ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು (State-Central Govt) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯುವಕರಿಗಾಗಿ, ಮಕ್ಕಳಿಗಾಗಿ, ಮಹಿಳೆಯರಿಗಾಗಿ, ರೈತರಿಗಾಗಿ, ಹಿರಿಯ ಹಿರಿಯ ನಾಗರಿಕರಿಗಾಗಿ ಹಲವಾರು ಯೋಜನೆಗಳು ಚಾಲ್ತಿಯಲ್ಲಿದೆ. ಕೇಂದ್ರ ಸರ್ಕಾರ ಹಲವು ಯೋಜನೆಗಳು ಆರ್ಥಿಕವಾಗಿ ಮಾತ್ರವಲ್ಲದೇ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಅದೇ ರೀತಿ ಆಗಸ್ಟ್ 15, 2025 ರಂದು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದ "ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ"ಯನ್ನು (PMVBRY) ಜಾರಿಗೆ ತಂದರು.

ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆಯಿಂದಾಗಿ (Pradhan Mantri Viksit Bharat Rozgar Yojana) ಉದ್ಯೋಗಿಗಳು ಮತ್ತು ಉದ್ಯೋಗ ನೀಡುವ ಸಂಸ್ಥೆಗಳಿಗೂ ಅನುಕೂಲ ಕಲ್ಪಿಸುವ ಗುರಿಯನ್ನು ಹೊಂದಿದೆ. ಇನ್ನು ಈ ಯೋಜನೆಗಾಗಿ ಈಗಾಗಲೇ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿಗಳಷ್ಟು ನಿಧಿಯನ್ನು ಮೀಸಲಿಟ್ಟಿದೆ. ಈ ಯೋಜನೆಯಡಿಯಲ್ಲಿ ಮುಂದಿನ 2 ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಧ್ಯೇಯವನ್ನು ಹೊಂದಿದ್ದು, ಹಲವು ನಿರುದ್ಯೋಗಿಗಳು ಉದ್ಯೋಗ ಗಿಟ್ಟಿಸುವ ಅವಕಾಶ ಕಲ್ಪಿಸಲಿದೆ. ಹಾಗಿದ್ರೆ ವಿಕಸಿತ ಭಾರತ ಉದ್ಯೋಗ ಯೋಜನೆ ಎಂದರೇನು? ಇದರಿಂದಾಗುವ ಪ್ರಯೋಜನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಹೊಸ ಉದ್ಯೋಗಿಗಳಿಗೆ ಆರ್ಥಿಕ ನೆರವು!
ವಿಕಸಿತ ಭಾರತ ಉದ್ಯೋಗ ಯೋಜನೆ ಮೂಲಕ ಹೊಸದಾಗಿ ಉದ್ಯೋಗಕ್ಕೆ ಸೇರುವವರು ಮತ್ತು ಉದ್ಯೋಗದಾತರು ಆರ್ಥಿಕವಾಗಿ ನೆರವು ಪಡೆಯಬುದು. ಪ್ರಧಾನಿ ನರೇಂದ್ರ ಮೋದಿಯವರು 2025ರ ಆಗಸ್ಟ್ 15ರಂದು ತಮ್ಮ 12ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಈ ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆಯನ್ನು ಘೋಷಣೆ ಮಾಡಿದರು. ಅಲ್ಲದೇ ಸಚಿವ ಸಂಪುಟದಿಂದಲೂ ಇದಕ್ಕೆ ಅನುಮೋದನೆ ನೀಡಲಾಯಿತು.
ಈ ಯೋಜನೆ ಆಗಸ್ಟ್ 1, 2025 ರಿಂದ ಜುಲೈ 31, 2027 ರವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ. ಅಲ್ಲದೇ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
PM-VBRY ಯೋಜನೆಯ ವೆಬ್‌ಸೈಟ್ (pmvbry.epfindia.gov.in) ಪ್ರಕಾರ, ಔಪಚಾರಿಕ ಉದ್ಯೋಗ ವಲಯಕ್ಕೆ (ಸರ್ಕಾರಿ ನಿಯಮಗಳಡಿಯಲ್ಲಿರುವ) ಹೊಸದಾಗಿ ಸೇರ್ಪಡೆಯಾಗಿ EPFO ನಲ್ಲಿ ನೋಂದಾಯಿಸಿಕೊಂಡರೆ, ₹15,000 ವರೆಗೆ ನೇರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇದನ್ನು ಎರಡು ಕಂತುಗಳಲ್ಲಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಹೊಸ ಉದ್ಯೋಗಿಗಳಿ ಪ್ರೋತ್ಸಾಹ ನೀಡುವುದು ಕೇಂದ್ರದ ಉದ್ದೇಶವಾಗಿದೆ.
ಪಿಐಬಿ (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಪ್ರಕಾರ, ಎಲ್ಲಾ ಉದ್ಯೋಗದಾತರು ಮತ್ತು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಈ ಯೋಜನೆಯ ಅರ್ಹತೆಯನ್ನು ಹೊಂದಿರುತ್ತಾರೆ. ಕೇಂದ್ರದಿಂದ ಬರುವ ಪ್ರೋತ್ಸಾಹಧನವನ್ನು ಪಡೆಯಲು, ಫಲಾನುಭವಿಗಳು ಮೊದಲು ನಿಗದಿಪಡಿಸಿದ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಅಥವಾ UMANG ಅಪ್ಲಿಕೇಶನ್ ಮೂಲಕ ತಮ್ಮ ಯುಎಎನ್ (UAN) ಸಂಖ್ಯೆಯನ್ನು ಅಪ್‌ಲೋಡ್ ಮಾಡಬಹುದು.
