ಬೆಂಗಳೂರು, ಜುಲೈ 1: ಕ್ರೆಡಿಟ್ ಕಾರ್ಟ್ ಇದ್ದಾಗ ಅದರ ಲಾಭ ಬಳಸಿಕೊಳ್ಳಲು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಆದರೆ ಕಂಡ ಕಂಡಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವುದು ನಿಮಗೆ ದೊಡ್ಡ ಆತಂಕ ತಂದಿಡಬಹುದು. ಗೊತ್ತಿಲ್ಲದೆ ಅನಿವಾರ್ಯವಾಗಿ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಾಗಿ ಬರಬಹುದು.
ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಲವು ಶುಲ್ಕಗಳಿವೆ. ಕೆಲವೊಂದು ಡೈರೆಕ್ಟ್ ಶುಲ್ಕಗಳು ಇನ್ನು ಕೆಲವು ಸ್ವೈಪ್ ಚಾರ್ಜಸ್ ನಂತಹ ಶುಲ್ಕಗಳನ್ನು ಗ್ರಾಹಕರಿಂದ ಇನ್ ಡೈರೆಕ್ಟ್ ಆಗಿ ಪಡೆದುಕೊಳ್ಳಲಾಗುತ್ತದೆ. ಹಾಗಿದ್ದರೆ ಈ ಸ್ವೈಪ್ ಚಾರ್ಜಸ್ ಎಂದರೆ ಏಮು? ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

ನಾವು ರೆಸ್ಟೋರೆಂಟ್ ಅಥವಾ ಆನ್ ಲೈನ್ ಶಾಪಿಂಗ್ ಮಾಡಿ ಬಿಲ್ ಪಾವತಿ ಮಾಡಿದಾಗ ಸ್ವೈಪ್ ಚಾರ್ಜಸ್ ವಿಧಿಸಲಾಗುತ್ತದೆ. ಇದನ್ನ ಇಂಟರ್ ಚೇಂಜ್ ಶುಲ್ಕ ಎಂದು ಕರೆಯುತ್ತಾರೆ. ಈ ಶುಲ್ಕಗಳನ್ನು ಸಾಮಾನ್ಯವಾಗಿ ಕಾರ್ಡ್ ನೆಟ್ ವರ್ಕ್ ಗಳು ನಿರ್ಧರಿಸುತ್ತದೆ. ಇದು ಕ್ರೆಡಿಟ್ ಕಾರ್ಡ್ ಪಾವತಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ.
ಈ ಶುಲ್ಕವು ಟ್ರಾನ್ಸ್ಯಾಕ್ಷನ್ ಪ್ರೊಸೆಸಿಂಗ್, ಫ್ರಾಡ್ ಪ್ರಿವೆಂಷನ್ ಮತ್ತು ಮೂಲ ಸೌಕರ್ಯ ನಿರ್ವಹಣೆಯಂತಹ ಇತರ ಕಾರ್ಯಾಚರಣೆ ಶುಲ್ಕಗಳನ್ನು ಒಳಗೊಂಡಿರುತ್ತದೆ. ಇದು ಬ್ಯಾಂಕ್, ವ್ಯಾಪಾರಿಗಳು ಮತ್ತು ಗ್ರಾಹಕರ ನಡುವಿನ ಹಣಕಾಸಿನ ವ್ಯವಹಾರವನ್ನು ಸುಗಮಗೊಳಿಸುತ್ತದೆ.
ಸ್ವೈಪ್ ಚಾರ್ಜಸ್ ಅನ್ನು ಹೇಗೆ ಹಾಕಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ನೀವು ಯಾವುದೇ POS ಅಂದರೆ ಬಿಲ್ಲಿಂಗ್ ಕೌಂಟರ್ ನಲ್ಲಿರುವ ಬಿಲ್ಲಿಂಗ್ ಮೆಷಿನ್ ನಲ್ಲಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದರೆ ಆಗ ವ್ಯಾಪಾರಿಗಳ POS ಟರ್ಮಿನಲ್ ನಿಮ್ಮ ಕಾರ್ಡ್ ನ ಡೀಟೈಲ್ಸ್ ರೀಡ್ ಮಾಡುತ್ತದೆ. ಇದಾದ ಮೇಲೆ ಅದನ್ನು ಪಾವತಿ ಗೇಟ್ ವೇ ಮತ್ತು ಪ್ರೊಸೆಸರ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ನೆಟ್ ವರ್ಕ್ ಗೆ ಫಾವರ್ಡ್ ಮಾಡುತ್ತದೆ.
ಕಾರ್ಡ್ ನೀಡಿದ ಬ್ಯಾಂಕ್ ನಿಮ್ಮ ವಹಿವಾಟನ್ನು ಪರಿಶೀಲಿಸುತ್ತದೆ ಮತ್ತು ನೆಟ್ ವರ್ಕ್ ಮೂಲಕ ಸ್ವೀಕರಿಸುತ್ತದೆ ಅಥವಾ ರಿಜೆಕ್ಟ್ ಮಾಡುತ್ತದೆ. ಬೇರೆ ಬೇರೆ ಕಾರ್ಡ್ ಗಳಿಗೆ ಈ ಶುಲ್ಕವು ಬೇರೆ ಬೇರೆಯಾಗಿರುತ್ತದೆ. ಆದರೆ ಸಾಮಾನ್ಯವಾಗಿ ಫಿಸಿಕಲ್ ಕಾರ್ಡ್ ವಹಿವಾಟಿನ ಮೌಲ್ಯದ ಮೇಲೆ ಸುಮಾರು ಶೇಕಡಾ 2ರಷ್ಟು ಸ್ವೈಪ್ ಶುಲ್ಕ ವಿಧಿಸಲಾಗುತ್ತದೆ.
ಮತ್ತೊಂದೆಡೆ ವಹಿವಾಟು ಮೌಲ್ಯದ ಮೇಲೆ ಶೇಕಡಾ 2.5 ರಿಂದ 3ರವರೆಗೆ ಸ್ವೈಪ್ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಶುಲ್ಕವನ್ನು ವ್ಯಾಪಾರಿಗಳೆ ಪಾವತಿಸುತ್ತಾರೆ. ಆದರೆ ನಾವು ಈ ಹಿಂದೆ ಹೇಳಿದಂತೆ ಇದು ನೇರವಾಗಿ ಅಥವಾ ಪರೋಕ್ಷವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಅನೇಕ ವ್ಯಾಪಾರಿಗಳು ಉತ್ಪನ್ನ ಹಾಗೂ ಸೇವೆಗಳ ಬೆಲೆಯನ್ನು ಹೆಚ್ಚಿಸುತ್ತಾರೆ.
ಮೊದಲಿಗೆ ಈ ಸ್ವೈಪ್ ಶುಲ್ಕಗಳ ಬಗ್ಗೆ ಗೊತ್ತಿದ್ದರೆ ನೀವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ವ್ಯಾಪಾರಿಯು ಸ್ವೈಪ್ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದರೆ ಆಗ ನೀವು ನಗದು ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಬೇಕಾ ಎನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಸ್ವೈಪ್ ಮಾಡಿದಾಗ ರಿವಾರ್ಡ್ ಗಳು ಸ್ವೈಪ್ ಶುಲ್ಕಗಳನ್ನು ಮೀರಿದ್ದರೆ ಆಗ ನೀವು ಕಾರ್ಡ್ ಬಳಸಬಹುದು. ಇಲ್ಲದಿದ್ದರೆ ನೀವು ಬೇರೆ ಪೇಮೆಂಟ್ ಆಯ್ಕೆ ನೋಡಬೇಕಾಗುತ್ತದೆ.


Click it and Unblock the Notifications