ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು ಪಾಸ್‌ಪೋರ್ಟ್ ಮಾಡಿಸುವವರೆಗೂ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇರಲೇಬೇಕು. ಪ್ರಸ್ತು ಆಧಾರ್ ಅಥವಾ ಪ್ಯಾನ್ ಕಾರ್ಡ್ (Aadhaar-Pan Card) ಅಗತ್ಯ ದಾಖಲೆಗಳಲ್ಲೊಂದಾಗಿದೆ. ಆದ್ರೆ ಈ ಮಧ್ಯೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಲು ಒಂದೇ ದಿನ ಮಾತ್ರ ಬಾಕಿ ಉಳಿದಿದೆ. ನಾಳೆಯೊಳಗೆ (ಡಿ.31) ಪ್ಯಾನ್-ಆಧಾರ್ ಯಾರೆಲ್ಲಾ ಲಿಂಕ್ ಮಾಡುವುದಿಲ್ಲವೋ, ಅವರ ಪ್ಯಾನ್ ಕಾರ್ಡ್ ಬ್ಲಾಕ್ ಆಗಲಿದೆ ಎಂದು ವರದಿಯಾಗಿದೆ.

ಪ್ಯಾನ್ ಕಾರ್ಡ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು 2025ರ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಈ ದಿನಾಂಕದೊಳಗೆ ಲಿಂಕ್ ಮಾಡದ ತೆರಿಗೆದಾರರ ಪ್ಯಾನ್ ನಂತರ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ ನೀವು ಮಾಡುವ ಒಂದು ತಪ್ಪಿನಿಂದ ದೊಡ್ಡ ತೊಂದರೆಗೆ ಸಿಲುಕಿಗೊಳ್ಳಬಹುದು. ಈ ಪ್ರಕ್ರಿಯೆ ಎಲ್ಲರಿಗೂ ಕಡ್ಡಾಯವಾಗಿದ್ದು, ಮಾನ್ಯ ಪ್ಯಾನ್, ಆಧಾರ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ಆನ್‌ಲೈನ್‌ನಲ್ಲೂ ಲಿಂಕ್ ಮಾಡಬಹುದು.
ಆದಾಯ ತೆರಿಗೆ ಇಲಾಖೆಯ 2025ರ ಏಪ್ರಿಲ್ 3ರ ಅಧಿಸೂಚನೆಯ ಪ್ರಕಾರ, 2024ರ ಅಕ್ಟೋಬರ್ 1ರ ಮೊದಲು ಆಧಾರ್ ಬಳಸಿ ಪ್ಯಾನ್ ಪಡೆದವರು 2025ರ ಡಿಸೆಂಬರ್ 31ರೊಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA ಅಡಿಯಲ್ಲಿ, 2017ರ ಜುಲೈ 1ರ ವೇಳೆಗೆ ಪ್ಯಾನ್ ಹೊಂದಿರುವ ಎಲ್ಲರೂ ತಮ್ಮ ಆಧಾರ್ ಸಂಖ್ಯೆಯನ್ನು ಇಲಾಖೆಗೆ ತಿಳಿಸಬೇಕು. ನಕಲಿ ಪ್ಯಾನ್ ಬಳಕೆ ಹಾವಳಿ ಹೆಚ್ಚಾಗಿದ್ದು, ಸದ್ಯ ಈ ನಿರ್ಧಾರ ಈ ಎಲ್ಲಾ ಅಕ್ರಮಗಳಿಗೆ ಬ್ರೇಕ್ ನೀಡಲಿದೆ ಎಂದು ಐಟಿ ಇಲಾಖೆ ಎಚ್ಚರಿಸಿದೆ.
ಪ್ರಸ್ತುತ ಹೊಸ ಪ್ಯಾನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವಾಗ ಆಧಾರ್-ಪ್ಯಾನ್ ಲಿಂಕ್ ಆಟೋಮೆಟಿಕ್ ಆಗಿಯೇ ಆಗುತ್ತದೆ.
ಆನ್‌ಲೈನ್‌ನಲ್ಲೇ ಪ್ಯಾನ್-ಆಧಾರ್ ಲಿಂಕ್ ಮಾಡಿ:
ಮೊದಲಿಗೆ, ಇ-ಫೈಲಿಂಗ್ ಪೋರ್ಟಲ್‌ನ ಹೋಮ್ ಪೇಜ್‌ಗೆ ಭೇಟಿ ನೀಡಬೇಕು. ಅಲ್ಲಿ 'ಆಧಾರ್ ಲಿಂಕ್' ಆಯ್ಕೆ ಮಾಡಿ. ನಂತರ, ನಿಮ್ಮ ಪ್ಯಾನ್ ಮತ್ತು ಆಧಾರ್ ನಂಬರ್‌ಗಳನ್ನು ಹಾಕಬೇಕು. ಇ-ಪೇ ಟ್ಯಾಕ್ಸ್ ಮೂಲಕ ಪಾವತಿಸಲು 'Continue' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ಪ್ಯಾನ್ ಕಾರ್ಡ್ ಅಪ್‌ಲೋಡ್ ಮಾಡಿ, ಓಟಿಪಿಗಾಗಿ ಯಾವುದಾದರೂ ಮೊಬೈಲ್ ನಂಬರ್ ನೀಡಬೇಕು.
ಒಟಿಪಿ ಪರಿಶೀಲನೆಯ ನಂತರ ಇ-ಪೇ ಟ್ಯಾಕ್ಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು 'ಪ್ರೊಸೀಡ್' ಕ್ಲಿಕ್ ಮಾಡಿ. ನಂತರ, ನಿಮ್ಮ ಮೌಲ್ಯಮಾಪನ ವರ್ಷವನ್ನು ಮತ್ತು ಪೇಮೆಂಟ್ ವಿಧವನ್ನು 'Other Receipts' ಎಂದು ಆಯ್ಕೆ ಮಾಡಿ 'Continue' ಕ್ಲಿಕ್ ಮಾಡಬೇಕು.
ಕೊನೆಗೆ, ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ. ಡ್ಯಾಶ್‌ಬೋರ್ಡ್‌ನಲ್ಲಿ, ನಿಮ್ಮ ಪ್ರೊಫೈಲ್ ವಿಭಾಗದ ಅಡಿಯಲ್ಲಿ 'ಪ್ಯಾನ್- ಆಧಾರ್ ಲಿಂಕ್ ಮಾಡಿ' ಅಥವಾ ವೈಯಕ್ತಿಕ ವಿವರಗಳಲ್ಲಿ 'ಆಧಾರ್ ಲಿಂಕ್' ಅನ್ನು ಆಯ್ಕೆ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ವಾಲಿಡೇಟ್' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಲಿಂಕ್ ಮಾಡಬಹುದಾಗಿದೆ.


Click it and Unblock the Notifications