ಯೋಜನೆಯ ಅರ್ಹತೆಗಳು:
ಆಗಸ್ಟ್ 1, 2025 ಮತ್ತು ಜುಲೈ 31, 2027 ರ ನಡುವೆ ಉದ್ಯೋಗಕ್ಕೆ ಸೇರುವ ಯಾವುದೇ ಔಪಚಾರಿಕ ವಲಯದ ಹೊಸ ಉದ್ಯೋಗಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು. ಆಗಸ್ಟ್ 1, 2025 ರ ಮೊದಲು ಇಪಿಎಫ್‌ಒ ಅಥವಾ ಯಾವುದೇ ವಿನಾಯಿತಿ ಪಡೆದ ಟ್ರಸ್ಟ್‌ನ ಸದಸ್ಯರಾಗಿದ್ದರೆ, ಈ ಸೌಲಭ್ಯ ಸಿಗುವುದಿಲ್ಲ. ಅಂದರೆ ಅರ್ಹತೆ ಪ್ರಕಾರ ಆಗಸ್ಟ್ 2025 ರ ಮೊದಲ ವೇತನದಲ್ಲಿ, ಇಪಿಎಫ್‌ಗೂ ಮೊದಲ ಕಂತು ಜಮಾ ಆಗಿರಬೇಕು.
ಮಾಸಿಕ ₹1 ಲಕ್ಷದವರೆಗಿನ ಸಂಬಳ ಪಡೆಯುವ ಯಾವುದೇ ಉದ್ಯೋಗಿಯೂ ಇದರ ಪ್ರಯೋಜನವನ್ನು ಪಡೆಯಬಹುದು. ಇನ್ನು ಈ ಯೋಜನೆಯ ಮೊದಲ ಕಂತು ಪಡೆಯಲು, ಉದ್ಯೋಗಿ ಒಂದೇ ಕಂಪನಿಯಲ್ಲಿ ಕನಿಷ್ಠ 6 ತಿಂಗಳು ಸೇವೆ ಸಲ್ಲಿಸಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
- ಉದ್ಯೋಗದಾತರು pmvbry.epfindia.gov.in ಪೋರ್ಟಲ್‌ಗೆ ಭೇಟಿ ನೀಡಬೇಕು.
- EPFO ದಾಖಲೆಗಳನ್ನು ಸಲ್ಲಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು.
- ಅಲ್ಲದೇ ಅಲ್ಲಿರುವ ಮಾನದಂಡಗಳನ್ನು, ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ತಿಳಿಯಬಹುದು.
- ಉದ್ಯೋಗ ಸೇರಿದ 30 ದಿನಗಳೊಳಗೆ ಇಪಿಎಫ್‌ಒ ಅಡಿಯಲ್ಲಿ ನೋಂದಾಯಿಸಬೇಕು.
- ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಕೆವೈಸಿ (KYC) ವಿವರಗಳನ್ನು ಅಲ್ಲಿ ಅಪ್‌ಲೋಡ್ ಮಾಡಬೇಕು.
ಆನಂತರ ಪ್ರೋತ್ಸಾಹ ಧನವು ಇಪಿಎಫ್‌ಒನ ಏಕೀಕೃತ ಪೋರ್ಟಲ್ ಮೂಲಕ ಸ್ವಯಂ-ಪ್ರಕ್ರಿಯೆಯಾಗುತ್ತದೆ. ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಯನ್ನು ನಮೂದಿಸುವ ಮೂಲಕ ಉಮಾಂಗ್ (UMANG) ಅಪ್ಲಿಕೇಶನ್‌ನಲ್ಲಿ ತಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಅವಕಾಶವಿದೆ. ಅರ್ಹತೆಯ ಪರಿಶೀಲನೆ ನಡಸಿದ ನಂತರ 15 ರಿಂದ 30 ದಿನಗಳಲ್ಲಿ ಉದ್ಯೋಗಿ ಅಥವಾ ಉದ್ಯೋಗದಾತರ ಲಿಂಕ್ ಮಾಡಲಾದ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ.
ಉದ್ಯೋಗದಾತರಿಗೆ ಏನು ಪ್ರಯೋಜನ?
ಪಿಎಂ ವಿಕಸಿತ ಭಾರತ ಉದ್ಯೋಗ ಯೋಜನೆಯಡಿ ಆಗಸ್ಟ್ 2025 ರಿಂದ ಜುಲೈ 2027 ರವರೆಗೆ ಹೊಸದಾಗಿ ಉದ್ಯೋಗಕ್ಕೆ ಸೇರಿದರೆ 15 ಸಾವಿರದವರೆಗೆ ಕೇಂದ್ರದಿಂದ ಆರ್ಥಿಕವಾಗಿ ಪ್ರೋತ್ಸಾಹ ಧನ ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಅದೇ ರೀತಿ ಉದ್ಯೋಗದಾತರು ಪ್ರತೀ ಹೊಸ ಉದ್ಯೋಗಿಯನ್ನು ನೇಮಿಸಿಕೊಂಡಾಗ, ಮಾಸಿಕವಾಗಿ 3 ಸಾವಿರದವರೆಗೆ ಪ್ರೋತ್ಸಾಹ ಧನ ಸಿಗಲಿದೆ ಎನ್ನಲಾಗಿದೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಅರ್ಜಿ ಸಲ್ಲಿಸಲು pmvbry.epfindia.gov.in ಅಥವಾ UMANG ಅಪ್ಲಿಕೇಶನ್‌ಗೆ ಭೇಟಿ ನೀಡಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications