ಬೆಂಗಳೂರು, ಜುಲೈ 2: ಕಾನೂನು ಬದ್ಧವಾಗಿ ತೆರಿಗೆ ಉಳಿತಾಯ ಮಾಡಲು ಹಲವಾರು ದಾರಿಗಳಿವೆ. ನೀವೇನಾದರೂ ತೆರಿಗೆ ಉಳಿಸಲು ಬಯಸಿದರೆ ಡೊನೇಷನ್ ಕೊಡಬಹುದು. ಹೀಗೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ವಿನಾಯಿತಿ ಕ್ಲೇಮ್ ಮಾಡಬಹುದು. ಇದರಿಂದ ನಿಮ್ಮ ಟ್ಯಾಕ್ಸೆಬಲ್ ಇನ್ಕಮ್ ಕಡಿಮೆ ಆಗುತ್ತದೆ. ಇನ್ವೆಸ್ಟ್ಮೆಂಟ್ ಮತ್ತು ಡೊನೇಷನ್ ಎರಡರಲ್ಲೂ ಆದಾಯ ತೆರಿಗೆ ಉಳಿತಾಯ ಮಾಡಬಹುದು.
ಹಾಗಿದ್ದರೆ ಇನ್ವೆಸ್ಟ್ಮೆಂಟ್ ಮತ್ತು ಡೊನೇಷನ್ ಎರಡನ್ನೂ ಒಟ್ಟಿಗೆ ಮಾಡಬಹುದಾ? ಖಂಡಿತ ಮಾಡಬಹುದು. ಎಚ್ಡಿಎಫ್ಸಿ ಚಾರಿಟಿ ಫಂಡ್ ಫಾರ್ ಕ್ಯಾನ್ಸರ್ ಕ್ಯೂರ್ ಮ್ಯೂಚುಯಲ್ ಫಂಡ್ ಇಂಥ ಹೂಡಿಕೆಯ ಅವಕಾಶ ಮಾಡಿಕೊಡುತ್ತಿದೆ.

ಇಲ್ಲಿ ನಮಗೆ ಡಿವಿಡೆಂಡ್ ರೂಪದಲ್ಲಿ ನಿಮಗೆ ನಿಯಮಿತವಾಗಿ ರಿಟರ್ನ್ಸ್ ಸಿಗ್ತಾ ಇರುತ್ತದೆ. ಈ ಫಂಡ್ ಮೇಲೆ ಯಾವುದೇ ಫಂಡ್ ಹೌಸ್ ಶುಲ್ಕ ವಿಧಿಸಲ್ಲ ಅನ್ನೋದು ಗಮನಿಸಬೇಕಾದ ಸಂಗತಿ. ಇದರಲ್ಲಿ ಸಿಗುವ ರಿಟರ್ನ್ಸ್ ನ ಇಂತಿಷ್ಟು ಭಾಗವನ್ನ ನೀವು ಡೊನೇಟ್ ಮಾಡುವುಕ್ಕೂ ಆಯ್ಕೆ ಮಾಡಬಹುದು.
ಇದಕ್ಕಾಗಿ ನೀವು ಇನ್ಕಮ್ ಡಿಸ್ಟ್ರಿಬ್ಯೂಷನ್ ಕಮ್ ಕ್ಯಾಪಿಟಲ್ ವಿತ್ ಡ್ರಾಅಲ್ (ಐಡಿಸಿಡಬ್ಲ್ಯು) ಆಯ್ಕೆಯನ್ನು ಸೆಲೆಕ್ಟ್ ಮಾಡ್ಕೋಬೇಕು. ನಿಮ್ಮ ಗಳಿಕೆಯ ನಿರ್ದಿಷ್ಟ ಪಾಲನ್ನು ಭಾರತೀಯ ಕ್ಯಾನ್ಸರ್ ಸಂಸ್ಥೆಗೆ ದಾನ ಕೊಡಲಾಗುತ್ತದೆ. ಈ ಸಂಸ್ಥೆ ಈ ಹಣವನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸುತ್ತೆದೆ.
ಇಲ್ಲಿ ನಿಮಗೆ ಎರಡು ಆಯ್ಕೆಗಳು ಸಿಗುತ್ತವೆ. ನಿಮ್ಮ ಪ್ರಾಫಿಟ್ನ ಶೇಕಡ 50 ರಷ್ಟನ್ನು ಅಥವಾ ಶೇಕಡ 75 ರಷ್ಟನ್ನ ಡೊನೇಟ್ ಮಾಡಬಹುದು. ಈ ರೀತಿಯ ಹೂಡಿಕೆ ಮೂಲಕ, ನೀವು ನಿಮ್ಮ ದಾನದ ಉದ್ದೇಶವನ್ನೂ ಕೂಡ ಈಡೇರಿಸಿಕೊಳ್ಳಬಹುದು ಮತ್ತು ಡೊನೇಷನ್ ಮೇಲೆ ಶೇಕಡ 50ರಷ್ಟು ತೆರಿಗೆ ವಿನಾಯಿತಿಯ ಲಾಭ ಸಹ ಪಡೆಯಬಹುದು.
ಪ್ರತಿ ವರ್ಷ, ಅನೇಕರು ತೆರಿಗೆ ಉಳಿತಾಯಕ್ಕಾಗಿ ಚಾರಿಟೆಬಲ್ ಸಂಸ್ಥೆಗಳಿಗೆ ದಾನ ಮಾಡ್ತಾರೆ. ಅಂತಹವರಿಗೆ ದಾನದ ಜೊತೆಗೆ ಕಡಿಮೆ ರಿಸ್ಕ್ ಇರೋ ಹೂಡಿಕೆ ಆಯ್ಕೆ ಕೂಡ ದೊರೆಯುವಂತಿದ್ದರೆ ಇಂಥ ಅವಕಾಶ ಯಾಕೆ ಮಿಸ್ ಮಾಡಿಕೊಳ್ಳಬೇಕು ಅಲ್ಲವೆ?


Click it and Unblock the Notifications