ಬೆಂಗಳೂರು, ಜೂನ್ 21: ಹಣದ ತುರ್ತು ಬಿದ್ದಾಗ ಒಂದು ಕ್ಷಣ ನಾವು ನಮ್ಮ ಬಳಿ ಇರುವ ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುವುದರ ಬಗ್ಗೆಯೂ ಯೋಚನೆ ಮಾಡುತ್ತೇವೆ. ಅಂದರೆ ಗೋಲ್ಡ್ ಲೋನ್ ತೆಗೆದುಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೇವೆ.
ಒಂದು ವೇಳೆ ಗೋಲ್ಡ್ ಲೋನ್ ತೆಗೆದುಕೊಳ್ಳುವ ಸಂದರ್ಭ ಎದುರಾದರೆ ನಿಮ್ಮ ಬಳಿ ಇರುವ ಚಿನ್ನದ ಮೌಲ್ಯ ನಿಮಗೆ ಸರಿಯಾಗಿ ಗೊತ್ತಿರಬೇಕು. ಆರ್ಬಿಐ ಇತ್ತೀಚೆಗೆ ಕೆಲವೊಂದು ಕ್ರಮಗಳನ್ನ ತೆಗೆದುಕೊಂಡಿತ್ತು. ಇದಕ್ಕೆ ಕಾರಣ ಏನಂದರೆ ಸಾಲ ವಿತರಣೆ ಸಂದರ್ಭದಲ್ಲಿ ಚಿನ್ನಕ್ಕೆ ಕಡಿಮೆ ಮೌಲ್ಯ ನಿರ್ಣಯ ಮಾಡುತ್ತಿರುವ ದೂರುಗಳು ಬಂದಿದ್ದವು. ಕಡಿಮೆ ಮೌಲ್ಯ ಕಟ್ಟುವುದು ಒಂದು ಕಡೆ ಆದರೆ ಮತ್ತು ಡೀಫಾಲ್ಟ್‌ಗಳ ಸಂದರ್ಭದಲ್ಲಿ ಚಿನ್ನದ ನಿಜವಾದ ಮೌಲ್ಯದಿಂದ ಪ್ರಯೋಜನ ಲಾಭ ಪಡೆದುಕೊಳ್ಳುವುದು ಇನ್ನೊಂದು ಕಡೆಯಾಗಿದೆ.

ತನಿಷ್ಕ್, ಕಲ್ಯಾಣ್ ಜ್ಯುವೆಲರ್ಸ್ ನಂತಹ ಅನೇಕ ಸಂಸ್ಥೆಗಳು ಉಚಿತ ಗೋಲ್ಡ್ ವ್ಯಾಲ್ಯುಯೇಷನ್ ಸರ್ವೀಸ್ ಕೊಡುತ್ತಿವೆ. ನಿಮಗೆ ರಸೀಪ್ಟ್ ಕೂಡ ಸಿಗುತ್ತದೆ. ಇದರ ಲಾಭ ಸಹ ಪಡೆದುಕೊಳ್ಳಬಹುದು.
ಒಂದು ವೇಳೆ ಫೈನ್ಯಾನ್ಸ್ ಕಂಪನಿಯು ನಿಮ್ಮ ಚಿನ್ನಕ್ಕೆ ಕಡಿಮೆ ಮೌಲ್ಯ ಹೇಳಿದರೆ, ನೀವು ಜಾಗೃತರಾಗಿ. ಅದು ವಂಚನೆಯ ಉದ್ದೇಶ ಹೊಂದಿರಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಅಂತಹ ಕಂಪನಿಯಿಂದ ಸಾಲ ಪಡೆದರೆ, ಅವರು ಸಾಲದ ಮೇಲೆ ವಿಧಿಸುವ ಬಡ್ಡಿ ಮತ್ತು ದಂಡಗಳಲ್ಲೂ ವ್ಯತ್ಯಾಸ ಮಾಡಬಹುದು, ನೆನಪಿರಲಿ.
ಬ್ಯಾಂಕ್ ಮತ್ತು ಎನ್ ಬಿ ಎಫ್ ಸಿ ಗಳು ನೀಡುವ ಚಿನ್ನದ ಸಾಲದ ಮೇಲಿನ ಬಡ್ಡಿ ದರದಲ್ಲಿ ಭಾರಿ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ, ಸರ್ಕಾರಿ ಬ್ಯಾಂಕ್ ಗಳು ಗೋಲ್ಡ್ ಲೋನ್ ಗೆ ಶೇಕಡ 8.65 ರಿಂದ 11 ರಷ್ಟು ಬಡ್ಡಿ ವಿಧಿಸಿದರೆ, ಆ್ಯಕ್ಸಿಸ್ ಮತ್ತು ಎಚ್ ಡಿ ಎಫ್ ಸಿ ಗಳಂತಹ ಖಾಸಗಿ ವಲಯದ ಬ್ಯಾಂಕುಗಳು ವಾರ್ಷಿಕವಾಗಿ ಶೇಕಡ 17 ರಷ್ಟು ಬಡ್ಡಿ ವಿಧಿಸುತ್ತದೆ. ಅದೇ ಎನ್ ಬಿ ಎಫ್ ಸಿ ಗಳಾದರೆ ಶೇಕಡ 36 ರಷ್ಟರವರೆಗೆ ಬಡ್ಡಿ ವಿಧಿಸುತ್ತದೆ. ಹಾಗಾಗಿ ನಿಮ್ಮ ಚಿನ್ನ ಎಲ್ಲಿ ಅಡವಿಡಲು ಮುಂದಾಗಿದ್ದೀರಿ ಎನ್ನುವುದನ್ನು ನೋಡಿಕೊಳ್ಳಬೇಕಾಗುತ್ತದೆ.


Click it and Unblock the Notifications