ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್ ತೆರೆಯುವವರೆಗೂ ಆಧಾರ್ ಕಾರ್ಡ್ (aadhaar Card) ಒಂದು ಪ್ರಮುಖ ದಾಖಲೆಯಾಗಿದೆ. ಆದ್ರೆ ಇದೀಗ ಬಳಕೆದಾರರ ಅನುಕೂಲಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಆ ಪ್ರಕಾರ ಇನ್ಮೇಲೆ ಆಧಾರ್ ಕಾರ್ಡ್ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಆಧಾರ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಅಪ್ಡೇಟ್ ಒಂದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರಕಟಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಇನ್ಮುಂದೆ ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಮನೆಯಿಂದಲೇ ಕೂತೂ ಅಪ್ಡೇಟ್ ಮಾಡಬಹುದು. ಈ ಹೊಸ ಸೌಲಭ್ಯದಿಂದ ಇನ್ಮೇಲೆ ಜನರು ಸೇವಾ ಕೇಂದ್ರಕ್ಕೆ ಹೋಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದನ್ನು ತಪ್ಪಿಸಲಿದೆ.
ಇನ್ನು UIDAI ತನ್ನ X ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ನಂಬರ್ ಅನ್ನು ಇನ್ಮೇಲೆ ಮನೆಯಿಂದಲೇ ಅಪ್ಡೇಡ್ ಮಾಡಬಹುದು ಎಂದು ಸ್ಪಷ್ಟನೆ ನೀಡಿದೆ. ಈ ಟ್ವೀಟ್‌ನಲ್ಲಿ ನಿಖರವಾದ ರೋಲ್‌ಔಟ್ ದಿನಾಂಕವನ್ನು ನಿರ್ದಿಷ್ಟಪಡಿಸದಿದ್ದರೂ, ಪ್ರಸ್ತುತ ಜಾರಿಯಲ್ಲಿರುವ ವಿಧಾನಕ್ಕಿಂತ ಈ ಪ್ರಕ್ರಿಯೆ ಸುಲಭ ಮತ್ತು ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಡಿಜಿಟಲ್ ಮೂಲಕ ಅಪ್ಡೇಟ್!
ಪ್ರಸ್ತುತ, ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಬೇಕೆಂದರೆ ಸ್ಥಳೀಯ ಆಧಾರ್ ಸೇವಾ ಕೇಂದ್ರ ಅಥವಾ ನೋಂದಣಿ ಕೇಂದ್ರಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು. ಅಲ್ಲಿ ಬಯೋಮೆಟ್ರಿಕ್ ವೆರಿಫೈ ಮಾಡಲಾಗುತ್ತದೆ. ಅಲ್ಲದೇ ಜನ ಹೆಚ್ಚಿದ್ದರೆ ಗಂಟೆಗಟ್ಟಲೆ ಕ್ಯೂನಲ್ಲೂ ನಿಲ್ಲಬೇಕಾಗುತ್ತದೆ. ಆದರೆ, ಮುಂಬರುವ ವೈಶಿಷ್ಟ್ಯದಿಂದ ಎಲ್ಲಿಯೂ ಹೋಗಬೇಕಂತಿಲ್ಲ. ಮನೆಯಲ್ಲೇ ಕೂತು, ಮೊಬೈಲ್, ಲ್ಯಾಪ್‌ಟಾಪ್ ಮೂಲಕ, ಕೇವಲ ಓಟಿಪಿ ಬಳಸಿಕೊಂಡು ಅಪ್ಡೇಟ್ ಮಾಡಬಹುದಾಗಿದೆ. ಇದಲ್ಲದೆ, ಆನ್‌ಲೈನ್ ನವೀಕರಣವನ್ನು 'myAadhaar' ಪೋರ್ಟಲ್ ಅಥವಾ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪೂರ್ಣಗೊಳಿಸಬಹುದು ಎನ್ನಲಾಗಿದೆ.
ಹೊಸ ಫೀಚರ್ಸ್ ಪ್ರಕಾರ, ಮುಂಬರುವ ಆಧಾರ್ ವ್ಯವಸ್ಥೆಯು OTP ಪರಿಶೀಲನೆ ಮತ್ತು ಆಧಾರ್‌ನ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನದ ಸುರಕ್ಷಿತ ಸಂಯೋಜನೆಯನ್ನು ಬಳಸಿಕೊಂಡು ಈ ಅಪ್ಡೇಟ್ ಮಾಡಲಾಗುತ್ತದೆ. ಇದು ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ತಮ್ಮ ಗುರುತನ್ನು ದೃಢೀಕರಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
ಆಧಾರ್ ನೋಂದಣಿ ಅಥವಾ ಅಪ್ಡೇಟ್ ವಿಷಯಕ್ಕೆ ಸಂಬಂಧಿಸಿದಂತೆ, ಬಯೋಮೆಟ್ರಿಕ್ ಅಪ್ಡೇಟ್‌ನಿಂದ ಹಿಡಿದು ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡುವುದು ಸಂಪೂರ್ಣವಾಗಿ ಉಚಿತವಾಗಿದೆ. ಆದರೆ, ಒಂದು ವೇಳೆ ಇವುಗಳಲ್ಲಿ ಯಾವುದನ್ನಾದರೂ ಪ್ರತ್ಯೇಕವಾಗಿ ಅಪ್ಡೇಟ್ ಮಾಡಿದರೆ ₹75 ಶುಲ್ಕ ಅನ್ವಯವಾಗಲಿದೆ. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಈ ನಿರ್ಧಾರ ಹಲವು ಸಮಸ್ಯೆಗಳಿಗೆ ದೊಡ್ಡ ಪರಿಹಾರವಾಗಲಿದೆ.


Click it and Unblock the Notifications