ಬೆಂಗಳೂರು, ಆಗಸ್ಟ್ 31: ಹಳೆ ಪಿಂಚಣಿ ವ್ಯಸ್ಥೆ ಮತ್ತು ಹೊಸ ಪಿಂಚಣಿ ವ್ಯವಸ್ಥೆ ಬಗ್ಗೆ ಎದ್ದಿರುವ ಗೊಂದಲಳು ಹಾಗೆ ಇವೆ. ಇದೆಲ್ಲದರ ನಡುವೆಯೇ ಕೇಂದ್ರ ಸರ್ಕಾರ ಖಚಿತ ಕನಿಷ್ಠ ಪಿಂಚಣಿಯನ್ನು ನೀಡುವ ಏಕೀಕೃತ ಪಿಂಚಣಿ ವ್ಯವಸ್ಥೆ ಅಥವಾ ಯುನಿಫೈಡ್ ಪೆನ್ಶನ್ ಸ್ಕೀಮ್ (ಯುಪಿಎಸ್) ಪ್ರಕಟಿಸಿದೆ. ಹಾಗಿದ್ದರೆ ಈ ಯೋಜನೆ ಈಗಿರುವ ಯೋಜನೆಗಳಿಗಿಂತ ಹೇಗೆ ಭಿನ್ನವಾಗಿದೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಸರ್ಕಾರಿ ಉದ್ಯೋಗಿಗಳಿಗೆ ಖಚಿತ ಪಿಂಚಣಿ, ಕುಟುಂಬ ಪಿಂಚಣಿ ನೀಡುವುದಕ್ಕೆ ಈ ಯೋಜನೆಯಲ್ಲಿ ಮೊದ ಆದ್ಯತೆ ನೀಡಲಾಗಿದೆ. ಈ ಯೋಜನೆಯು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನ ಒದಗಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ಅನಾವರಣ ಮಾಡುವ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು ಇದು ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭಗಳನ್ನು ಒದಗಿಸುವ ಗುರಿ ಹೊಂದಿದೆ. ನೂತನ ಪಿಂಚಣಿ ಯೋಜನೆಯು 2025ರ ಏಪ್ರಿಲ್ 1ರಿಂದ ಅಸ್ತಿತ್ವಕ್ಕೆ ಬರಲಿದೆ. ಹಾಗಿದ್ದರೆ ಈ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ಒಂದಿಷ್ಟು ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಆಯ್ಕೆ ಕಡ್ಡಾಯ ಏನಿಲ್ಲ-ಖಚಿತ ಪಿಂಚಣಿ:
ಯುಪಿಎಸ್ ಆಯ್ಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿರುವುದಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಮತ್ತು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ನಡುವೆ ಆಯ್ಕೆ ಮಾಡಲು ಉದ್ಯೋಗಿಗಳಿಗೆ ಅವಕಾಶ ಇರಲಿದೆ. ಈ ಯೋಜನೆಯು, ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರು ನಿವೃತ್ತಿಗೂ ಕೊನೆಯ 12 ತಿಂಗಳ ಮುನ್ನ ಪಡೆಯುವ ಸರಾಸರಿ ಮೂಲ ವೇತನದ ಶೇ. 50ರಷ್ಟು ಮೊತ್ತವನ್ನು ಖಾತರಿಪಡಿಸುತ್ತದೆ.
ಕುಟುಂಬಕ್ಕೆ ಪಿಂಚಣಿ: ಉದ್ಯೋಗಿಯ ಮರಣದ ಸನ್ನಿವೇಶಗಳಲ್ಲಿ, ಪಿಂಚಣಿದಾರನ ಕುಟುಂಬವು ಅವರ ಸಾವಿನ ಸಮಯದಲ್ಲಿ ಶೇ. 60ರಷ್ಟು ಪಿಂಚಣಿ ಪಡೆಯಲಿದೆ. ಇದಕ್ಕೆ ಒಂದಿಷ್ಟು ನಿಯಮಗಳನ್ನು ತಿಳಿಸಲಾಗಿದೆ.
ಕನಿಷ್ಠ ಭರವಸೆ ಪಿಂಚಣಿ: ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಮಾಸಿಕ 10 ಸಾವಿರ ರೂ ಪಿಂಚಣಿಯ ಭರವಸೆಯನ್ನು ಈ ಯೋಜನೆ ಒದಗಿಸುತ್ತದೆ. ಅಂದರೆ ನಿವೃತ್ತಿ ನಂತರ ಕನಿಷ್ಠ 10 ಸಾವಿರ ಪಿಂಚಣಿಯನ್ನು ಪಡೆದುಕೊಳ್ಳುವುದು ಫಿಕ್ಸ್ ಆಗಿರುತ್ತದೆ.
ಸರ್ಕಾರದ ಕೊಡುಗೆ ಪಾಲು ಏರಿಕೆ:
ಪ್ರಸ್ತುತ ಇರುವ ಪಿಂಚಣಿ ಯೋಜನೆ ಅನ್ವಯ, ಉದ್ಯೋಗಿಗಳು ತಮ್ಮ ವೇತನದ ಶೇ 10ರಷ್ಟು ಪಾಲನ್ನು ನೀಡಿದರೆ, ಕೇಂದ್ರ ಸರ್ಕಾರವು ಶೇ 14ರಷ್ಟು ಪಾಲು ನೀಡುತ್ತಿದೆ. ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಇದನ್ನು ಶೇ18ಕ್ಕೆ ಹೆಚ್ಚಿಸಲಾಗುತ್ತದೆ.
ಈ ಯೋಜನೆ ಅಡಿ ನಿವೃತ್ತಿ ಸಂದರ್ಭದಲ್ಲಿ, ಪ್ರತಿ ಆರು ತಿಂಗಳು ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಗ್ರಾಚುಯಿಟಿ ಮತ್ತು ಮಾಸಿಕ ವರಮಾನದ (ಸಂಬಳ+ ತುಟ್ಟಿಭತ್ಯೆ) ಹತ್ತನೇ ಒಂದು ಭಾಗದ ಜತೆಗೆ ಒಟ್ಟು ಮೊತ್ತವನ್ನು ನಿವೃತ್ತಿ ದಿನಾಂಕದಂದು ಪಾವತಿಸಲಾಗುತ್ತದೆ
ಯುಪಿಎಸ್ ಯೋಜನೆಯಿಂದ ಇಂಡೆಕ್ಸೇಶನ್ ಲಾಭ: ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸರ್ಕಾರಿ ನೌಕರರಿಗೆ ಸ್ಥಿರ ಪಿಂಚಣಿ ಖಾತ್ರಿಪಡಿಸುವುದು ಅಲ್ಲದೆ ಯುಪಿಎಸ್ ಯೋಜನೆಯಿಂದ ಇಂಡೆಕ್ಸೇಶನ್ ಲಾಭ ನೀಡುತ್ತದೆ. ಹಳೆ ಪಿಂಚಣಿ ಸ್ಕೀಮ್ ನಲ್ಲಿದ್ದ ಇಂಡೆಕ್ಸೇಶನ್ ಲಾಭವನ್ನು ಇಲ್ಲಿ ಪರಿಚಯಿಸಲಾಗಿದೆ. ಹೊಸ ಪಿಂಚಣಿ ಯೋಜನೆಯಲ್ಲಿ ಈ ಅಂಶ ತಗೆದುಹಾಕಲಾಗಿತ್ತು. ಇಂಡೆಕ್ಸೇಶನ್ ಪರಿಣಾಮ ಹಣದುಬ್ಬರ ದರಕ್ಕೆ ಅನುಗುಣವಾಗಿ ಸರ್ಕಾರಿ ನೌಕರರ ಪಿಂಚಣಿ ಮೊತ್ತ ಏರಿಕೆಯಾಗುತ್ತಿರುತ್ತದೆ. ಅಂದರೆ ಯಾವ ರೀತಿ ಬೆಲೆ ಏರಿಕೆ ಸಾಗುತ್ತದೆಯೋ ಆ ರೀತಿ ಪಿಂಚಣಿ ಪ್ರಮಾಣದಲ್ಲಿಯೂ ಏರಿಕೆ ಕಾಣುತ್ತದೆ ಎಂದು ಸರಳವಾಗಿ ಹೇಳಬಹುದು.
ಈ ಹೊಸ ಯೋಜನೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 6250 ಕೋಟಿ ಹೊರೆ ಬೀಳಲಿದೆ. 23 ಲಕ್ಷ ಜನ ನೌಕರರಿಗೆ ನೆರವಾಗಲಿದ್ದು ಸರ್ಕಾರ ನೀಡುತ್ತಿದ್ದ ಕೊಡುಗೆಯನ್ನು ಶೇ. 14 ರಿಂದ ಶೇ. 18.5ಕ್ಕೆ ಏರಿಕೆ ಮಾಡಲಾಗುತ್ತಿದೆ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications