ಬೆಂಗಳೂರು, ಜೂನ್ 13: ಕ್ರೆಡಿಟ್ ಕಾರ್ಡ್‌ಗಳನ್ನು ಸರಿಯಾಗಿ ಬಳಸಿಕೊಂಡರೆ ಅದು ಉತ್ತಮ ಅಸೆಟ್ ಎಂದು ಸಾಬೀತು ಮಾಡಬಹುದು. ನೀವು ಕೂಡ ಕಾರನ್ನು ಖರೀದಿಸಲು ಮತ್ತು ಹೆಚ್ಚಿನ ಕ್ರೆಡಿಟ್ ಮಿತಿಯೊಂದಿಗೆ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ ಇದು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸುವ ಇದು ಸರಿಯಾದ ಸಮಯ. ನಿಮ್ಮ ಕ್ರೆಡಿಟ್ ಕಾರ್ಡ್ ಪರಿಣಾಮಕಾರಿಯಾಗಿ ಬಳಸುವ ಮೂಲಕ ನೀವು ಕಾರಿನ ಬೆಲೆಯಲ್ಲಿ ಸುಮಾರು ಶೇಕಡಾ 5 ರಿಂದ10 ರಷ್ಟು ರಿಯಾಯಿತಿ ಪಡೆಯಲು ಸಾಧ್ಯವಿದೆ.
ಕಾರು ಖರೀದಿಗೆ ಮುಂದಾದಾಗ ನಿಮ್ಮ ಉಳಿತಾಯದ ಗಮನಾರ್ಹ ಭಾಗವನ್ನು ನೀವು ಡೌನ್ ಪೇಮೆಂಟ್‌ಗೆ ಹಾಕುತ್ತೀರಿ ಮತ್ತು ಉಳಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳುತ್ತೀರಿ. ಈ ಸನ್ನಿವೇಶದಲ್ಲಿ, ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡರೆ ಕೆಲ ಕ್ಯಾಶ್ ಬ್ಯಾಕ್ ಲಾಭ ಪಡೆದುಕೊಳ್ಳಲು ಸಾಧ್ಯವಿದೆ.

ಉದಾಹರಣೆಗೆ, ನೀವು 15 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಲು ಬಯಸುತ್ತೀರಿ ಎಂದು ಭಾವಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನೀವು ರೂ 10 ಲಕ್ಷ ಡೌನ್ ಪೇಮೆಂಟ್ ಮಾಡಿ. ಅದರಿಂದ ನೀವು ಶೇಕಡಾ 5ರಷ್ಟು ರಿವಾರ್ಡ್ ರಿಟರ್ನ್ ದರವನ್ನು ವಾಪಸ್ ಪಡೆದರೂ ನೀವು 50,000 ರೂಪಾಯಿ ಉಳಿಸಿದ್ದೀರಿ ಎಂದು ಅರ್ಥ. ಮತ್ತೊಂದೆಡೆ, ನೀವು ನೇರವಾಗಿ ಡೆಬಿಟ್ ಕಾರ್ಡ್ ಬಳಸಿ ಈ ಪಾವತಿಯನ್ನು ಮಾಡಿದರೆ, ಇಂತಹ ಯಾವುದೇ ರಿವಾರ್ಡ್ ಸಿಗುವುದಿಲ್ಲ. ನಿಮ್ಮ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಸಹ ಇಲ್ಲಿ ಮನ್ನಾ ಆಗುತ್ತದೆ.
ಕಾರು ಖರೀದಿಗೆ ಮುಂದಾದಾಗ ಮೊದಲಿಗೆ ಸಂಬಂಧಿಸಿದ ಶೋ ರೂಂ ಜತೆ ಕ್ರೆಡಿಟ್ ಕಾರ್ಡ್ ಬಳಸುವ ಕುರಿತು ಮಾತನಾಡಿ. ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ದೊಡ್ಡ ಮೊತ್ತದ ಖರೀದಿ ಸಂದರ್ಭ ಅಂದರೆ ಕಾರು, ಚಿನ್ನ ಖರೀದಿಯಂತಹ ಸಂದರ್ಭ ಕ್ರೆಡಿಟ್ ಕಾರ್ಡ್ ಬಳಕೆಗೆ ಬರುತ್ತದೆ ಎಂದಾದರೆ ಬಳಸಿಕೊಳ್ಳುವುದು ಜಾಣತನ.


Click it and Unblock the Notifications