Life Certificate 2025: ಈ ಕೆಲಸ ಫಸ್ಟ್‌ ಮಾಡಿ, ಇಲ್ಲಾಂದ್ರೆ ಬರಲ್ಲ ಪೆನ್ಷನ್‌! ಏನದು ಗೊತ್ತಾ?

ದೇಶದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲಿ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಅದರಂತೆ ಪ್ರತೀ ವರ್ಷವೂ ಪಿಂಚಣಿದಾರರು ತನ್ನ ಅಸ್ತಿತ್ವನ್ನು ಸಾಬೀತುಪಡಿಸಬೇಕು. ಲೈಫ್ ಸರ್ಟಿಫಿಕೇಟ್ (Life Certificate) ಅಥವಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಎಂದು ಕರೆಯಲ್ಪಡುವ ಈ ಜೀವನ್‌ ಪ್ರಮಾಣ ಪತ್ರವೂ ಫಲಾನುಭವಿಗಳಿಗೆ ಆರ್ಥಿಕ ಪ್ರಯೋಜನವನ್ನು ನೀಡುವುದಲ್ಲದೇ, ವಂಚನೆ ಮತ್ತು ದುರುಪಯೋಗವನ್ನು ತಡೆಯಲು ಕಡ್ಡಾಯವಾಗಿ ಸಲ್ಲಿಸಬೇಕಾದ ಅರ್ಜಿಯಾಗಿದೆ.

ಈ ಕೆಲಸ ಫಸ್ಟ್‌ ಮಾಡಿ, ಇಲ್ಲಾಂದ್ರೆ ಬರಲ್ಲ ಪೆನ್ಷನ್‌! ಏನದು ಗೊತ್ತಾ?

ಆರಂಭದಲ್ಲಿ ಜೀವನ್‌ ಪ್ರಮಾಣಪತ್ರ ಸಲ್ಲಿಸಬೇಕಾದ್ರೆ ಬ್ಯಾಂಕ್‌ ಅಥವಾ ಪಿಂಚಣಿ ಕಚೇರಿಗೆ ಭೇಟಿ ನೀಡಲೇಬೇಕಿತ್ತು, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಲೇಬೇಕಿತ್ತು. ಆದ್ರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸರ್ಕಾರ ಡಿಜಿಟಲೀಕರಣಕ್ಕೆ ಒತ್ತು ನೀಡಿತು. ಈಗ ಜೀವನ್‌ ಪ್ರಮಾಣ್‌ ಪತ್ರವನ್ನು ಸುರಕ್ಷಿತವಾಗಿ, ಯಾವುದೇ ಹೆಚ್ಚುವರಿ ದಾಖಲೆಗಳಿಲ್ಲದೇ ಮನೆಯಿಂದಲೇ ಡಿಜಿಟಲ್‌ ಮೂಲಕ ಸಲ್ಲಿಸಬಹುದು.

ಜೀವನ್‌ ಪ್ರಮಾಣಪತ್ರ ಎಂದರೇನು? ಇದು ಏಕೆ ಮುಖ್ಯ?
ಜೀವನ್‌ ಪ್ರಮಾಣಪತ್ರ ಅಥವಾ ಲೈಫ್‌ ಸರ್ಟಿಫಿಕೇಟ್‌ ಎಂಬುದು ಪಿಂಚಣಿದಾರರು ಜೀವಂತವಾಗಿದ್ದಾರೆ ಎಂದು ದೃಢೀಕರಣ ನೀಡುವ ಒಂದು ಅಧಿಕೃತ ದಾಖಲೆ. ಒಂದು ವೇಳೆ ಇದನ್ನು ಸಲ್ಲಿಸದಿದ್ದರೆ ಪಿಂಚಣಿ ವಿತರಣಾ ಏಜೆನ್ಸಿಗಳು, ಪಿಂಚಣಿ ಹಣವನ್ನು ನೀಡುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಮ್ಮ ಅಸ್ತಿತ್ವವನ್ನು ಈ ಮೂಲಕ ಖಚಿತಪಡಿಸಿಕೊಳ್ಳಬಹುದು.

ಪೇಪರ್‌ ಪ್ರಮಾಣಪತ್ರದಿಂದ, ಬಯೋಮೆಟ್ರಿಕ್‌ ಆಗಿ ಸಕ್ರಿಯೆಗೊಳಿಸಲಾಗಿದೆ. ಭಾರತ ಸರ್ಕಾರದಿಂದ ಪರಿಚಯಿಸಲಾದ ಈ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಮೂಲಕ ಪಿಂಚಣಿದಾರರ ಗುರುತನ್ನು ಪರಿಶೀಲಿಸಲು ಫಿಂಗರ್‌ಪ್ರಿಂಟ್‌, ಐರಿಸ್‌ ಸ್ಕ್ಯಾನ್‌ ಮೂಲಕ ಆಧಾರ್‌ ಆಧಾರಿತವಾಗಿ ಬಯೋಮೆಟ್ರಿಕ್‌ ದೃಢೀಕರಣವನ್ನು ತೆಗೆದುಕೊಳ್ಳಲಾಗುತ್ತದೆ. ಒಮ್ಮೆ ಈ ದೃಢೀಕರಣ ಸಂಪೂರ್ಣಗೊಂಡರೆ, ಆಟೋಮೆಟಿಕ್‌ ಆಗಿ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಕ್ರಿಯೇಟ್‌ ಆಗುತ್ತದೆ ಮತ್ತು ಪಿಂಚಣಿ ನೀಡುವ ಕಂಪನಿಗಳಿಗೆ ನೀಡಲಾಗುತ್ತದೆ.

ಜೀವನ್‌ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನ:
PIB ಪ್ರಕಾರ, ಪಿಂಚಣಿದಾರರು ತಮ್ಮ ಪಿಂಚಣಿ ಹಣವನ್ನು ಯಾವುದೇ ಅಡೆತಡೆಯಿಲ್ಲದೇ ಪಡೆಯಲು ಬಯಸುತ್ತಿದ್ದರೆ, ಜೀವನ್‌ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. 2025 ರಲ್ಲಿ ಸಲ್ಲಿಸಲು ನವೆಂಬರ್‌ 1 ರಿಂದ ನವೆಂಬರ್‌ 30 ನಡುವೆ ಸಲ್ಲಿಸಬೇಕಾಗುತ್ತದೆ. ಇನ್ನು 80 ವರ್ಷ ಮತ್ತು ಅದಕ್ಕಿಂ ಮೇಲ್ಪಟ್ಟ ಹಿರಿಯ ಪಿಂಚಣಿದಾರರಿಗೆ ಪ್ರಕ್ರಿಯೆ ಸುಲಭವಾಗಲು, ಅಕ್ಟೋಬರ್‌ 1, 2025 ರಿಂದಲೇ ಸಲ್ಲಿಸಲು ಅನುವು ಮಾಡಿಕೊಟ್ಟಿತ್ತು.

ಜೀವನ್ ಪ್ರಮಾಣ್ ಆನ್‌ಲೈನ್‌ನಲ್ಲಿ ಹೇಗೆ ಕ್ರಿಯೇಟ್‌ ಮಾಡುವುದು?
ಜೀವನ್ ಪ್ರಮಾಣ್ ಪ್ರಕ್ರಿಯೆಯು ಎರಡು ಮುಖ್ಯ ಹಂತಗಳನ್ನು ಒಳಗೊಂಡಿದೆ: ಬಯೋಮೆಟ್ರಿಕ್ ದಾಖಲೆಯನ್ನು ನೋಂದಾಯಿಸುವುದು ಮತ್ತು ಡಿಜಿಟಲ್ ಪ್ರಮಾಣಪತ್ರವನ್ನು ರಚಿಸುವುದು.

ಹಂತ 1: ಬಯೋಮೆಟ್ರಿಕ್ ಸಾಧನ ನೋಂದಣಿ: ಸೇವೆಯನ್ನು ಬಳಸುವ ಮೊದಲು, ಪಿಂಚಣಿದಾರರು ಅಥವಾ ಆಪರೇಟರ್‌ಗಳು ತಮ್ಮ ಫಿಂಗರ್‌ ಪ್ರಿಂಟ್‌ ಅಥವಾ ಐರಿಸ್ ಸ್ಕ್ಯಾನರ್‌ನಂತಹ ಬಯೋಮೆಟ್ರಿಕ್ ಸಾಧನವನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಯ ಸಮಯದಲ್ಲಿ, ಬಳಕೆದಾರರು ಮೊದಲು ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಆ ಬಳಿಕ ಅವರ ಮೊಬೈಲ್‌ಗೆ OTP (ಒನ್-ಟೈಮ್ ಪಾಸ್‌ವರ್ಡ್) ಬರುತ್ತದೆ. OTP ಅನ್ನು ನಮೂದಿಸಿಬೇಕು. ನಂತರ ತಮ್ಮ ಹೆಸರು ಮತ್ತು ಇಮೇಲ್ ಐಡಿಯನ್ನು ಒದಗಿಸಬೇಕು. ಆ ಬಳಿಕವೇ ಅವರು ತಮ್ಮ ಫಿಂಗರ್‌ ಪ್ರಿಂಟ್‌ ಅಥವಾ ಐ ಸ್ಕ್ಯಾನ್ ಮಾಡಬಹುದು.

ದೃಢೀಕರಣವೆಲ್ಲಾ ಪೂರ್ಣಗೊಂಡ ನಂತರ, ಸಾಧನ ನೋಂದಣಿ ಯಶಸ್ವಿಯಾಗಿದೆ ಎಂದು ಸಿಸ್ಟಮ್ ತಿಳಿಸುತ್ತದೆ. ಆ ಬಳಿಕವೇ ಬಳಕೆದಾರರು ಮುಂದಿನ ಹಂತಕ್ಕೆ ಹೋಗಬಹುದು.

ಹಂತ 2:
ದೃಢೀಕರಣ ಮತ್ತು ಪ್ರಮಾಣಪತ್ರ ರಚನೆ:
ಈ ಹಂತದಲ್ಲಿ, ಪಿಂಚಣಿದಾರರು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಹೆಸರು, PPO ಸಂಖ್ಯೆ, ಪಿಂಚಣಿ ಪ್ರಕಾರ, ಮಂಜೂರು ಮಾಡುವ ಪ್ರಾಧಿಕಾರ, ವಿತರಣಾ ಏಜೆನ್ಸಿ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ವೈಯಕ್ತಿಕ ದಾಖಲೆಗಳನ್ನು ನೀಡಬೇಕು. ಪಿಂಚಣಿದಾರರು ಮರುಮದುವೆಯಾಗಿದ್ದಾರೆಯೇ ಅಥವಾ ಮರುಉದ್ಯೋಗಿಯಾಗಿದ್ದಾರೆಯೇ ಎಂದು ಸಿಸ್ಟಮ್ ಕೇಳುತ್ತದೆ. ಅದಕ್ಕೂ ಕ್ಲಾರಿಟಿ ನೀಡಬೇಕು.

ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪಿಂಚಣಿದಾರರು ನೋಂದಾಯಿತ ಬಯೋಮೆಟ್ರಿಕ್ ಸಾಧನವನ್ನು ಬಳಸಿಕೊಂಡು ತಮ್ಮ ಫಿಂಗರ್‌ಪ್ರಿಂಟ್‌ ಅಥವಾ ಐ ಸ್ಕ್ಯಾನ್ ಮಾಡುತ್ತಾರೆ. ಯಶಸ್ವಿ ದೃಢೀಕರಣದ ನಂತರ, ಡಿಜಿಟಲ್ ಲೈಫ್ ಸರ್ಟಿಫಿಕೇಟ್ ರಚಿಸಲ್ಪಡುತ್ತದೆ ಮತ್ತು ಜೀವನ್ ಪ್ರಮಾಣ್ ಪ್ರಮಾಣಪತ್ರ ID ಯೊಂದಿಗೆ ನೋಂದಾಯಿತ ಫೋನ್‌ ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸಲಾಗುತ್ತದೆ.

2025ರಲ್ಲಿ ಲೈಫ್ ಸರ್ಟಿಫಿಕೇಟ್ ಅನ್ನು ಹೇಗೆ ಸಲ್ಲಿಸುವುದು?
ಸರ್ಕಾರವು ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಹಲವಾರು ಆಯ್ಕೆಗಳನ್ನು ನೀಡಿದೆ.

ಬ್ಯಾಂಕ್ ಶಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಆಫ್‌ಲೈನ್ ಮೂಲಕ ಸಲ್ಲಿಸಬಹುದು: ಆನ್‌ಲೈನ್‌ಗಿಂತ ಆಫ್‌ಲೈನ್‌ಗೆ ಆದ್ಯತೆ ನೀಡುವ ಪಿಂಚಣಿದಾರರು ತಮ್ಮ ಬ್ಯಾಂಕ್ ಶಾಖೆ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ, ತಮ್ಮ ಲೈಫ್ ಸರ್ಟಿಫಿಕೇಟ್ ಅನ್ನು ಅಪ್ಲೈ ಮಾಡಬಹುದು.

ವಯಸ್ಸು ಅಥವಾ ಆರೋಗ್ಯ ಸಮಸ್ಯೆಗಳಿಂದ ಸಾಮಾನ್ಯ ಕೇಂದ್ರಗಳಿಗೆ, ಹೊರಗೆ ಹೋಗಲು ಸಾಧ್ಯವಾಗದವರಿಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ಪಿಂಚಣಿದಾರರು ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಬಹುದು ಮತ್ತು IPPB ಪ್ರತಿನಿಧಿಯು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಸಲ್ಲಿಕೆಯನ್ನು ಪೂರ್ಣಗೊಳಿಸಲು ಅವರ ಮನೆಗೆ ಭೇಟಿ ನೀಡುತ್ತಾರೆ.

ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್ ಸಲ್ಲಿಕೆ:
ಡಿಜಿಟಲ್‌ ಮೂಲಕ ಸಲ್ಲಿಸಲಿಚ್ಛಿಸುವ ಪಿಂಚಣಿದಾರರಿಗೆ, ಜೀವನ್ ಪ್ರಮಾಣ್ ಪೋರ್ಟಲ್ ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆಯನ್ನು ಒದಗಿಸುತ್ತದೆ. https://jeevanpramaan.gov.in ಗೆ ಭೇಟಿ ನೀಡುವ ಮೂಲಕ, ಪಿಂಚಣಿದಾರರು ಬಯೋಮೆಟ್ರಿಕ್‌ ಸಲ್ಲಿಸಲಾಗುವ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬಹುದು.

UMANG ಅಪ್ಲಿಕೇಶನ್ ಮೂಲಕ ಹೇಗೆ ಸಲ್ಲಿಸುವುದು?
UMANG (Unified Mobile Application for New-age Governance) ಅಪ್ಲಿಕೇಶನ್ ಮೂಲಕವು ಲೈಪ್‌ ಸರ್ಟಿಫಿಕೇಟ್‌ ಸಲ್ಲಿಸಬಹುದು. ಅದಕ್ಕಾಗಿ ಪಿಂಚಣಿದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅಲ್ಲಿ "ಜೀವನ್ ಪ್ರಮಾಣ್" ಗಾಗಿ ಹುಡುಕಬಹುದು ಮತ್ತು "ಜನರೇಟ್ ಲೈಫ್ ಸರ್ಟಿಫಿಕೇಟ್" ಆಯ್ಕೆ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+