ಬೆಂಗಳೂರು, ಜೂನ್ 3: ಭಾರತವು ನಗದು ರಹಿತ ಆರ್ಥಿಕತೆಯತ್ತ ಅತ್ಯಂತ ವೇಗದ ಪ್ರಗತಿಯನ್ನು ಸಾಧಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಹಲವಾರು ಯೋಜನೆಗಳು ಮತ್ತು ಉಪಕ್ರಮಗಳು ಈ ಪರಿವರ್ತನೆಗೆ ಉತ್ತೇಜನ ನೀಡಿವೆ. ಇಂಟರ್ನೆಟ್ ಮತ್ತು ಮೊಬೈಲ್ ಸಾಧನಗಳ ಒಳಹೊಕ್ಕು, ದೃಢವಾದ ಡಿಜಿಟಲ್ ಮೂಲಸೌಕರ್ಯ, ಬಳಕೆ ಮತ್ತು ಅನುಕೂಲತೆಯ ಸರಳತೆ ಮತ್ತು ವಿವಿಧ ಡಿಜಿಟಲ್ ಪಾವತಿ ಆಯ್ಕೆಗಳು ಈ ಪ್ರಗತಿಯ ನೇರ ಅಂಶಗಳಾಗಿವೆ.
ಅದರಲ್ಲೂ ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಈ ಪೈಕಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI ) ಪಾವತಿಗಳು ದಾಖಲೆ ಸೃಷ್ಟಿಸುತ್ತಿವೆ. UPI ಇಡೀ ವಿಶ್ವದಲ್ಲಿ ಭಾರತಕ್ಕೆ ವಿಭಿನ್ನ ಗುರುತನ್ನು ನೀಡಿದೆ. ಅನೇಕ ದೇಶಗಳು ತಮ್ಮ ದೇಶಗಳಲ್ಲಿಯೂ ಈ ಪಾವತಿ ವಿಧಾನವನ್ನು ಜಾರಿಗೆ ತರುತ್ತಿವೆ. ಇಂದು ಸಣ್ಣ ಪುಟ್ಟ ಗೂಡಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಯುಪಿಎ ಪಾವತಿ ಮಾಡಲಾಗುತ್ತಿದ್ದು ಬಹುಪಾಲು ಭಾರತೀಯರು ಯುಪಿಐ ಬಳಸುತ್ತಿದ್ದಾರೆ. ಅದಲ್ಲೂ Google Pay ಮತ್ತು PhonePe ನಂತಹ ಮೊಬೈಲ್ ವ್ಯಾಲೆಟ್‌ಗಳು ಮನೆಮಾತಾಗಿದೆ.

ಯುಪಿಐ ಅನ್ನು ತರಕಾರಿಗಳು, ಹಣ್ಣುಗಳು, ಪಡಿತರ ಖರೀದಿಯಂತಹ ಸಣ್ಣ ವಹಿವಾಟುಗಳಿಂದ ಹಿಡಿದು, ದೊಡ್ಡ ಪಾವತಿಗಳಿಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಪ್ರತಿ ತಿಂಗಳು ಯುಪಿಐ ವಹಿವಾಟಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜೂ.೧ ರಂದು ಬಿಡುಗಡೆ ಮಾಡಿದ ಅಂಕಿಅಂಶ ಪ್ರಕಾರ ಯುಪಿಐ ವಹಿವಾಟು ಡೇಟಾವನ್ನು ಬಿಡುಗಡೆ ಮಾಡಿದೆ. ಈ ವಿವರಗಳ ಪ್ರಕಾರ, ದೇಶದಲ್ಲಿ ಯುಪಿಐ ವಹಿವಾಟುಗಳಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಎನ್‌ಪಿಸಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ದಾಖಲೆಯ ದಾಖಲೆಯ ಏರಿಕೆ ಕಂಡಿದ್ದು UPI ನೆಟ್‌ವರ್ಕ್ 14.04 ಶತಕೋಟಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿತು, ಇದು ಏಪ್ರಿಲ್‌ನಲ್ಲಿ 13.3 ಬಿಲಿಯನ್ ಆಗಿತ್ತು.
ಇನ್ನು ಮೇ ತಿಂಗಳಲ್ಲಿ ದೇಶದಲ್ಲಿ ಒಟ್ಟು 20.45 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯುಪಿಐ ವಹಿಾಟು ನಡೆದಿದೆ. 2023 ರ ಮೇ ಅಂಕಿಅಂಶಗಳು ಅದೇ ತಿಂಗಳಿಗೆ ಹೋಲಿಸಿದರೆ ಕಳೆದವರ್ಷ ಪರಿಮಾಣದಲ್ಲಿ 49% ಮತ್ತು ಮೌಲ್ಯದಲ್ಲಿ 39% ಹೆಚ್ಚಾಗಿದೆ.
ಸರಾಸರಿ ದೈನಂದಿನ ವಹಿವಾಟು:
ಮೇ ತಿಂಗಳ ಸರಾಸರಿ ದೈನಂದಿನ ವಹಿವಾಟು 65,966 ಕೋಟಿ ರೂ.ಗಳಷ್ಟಿದ್ದು, ಸರಾಸರಿ ದೈನಂದಿನ ವಹಿವಾಟು ಸಂಖ್ಯೆ 453 ಮಿಲಿಯನ್ ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಕಾಣುತ್ತಿದೆ.
ಯುಪಿಐ ಅನ್ನು ಏಪ್ರಿಲ್ 2016 ರಲ್ಲಿ ದೇಶದಲ್ಲಿ ಪ್ರಾರಂಭಿಸಲಾಯಿತು. ಈ ಬೆಳವಣಿಗೆಗಳ ನಡುವೆ "ಐಎಂಪಿಎಸ್"(IMPS)ವಹಿವಾಟುಗಳು ಕೂಡ ಶೇ.1.45ರಷ್ಟು ಹೆಚ್ಚಿದೆ. ಇದು 55.8 ಕೋಟಿ ವಹಿವಾಟುಗಳಿಗೆ ತಲುಪಿದೆ. ಐಎಂಪಿಎಸ್ ಮೂಲಕ ರೂ.6.06 ಲಕ್ಷ ಕೋಟಿಗಳ ವಹಿವಾಟು ನಡೆದಿದೆ. ಏಪ್ರಿಲ್‌ನಲ್ಲಿ ರೂ.5.92 ಲಕ್ಷ ಕೋಟಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಈ ಅಂಕಿ ಅಂಶ ಶೇ.2.36ರಷ್ಟು ಹೆಚ್ಚಾಗಿದೆ.


Click it and Unblock the Notifications