುರಾಸೆಗೆ ಒಳಗಾಗದೆ, ಅವರು ಕೆಲವೊಮ್ಮೆ ಕೆಲವು ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದರು. ಅಪೊಲೊ ಸಂಸ್ಥೆಯು ಅಪೊಲೊ ಫಾರ್ಮಸಿ ಎಂಬ ಔಷಧಾಲಯಗಳ ಸರಪಳಿಯನ್ನು ಸಹ ತನ್ನ ತೆಕ್ಕೆಗೆ ತೆಗೆದುಕೊಂಡಿತು. 2015 ರಲ್ಲಿ ಅಪೊಲೊ ಹೋಮ್‌ಕೇರ್ ಮತ್ತು 2020 ರಲ್ಲಿ ಅಪೊಲೊ 24/7 ಎಂಬ ಡಿಜಿಟಲ್ ಆರೋಗ್ಯ ವೇದಿಕೆಯನ್ನು ಪ್ರಾರಂಭಿಸುವ ಮೂಲಕ ತಮ್ಮ ಸೇವೆಯನ್ನು ಮತ್ತಷ್ಟು ವಿಸ್ತರಿಸಿತು. ಏಪ್ರಿಲ್ 26, 2024 ರ ವೇಳೆಗೆ, ಅಪೊಲೊ ಸಂಸ್ಥೆಯ ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿತು. ಇಂದು 73 ಕ್ಕೂ ಹೆಚ್ಚು ಆಸ್ಪತ್ರೆಗಳು, 11,000 ವೈದ್ಯರು ಮತ್ತು 6,500 ಔಷಧಾಲಯಗಳನ್ನು ಹೊಂದಿರುವ ಭಾರತದ ಅತಿದೊಡ್ಡ ವೈದ್ಯಕೀಯ ಆರೈಕೆ ಕೇಂದ್ರಗಳಲ್ಲಿ ಒಂದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+