ಬೆಂಗಳೂರು, ಜುಲೈ 9: ಕ್ರೆಡಿಟ್ ಕಾರ್ಡ್ ನ್ನು ಇನ್ನೊಂದು ಅರ್ಥದಲ್ಲಿ ಮುಂಗಡ ಸಾಲ ಎಂದೇ ಕರೆಯಬಹುದು. ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ನೀವು ಏನನ್ನೂ ಮೇಲಾಧಾರವಾಗಿ ಅಡವಿಡಬೇಕಿಲ್ಲ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಅಂದರೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದು ಕಷ್ಟ ಆಗಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇಲ್ಲದೆ ಇದ್ದರೂ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ. ಹೌದು ಅದುವೇ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್.
ಸಾಮಾನ್ಯ ಕ್ರೆಡಿಟ್ ಕಾರ್ಡ್ ಗಳಿಗಿಂತ ಇವು ಭಿನ್ನ. ಫಿಕ್ಸೆಡ್ ಡೆಪಾಸಿಟ್ ಆಧಾರದಲ್ಲಿ ಇವನ್ನು ಕೊಡಲಾಗುತ್ತದೆ. ನೀವು ಸರಿಯಾದ ಸಮಯಕ್ಕೆ ಪಾವತಿ ಮಾಡದೆ ಹೋದರೆ ನೀವು ಭದ್ರತೆಯಾಗಿ ಕೊಟ್ಟಿರುವ ಎಫ್ ಡಿ ಯಿಂದ ನಿಮ್ಮ ಹಣ ರಿಕವರ್ ಮಾಡಿಕೊಳ್ಳಲಾಗುತ್ತದೆ. ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಗಿಂತಲೂ ಕಡಿಮೆ ಸ್ಕೋರ್ ಇರೋರು, ಅವರ ಬಳಿ ಎಫ್ ಡಿ ಇದ್ದರೆ ಸುಲಭವಾಗಿ ಈ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವುದಕ್ಕೂ ಸಹಕಾರಿ. ಸಾಮಾನ್ಯವಾಗಿ ಈ ಕಾರ್ಡ್ ಗಳಲ್ಲಿ ಎಫ್‌ಡಿ ಮೊತ್ತ ಎಷ್ಟಿರುತ್ತದೆಯೋ ಅಷ್ಟೂ ಮೊತ್ತದಷ್ಟು ಕ್ರೆಡಿಟ್ ಲಿಮಿಟ್ ಇರುತ್ತದೆ. ಅಂದರೆ ನೀವು ಎರಡು ಲಕ್ಷ ರೂಪಾಯಿ ಎಫ್ ಡಿ ಇಟ್ಟಿದ್ದರೆ ಕ್ರೆಡಿಟ್ ಲಿಮಿಟ್ ಕೂಡ ಎರಡು ಲಕ್ಷ ರೂಪಾಯಿ ಆಗಿರುತ್ತದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಗಳು ಜನಪ್ರಿಯವಾಗುತ್ತಿವೆ. ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್, ಎಸ್ ಬಿ ಐ ಕಾರ್ಡ್ ಉನ್ನತಿ ಮತ್ತು ಆ್ಯಕ್ಸಿಸ್ ಇನ್ಸ್ಟಾ ಈಸಿ ಕ್ರೆಡಿಟ್ ಕಾರ್ಡ್ ಈ ಮಾದರಿಯ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಗಳಾಗಿವೆ. ಸುಲಭ ಲಭ್ಯತೆ ಮತ್ತು ಬಳಕೆದಾರ ಸ್ನೇಹಿ ಫೀಚರ್ ಗಳಿಂದಾಗಿ ಇವು ಜನಪ್ರಿಯವಾಗುತ್ತಿವೆ. ಎಫ್ಡಿಗಳ ಮೇಲೆ ಯಾವುದೇ ಲಾಕ್ ಇನ್ ಪೀರಿಯಡ್ ಇಲ್ಲ. ಕನಿಷ್ಠ ಎರಡು ಸಾವಿರ ರೂಪಾಯಿ ಡೆಪಾಸಿಟ್ ಮೇಲೂ ಈ ಕಾರ್ಡ್ ಪಡೆಯಲು ಅವಕಾಶ ಇದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಹೆಚ್ಚು ಎಫ್ ಡಿ ಗಳನ್ನು ತೆರೆದು ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಿಸಿಕೊಳ್ಳಬಹುದು.
