"ಡಿಜಿಟಲ್ ಕ್ರಾಂತಿಯ ಅಬ್ಬರದಲ್ಲಿ, ಇಂದಿನ ಜಗತ್ತು ಇ-ಕಾಮರ್ಸ್ ವೇದಿಕೆಗಳ ಅಧಿಪತ್ಯಕ್ಕೆ ಒಳಪಟ್ಟಿದೆ. ಅನೇಕ ಯಶಸ್ವಿ ಇ-ಕಾಮರ್ಸ್ ವೇದಿಕೆಗಳ ಪೈಕಿ 'ಮೀಶೋ' ಕೂಡಾ ಒಂದು. ಭಾರತದ ಮನೆಮನೆಗೂ ತಲುಪಿರುವ 'ಮೀಶೋ' ಎಂಬ ಹೆಸರು, ಕೇವಲ ಒಂದು ಆನ್‌ಲೈನ್ ಮಾರುಕಟ್ಟೆಯಾಗಿರದೆ,ಕ್ರಾಂತಿಕಾರಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಸಾಮಾನ್ಯರ ಕನಸುಗಳನ್ನು ನನಸಾಗಿಸಿದ ಈ ವೇದಿಕೆಯ ಹುಟ್ಟು ಮತ್ತು ಬೆಳವಣಿಗೆಯ ರೋಚಕ ಪಯಣವನ್ನು ತಿಳಿಯಲು ಕುತೂಹಲವಿದೆಯೇ? ಈ ಪ್ಲಾಟ್‌ಫಾರ್ಮ್‌ನ ಗಮನಾರ್ಹ ಯಶಸ್ಸಿನ ಹಿಂದಿನ ಕಥೆ ನಿಮಗೆ ಗೊತ್ತಾ?
ಸ್ವದೇಶಿ ಸ್ಟಾರ್ಟ್‌ಅಪ್ ಆಗಿ ಸ್ಥಾಪನೆಯಾದ ಮೀಶೋ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಅಸ್ತಿತ್ವದಲ್ಲಿರುವ ದೈತ್ಯ ಸಂಸ್ಥೆಗೆ ಪ್ರತಿಸ್ಪರ್ಧಿಯಾಗಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ ವಿಧಾನಕ್ಕೆ ಹೊಸತನ ನೀಡಿದೆ. ಸಣ್ಣ ಉದ್ಯಮಿಗಳನ್ನು, ವಿಶೇಷವಾಗಿ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿ ಸಬಲೀಕರಣಗೊಳಿಸುವ ಮೂಲಕ ಇಂಟರ್ನೆಟ್ ವಾಣಿಜ್ಯಕ್ಕೆ ಕ್ಶೇತ್ರವನ್ನು ಪ್ರವೇಶವನ್ನು ಸರಳಗೊಳಿಸುವ ಮೂಲಕ, ಮೀಶೋ ತನ್ನನ್ನು ತಾನು ಶತಕೋಟಿ ಡಾಲರ್ ಯಶಸ್ಸಿನ ಕಥೆಯಾಗಿ ಪರಿವರ್ತಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಗ್ರಾಹಕರಿಗೆ ವೈಯಕ್ತಿಕಗೊಳಿಸಿದ ಮತ್ತು ಕೈಗೆಟುಕುವ ಶಾಪಿಂಗ್ ಅನುಭವವನ್ನು ನೀಡುವ ವಿಶಿಷ್ಟ ವಿಧಾನವನ್ನು ಅನುಸರಿಸುವ ಮೂಲಕ ಮೀಶೋ ಕಾಂತ್ರಿಯನ್ನು ಹುಟ್ಟುಹಾಕಿದೆ.

