ಬೆಂಗಳೂರು, ಜುಲೈ 7: ಜೀವನ ಕಟ್ಟಿಕೊಳ್ಳಲಿ ಮಹಾನಗರಕ್ಕೆ ಬಂದು ಸೇರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಾಡಿಗೆ ಮನೆಯನ್ನೇ ಆಶ್ರಯಿಸಿಕೊಂಡಿರುತ್ತಾರೆ. ಒಂದು ಮನೆ ಹುಡುಕಿ ವಾಸ ಮಾಡುತ್ತ ದಿನ ಕಳೆಯುತ್ತಿರುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿ ಕಿರಿ ವಿಪರೀತವಾಗಿ ಹೋಗುತ್ತದೆ. ಹಾಗಿದ್ದರೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಾಡಿಗೆದಾರರ ಹಕ್ಕುಗಳು ಏನು? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.
ಮನೆ ಮಾಲೀಕರು ಮೆಂಟೇನೆನ್ಸ್ ಚಾರ್ಜಸ್ ತುಂಬಾ ಹೆಚ್ಚು ಮಾಡಿರೋದಲ್ಲದೇ, ಯಾವ್ಯಾವುದೋ ಹೊತ್ತಿಗೆ ಮನೆಗೆ ಬಂದು ಮನೆಗೆ ಯಾರು ಬರುತ್ತಿದ್ದಾರೆ ಹೋಗುತ್ತಿದ್ದಾರೆ ಎಂಬುದನ್ನೆಲ್ಲ ನೋಡುವುದಕ್ಕೆ ಶುರು ಮಾಡುವ ಉದಾಹರಣೆಗಳು ಇವೆ. ನಿಮಗೆ ಟೆನನ್ಸಿ ರೈಟ್ಸ್ ಬಗ್ಗೆ ಅಥವಾ ಬಾಡಿಗೆದಾರರಾಗಿ ನಿಮಗೆ ಇರುವ ಹಕ್ಕುಗಳ ಬಗ್ಗೆ ತಿಳಿವಳಿಕೆ ಇರಬೇಕು.

ಮೊದಲನೆಯದಾಗಿ ನೀವು ಬಾಡಿಗೆ ಕೊಡುವಲ್ಲಿ ತಡ ಮಾಡಿದರೆ ವಿದ್ಯುತ್ ಮತ್ತು ನೀರು ಸಂಪರ್ಕ ನಿಲ್ಲಿಸುವ ಹಾಗೆ ಇಲ್ಲ. ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟುವುದು ನಿಮ್ಮ ಜವಾಬ್ದಾರಿ. ಆದರೆ ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಇದ್ದರೆ, ಅಗತ್ಯ ಸೇವೆಗಳಿಗೆ ಅಡ್ಡಿ ಮಾಡುವಂತಿಲ್ಲ. ಈ ಅಗತ್ಯ ಸೇವೆಗಳಲ್ಲಿ ನಿಮ್ಮ ಗೌಪ್ಯತೆ ಹಕ್ಕು ಕೂಡ ಸೇರಿರುತ್ತದೆ. ಹೀಗಾಗಿ ಎಷ್ಟು ಹೊತ್ತಿಗೆ ನಿಮ್ಮ ಮನೆಗೆ ಬಂದು ಬಾಗಿಲು ಬಡಿಯಬಹುದು ಅಂತ ನಿಮ್ಮ ಮನೆ ಮಾಲೀಕರು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಮನೆಗೆ ಬರುವುದಕ್ಕಿಂತಲೂ 24 ಗಂಟೆ ಮೊದಲು ನಿಮಗೆ ಅವರು ಮಾಹಿತಿ ನೀಡಬೇಕು ಎನ್ನುವ ನಿಯಮ ಸಹ ಇದೆ.
ಅಷ್ಟೇ ಅಲ್ಲ ನೀವು ಟೆನನ್ಸಿ ಹಕ್ಕುಗಳನ್ನು ಹೊಂದಿರುವ ಜೊತೆಗೆ ನಿಮ್ಮ ಜೊತೆ ವಾಸಿಸುತ್ತಿರುವ ನಿಮ್ಮ ಕುಟುಂಬದ ಸದಸ್ಯರಿಗೂ ಈ ಹಕ್ಕುಗಳು ಇರುತ್ತವೆ. ಬಾಡಿಗೆದಾರ ಮರಣ ಹೊಂದಿದರೆ ಅವರ ಮಗ, ಮಗಳು ಅಥವಾ ಸಂಗಾತಿ ಅಥವಾ ಜತೆಗೆ ಪಾಲಕರಿಗೂ ಇದೇ ಹಕ್ಕುಗಳು ಇರುತ್ತವೆ.
ಈಜುಕೊಳ, ಹೆಲ್ತ್ ಕ್ಲಬ್ ಇತ್ಯಾದಿ ಎಲ್ಲರಿಗೂ ಬಳಕೆಗೆ ಅವಕಾಶವಿರುವ ಸ್ಥಳಗಳು ಇದ್ದಾಗ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಬಾಡಿಗೆದಾರರು ಮೊದಲೇ ಬಾಡಿಗೆ ನೀತಿಗಳನ್ನು ನೋಡಿಕೊಳ್ಳಬೇಕು ಮತ್ತು ಬಾಡಿಗೆ ಒಪ್ಪಂದದಲ್ಲಿ ಅಗತ್ಯ ನಿಯಮಗಳನ್ನು ಸೇರಿಸುವಂತೆ ಸೂಚಿಸಬೇಕು. ಅವಿವಾಹಿತರಿಗೆ ಬಾಡಿಗೆ ಕೊಡದೆ ಇರುವುದು, ಸೊಸೈಟಿ ಸೌಲಭ್ಯಗಳನ್ನು ಬಳಸುವುದು ಇತ್ಯಾದಿಗೆ ಸಂಬಂಧಪಟ್ಟ ನಿಯಮಗಳಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ಬಾಡಿಗೆಗೆ ವಾಸಿಸುತ್ತೀರಿ ಎಂದಾದರೆ ಬಾಡಿಗೆ ಕರಾರನ್ನು ನೋಂದಣಿ ಮಾಡಿಕೊಳ್ಳಬೇಕು.
ಅನಗತ್ಯ ಮೇಂಟೆನೆನ್ಸ್ ಚಾರ್ಜ್ ಮತ್ತು ಸೊಸೈಟಿ ಫೀ ನಿಮಗೂ ವಿಧಿಸಿದ್ದರೆ, ನೀವು ಅದನ್ನು ಪ್ರತಿರೋಧಿಸಬೇಕು. ನಿಮ್ಮ ಒಟ್ಟು ಬಾಡಿಗೆಗೆ ಹೋಲಿಸಿದರೆ 50% ಕ್ಕಿಂತ ಹೆಚ್ಚು ಹಣವನ್ನು ಮೇಂಟೆನೆನ್ಸ್‌ಗೆ ಅಂತ ವಿಧಿಸಿದ್ದರೆ ಅದು ಅಕ್ರಮ. ಬಾಡಿಗೆದಾರರಿಂದ ಮೇಂಟೆನೆನ್ಸ್‌ಗೆ ಅಂತ ಪಡೆದ ಹಣದಿಂದ ಮಾಲೀಕರು ಲಾಭ ಮಾಡಿಕೊಳ್ಳುವಂತಿಲ್ಲ. ಯಾವುದೇ ಶುಲ್ಕವನ್ನು ಕಟ್ಟಿ ಎಂದು ಮಾಲೀಕರು ಬಾಡಿಗೆದಾರರಿಗೆ ಹೇಳುವಂತಿಲ್ಲ.
ಮಾಲೀಕರು ಕಟ್ಟುವ ಫೀಗಳನ್ನು ಬಾಡಿಗೆದಾರರೂ ಕಟ್ಟಬೇಕು. ಬಾಡಿಗೆದಾರರು ಕಟ್ಟಲಿ ಅಥವಾ ಮಾಲೀಕರು ಕಟ್ಟಲಿ, ಅವೆರಡರ ಮಧ್ಯೆ ತಾರತಮ್ಯ ಇರಬಾರದು. ಮಾಲೀಕರು ಬಾಡಿಗೆ ಹೆಚ್ಚಳ ಮಾಡಬೇಕು ಎಂದಾದರೆ, ಬಾಡಿಗೆದಾರರಿಗೆ 3 ತಿಂಗಳು ಮೊದಲೇ ಸೂಚನೆ ನೀಡಿದ ನಂತರವೇ ಏರಿಕೆ ಮಾಡಬಹುದು. ಒಂದೊಂದು ರಾಜ್ಯದಲ್ಲಿ ಬಾಡಿಗೆ ಏರಿಕೆ ವಿಷಯದಲ್ಲಿ ವ್ಯತ್ಯಾಸವಿದ್ದು, ಆ ರಾಜ್ಯದ ನೀತಿಗೆ ಅನುಗುಣವಾಗಿ ಅವರು ಬಾಡಿಗೆ ದರ ಏರಿಕೆ ಮಾಡಬೇಕು.
ಮಹಾರಾಷ್ಟ್ರದಲ್ಲಿ ಒಂದು ವರ್ಷದಲ್ಲಿ 24% ಕ್ಕಿಂತ ಹೆಚ್ಚು ಬಾಡಿಗೆ ಏರಿಕೆಯನ್ನು ಮಾಡುವಂತಿಲ್ಲ. ದೆಹಲಿಯಲ್ಲಿ, ಪ್ರತಿ 3 ವರ್ಷಗಳಿಗೊಮ್ಮೆ 10% ಬಾಡಿಗೆ ದರ ಏರಿಕೆ ಮಾಡಬಹುದು. ಆದರೆ, RWA ವಿಷಯದಲ್ಲಿ ಬಾಡಿಗೆದಾರರಿಗೆ ಕಡಿಮೆ ಆಯ್ಕೆಗಳಿವೆ. RWA (ರೆಸಿಡೆಂಟ್ ವೆಲ್ಪೇರ್ ಅಸೋಸಿಯೇಷನ್) ಯಲ್ಲಿ ಮಾಲೀಕರ ಮೂಲಕವೇ ಬಾಡಿಗೆದಾರರನ್ನು ಸಂಪರ್ಕಿಸಬೇಕಿರುತ್ತದೆ. ಇಲ್ಲಿ ಬಾಡಿಗೆದಾರರಿಗೆ ಹಿಂಸೆ ಮಾಡಿದರೆ, ಮಾಲೀಕರಿಗೂ ಹಿಂಸೆಯಾಗುವುದರಿಂದ, ಮಾಲೀಕರು ಕ್ರಮ ತೆಗೆದುಕೊಳ್ಳುತ್ತಾರೆ.
ಒಟ್ಟಾರೆಯಾಗಿ, ನಿಮ್ಮ RWA ನಿಮ್ಮನ್ನು ಮನಬಂದಂತೆ ನಡೆಸಿಕೊಳ್ಳುವ ಹಾಗಿಲ್ಲ, ವಿಪರೀತ ಶುಲ್ಕವನ್ನೂ ವಿಧಿಸುವ ಹಾಗಿಲ್ಲ. ಬೆಂಗಳೂರಿನಲ್ಲಿ ವಾರ್ಷಿಕವಾಗಿ ಮನೆ ಮಾಲೀಕರು ಶೇ. 5 ರಿಂದ ಶೇ. 10 ರಷ್ಟು ಬಾಡಿಗೆ ಏರಿಕೆ ಮಾಡುತ್ತಿದ್ದಾರೆ. ವಾರ್ಷಿಕ ಮನೆ ಬಾಡಿಗೆ ಏರಿಕೆ ಬಗ್ಗೆ ರೆಂಟಲ್ ಅಗ್ರಿಮೇಂಟ್ ನಲ್ಲಿಯೇ ಉಲ್ಲೇಖ ಮಾಡಿಕೊಂಡಿರುವುದು ಒಳಿತು. ಹೀಗಾಗಿ, ಬಾಡಿಗೆದಾರರಾಗಿ ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ತಿಳಿದಿರಲಿ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications