UAE (ಯುನೈಟೆಡ್ ಅರಬ್ ಎಮಿರೇಟ್ಸ್)ನ ಗೋಲ್ಟನ್ ವೀಸಾ, ಒಂದು ಸಾಮಾನ್ಯವಾದ ವೀಸಾ ಅಲ್ಲ. ಅದೊಂದು ದೀರ್ಘಾವಧಿಯ ವಾಸ ಮತ್ತು ಹೂಡಿಕೆ ವ್ಯವಸ್ಥೆಯಾಗಿದೆ. ಈ ವೀಸಾ ಪಡೆಯಲು ಹಲವು ಮಾನದಂಡಗಳಿವೆ. ಹೂಡಿಕೆದಾರರು, ಉನ್ನತ ಕೌಶಲ್ಯದ ವೃತ್ತಿಪರರು, ವಿಜ್ಞಾನಿಗಳು ಹಾಗೂ ಸಂಶೋಧಕರು ಈ ವೀಸಾ ಪಡೆಯಲು ಅರ್ಹರಾಗಿರುತ್ತಾರೆ. ಈ ಮೂಲಕ ಯುಎಇಯಲ್ಲಿ ನಿಗದಿತ ಅವಧಿಗೆ ವಾಸ ಮಾಡುತ್ತಾರೆ. ಅಂದ್ಹಾಗೆ ಈ ವೀಸಾದ ಇನ್ನೂ ಒಂದಷ್ಟು ಪ್ರಯೋಜನಗಳಿವೆ. ಭಾರತೀಯರಿಗೆ ಅವು ಹೇಗೆ ಸಹಾಯಕ ಎಂದು ತಿಳಿಯಿರಿ.

ಯುಎಇ ಗೋಲ್ಡನ್ ವೀಸಾದ ಪ್ರಮುಖ ಪ್ರಯೋಜನಗಳು:
ಇನ್ನು ಆಗಲೇ ಹೇಳಿದಂತೆ ಈ ವೀಸಾ ಪಡೆದವರು ಯುಎಇಯಲ್ಲಿ ವಾಸ ಮಾಡಬಹುದು. ಅಲ್ಲದೇ ಕುಟುಂಬ ಸದಸ್ಯರ ಪ್ರಾಯೋಜಕತ್ವ, ಉದ್ಯೋಗದಾತರಿಂದ ಪ್ರಾಯೋಜಕತ್ವದ ಅವಶ್ಯಕತೆ ಇರುವುದಿಲ್ಲ. ಹಾಗೂ ಇಲ್ಲಿ ಜಾಗತಿಕ ಪ್ರಯಾಣದ ಸುಲಭತೆ ಮತ್ತು ತೆರಿಗೆ ಕಡಿತದ ವ್ಯವಸ್ಥೆ ಲಭ್ಯವಿರುತ್ತದೆ. ಹೀಗಾಗಿಯೇ ಅನೇಕ ಭಾರತೀಯರು ಯುಎಇಯನ್ನು ತಮ್ಮ ದೀರ್ಘಕಾಲೀನ ನೆಲೆಗೊಳಿಸಲು ಆಯ್ಕೆ ಮಾಡುತ್ತಿದ್ದಾರೆ.
ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ:
ಇನ್ನು ಈ ವೀಸಾಗೆ ಅರ್ಹರಾಗಲು ಆಗಲೇ ಹೇಳಿದಂತೆ, ಹೂಡಿಕೆದಾರರು, ಉನ್ನತ ಕೌಶಲ್ಯದ ವೃತ್ತಿಪರರು, ವಿಜ್ಞಾನಿಗಳು, ಸಂಶೋಧಕರು ಮತ್ತು ಮಾನವೀಯ ಸೇವಾ ಕಾರ್ಯಕರ್ತರು ಆಗಿರಬೇಕು. ಅರ್ಜಿಗಳನ್ನು GDRFA (ದುಬೈ), ದುಬೈ ಲ್ಯಾಂಡ್ ಡಿಪಾರ್ಟ್‌ಮೆಂಟ್ ಮತ್ತು TAMM (ಅಬುಧಾಬಿ) ಪೋರ್ಟಲ್‌ಗಳಲ್ಲಿ ಸಲ್ಲಿಸಬಹುದು. ಅರ್ಜಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಅನುಮೋದನೆ ಮುಖ್ಯ ಹಂತಗಳಾಗಿವೆ. ಸಾಮಾನ್ಯವಾಗಿ 5-10 ದಿನಗಳಲ್ಲಿ ಅನುಮೋದನೆ ದೊರೆಯುತ್ತದೆ.