ಬಹುತೇಕ ಕಾರ್ಡ್ ಗಳನ್ನು ಪಡೆಯಲು ನೀವು ಒಂದು ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ ಸಾಕು. ನೀವು ಎಫ್ ಡಿ ಕ್ಲೋಸ್ ಮಾಡಬೇಕು ಅಂದರೆ ಅಥವಾ ನಿಮ್ಮ ಕಾರ್ಡ್ ಡಿ ಆ್ಯಕ್ಟಿವೇಟ್ ಮಾಡಬೇಕು ಅಂತಿದ್ದರೆ ಅದನ್ನ ಸುಲಭವಾಗಿ ಆ್ಯಪ್ ಮೂಲಕ ಮಾಡಬಹುದು. ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಗಳು ನಿಮ್ಮ ಅಲ್ಪಾವಧಿ ಸಾಲದ ಅಗತ್ಯಗಳನ್ನು ಪೂರೈಸಬಲ್ಲದು. ಅಲ್ಪಾವಧಿ ಹಣಕಾಸು ಅಗತ್ಯಗಳಿಗೆ ಎಫ್ ಡಿ ಮುರಿಯದೆ ಹಣ ಪಡೆಯಬಹುದು. ಅಲ್ಪಾವಧಿಗೆ ಆಗಾಗ ಹಣಬೇಕಾಗಿದರೆ ಈ ಫೀಚರ್ ಅನುಕೂಲ.
ಹಾಗೆಂದ ಮಾತ್ರಕ್ಕೆ ಇಲ್ಲಿ ನಷ್ಟ ಇಲ್ಲ ಅಂತೇನೂ ಇಲ್ಲ. ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಗೆ ಲಿಂಕ್ ಆಗಿರೋ ಎಫ್ ಡಿ ಬ್ರೇಕ್ ಮಾಡಿದರೆ ಬ್ಯಾಂಕ್ ಗಳು ಶೇಕಡ 1 ರಷ್ಟರವರೆಗೆ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿ ಮಾಡದೆ ಹೋದರೆ ನೀವು ಭದ್ರತೆಯಾಗಿ ಅಡವಿಟ್ಟಿರೋ ಎಫ್ ಡಿ ಕಳೆದುಕೊಳ್ಳಬೇಕಾಗಬಹುದು. ಜೊತೆಗೆ ಎಫ್ ಡಿ ಮೇಲಿನ ಹೆಚ್ಚಿನ ಬಡ್ಡಿಯನ್ನ ಕೂಡ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಫ್ ಡಿ ಮೊತ್ತ ಆಧರಿಸಿ ಕ್ರೆಡಿಟ್ ಲಿಮಿಟ್ ನಿರ್ಧರಿಸಲಾಗಿರುತ್ತದೆ. ಹೀಗಾಗಿ ಎಫ್ ಡಿ ಮೊತ್ತ ಕಡಿಮೆ ಇದ್ದರೆ ನಿಮಗೆ ಖರ್ಚಿಗೆ ಹೆಚ್ಚಿನ ಹಣ ಸಿಗುವುದಿಲ್ಲ. ಸಾಮಾನ್ಯ ಕ್ರೆಡಿಟ್ ಕಾರ್ಡ್ ಗೆ ಹೋಲಿಸಿದರೆ ಇಲ್ಲಿ ನಿಮಗೆ ಬಳಕೆಗೆ ಸಿಗುವ ಮೊತ್ತವೂ ಕಡಿಮೆ ಇರಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications