ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಿಂತೆಗೆದುಕೊಂಡಿದೆ. 2016 ರ ನೋಟು ಅಮಾನ್ಯೀಕರಣದ ಬಳಿಕ 2,000 ರೂಪಾಯಿಯ ನೋಟುಗಳು ದೇಶದಲ್ಲಿ ಅತಿ ಹೆಚ್ಚಾಗಿ ಗಮನ ಸೆಳೆದಿತ್ತು. ಆದರೆ ಕಳೆದ ವರ್ಷ RBI ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ನಮ್ಮಲ್ಲಿ ಅತಿ ಹೆಚ್ಚಿನ ಮುಖಬೆಲೆಯ ನೋಟು 2,000 ರೂ. ಆಗಿತ್ತು. ಆದರೆ ನಮ್ಮ ಭಾರತದ ವಿತ್ತ ಇತಿಹಾಸವನ್ನು ಗಮನಿಸುವುದಾದರೆ, ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತದೆ.
ಭಾರತದ ಹಣಕಾಸು ಇತಿಹಾಸದಲ್ಲಿ ಒಂದು ಕಾಲದಲ್ಲಿ 5,000 ಮತ್ತು 10,000 ರೂಪಾಯಿಯ ನೋಟುಗಳು ಚಲಾವಣೆಯಲ್ಲಿತ್ತು ಎನ್ನುವುದೇ ಕುತೂಹಲಕಾರಿ ಅಂಶವಾಗಿದೆ. ಭಾರತದ ವಿತ್ತೀಯ ವ್ಯವಸ್ಥೆಯ ಭಾಗವಾಗಿದ್ದ 5,000 ಮತ್ತು 10,000 ರೂ. ನೋಟುಗಳು ರಾಷ್ಟ್ರದ ಆರ್ಥಿಕ ಇತಿಹಾಸದಲ್ಲಿ ಹುದುಗಿ ಹೋಗಿದ್ದರೂ, ಈ ಅಧ್ಯಾಯ ನಮ್ಮ ಕರೆನ್ಸಿಯ ವಿಕಾಸವನ್ನು ತೋರಿಸುತ್ತದೆ. ಸ್ವಾತಂತ್ರ್ಯದ ಮೊದಲು ಪರಿಚಯಿಸಲಾದ ಹೆಚ್ಚಿನ ಮುಖಬೆಲೆಯ ನೋಟುಗಳು, ದೇಶದ ಆರ್ಥಿಕ ಪರಿಕಲ್ಪನೆ ಮತ್ತು ಹಣಕಾಸಿನ ಬೆಳವಣಿಗೆ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಈ ಅಧ್ಯಾಯವು ಆರ್ಥಿಕ ಚಲನೆ ಮತ್ತು ಕರೆನ್ಸಿ ಪರಿವರ್ತನೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ರೂ 10,000 ನೋಟು: ಸಂಕ್ಷಿಪ್ತ ಇತಿಹಾಸ
ಭಾರತದಲ್ಲಿ ಚಲಾವಣೆಯಲ್ಲಿ 10,000 ರೂ. ಮೌಲ್ಯದ ನೋಟಿನ ಇತಿಹಾಸ ಕೆದಕಿದರೆ, ಸ್ವಾತಂತ್ರ್ಯ ಪೂರ್ವದಲ್ಲಿಇದರ ಬೇರುಗಳು ಅಡಗಿವೆ. ಮೊತ್ತ ಮೊದಲ 10,000 ರೂ.ಮೌಲ್ಯದ ನೋಟನ್ನು1938 ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿತ್ತು. ಇದು ದೇಶದಲ್ಲಿ ಚಲಾವಣೆಯಲ್ಲಿದ್ದ ಅತಿದೊಡ್ಡ ಮುಖಬೆಲೆಯ ನೋಟಾಗಿತ್ತು. ಇದನ್ನು ಪ್ರಾಥಮಿಕವಾಗಿ ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ವ್ಯವಹಾರಸ್ಥರು ಮತ್ತು ವ್ಯಾಪಾರಿಗಳು ಬಳಸುತ್ತಿದ್ದರು. ಅತಿ ಹೆಚ್ಚಿನ ಮೌಲ್ಯದ ನೋಟುಗಳನ್ನು ಸಾಮಾನ್ಯ ನಾಗರಿಕರಿಗೆ ಹೆಚ್ಚು ಬಳಸುವ ಪ್ರಮೇಯ ಬರುತ್ತಿರಲಿಲ್ಲ.
ಮುಂದೆ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾಳಧನ ಮತ್ತು ಅದರ ಸಂಗ್ರಹವನ್ನು ತಡೆಯಲು 1946 ರಲ್ಲಿ ಬ್ರಿಟಿಷ್ ಸರ್ಕಾರವು ಈ ನೋಟುಗಳನ್ನು ನಿಷೇಧಿಸಿತು. 1954 ರಲ್ಲಿ ರೂ 10,000 ನೋಟನ್ನು ಮರುಪರಿಚಯಿಸಲಾಯಿತು ಮತ್ತು ರೂ 5,000 ನೋಟುಗಳಂತಹ ಇತರ ದೊಡ್ಡ ಮುಖಬೆಲೆಯ ಜೊತೆಗೆ ಚಲಾವಣೆಯಾಗುವುದನ್ನು ಮುಂದುವರೆಸಿತು.
ಅಮಾನ್ಯ ಮಾಡಿದ್ದು ಏಕೆ?
10,000 ರೂಪಾಯಿ ನೋಟಿನ ಭವಿಷ್ಯವು 1978 ರಲ್ಲಿ ಮತ್ತೊಂದು ತಿರುವು ಪಡೆದುಕೊಂಡಿತು. ಸ್ವತಂತ್ರವಾಗಿರುವ ಭಾರತ ಸರ್ಕಾರವು 5,000 ರೂಪಾಯಿಗಳ ನೋಟು ಜೊತೆಗೆ ಅದನ್ನು ಮತ್ತೊಮ್ಮೆ ಅಮಾನ್ಯಗೊಳಿಸಲು ನಿರ್ಧರಿಸಿತು. ಅಂದಿನ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರವು, ಹಣಕಾಸಿನ ಅವ್ಯವಹಾರವನ್ನು ನಿಭಾಯಿಸಲು ಮತ್ತು ದೊಡ್ಡ ಮೊತ್ತದ ಅಕ್ರಮ ಬಳಕೆಯನ್ನು ತಡೆಯುವ ದೃಷ್ಟಿಯಿಂದ 10,000 ರೂ ನೋಟುಗಳ ಜೊತೆಗೆ 5,000 ರೂ ನೋಟುಗಳನ್ನು ಅಮಾನ್ಯಗೊಳಿಸಲು ನಿರ್ಧರಿಸಿತು. ಈ ನೋಟುಗಳು ಸಾಮಾನ್ಯ ಜನರಿಗೆ ಬಹಳ ಕಡಿಮೆ ಉಪಯೋಗವನ್ನು ಹೊಂದಿದ್ದ ಕಾರಣ , ನೋಟು ಅಮಾನ್ಯೀಕರಣದ ಪರಿಣಾಮವು ಬಹುತೇಕ ನಗಣ್ಯವಾಗಿತ್ತು.
RBI ಅಂಕಿಅಂಶಗಳ ಪ್ರಕಾರ, ಮಾರ್ಚ್ 31, 1976 ರಂತೆ ಚಲಾವಣೆಯಲ್ಲಿರುವ ಒಟ್ಟು ನಗದು ಮೊತ್ತವು 7,144 ಕೋಟಿ ರೂ. ಆಗಿತ್ತು. ಇದರಲ್ಲಿ ರೂ 1,000 ನೋಟುಗಳು ರೂ 87.91 ಕೋಟಿ ಅಥವಾ ಒಟ್ಟು 1.2% ರಷ್ಟಿದೆ. ರೂ.5,000 ನೋಟುಗಳು ರೂ.22.90 ಕೋಟಿಯಷ್ಟಿದ್ದರೆ, ಕೇವಲ 1,260 ರೂ.10,000 ನೋಟುಗಳ ಮೌಲ್ಯ 1.26 ಕೋಟಿ ರೂ. ಆಗಿತ್ತು. ಒಟ್ಟಾರೆಯಾಗಿ, ಈ ಹೆಚ್ಚಿನ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿಯ 2% ಕ್ಕಿಂತ ಕಡಿಮೆ ಪ್ರತಿನಿಧಿಸಿತ್ತು.
ಹೆಚ್ಚಿನ ಮೌಲ್ಯದ ಕರೆನ್ಸಿಗಳು ಮತ್ತೆ ವಿತ್ತ ವ್ಯವಸ್ಥೆಗೆ ವಾಪಾಸ್ ಆಗಿತ್ತೆ?
ಈ ಹೆಚ್ಚಿನ ಮೌಲ್ಯದ ಕರೆನ್ಸಿಗಳು ಎಂದಿಗೂ ವ್ಯವಸ್ಥೆಗೆ ಹಿಂತಿರುಗಲಿಲ್ಲ; ಆದರೆ, ಕಳೆದ ಕೆಲ ವರ್ಷಗಳ ಹಿಂದೆ ಹೆಚ್ಚಿನ ಮೌಲ್ಯದ ನೋಟುಗಳನ್ನು ಮರಳಿ ಕರೆತರಲು ಚಿಂತನೆ ನಡೆದಿತ್ತು. ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಈ ಮುಖಬೆಲೆಗಳು ಮರಳಿ ತರಬಹುದು ಎಂದು ಸಲಹೆಯನ್ನು ನೀಡಿದ್ದರು. ಆದರೆ ಬಳಿಕ ಈ ಕಲ್ಪನೆಯನ್ನು ಕೈಬಿಡಲಾಯಿತು.
2016 ರ ನೋಟು ಅಮಾನ್ಯೀಕರಣದ ಸಮಯದಲ್ಲಿ 500 ರೂ. ಮತ್ತು 1,000 ರೂ. ನೋಟುಗಳನ್ನು ಹಿಂತೆಗೆದುಕೊಂಡಾಗ, ಸರ್ಕಾರವು 2,000 ರೂ ನೋಟನ್ನು ಚಲಾವಣೆಗೆ ತಂದಿತು. ದಿವಂಗತ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, "ನೋಟು ಅಮಾನ್ಯೀಕರಣದಿಂದ ಉಂಟಾದ ನಗದು ಕೊರತೆಯನ್ನು ನಿವಾರಿಸಲು ತ್ವರಿತವಾಗಿ ಮುದ್ರಿಸಲು ಮತ್ತು ವಿತರಿಸಲು 2,000 ರೂ ನೋಟನ್ನು ಚಲಾವಣೆಗೆ ತರಲಾಗಿದೆ" ಎಂದು ಹೇಳಿದ್ದರು. ಇದಾದ ಕೆಲ ವರ್ಷಗಳಲ್ಲೇ ಅಂದರೆ ಮೇ 19, 2023 ರಂದು, RBI 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿ ಅದನ್ನು ಹಂತ ಹಂತವಾಗಿ ಹಿಂಪಡೆಯಿತು
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

India Aviation Rules: ವಿಮಾನ ಪ್ರಯಾಣದಲ್ಲಿ ದೊಡ್ಡ ಬದಲಾವಣೆ; 60 ಶೇಕಡಾ ಆಸನಗಳು ಉಚಿತ

LPG E-KYC: ಎಲ್ಪಿಜಿ ಸಿಗಬೇಕೆಂದರೆ ಈ ಕೆಲಸ ಮಾಡಲೇಬೇಕು! ಕೇಂದ್ರದ ಖಡಕ್ ಸೂಚನೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Silver Price Today: ಪಾತಾಳಕ್ಕಿಳಿದ ಬೆಳ್ಳಿ ದರ; ಬರೋಬ್ಬರಿ 5000 ರೂ. ಇಳಿಕೆ

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

LPG-Milk: ಎಲ್ಪಿಜಿ ಪೂರೈಕೆ ಕೊರತೆ; ಹಾಲು ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

FASTag Annual Pass: ಫಾಸ್ಟ್ಯಾಗ್ ಬಳಕೆದಾರರಿಗೆ ಶಾಕ್; ವಾರ್ಷಿಕ ಪಾಸ್ ದರ ಹೆಚ್ಚಳ!

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?



Click it and Unblock the Notifications