ಹೂಡಿಕೆ ಮತ್ತು ಆಸ್ತಿ ನಿಯಮಗಳು:
ಇನ್ನು ಈ ಗೋಲ್ಡನ್ ವೀಸಾಗೆ ಕನಿಷ್ಠ AED 2 ಮಿಲಿಯನ್ (ಸುಮಾರು ₹4.95 ಕೋಟಿ) ಹೂಡಿಕೆ ಅಗತ್ಯವಿದೆ. ನೀವು ಮಾಡಿದ ಆಸ್ತಿಯನ್ನು, ನಿಮ್ಮ ವೀಸಾ ಎಲ್ಲಿವರೆಗೂ ಅಸ್ತಿತ್ವದಲ್ಲಿರುತ್ತೋ ಅಲ್ಲಿವರೆಗೂ ಕಾಪಾಡಿಕೊಳ್ಳಬೇಕು. ಒಂದು ವೇಳೆ ಅದಕ್ಕೂ ಮುನ್ನ ಮಾರಾಟ ಮಾಡಿದ್ದೇ ಆದರೆ, ಅಲ್ಲಿನ ನಿಯಮದಂತೆ ಸಮಾನವಾಗಿ ಅಥವಾ ಹೆಚ್ಚಿನ ಮೌಲ್ಯದ ಆಸ್ತಿಯೊಂದಿಗೆ ಬದಲಾಯಿಸಬೇಕು. ವ್ಯವಹಾರ ಅಥವಾ ಸ್ಟಾಟ್‌ಅಪ್ ಹೂಡಿಕೆಗೆ ಸಹ AED 2 ಮಿಲಿಯನ್ ಹೂಡಿಕೆ ಅಥವಾ ಅನುಮೋದಿತ ಕಂಪನಿಯ ಪಾಲು ಕಡ್ಡಾಯ.
ಕುಟುಂಬ ಸದಸ್ಯರ ಪ್ರವೇಶ:
ಇನ್ನು ವೀಸಾ ಅರ್ಜಿದಾರರು ತಮ್ಮ ಕುಟುಂಬದವರನ್ನು ನೋಂದಾಯಿಸಬಹುದು. ತಮ್ಮ 25 ವರ್ಷದೊಳಗಿನ ಪುತ್ರರು, ಮದುವೆಯಾದ ಪುತ್ರಿಯರು ಅಥವಾ ನವವಿವಾಹಿತರು ತಮ್ಮ ಸಂಗಾತಿಯನ್ನು ನೋಂದಾಯಿಸಬಹುದು. ಈ ನೋಂದಣಿಗೆ ಸದಸ್ಯರ ಸಂಖ್ಯೆಗೆ ಯಾವುದೇ ಮಿತಿ ಇಲ್ಲ. ಇದು ಕುಟುಂಬಕ್ಕೆ ದೀರ್ಘಕಾಲೀನ ವಾಸದ ಅವಕಾಶ ನೀಡುತ್ತದೆ.
ವೆಚ್ಚ ಮತ್ತು ಶುಲ್ಕ:
ಕುಟುಂಬದ ಸದಸ್ಯರನ್ನು ನೋಂದಣಿ ಮಾಡುವವರು ಇನ್ನೊಂದು ವಿಷಯ ಗಮನದಲ್ಲಿ ಇಡಲೇಬೇಕು. ಅದೇನೆಂದರೆ ನಿಮ್ಮ ವೀಸಾಗೆ ಕನಿಷ್ಠ ಹೂಡಿಕೆ AED 2 ಮಿಲಿಯನ್ ಆಗಿರುತ್ತದೆ. ಹಾಗೆಯೇ ನಿಮ್ಮ ಕುಟುಂಬದ ಗಾತ್ರದ ಮೇಲೆ AED 12,000-20,000 ಹೆಚ್ಚುವರಿ ಶುಲ್ಕ, ಸರ್ಕಾರಕ್ಕೆ AED 10,000 ಶುಲ್ಕ, ಮತ್ತು ಪ್ರತಿ ಸದಸ್ಯರಿಗೆ ವಿಭಿನ್ನ ಪರಿಶೀಲನೆ/ಕಾನೂನು ಶುಲ್ಕ ಅನ್ವಯಿಸುತ್ತದೆ.
ವಾಸ ಮತ್ತು ತೆರಿಗೆ ನಿಯಮಗಳು:
ಗೋಲ್ಡನ್ ವೀಸಾಗೆ ಯಾವುದೇ ಕನಿಷ್ಠ ವಾಸದ ಅವಶ್ಯಕತೆ ಇಲ್ಲ. ಅರ್ಹತೆ ಇದ್ದರೆ ವಾಸ ಮಾನ್ಯವಾಗುತ್ತದೆ. ಈ ವೀಸಾ ನೇರವಾಗಿ ಯುಎಇ ಪೌರತ್ವಕ್ಕೆ ಮಾರ್ಗವಲ್ಲ. ಯುಎಇಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಶೂನ್ಯವಾಗಿದೆ.


Click it and Unblock the Notifications