ನಿಮಗೆ ಹೋಂ ಲೋನ್ ಸಿಗುತ್ತಿಲ್ವಾ? ಪರಿಹಾರ ಇಲ್ಲಿದೆ!

ಬೆಂಗಳೂರು, ಜುಲೈ 2: ಕರಕುಶಲ ವಸ್ತುಗಳ ಸ್ವಯಂ ಉದ್ಯೋಗ ಮಾಡಿಕೊಂಡಿರುವವರಿಗೆ, ಸಣ್ಣ ಗುಡಿ ಕೈಗಾರಿಕೆ ನಡೆಸಿಕೊಂಡು ಬಂದವವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆಯೊಂದನ್ನು ಕಟ್ಟಿಕೊಳ್ಳಬೇಕು ಅನ್ನೋ ಆಸೆ ಇರುತ್ತದೆ ಅಲ್ಲವೆ. ಆದರೆ ಈ ರೀತಿ ಸ್ವಯಂ ಉದ್ಯೋಗ ಮಾಡಿಕೊಂಡು ಬಂದವರು ಹೋಂ ಲೋನ್ ಪಡೆಯಲು ಬ್ಯಾಂಕ್ ಗೆ ಅಲೆದಾಡಿ ಅಲೆದಾಡಿ ಸುಸ್ತಾಗಿ ಹೋಗಿರುವ ಅನೇಕ ಉದಾಹರಣೆಗಳಿವೆ. ಸಾಲ ಪಡೆದುಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ.

ವೇತನ ಪಡೆಯುವಂತಹ ಜಾಬ್ ನಿಮ್ಮ ಬಳಿ ಇಲ್ಲದೆ ಇರೋದೆ ದೊಡ್ಡ ಸಮಸ್ಯೆಯಾಗಿದೆಯಾ? ಇದೇ ಕಾರಣಕ್ಕೆ ಬ್ಯಾಂಕ್ ಸಾಲ ಕೊಡಲು ಹಿಂಜರೆಯುತ್ತಿವೆಯಾ? ಬ್ಯಾಂಕ್‌ಗಳು ಸಾಮಾನ್ಯವಾಗಿ ಸ್ವಯಂ ಉದ್ಯೋಗ ನಡೆಸಿಕೊಂಡು ಬಂದವರಿಗೆ ಸಾಲ ನೀಡುವುದರಿಂದ ಹಿಂದೆ ಸರಿಯುತ್ತವೆ. ಇದಕ್ಕೆ ಕಾರಣಗಳಿವೆ. ನಿಮಗೆ ರೆಗ್ಯೂಲರ್ ಇನ್ ಕಂ ಇಲ್ಲ. ರೆಗ್ಯೂಲರ್ ಜಾಬ್ ಇಲ್ಲ. ಅನ್ನೋದು ಒಂದು ಕಾರಣವಾಗುತ್ತದೆ. ಹಾಗಿದ್ದರೆ ನೀವು ಸ್ವಯಂ ಉದ್ಯೋಗಿಯಾಗಿದ್ದರೆ ಹೋಂ ಲೋನ್ ಪಡೆಯಲು ಮಾರ್ಗಗಳಿವೆಯೇ?

ನಿಮಗೆ ಹೋಂ ಲೋನ್ ಸಿಗುತ್ತಿಲ್ವಾ? ಪರಿಹಾರ ಇಲ್ಲಿದೆ!

ಸಾಮಾನ್ಯವಾಗಿ ಬ್ಯಾಂಕ್‌ಗಳು ಅಥವಾ NBFCಗಳು ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡ್ತವೆ. ಆದ್ದರಿಂದ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿ ಸಲ್ಲಿಕೆ ಮಾಡುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ. ಸ್ಯಾಲರಿ ಪಡೆಯುವ ವ್ಯಕ್ತಿಗಿಂತ ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ ಕಡಿಮೆ ಇರೋ ಕಾರಣಕ್ಕೆ ಹೋಂ ಲೋನ್ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ.

ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುವ ಮೂಲಕ, ತಮ್ಮ ಸಾಲವನ್ನು ಜವಾಬ್ದಾರಿಯುತವಾಗಿ ಪಾವತಿಸುವ ಮೂಲಕ ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಲು ಸಾಧ್ಯ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದಿದ್ದರೆ ಸಾಲಕ್ಕೆ ಒಬ್ಬ ಗ್ಯಾರಂಟರ್ ಅಥವಾ ಶ್ಯೂರಿಟಿಯನ್ನು ನೀಡಬಹುದು. ಇನ್ನೊಂದು ಆಯ್ಕೆ ಎಂದರೆ ದೊಡ್ಡ ಮೊತ್ತದ ಡೌನ್ ಪೇಮೆಂಟ್ ಪಾವತಿ ಮಾಡಿಯೂ ಸಾಲ ಪಡೆದುಕೊಳ್ಳಬಹುದು. ದೊಡ್ಡ ಮೊತ್ತದ ಡೌನ್ ಪೇಮೆಂಟ್ ನಿಮ್ಮ ಹಣಕಾಸಿನ ಸ್ಥಿರತೆಯನ್ನು ಬ್ಯಾಂಕ್ ಗೆ ತೋರಿಸುತ್ತದೆ ಇದಲ್ಲದೆ ಲೋನ್ ಟು ವ್ಯಾಲ್ಯೂ ರೆಶಿಯೋ ಅಂದರೆ ನೀವು ಮುಂದೆ ಮರುಪಾವತಿ ಮಾಡಬೇಕಾದ ಸಾಲದ ಮೊತ್ತ ಕಡಿಮೆ ಮಾಡುತ್ತದೆ.

ಸ್ವಯಂ ಉದ್ಯೋಗಿಗಳು ತಮ್ಮ ವ್ಯಾಪಾರ ವಹಿವಾಟಿನಿಂದಲೇ ಆದಾಯವನ್ನು ತೋರಿಸಬೇಕು. ಅಂದರೆ ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ದಾಖಲೆ ಹಾಗೂ ಫೈನಾಶಿಯಲ್ ಸ್ಟೇಟ್ ಮೆಂಟ್ ಗಳನ್ನು ನೀಡಬೇಕಾಗುತ್ತದೆ. ಇದಲ್ಲದೆ ತಮ್ಮ ವ್ಯಾಪಾರ-ವಹಿವಾಟಿನ ನಿಖರವಾದ ಮತ್ತು ಅಪ್ ಡೇಟೇಡ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕಾಗುತ್ತದೆ.

ನಿಮಗೆ ಸಾಲವನ್ನು ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು, ಬ್ಯಾಂಕ್ ಅಥವಾ NBFC ಕಳೆದ 2-3 ವರ್ಷಗಳ ನಿಮ್ಮ ವ್ಯಾಪಾರ-ವಹಿವಾಟು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಆಧಾರದಲ್ಲಿ ನಿರ್ಣಯ ತೆಗೆದುಕೊಳ್ಳಬಹುದು. ನಿಮ್ಮ ಬಿಸಿನಸ್ ಎಷ್ಟು ಹಳೆಯದು ಎಂಬುದನ್ನು ಲೆಕ್ಕ ಹಾಕಲು ಪ್ರೂಫ್ ರೀತಿ ಬ್ಯಾಂಕ್ ಕೆಲವು ಸಂದರ್ಭಗಳಲ್ಲಿ ಲೈಸೆನ್ಸ್,, ನೋಂದಣಿ ಮತ್ತು ಕ್ಲೈಂಟ್ ಕಾಂಟಾಕ್ಟ್ ಗಳನ್ನು ಕೇಳಬಹುದು.

ಬಿಸಿನಸ್ ನಿಂದ ಸ್ಟೇಬಲ್ ಇನ್ ಕಂ ಹೊಂದಿರುವವರಿಗೆ ಸಾಲ ನೀಡುವವರು ಆದ್ಯತೆ ನೀಡುತ್ತಾರೆ. ಸಾಲವನ್ನು ನೀಡುವ ಮೊದಲು ನಿಮ್ಮ ಬಳಿ ಸಾಕಷ್ಟು ನಗದು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಬ್ಯಾಂಕ್‌ಗಳು ಪರಿಶೀಲಿಸುತ್ತವೆ. ಇದು ಬ್ಯಾಂಕ್ ಗೊಂದು ಸುರಕ್ಷತೆಯ ಭದ್ರತೆ ನೀಡುತ್ತದೆ. ಅಂದ್ರೆ ಡೆಟ್ ಟು ಇನ್ ಕಂ ರೇಶ್ಯೂ ಕಡಿಮೆ ಇರಬೇಕು. ಅಂದರೆ ತಿಂಗಳ ಆದಾಯದಲ್ಲಿ ಸಾಲ ಮರುಪಾವತಿಗೆ ವೆಚ್ಚವಾಗುತ್ತಿರುವ ಹಣದ ಪ್ರಮಾಣ ಕಡಿಮೆ ಇರಬೇಕು. ಸಾಲ ಮರುಪಾವತಿಗೆ ಕಡಿಮೆ ಹಣ ವೆಚ್ಚವಾಗುತ್ತಿದ್ದರೆ ಹೊಸ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಟ್ಟಾರೆಯಾಗಿ ಹೇಳಬೇಕು ಅಂದ್ರೆ ಸ್ವಯಂ ಉದ್ಯೋಗಿಗಳು ತಮ್ಮ ಉತ್ತಮ ಕ್ರೆಡಿಟ್ ಹಿಸ್ಟರಿ ಕ್ರಿಯೆಟ್ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬೇಕು. ಈಗಾಗಲೇ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಅಥವಾ ಬೇರೆ ಯಾವುದೇ ರೀತಿಯ ಸಾಲವಿದ್ದರೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿಕೊಂಡು ಬನ್ನಿ. ನಿಮ್ಮ ಬಿಸಿನಸ್ ಗೆ ಸಂಬಂಧಿಸಿದ ಸಕಲ ಡಾಕ್ಯೂಮೆಂಟ್ ಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ನೀವು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ಬ್ಯಾಂಕ್‌ಗೆ ಸರಿಯಾದ ಮಾಹಿತಿ ನೀಡಿ. ಇದೆಲ್ಲದರ ಪರಿಣಾಮ ನೀವು ಸ್ವಯಂ ಉದ್ಯೋಗಿ ಆಗಿದ್ದರೂ ದೊಡ್ಡ ಮೊತ್ತದ ಸಾಲ ಪಡೆದುಕೊಳ್ಳಲು ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+