ಬೆಂಗಳೂರು, ಜುಲೈ 28: ಸೈಬರ್ ವಂಚಕರು ನಾನಾ ಬಗೆಯಲ್ಲಿ ಜನರನ್ನು ವಂಚನೆ ದಾಳಕ್ಕೆ ಬೀಳಿಸುತ್ತಾರೆ. ವಂಚನೆಗೆ ಒಳಗಾದವರು ಸೈಬರ್ ಸೆಲ್‌ಗೂ ಹೋಗಿ ಕಂಪ್ಲೇಂಟ್ ಕೊಡುತ್ತಾರೆ. ಬ್ಯಾಂಕ್ ಗೂ ಹೋಗಿ ಅನಿವಾರ್ಯವಾಗಿ ದೂರು ಸಲ್ಲಿಕೆ ಮಾಡಬೇಕಾಗುತ್ತದೆ.
ಆದರೆ ಕೆಲವೊಂದು ಬ್ಯಾಂಕ್ ಗಳು ಈ ರೀತಿಯ ವಂಚನೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತವೆ. ವಂಚನೆ ದೂರುಗಳಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಾರೆ. ಇಂಥಹ ಸಂದರ್ಭದಲ್ಲಿ ಗ್ರಾಹಕರು ಏನು ಮಾಡಬೇಕು? ಬ್ಯಾಂಕಿಂಗ್ ಓಂಬುಡ್ಸ್ ಮನ್ ಗೆ ದೂರು ಸಲ್ಲಿಸುವುದೆ ಪರಿಹಾರವೆ? ಈ ಬ್ಯಾಂಕಿಂಗ್ ಓಂಬುಡ್ಸ್ ಮನ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಕೆಲವೊಮ್ಮೆ ಬ್ಯಾಂಕಿನ ಕಳಪೆ ಸೇವೆಗಳ ಬಗ್ಗೆ ದೂರುಗಳು, ಮತ್ತು ಕೆಲವೊಮ್ಮೆ ಸಾಲವನ್ನು ಮರುಪಾವತಿಸದೆ ರಿಕವರಿ ಏಜೆಂಟ್ ಕಿರುಕುಳದ ಬಗ್ಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ನಲ್ಲಿ ದೂರುಗಳು ನಿರಂತರವಾಗಿ ದಾಖಲಾಗುತ್ತಲೇ ಇವೆ.
ಇದರ ಜತೆಗೆ ನೀವು ಯಾವಾಗ ಮತ್ತು ಹೇಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು ಎಂಬುದನ್ನು ಸಹ ತಿಳಿದುಕೊಳ್ಳಬೇಕಿದೆ. ಹಾಗಾಗಿ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾದರೆ ಮೊದಲನೆಯದಾಗಿ ನೀವು ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬೇಕು.
ಅಲ್ಲಿ ನಿಮ್ಮ ದೂರಿಗೆ ಸ್ಪಂದನೆ ಸಿಗದೆ ಇದ್ದರೆ ನಂತರ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿನ ನೋಡಲ್ ಅಧಿಕಾರಿಗೆ ನೀವು ದೂರು ಸಲ್ಲಿಸಬೇಕಾಗುತ್ತದೆ. ಪ್ರತಿ ಬ್ಯಾಂಕ್ ಸಹ ಇಂಥ ದೂರು ಆಲಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿಕೊಂಡಿರುತ್ತದೆ. ಬ್ಯಾಂಕ್ ನಿಮ್ಮ ದೂರನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದರೆ ಅಥವಾ ನಿಮಗೆ ಬ್ಯಾಂಕಿನಿಂದ ತೃಪ್ತಿಕರ ಉತ್ತರ ಸಿಗದಿದ್ದರೆ ನೀವು ರಿಸರ್ವ್ ಬ್ಯಾಂಕ್‌ನ ಬ್ಯಾಂಕಿಂಗ್ ಓಂಬುಡ್ಸ್ ಮನ್ ಗೆ ದೂರು ಸಲ್ಲಿಸಬೇಕಾಗುತ್ತದೆ.
ನೀವು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ಎರಡು ರೀತಿಯಲ್ಲಿ ದೂರು ಸಲ್ಲಿಸಬಹುದು.. ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಯಲ್ಲಿ ಕಂಪ್ಲೇಂಟ್ ನೀಡಬಹುದು. ಆಫ್‌ಲೈನ್ ಅಂದರೆ ನೀವು ಖುದ್ದಾಗಿ ಹೋಗಿ ಲಿಖಿತ ದೂರನ್ನು ನೀಡಬಹುದು. ಆನ್ ಲೈನ್ ಎಂದರೆ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಪೋರ್ಟಲ್ cms.rbi.org.in ನಲ್ಲಿ ದೂರನ್ನು ಸಲ್ಲಿಸಬಹುದು. ಹೆಚ್ಚಿನ ದೂರುಗಳು ಲೋನ್ ಮತ್ತು ಅಡ್ವಾನ್ಸ್ , ಮೊಬೈಲ್/ಎಲೆಕ್ಟ್ರಾನಿಕ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಬಂಧಿಸಿದ್ದಾಗಿವೆ ಎನ್ನುವುದನ್ನು ನಾವು ಗಮನಿಸಬೇಕು. ಒಟ್ಟು ದೂರುಗಳಲ್ಲಿ ಈ ವಿಭಾಗದ ಪಾಲು ಶೇಕಡಾ 60 ಕ್ಕಿಂತ ಹೆಚ್ಚಿದೆ.
ಇವುಗಳಲ್ಲಿ, ಗರಿಷ್ಠ ಸಂಖ್ಯೆಯ ದೂರುಗಳು ಲೋನ್ ಮತ್ತು ಅಡ್ವಾನ್ಸ್ ಗೆ ಮತ್ತು ಅನ್ ಫೆರ್ ಪ್ರಾಕ್ಟೀಸ್ ಕೋಡ್ ಅಂದರೆ ಅನುಚಿತ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿವೆ. ಅನುಚಿತ ವ್ಯವಹಾರ ಎಂದರೆ ವಸೂಲಾತಿ ಏಜೆಂಟ್‌ಗಳನ್ನು ಬಳಸಿ ಬ್ಯಾಂಕ್ ಸಾಲ ವಸೂಲಾತಿಗೆ ಅನುಸರಿಸಿದ ವಿಧಾನ ಮತ್ತು ಕಿರುಕುಳ ಮಾದರಿಗೆ ಸಂಬಂಧಿಸಿದ್ದಾಗಿವೆ. ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ರಿಕವರಿ ಏಜೆಂಟ್ ಗಳು ಸಾಲಗಾರರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡುವಂತೆ ಇಲ್ಲ. ಸಾಲ ವಸೂಲಾತಿಗೂ ಸರಿಯಾದ ನೀತಿ-ನಿಯಮಗಳಿವೆ.
ಹಾಗಾಗಿ ವಂಚಕರಿಂದ ಆಗುವ ಫ್ರಾಡ್ ಗಳು ಮತ್ತು ಬ್ಯಾಂಕ್ ಗಳು ದೂರಿಗೆ ಸ್ಪಂದಿಸದಿರುವುದು ಈ ಕುರಿತಾಗಿ ಸ್ಫಷ್ಟ ನಿಯಮಗಳು ಇಲ್ಲದಿರುವುದು ಸಹ ದೊಡ್ಡ ಸಮಸ್ಯೆಯಾಗಿದ್ದು ಸ್ಪಷ್ಟವಾದ ನಿಯಮಗಳನ್ನು ಸರ್ಕಾರ ತರಬೇಕಿದೆ.


Click it and Unblock the Notifications