ಈ ಉಳಿತಾಯದ ಸೂತ್ರ ಗೊತ್ತಿದ್ದರೆ ಹಣದ ಕೊರತೆಯೇ ಆಗಲ್ಲ!

ಬೆಂಗಳೂರು, ಜೂನ್‌ 30: ಕಳೆದ 15 ವರ್ಷಗಳಿಂದ ನಿರಂತರವಾಗಿ ದುಡಿದುಕೊಂಡು ಬಂದಿದ್ದೇನೆ. ಆದರೆ ತುರ್ತಾಗಿ ಹಣ ಬೇಕೆಂದರೂ ಸಾಲ ಮಾಡಬೇಕಾದ ಸ್ಥಿತಿ ಇದೆ. ದುಡಿದ ಹಣವೆಲ್ಲ ಎಲ್ಲಿ ಖರ್ಚಾಗುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ಮಾತನ್ನು ಹಲವರು ಹೇಳುವುದನ್ನು ಕೇಳುತ್ತಿರುತ್ತೇವೆ. ಹಾಗಿದ್ದರೆ ಯಾಕೆ ಗೀಗೆ?

ನಿಮ್ಮ ಮೊದಲ 5 ರಿಂದ 6 ತಿಂಗಳ ಸಂಬಳವನ್ನು ನೀವು ಇಷ್ಟಪಡುವ ರೀತಿ ಖರ್ಚು ಮಾಡಬಹುದು. ಇದಾದ ಬಳಿಕ, ನಿಯಮಿತವಾಗಿ ಹೂಡಿಕೆ ಮತ್ತು ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದಕ್ಕೆ ನೀವು, ನಿಮ್ಮ ಸಂಬಳದ ಎಷ್ಟು ಭಾಗವನ್ನ ಉಳಿತಾಯಕ್ಕೆ ಮೀಸಲಿಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

ಈ ಉಳಿತಾಯದ ಸೂತ್ರ ಗೊತ್ತಿದ್ದರೆ ಹಣದ ಕೊರತೆಯೇ ಆಗಲ್ಲ!

ಈಗಷ್ಟೇ ಕೆಲಸಕ್ಕೆ ಸೇರಿರುವ ಬಹುತೇಕರು, ತಮಗೆ ಏನೂ ಜವಾಬ್ದಾರಿ ಇಲ್ಲದೆ ಇರುವುದರಿಂದ ಯಾಕೆ ಉಳಿತಾಯ ಮಾಡಬೇಕು ಅಂತಾ ಯೋಚನೆ ಮಾಡುತ್ತಾರೆ. ಆದರೆ ಉಳಿತಾಯ ಮಾಡಿದರೆ ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಮಟ್ಟದ ಜೀವನ ನಡೆಸಬಹುದು. ನಿಮ್ಮ ಮಾಸಿಕ ವೇತನದಲ್ಲಿ, ಎಷ್ಟು ಭಾಗವನ್ನ ಉಳಿತಾಯಕ್ಕೆ ಮೀಸಲಿಡಬೇಕು ಎನ್ನುವುದನ್ನು ನಿರ್ಧರಿಸಲು, ಮೊದಲು, ನಿಮ್ಮ ವೇತನವನ್ನ ಮೂರು ಭಾಗಗಳಾಗಿ ವಿಂಗಡಿಸಬೇಕು. ಈ ಮೂರು ವರ್ಗಗಳೆಂದರೆ, ಅಗತ್ಯಗಳು, ಬೇಕುಗಳು ಮತ್ತು ಉಳಿತಾಯಗಳು. ಪರ್ಸನಲ್‌ ಫೈನ್ಯಾನ್ಸ್‌ ನ ಜನಪ್ರಿಯ ನಿಯಮವೇ 50:30:20 ರೂಲ್.‌ ಈ ನಿಯಮ, ನೀವು ನಿಮ್ಮ ಮಾಸಿಕ ಬಜೆಟ್‌ ನಿರ್ವಹಿಸಲು ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮಲ್ಲಿ ನಿಯಮಿತ ಹೂಡಿಕೆ ಅಭ್ಯಾಸವನ್ನ ರೂಢಿಸಿಕೊಳ್ಳುವುದಕ್ಕೂ ಸಹಕರಿಸುತ್ತದೆ.

ನಿಮ್ಮ ವೇತನದ ಶೇಕಡ 50 ರಷ್ಟನ್ನ ಅಗತ್ಯ ವೆಚ್ಚಗಳಿಗಾಗಿ ಎತ್ತಿಡಿ.. ಅಂದರೆ ಮನೆ ಬಾಡಿಗೆ, ಮನೆ ಸಾಲದ ಇಎಂಐ, ವಿದ್ಯುತ್‌ ಬಿಲ್‌, ಮೇಂಟೆನೆನ್ಸ್‌ ಬಿಲ್‌, ದಿನಸಿ ಇತ್ಯಾದಿಗಳು ಅಗತ್ಯ ವೆಚ್ಚಗಳು. ಈ ವೆಚ್ಚಗಳು ನಿಮ್ಮ ದೈನಂದಿನ ಜೀವನ ಸಾಗಿಸುವುದಕ್ಕೆ ತುಂಬಾನೇ ಮುಖ್ಯ. ಇದರಲ್ಲಿ ಯಾವುದೇ ಕಡಿತ ಮಾಡೋಕೆ ಸಾಧ್ಯ ಇಲ್ಲ. ಹಾಗೇ ನಿಮ್ಮ ವೇತನದ ಇನ್ನೊಂದು ಭಾಗ, ಅತ್ಯಗತ್ಯ ಅಲ್ಲದೇ ಹೋದರೂ ಬೇಕಾದ ಖರ್ಚುಗಳಿಗೆ ಹೋಗುತ್ತದೆ. ಅಂದರೆ ಈ ವೆಚ್ಚಗಳು ತೀರಾ ಅಗತ್ಯ ಇಲ್ಲದೆ ಹೋದರೂ ನಿಮ್ಮ ಜೀವನ ಶೈಲಿ ನಿರ್ವಹಿಸುವುದಕ್ಕೆ ಅಥವಾ ಮೋಜಿಗೆ ಖರ್ಚು ಮಾಡಲೇಬೇಕಾಗತ್ತದೆ.

ಉದಾಹರಣೆಗೆ, ರೆಸ್ಟೊರೆಂಟ್‌ ನಲ್ಲಿ ಊಟ ಮಾಡುವುದು, ಸಿನಿಮಾ ವೀಕ್ಷಣೆ, ಪ್ರಯಾಣ, ವಾಚ್‌ ಅಥವಾ ಮೊಬೈಲ್‌ ಫೋನ್‌ ನಂತಹ ದುಬಾರಿ ವಸ್ತು ಖರೀದಿ ಅಥವಾ ಜಿಮ್‌, ಯೋಗ ತರಗತಿಗೆ ಸೇರೋದು ಇತ್ಯಾದಿ ಸೇರಿಕೊಳ್ಳುತ್ತವೆ. ತೀರಾ ಅಗತ್ಯ ಇಲ್ಲದೆ ಇದ್ದರೂ ಇವುಗಳಿಗೂ ಖರ್ಚು ಮಾಡಬೇಕಾಗಿ ಬರತ್ತದೆ. ಇಂತಹ ಖರ್ಚುಗಳಿಗಾಗಿ ನಿಮ್ಮ ವೇತನದ ಶೇಕಡ 30 ರಷ್ಟನ್ನ ಮೀಸಲಿಡಬಹುದು. ಆಗ ನೀವು ಬಯಸಿದ ಜೀವನಶೈಲಿ ಆನಂದಿಸುವ ಜತೆಗೆ ಹಣಕಾಸು ಶಿಸ್ತನ್ನೂ ಕಾಪಾಡಿಕೊಳ್ಳಬಹುದು. ನಿಮ್ಮ ಹೂಡಿಕೆಗಳು ಮತ್ತು ಉಳಿತಾಯಕ್ಕಾಗಿ ನಿಮ್ಮ ವೇತನದ ಕನಿಷ್ಠ ಶೇಕಡ 20 ರಷ್ಟನ್ನು ಮೀಸಲಿಡಬೇಕು. ಸಾಧ್ಯವಾದರೆ, ನಿಮ್ಮ ಅನಗತ್ಯ ವೆಚ್ಚಗಳನ್ನ ಕಡಿತ ಮಾಡಿ, ನಿಮಗೆ ಬೇಕಾದವುಗಳಿಗೆ ಮಾತ್ರ ಖರ್ಚುಮಾಡಿ ನಿಮ್ಮ ಉಳಿತಾಯದ ಪ್ರಮಾಣವನ್ನು ಶೇಕಡ 30 ಕ್ಕೆ ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ಹಣಕಾಸು ಸ್ಥಿತಿ ಸದೃಢಗೊಳ್ಳುತ್ತದೆ.

ನಿಮ್ಮ ವೇತನ 30 ಸಾವಿರ ರೂಪಾಯಿ ಎಂದು ಭಾವಿಸೋಣ. ಈ ಪೈಕಿ ಶೇಕಡ 50 ರಷ್ಟು ಅಂದ್ರೆ 15 ಸಾವಿರ ರೂಪಾಯಿ, ಅವರ ಅಗತ್ಯದ ಖರ್ಚುಗಳಿಗಾಗಿ, ಹಾಗೇ ಶೇಕಡ 30 ರಷ್ಟು ಅನಗತ್ಯ ವೆಚ್ಚಗಳಿಗೆ ಅಂದ್ರೆ 9 ಸಾವಿರ ರೂಪಾಯಿ ಅಗತ್ಯವಿದ್ದದಿದ್ದರೂ ಮಾಡಬೇಕಾದ ಖರ್ಚುಗಳಿಗೆ ಮೀಸಲಿಡಬೇಕಾಗತ್ತೆ. ಈಗ ಉಳಿಯುವುದು ಶೇಕಡ 20 ರಷ್ಟು ಅಂದರೆ, 6 ಸಾವಿರ ರೂಪಾಯಿ. ಈ ಹಣವನ್ನು ಉಳಿತಾಯ ಮಾಡಲೇಬೇಕು. ಎಲ್ಲಿ ಹೂಡಿಕೆ ಮಾಡಬೇಕು? ಯಾವ ಸ್ಕೀಮ್ ನಲ್ಲಿ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಮ್ಯೂಚುವಲ್ ಫಂಡ್, ಎಸ್ ಐಪಿ, ಎಫ್ ಡಿ ಸೇರಿದಂತೆ ಅನೇಕ ಮಾರ್ಗಗಳಿದ್ದು ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಆಧರಿಸಿಕೊಂಡು ತೀರ್ಮಾನ ಮಾಡಿಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+