ಬೆಂಗಳೂರು, ಜೂನ್ 28: ಹಬ್ಬದ ಸಂದರ್ಭದಲ್ಲಿ ಹಲವು ಕಂಪನಿಗಳು ಬೋನಸ್ ನೀಡುತ್ತವೆ. ಇಲ್ಲಿ ಒಂದು ವಿಚಾರ ನೆನಪಿನಲ್ಲಿ ಇರಬೇಕು. ನಿಮಗೆ ಸಿಗುವ ಬೋನಸ್ ಹಣಕ್ಕೆ ಸಹ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಕೊಡುತ್ತವೆ. ಸಾಮಾನ್ಯವಾಗಿ ಈ ಬೋನಸ್ ನಗದು ರೂಪದಲ್ಲಿ ಇರುತ್ತದೆ ಅಥವಾ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಕೆಲವು ಕಂಪನಿಗಳು ದೀಪಾವಳಿ ಬೋನಸ್ ಅನ್ನು ಯಾವುದಾದರೂ ಸಾಮಗ್ರಿ ರೂಪದಲ್ಲೂ ಕೊಡುತ್ತವೆ. ಈ ಬೋನಸ್ ಮೇಲೆ ಇರುವ ತೆರಿಗೆ ಲೆಕ್ಕಾಚಾರ ನಮಗೆ ಗೊತ್ತಿರಬೇಕು.
ಆದಾಯ ತೆರಿಗೆ ಕಾಯ್ದೆಯ ಅನುಬಂಧಗಳ ಪ್ರಕಾರ, ಕಂಪನಿಯಿಂದ ಉದ್ಯೋಗಿಗೆ ನಗದು ಅಥವಾ ಖಾತೆಗೆ ಹಣ ಬಂದರೆ, ಅದನ್ನು ಸಂಬಳದಿಂದ ಬಂದ ಆದಾಯ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಆ ಬೋನಸ್ ಅನ್ನು ಉದ್ಯೋಗಿ ಸಂಬಳ ಎಂದೇ ಪರಿಗಣಿಸಲಾಗುತ್ತದೆ. ನೀವು ಯಾವ ಟ್ಯಾಕ್ಸ್ ಸ್ಲ್ಯಾಬ್‌ಗೆ ಒಳಪಡುತ್ತೀರೋ ಆ ಸ್ಲ್ಯಾಬ್‌ಗೆ ಅನುಗುಣವಾಗಿ ನೀವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಹಲವು ಉದ್ಯೋಗಿಗಳು ವೋಚರ್‌ಗಳು, ಕೂಪನ್‌ಗಳು, ಗಿಫ್ಟ್ ಹ್ಯಾಂಪರ್‌ಗಳು ಅಥವಾ ಟೋಕನ್‌ಗಳನ್ನು ದೀಪಾವಳಿ ಬೋನಸ್ ರೂಪದಲ್ಲಿ ಪಡೆಯುತ್ತಾರೆ. ಆದಾಯ ತೆರಿಗೆ ಕಾಯ್ದೆ ನಿಯಮ 3(7) (iv) ರ ಪ್ರಕಾರ 5000 ಕ್ಕೂ ಹೆಚ್ಚು ಮೌಲ್ಯದ ದೀಪಾವಳಿ ಉಡುಗೊರೆಯನ್ನು ವೋಚರ್/ಕೂಪನ್ ಮೂಲಕ ಪಡೆದಿದ್ದರೆ. ಆಗ ಅಂತಹ ಗಿಫ್ಟ್ ಗೆ ತೆರಿಗೆ ಬೀಳುತ್ತದೆ. 5000 ಕ್ಕಿಂತ ಹೆಚ್ಚು ಮೌಲ್ಯದ ಗಿಫ್ಟ್ ಇದ್ದರೆ, ಆಗ ಅದನ್ನು ನಿಮ್ಮ ಸಂಬಳದ ಭಾಗ ಎಂದು ಪರಿಗಣಿಸಿ, ಅದಕ್ಕೆ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ಕಂಪನಿಯಿಂದ ಪಡೆದ ಗಿಫ್ಟ್ ಮೌಲ್ಯ 5000 ಕ್ಕಿಂತ ಕಡಿಮೆ ಆದರೆ, ಆಗ ತೆರಿಗೆ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, 5 ಸಾವಿರ ರೂ. ಮಿತಿ ಬರಿ ದೀಪಾವಳಿಗೆ ಅಲ್ಲ. ಇಡೀ ವರ್ಷಕ್ಕೆ ಅನ್ವಯಿಸುತ್ತದೆ. ಹೀಗಾಗಿ, ಇಡೀ ವರ್ಷದಲ್ಲಿ ಪಡೆದ ಒಟ್ಟು ಮೊತ್ತ 5 ಸಾವಿರಕ್ಕಿಂತ ಕಡಿಮೆ ಇದ್ದರೆ ಮಾತ್ರ ಆಗ ದೀಪಾವಳಿಯಲ್ಲಿ ಪಡೆಯುವ ಉಡುಗೊರೆ ಟ್ಯಾಕ್ಸ್ ಫ್ರೀ ಆಗುತ್ತದೆ.
ಹಲವು ಉದ್ಯೋಗಿಗಳಿಗೆ ಕಾರು, ಬೈಕ್, ಚಿನ್ನದ ನಾಣ್ಯ ಅಥವಾ ವೆಚ್ಚದಾಯಕ ಗ್ಯಾಜೆಟ್‌ಗಳನ್ನು ದೀಪಾವಳಿ ಬೋನಸ್ ಆಗಿ ಪಡೆಯುತ್ತಾರೆ. ಅಂತವರೆಲ್ಲರಿಗೂ 5000 ರೂ. ಮಿತಿ ಅನ್ವಯಿಸುತ್ತದೆ. ಉಡುಗೊರೆಯ ಮಾರ್ಕೆಟ್ ವ್ಯಾಲ್ಯೂ ಸಿಕ್ಕ ನಂತರ, ಅದರಲ್ಲಿ 5000 ರೂ. ಕಳೆಯಿರಿ. ಆಗ ಉಳಿದ ಮೊತ್ತಕ್ಕೆ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಬೋನಸ್ ಸಿಕ್ಕಿದ್ದು ಕ್ಯಾಶ್ ರೂಪದಲ್ಲಿದ್ದರೆ ಅಥವಾ ಖಾತೆಗೆ ಬಂದಿದ್ದರೆ, ಕಂಪನಿಯೇ ಟಿಡಿಎಸ್ ಕಟ್ ಮಾಡುತ್ತದೆ. ಒಂದು ವೇಳೆ ಕಂಪನಿ ಟಿಡಿಎಸ್ ಡಿಡಕ್ಟ್ ಮಾಡದಿದ್ದರೆ ಅಥವಾ ಉಡುಗೊರೆಯಾಗಿ ಏನಾದರೂ ದುಬಾರಿ ಸಾಮಗ್ರಿ ಸಿಕ್ಕರೆ, ಆಗ ನೀವು ನಿಮ್ಮ ಐಟಿಆರ್‌ನಲ್ಲಿ ಅಂದರೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್‌ನಲ್ಲಿ ಅದರ ಮೌಲ್ಯವನ್ನು ತೋರಿಸಬೇಕು.
ರಾಕೇಶ್ ರೀತಿ ನಿಮಗೂ ದೀಪಾವಳಿ ಬೋನಸ್ ಬಂದಿದ್ದರೆ, ಇಂತಹ ಗಿಫ್ಟ್ ಯಾವಾಗಲೂ ಟ್ಯಾಕ್ಸ್ ಫ್ರೀ ಆಗಿರುವುದಿಲ್ಲ ಎಂಬುದನ್ನು ಗಮನಿಸಿ. ಆದರೆ, ನಿಮ್ಮ ಸಂಬಂಧಿಗಳಿಂದ ನೀವು ದೀಪಾವಳಿ ಗಿಫ್ಟ್ ಪಡೆದರೆ, ಅದರ ಮೌಲ್ಯ ಎಷ್ಟೇ ಇದ್ದರೂ ಅದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಈ ಸಂಬಂಧಿಕರು ಎಂಬುದಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ಸ್ಪಷ್ಟ ವ್ಯಾಖ್ಯಾನ ಇದೆ. ಪಾಲಕರು, ಅಜ್ಜ ಅಜ್ಜಿಯಂದಿರು, ಬಾಳಸಂಗಾತಿ, ಅತ್ತೆ ಮಾವಂದಿರು ಇತ್ಯಾದಿ ವ್ಯಕ್ತಿಗಳನ್ನು ಸಂಬಂಧಿಕರು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಕಾಯ್ದೆಯಲ್ಲಿ ಉಲ್ಲೇಖಿಸಿದ ಸಂಬಂಧಿಕರನ್ನು ಹೊರತುಪಡಿಸಿ ಬೇರೆಯವರಿಂದ ನಿಮಗೆ ಉಡುಗೊರೆ ಬಂದರೆ, ಆಗ 50 ಸಾವಿರದ ಮೌಲ್ಯದ ವರೆಗೆ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ. 50 ಸಾವಿರ ರೂ. ಗಿಂತ ಹೆಚ್ಚಾದರೆ ನೀವು ಅದಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications