ಬೆಂಗಳೂರು, ಜೂನ್ 27: ಸ್ವಂತ ಮನೆಯೊಂದನ್ನು ನಿರ್ಮಿಸಿಕೊಳ್ಳಬೇಕು ಎಂದು ಹಲವರು ಕನಸು ಕಾಣುತ್ತಾರೆ. ಅದಕ್ಕಾಗಿ ನಿರಂತರ ಪ್ರಯತ್ನವನ್ನು ಮಾಡಿತ್ತಾರೆ. ನಾವು ನಮ್ಮ ಮುಂದಿನ ಪೀಳಿಗೆಯ ಭದ್ರತೆಗಾಗಿ ಏನನ್ನಾದರೂ ನೀಡುವ ನಮ್ಮ ಆಲೋಚನೆಗೆ ಇದು ಸಹಕಾರಿಯಾಗುತ್ತದೆ. ಆದರೆ ಹಿಂದೆ-ಮುಂದೆ ನೋಡದೆ ಏಕಾಏಕಿ ಸೈಟ್ ಖರೀದಿ ಮಾಡಿದರೆ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವ ಸಂಭವ ಸಹ ಇರುತ್ತದೆ. ಗೃಹ ಸಾಲ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
ಗೃಹ ಸಾಲಕ್ಕೆ ಅರ್ಜಿಸ ಲ್ಲಿಸಿದಾಗ ಬ್ಯಾಂಕ್ ಗಳು ಸರ್ಚ್ ರಿಪೋರ್ಟ್ ಕೇಳುವ ಸಾಧ್ಯೆತೆ ಇರುತ್ತದೆ. ನಿಮ್ಮ ಹೆಸರಿಗೆ ಸೈಟ್ ನೋಂದಣಿಯಾಗಿದ್ದರೂ ಈ ಸರ್ಚ್ ರಿಪೋರ್ಟ್ ಬೇಕಾಗುತ್ತದೆ. ನೀವು ಖರೀದಿಸಿರುವ ಸಂಸ್ಥೆ ಅಥವಾ ಏಜೆಂಟ್ ಅದನ್ನು ಒದಗಿಸಿಕೊಡಬೇಕಾಗುತ್ತದೆ.

ಸರ್ಚ್ ರಿಪೋರ್ಟ್ ಎಂಬುದು ಒಂದು ಪ್ರಮಾಣ ಪತ್ರ. ಆಸ್ತಿಗೆ ಸಂಬಂಧಿಸಿದಂತೆ ಇದೊಂದು ಬಹು ಮುಖ್ಯವಾದ ಡಾಕ್ಯುಮೆಂಟ್. ಇದರ ಮೂಲಕ ಆಸ್ತಿಯ ಒಡೆತನದ ಇತಿಹಾಸವನ್ನು ಕಂಡುಹಿಡಿಯಬಹುದು. ಆಸ್ತಿಯನ್ನು ಕೊಲ್ಯಾಟರಲ್ ಅಂದರೆ ಮೇಲಾಧರವಾಗಿ ಮಾಡಿಲ್ಲ ಎಂದು ಈ ಪತ್ರ ಖಾತ್ರಿಪಡಿಸುತ್ತದೆ.
ಬ್ಯಾಂಕಿಂಗ್ ವ್ಯವಹಾರದಲ್ಲಿ ಸರ್ಚ್ ರಿಪೋರ್ಟ್ ಆಸ್ತಿಯ ಒಡೆತನದ ದಾಖಲೆ ಎಂದು ಮಾನ್ಯ ಮಾಡಲಾಗುತ್ತದೆ. ಈ ಪತ್ರ ಲಭ್ಯವಿಲ್ಲದ ಹೊರತು, ಬ್ಯಾಂಕುಗಳು ಗೃಹ ಸಾಲ ನೀಡುವುದಿಲ್ಲ. ಇದಲ್ಲದೆ, ನೀವು ಗೃಹ ಸಾಲವಿಲ್ಲದೆ ಮನೆ ನಿರ್ಮಿಸಲು ಪ್ರಯತ್ನಿಸಿದರೂ, ಈ ಪತ್ರವಿಲ್ಲದೆ ಮನೆಯ ಪ್ಲಾನ್ ಅಂಗೀಕೃತವಾಗುವುದಿಲ್ಲ. ಇನ್ನಿತರ ಸಮಸ್ಯೆಗಳನ್ನೂ ನೀವು ಎದುರಿಸಬಹುದು. ಈ ಪ್ರಾಪರ್ಟಿ ಚೈನ್ ನಿಮ್ಮ ಬಳಿ ಇದ್ದರೆ, ಆಸ್ತಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನೀವು ಸುಗಮವಾಗಿ ಮಾಡಬಹುದು. ಹಳೆಯ ಅಥವಾ ಕುಟುಂಬಕ್ಕೆ ಸೇರಿದ ಆಸ್ತಿಯಾದರೆ, ಹಿಂದಿನ 12 ವರ್ಷಗಳ ದಾಖಲೆ ಸಾಕು.
ಆಸ್ತಿಯನ್ನು, ಯಾವುದೇ ಕಾರಣಕ್ಕೂ ಅಡವಿಟ್ಟಿಲ್ಲ ಅಥವಾ ಆಧಾರವಾಗಿಟ್ಟಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ಈ ಪತ್ರ ನೀಡುವಂತೆ ಬ್ಯಾಂಕುಗಳು ಕೇಳುತ್ತವೆ.
ಇದು ಹೇಗೆ ದೊರೆಯುತ್ತದೆ?
ಈ ಪತ್ರ, ಆಸ್ತಿ ವಿಚಾರದಲ್ಲಿ ಬಹುಮುಖ್ಯವಾದರೆ, ಇದು ದೊರೆಯುವುದಾದರೂ ಹೇಗೆ? ಇದು ನಿಮ್ಮ ತಾಲೂಕಿನಲ್ಲಿ ದೊರೆಯುತ್ತದೆ. ಇದನ್ನು ಬೇಗ ಪಡೆಯಲು ನೀವು ವಕೀಲರ ನೆರವು ಪಡೆಯಬಹುದು. ವಕೀಲರಿಲ್ಲದೆಯೂ ನೀವು ಇದನ್ನು ಪಡೆಯಲು ಸಾಧ್ಯ. ನೋಂದಣಿ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿಗದಿತ ಫಾರಂ ಭರ್ತಿ ಮಾಡಿ ಸಲ್ಲಿಸುವ ಮೂಲಕ ಇದನ್ನು ಪಡೆಯಬಹುದು. ಇದಕ್ಕಾಗಿ ನೀವು ಶುಲ್ಕ ಪಾವತಿಸಬೇಕಿರುತ್ತದೆ. ಶುಲ್ಕದ ಪ್ರಮಾಣ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕೆಲವೊಂದು ರಾಜ್ಯದಲ್ಲಿ ಇದನ್ನು ಆನ್‌ಲೈನ್‌ನಲ್ಲಿ ಕೂಡ ನೀವು ಪಡೆಯಬಹುದು.
ಆನ್‌ಲೈನ್ ಪ್ರಕ್ರಿಯೆ ಹೇಗೆ?
ಈ ಸರ್ಚ್ ರಿಪೋರ್ಟ್ ಅಥವಾ ಋಣಭಾರ ಪತ್ರವನ್ನು ನಿಮ್ಮ ರಾಜ್ಯ ಆನ್‌ಲೈನ್‌ನಲ್ಲಿ ನೀಡುತ್ತಿದ್ದರೆ, ರಿಜಿಸ್ಟ್ರಾರ್ ಕಚೇರಿಯ ವೆಬ್‌ಸೈಟ್‌ನಲ್ಲಿ ನೀವು ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿಯಲ್ಲಿ ನೀವು, ನಿಮ್ಮ ತಾಲೂಕು, ಜಿಲ್ಲೆ ಮತ್ತು ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ನೀಡಬೇಕು. ಸಾಮಾನ್ಯವಾಗಿ ಒಂದು ವಾರದೊಳಗೆ ನಿಮಗೆ ಈ ವರದಿ ಕೈ ಸೇರುತ್ತದೆ. ಇದನ್ನು ಪಡೆಯಲು ನೀವು ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ಒಂದು ವಾರದೊಳಗೆ ಈ ವರದಿ ದೊರೆಯದಿದ್ದಲ್ಲಿ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು. ಹೊಸದಾಗಿ ಸೈಟ್ ಖರೀದಿಗೆ ಮುಂದಾಗಿರುವವರು ಈ ಸರ್ಚ ರಿಪೋರ್ಟ್ ಬಗ್ಗೆಯೂ ವಿಶೇಷ ಗಮನ ನೀಡಬೇಕು.


Click it and Unblock the Notifications