ಮೀಶೋ ಎಂಬ ಸಂಸೆಯನ್ನು ಹುಟ್ಟುಹಾಕಿ ಮುನ್ನಡೆಸುತ್ತಿರುವವರು ಇಬ್ಬರು ಐಐಟಿಯನ್ನರು. ಅವರೇ ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್ವಾಲ್. ಮಹಿಳಾ ಸಬಲೀಕರಣದ ಕಡೆಗೆ ತನ್ನ ವಿಶಿಷ್ಟ ವಿಧಾನದೊಂದಿಗೆ, ಮೀಶೊ ಲಕ್ಷಾಂತರ ಭಾರತೀಯರು ಆನ್‌ಲೈನ್‌ನಲ್ಲಿ ವ್ಯವಹಾರಗಳನ್ನು ನಡೆಸುವಲ್ಲಿ ಕ್ರಾಂತಿಕಾರವಾಗಿ ಪರಿವರ್ತಿಸಿದೆ. ಭಾರತದ ಅತಿದೊಡ್ಡ ಮರುಮಾರಾಟ ವೇದಿಕೆಯಾದ ಮೀಶೊವನ್ನು 2015 ರಲ್ಲಿ ಸ್ಥಾಪಿಸಲಾಯಿತು. ಮೀಶೊ ಅಪ್ಲಿಕೇಶನ್ ಮೂಲತಃ ತಯಾರಕರನ್ನು ಮರುಮಾರಾಟಗಾರರೊಂದಿಗೆ ಲಿಂಕ್ ಮಾಡುವ ಕೆಲಸವನ್ನು ಮಾಡುತ್ತದೆ.
ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್ವಾಲ್ ದೆಹಲಿಯ ಐಐಟಿಯಲ್ಲಿ ಒಟ್ಟಿಗೆ ಓದಿದ ಗೆಳೆಯರು. ಐಐಟಿ ಪದವಿ ಪಡೆದ ನಂತರ, ಸಂಜೀವ್ ಬರ್ನ್ವಾಲ್ ಜಪಾನ್‌ಗೆ ಹೋದರು. ಅಲ್ಲಿ ಅವರು ಸೋನಿಯ ಪ್ರತಿಷ್ಠಿತ ತಾಂತ್ರಿಕ ತಂಡದಲ್ಲಿ ಕೆಲಸ ಗಿಟ್ಟಿಸಿದರು. ಉತ್ತಮ ಸಂಬಳದ ಉದ್ಯೋಗವಿದ್ದರೂ, ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಕನಸು ಅವರ ಮನಸ್ಸಿನಲ್ಲಿ ಕಾಡುತ್ತಿತ್ತು. ನಂತರ, ಅವರು ಬೆಂಗಳೂರು ಮೂಲದ 'ಇನ್‌ಮೊಬಿ' ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸ್ನೇಹಿತ ವಿದಿತ್ ಆತ್ರೆ ಅವರನ್ನು ಸಂಪರ್ಕಿಸಿದರು. ಈ ಇಬ್ಬರು ಸ್ನೇಹಿತರು ಹೊಸ ಕನಸು ಕಟ್ಟಲು 2015 ರಲ್ಲಿ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡಿ ಹೊರಬಂದರು. ಅವರು ಹೊಸ ಸ್ಟಾರ್ಟ್‌ಅಪ್ ಕಲ್ಪನೆಯನ್ನು ರೂಪಿಸುತ್ತಿದ್ದಾಗ, ವ್ಯವಹಾರದ ಯಶಸ್ಸಿಗೆ ಪೂರಕವಾಗಿ ಇರುವ ವೇದಿಕೆಯನ್ನು ರಚಿಸುವ ಗುರಿಯು ಅವರಲ್ಲಿ ಹುಟ್ಟಿಕೊಂಡಿತ್ತು. . ಜನಸಾಮಾನ್ಯರಿಗೆ ವ್ಯಾಪಾರ ಮಾಡಲು ಸುಲಭವಾಗುವಂತಹ ಒಂದು ವೇದಿಕೆಯನ್ನು ರೂಪಿಸುವ ಕನಸು ಅವರದಾಗಿತ್ತು.
2015 ರಲ್ಲಿ, ಮೀಶೋ ಪ್ರಾರಂಭವಾದಾಗ, ಅದನ್ನು FASHNEAR ಎಂದು ಕರೆಯಲಾಗುತ್ತಿತ್ತು. ಅದರೆ ಇದು ವಿಫಲವಾಯಿತು .2015 ರ ಅಂತ್ಯದ ವೇಳೆಗೆ, ಫಶ್ನಿಯರ್ ಅನ್ನು 'ಮೀಶೋ' ಎಂದು ಮರುನಾಮಕರಣ ಮಾಡಲಾಯಿತು. ಹಲವು ಬದಲಾವಣೆ ಮಾಡಿ ಮೀಶೊ ಬೆಂಗಳೂರಿನ ಎರಡು ಕೋಣೆಗಳ ಸಣ್ಣ ಫ್ಲಾಟ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕುತೂಹಲಕಾರಿಯಾಗಿ, ಅವರ ಮೊದಲ ಕಾರ್ಯಸ್ಥಳವು ಅಪಾರ್ಟ್ಮೆಂಟ್ನಲ್ಲಿದ್ದ ಡೈನಿಂಗ್ ಟೇಬಲ್ ಆಗಿತ್ತು.
ಮೀಶೊವನ್ನು ನಂತರ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಪೂರೈಕೆದಾರ ತಯಾರಕರು ಮತ್ತು ಅಂತಿಮ ಗ್ರಾಹಕರನ್ನು ಸಂಪರ್ಕಿಸುವ, ಪ್ರವೇಶಿಸಬಹುದಾದ ವೇದಿಕೆಯನ್ನು ಒದಗಿಸುವ ವಿಧಾನದೊಂದಿಗೆ ಸ್ಥಾಪಿಸಲಾಯಿತು. ಬಳಿಕ ಮೀಶೋ ಇತಿಹಾಸವನ್ನೇ ನಿರ್ಮಿಸಿತು.
ಮೀಶೋ ಎಂದರೆ ಮೇರಿ ಶಾಪ್ (ಅಪ್ನಿ ಧುಕಾನ್, ನನ್ನ ಅಂಗಡಿ). ಏಪ್ರಿಲ್ 2021 ರಲ್ಲಿ, ಇದರ ಮೌಲ್ಯಮಾಪನ 2.1 ಬಿಲಿಯನ್ ಡಾಲರ್‌ಗಳನ್ನು ತಲುಪಿತು. ಇದಲ್ಲದೆ, ಸೆಪ್ಟೆಂಬರ್ 2021 ರ ಹೊತ್ತಿಗೆ, ಇದು ಸುಮಾರು 4.9 ಬಿಲಿಯನ್ ಡಾಲರ್‌ಗಳನ್ನು ತಲುಪಿತು, ಇದು ಅದರ ಯಶಸ್ಸು ಕೇವಲ ಆರಂಭ ಎಂದು ಸೂಚಿಸುತ್ತದೆ. 2023 ರಲ್ಲಿ, ಮೀಶೋ ಅನ್ನು ಟೈಮ್ (ನಿಯತಕಾಲಿಕೆ) ವರ್ಷದ ಅತ್ಯಂತ ಪ್ರಭಾವಶಾಲಿ ಕಂಪನಿಗಳಲ್ಲಿ ಒಂದೆಂದು ಹೆಸರಿಸಿತು .ಅದೇ ವರ್ಷದಲ್ಲಿ, ಮೀಶೋ 500 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದ ಅತ್ಯಂತ ವೇಗದ ಶಾಪಿಂಗ್ ಅಪ್ಲಿಕೇಶನ್ ಆಗಿ ಬೆಳೆದು ನಿಂತಿತು. ಇಂದು ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಮೀಶೊದ ಒಟ್ಟು ವ್ಯಾಪಾರ ಮೌಲ್ಯ (GMV) $5 ಬಿಲಿಯನ್ ಮೀರಿದೆ. ಇದು ಫ್ಯಾಷನ್, ಸೌಂದರ್ಯ ಮತ್ತು ಇತರ ಗೃಹೋಪಯೋಗಿ ವಿಭಾಗಗಳ ಮೇಲೆ ಕೇಂದ್ರೀಕರಿಸಿದೆ. ಈ ವೇದಿಕೆಯು 120 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications