ಆಕ್ಸಿಸ್ ಬ್ಯಾಂಕ್ ಬುಧವಾರ, ಮಾರ್ಚ್ 30 ರಂದು 12,325 ಕೋಟಿ ರೂ.ಗೆ ಯುಎಸ್ ಮೂಲದ ಸಿಟಿಯ ಗ್ರಾಹಕ ವ್ಯವಹಾರವನ್ನು ಭಾರತದಲ್ಲಿ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಉಭಯ ಬ್ಯಾಂಕ್‌ಗಳು ಮಾರಾಟಕ್ಕಾಗಿ ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ. ಸಿಟಿ ಬ್ಯಾಂಕ್ ಅನ್ನು ಆಕ್ಸಿಸ್ ಬ್ಯಾಂಕ್ ವಿಲೀನಪಡಿಸಿಕೊಂಡ ಬಳಿಕ ಸಿಟಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳು ಬಳಕೆ ಮಾಡಬಹುದೇ ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಸುಮಾರು ಒಂಬತ್ತು ತಿಂಗಳುಗಳಲ್ಲಿ ಸಿಟಿ ಬ್ಯಾಂಕ್ ಅನ್ನು ಆಕ್ಸಿಸ್ ಬ್ಯಾಂಕ್ ನಿಯಂತ್ರಣಕ್ಕೆ ಪಡೆಯಲಿದೆ. ಸ್ವಾಧೀನಪಡಿಸಿಕೊಂಡ ಬಳಿಕ ಸಿಟಿಬ್ಯಾಂಕ್ ಗ್ರಾಹಕರು ಈ ಹಿಂದೆ ಪಡೆಯುತ್ತಿದ್ದ ಎಲ್ಲ ಸವಲತ್ತುಗಳು ಮತ್ತು ಕೊಡುಗೆಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಆಕ್ಸಿಸ್ ಬ್ಯಾಂಕ್ ಎಂಡಿ ಅಮಿತಾಭ್ ಚೌಧರಿ ಬುಧವಾರ ಹೇಳಿದ್ದಾರೆ.
"ಹಲವಾರು ವರ್ಷಗಳಿಂದ ಆಕ್ಸಿಸ್ ಬ್ಯಾಂಕ್ ಬೆಳವಣಿಗೆ ಕಾಣುತ್ತಿದೆ. ಉತ್ತಮ ಬೆಳವಣಿಗೆಯನ್ನು ಕಂಡಿದೆ. ಆದರೆ ನಮ್ಮ ಆಕಾಂಕ್ಷೆಗಳು ದೊಡ್ಡದಾಗಿದೆ. ಈ ಒಪ್ಪಂದವು ನಮ್ಮ ಕೆಲವು ಗೆಳೆಯರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮವಾಗಿದೆ," ಎಂದು ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮಿತಾಬ್ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.

ವಿಲೀನದಿಂದ ಸಿಟಿ ಬ್ಯಾಂಕ್ ಉದ್ಯೋಗಿಗಳ ಮೇಲೆ ಬೀರುವ ಪರಿಣಾಮವೇನು?
ಸಿಟಿ ಬ್ಯಾಂಕ್ ಅನ್ನು ಆಕ್ಸಿಸ್ ಬ್ಯಾಂಕ್ ಜೊತೆ ವಿಲೀನ ಮಾಡುವುದರಿಂದಾಗಿ ಸಿಟಿ ಬ್ಯಾಂಕ್‌ನ ಉದ್ಯೋಗಿಗಳ ಮೇಲೆ ಹಲವಾರು ಪರಿಣಾಮಗಳು ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮಿತಾಬ್ ಚೌಧರಿ, "ಸಿಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಎಲ್ಲಾ 3,600 ಉದ್ಯೋಗಿಗಳನ್ನು ಕೂಡಾ ಉಳಿಸಿಕೊಳ್ಳಲು ಆಕ್ಸಿಸ್ ಬ್ಯಾಂಕ್ ಉತ್ಸುಕವಾಗಿದೆ. ಉದ್ಯೋಗಿಗಳ ಪ್ರಸ್ತುತ ವೇತನಕ್ಕೆ ಸಮಾನವಾಗಿ ಅವರಿಗೆ ವೇತನವನ್ನು ಮುಂದುವರಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಉದ್ಯೋಗಿಗಳಿಗೆ ಸಮಾನತೆಯಿಂದ ಪಾವತಿಗಳನ್ನು ಹೆಚ್ಚಳ ಮಾಡಲಾಗುತ್ತದೆ," ಎಂದು ತಿಳಿಸಿದರು.

ವೀಲಿನದಿಂದ ಸಿಟಿ ಬ್ಯಾಂಕ್ ಗ್ರಾಹಕರ ಮೇಲೆ ಏನು ಪರಿಣಾಮ?
ಸಿಟಿ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ವಿಲೀನ ಆಗುವುದರಿಂದಾಗಿ ಗ್ರಾಹಕರ ಮೇಲೆಯೂ ಪರಿಣಾಮ ಬೀರಲಿದೆ. ಈ ಬಗ್ಗೆಯೂ ಅಮಿತಾಬ್ ಚೌಧರಿ ಮಾಹಿತಿ ನೀಡಿದ್ದಾರೆ. "ಆಕ್ಸಿಸ್ ಬ್ಯಾಂಕ್‌ನಿಂದ ಸೇವೆ ಸಲ್ಲಿಸಲು ಅವರು ಒಪ್ಪಿಗೆ ನೀಡಿದರೆ ಎಲ್ಲಾ ಸವಲತ್ತುಗಳು, ಲಾಯಲ್ಟಿ ಪಾಯಿಂಟ್‌ಗಳು ಮತ್ತು ಸೇವೆಗಳು ಒಂದೇ ಆಗಿರುತ್ತವೆ. ಪ್ರಮುಖ ಸ್ಥಳಗಳಲ್ಲಿರುವ ಎಲ್ಲಾ 21 ಶಾಖೆಗಳನ್ನು ಉಳಿಸಿಕೊಳ್ಳಲಾಗುವುದು," ಎಂದು ಚೌಧರಿ ಹೇಳಿದರು.


Click it and Unblock the Notifications