ಅತ್ಯುನ್ನತ ಹುದ್ದೆ ತೊರೆದು ಪತಿ ಜತೆ ಸೇರಿ 8,000 ಕೋಟಿ ಕಂಪನಿ ಸ್ಥಾಪಿಸಿದ ದಿಟ್ಟ ಮಹಿಳೆ

ಉದ್ಯಮಿಗಳಾದ ಫಲ್ಗುಣಿ ನಾಯರಿ, ವಿನೀತಾ ಸಿಂಗ್‌, ಇಶಾ ಅಂಬಾನಿ, ಜಯಂತಿ ಚೌಧರಿ ಹಾಗೂ ಮತ್ತಿತರರಿಂದಾಗಿ ವ್ಯಾಪಾರ ಪ್ರಪಂಚವು ಹೆಚ್ಚು ಪ್ರಗತಿಯನ್ನು ಸಾಧಿಸುತ್ತಿದೆ. ಜತೆಗೆ ಇದು ಉದ್ಯಮ ಕ್ಷೇತ್ರದ ಬೆಳವಣಿಗೆಯನ್ನು ಕೂಡ ಪ್ರದರ್ಶಿಸುತ್ತಿದೆ. ಫ್ಯಾಷನ್‌ನಿಂದ ಹಿಡಿದು ತಂತ್ರಜ್ಞಾನದವರೆಗೆ ಮಹಿಳೆಯರ ಪ್ರತಿಭೆ ಹಾಗೂ ಬುದ್ಧಿವಂತಿಕೆಗೆ ಪ್ರತಿಯೊಂದು ಉದ್ಯಮ ಕ್ಷೇತ್ರವು ವಿಪುಲ ಅವಕಾಶವನ್ನು ನೀಡುತ್ತಿವೆ.

ಉಪಾಸನಾ ಟಾಕು ಎನ್ನುವ ಹೆಸರು ಭಾರತದಲ್ಲಿ ಹಲವಾರು ಮಹತ್ವಾಕಾಂಕ್ಷಿ ಉದ್ಯಮಿಗಳ ಆಸಕ್ತಿಯನ್ನು ಶಾಶ್ವತವಾಗಿ ಸೆರೆ ಹಿಡಿಯುವ ಹೆಸರಾಗಿದೆ. ಅವರು ಪ್ರಸ್ತುತ ಫಿನ್‌ಟೆಕ್‌ ವಲಯದಲ್ಲಿ ಪ್ರಾಬಲ್ಯ ಹೊಂದಿರುವ ಮೊದಲ ವ್ಯಾಪಾರದ ಮಾಲೀಕರಾಗಿದ್ದಾರೆ.

 ಪತಿ ಜತೆ ಸೇರಿ 8,000 ಕೋಟಿ ಕಂಪನಿ ಸ್ಥಾಪಿಸಿದ ದಿಟ್ಟ ಮಹಿಳೆ

ಉಪಾಸನಾ ಟಾಕು ಯಾರು?

ಉಪಾಸನಾ ಟಾಕು ಅವರು ತಮ್ಮ ಪತಿ ಸ್ಥಾಪಿಸಿದ ಉದ್ಯಮವಾದ ಮೊಬಿಕ್ವಿಕ್‌ನ ಸಿಇಒ ಹಾಗೂ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಎಂಜಿನಿಯರಿಂಗ್‌ ಪದವಿಯನ್ನು ಪಂಜಾಬ್‌ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಬಳಿಕ ಅವರು ಮ್ಯಾನೇಜ್‌ಮೆಂಟ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.

ಅವರು 17 ವರ್ಷಗಳಿಗೂ ಹೆಚ್ಚು ಕಾಲ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಅಮೆರಿಕನ್‌ ಪಾವತಿ ಸಂಸ್ಥೆಯಾದ ಪೇಪಾಲ್‌ಗೆ ಉತ್ಪನ್ನ ನಿರ್ವಾಹಕರಾಗಿ ಕೆಲಸ ಮಾಡಿದ್ದರು. ಅವರಿಗೆ ಎಚ್‌ಎಸ್‌ಬಿಸಿಯಲ್ಲಿ ಕೆಲಸವೂ ಇತ್ತು. ಈ ಹಿಂದೆ ಉಪಾಸನಾ ಅವರು ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, 2008ರಲ್ಲಿ ಸ್ವಂತ ವ್ಯಾಪಾರವನ್ನು ಸ್ಥಾಪಿಸಲು ಭಾರತಕ್ಕೆ ವಾಪಾಸ್‌ ಬಂದಿದ್ದರು.

ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿನ ಮಹತ್ವದ ಸಮಸ್ಯೆಗಳನ್ನು ಬಗೆಹರಿಸುವ ಬಯಕೆಯನ್ನು ಹೊಂದಿರುವುದಾಗಿ ಅವರು ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದರು. ಬೇರೆ ಮಾರುಕಟ್ಟೆಗಳ ಬಗ್ಗೆ ಅಧ್ಯಯನ ನಡೆಸಿದಾಗ ಭಾರತವು ಉತ್ತಮ ಸ್ಥಳ ಎಂಬುದು ಮನವರಿಕೆಯಾಗಿತ್ತು. ಆದರೆ, ಕುಟುಂಬಸ್ಥರು ಆಕೆಯು ಭಾರತಕ್ಕೆ ಹಿಂದಿರುಗುವ ಯೋಚನೆಯನ್ನು ವಿರೋಧಿಸಿದ್ದರು.

ಏಕೆಂದರೆ ಆಕೆಯ ನಿರ್ಧಾರವು ತುಂಬಾ ರಿಸ್ಕ್‌ನಿಂದ ಕೂಡಿದೆ ಎಂಬುದು ಅವರ ಭಾವನೆಯಾಗಿತ್ತು. ಆಕೆಯ ತಂದೆಯು ಎರಿಟ್ರಿಯಾದ ಅಸ್ಮಾರಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ತಾಯಿ ಸಂಗೀತಕಾರರಾಗಿದ್ದು, ಆ ಸಮಯದಲ್ಲಿ ಆಫ್ರಿಕಾದಲ್ಲಿ ನೆಲೆಸಿದ್ದರು. 2009ರಲ್ಲಿ ಅವರು ವಾಪಾಸ್‌ ಬಂದಿದ್ದರು. ತಮ್ಮ ಸ್ವಂತ ಉದ್ಯಮದ ಕನಸನ್ನು ನನಸುಗೊಳಿಸುವ ಉದ್ದೇಶದಿಂದ ಪೇಪಾಲ್‌ ಸಂಸ್ಥೆಯನ್ನು ತೊರೆದಿದ್ದರು.

ಅವರು ಔದ್ಯೋಗಿಕ ರಂಗದಲ್ಲಿ ದೊಡ್ಡ ಮನೆ, ಕಾರು, ಹುದ್ದೆ ಸೇರಿದಂತೆ ಎಲ್ಲ ರೀತಿಯ ಐಶಾರಾಮಿ ಜೀವನವನ್ನು ಅನುಭವಿಸಿದ್ದರು. ಆವರು ಭಾರತಕ್ಕೆ ಹಿಂತಿರುಗಿ ಬಿಹಾರ ಹಾಗೂ ಉತ್ತರ ಪ್ರದೇಶದ ಗ್ರಾಮೀಣ ಭಾಗದ ಮೈಕ್ರೋ ಫೈನಾನ್ಸ್‌ ಎನ್‌ಜಿಒ ಆಗಿರುವ ದೃಷ್ಟಿಯಲ್ಲಿ ಕೆಲಸ ಮಾಡುವ ಸವಾಲನ್ನು ಕೈಗೆತ್ತಿಕೊಂಡಿದ್ದರು.

ಉದ್ಯೋಗ ತೊರೆದು ಪತಿ ಜತೆ ಸೇರಿ ಕಂಪನಿ ಸ್ಥಾಪನೆ

2008ರಲ್ಲಿ ನಾಟಕವೊಂದನ್ನು ನೋಡುವುದಕ್ಕೆ ಹೋಗಿದ್ದ ಸಂದರ್ಭದಲ್ಲಿ ಪತಿ ಬಿಪಿನ್‌ ಪ್ರೀತ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದರು. 2011ರಲ್ಲಿ ಅವರಿಬ್ಬರ ಮದುವೆಯಾಗಿತ್ತು. 2008ರಲ್ಲಿ ಸಿಂಗ್‌ ಅವರು MobiKwik ಕಂಪನಿಯ ಸಹ ಸಂಸ್ಥಾಪಕರಾಗಿದ್ದು, ಅದರ ಫ್ಲಾಟ್‌ಫಾರಂ ಅನ್ನು ಅಭಿವೃದ್ಧಿಪಡಿಸಿದ್ದರು. ಆದರೆ ತಮ್ಮ ಕುಟುಂಬಕ್ಕೆ ಹೆಚ್ಚು ಸಮಯವನ್ನು ಒದಗಿಸುವ ಉದ್ದೇಶದಿಂದ ಕೆಲಸಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದರು.

ಆ ಮೂಲಕ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿ ಉಪಾಸನಾ ಅವರ ಬೆಂಬಲದೊಂದಿಗೆ 2009ರಲ್ಲಿ ಸ್ಟಾರ್ಟಪ್‌ ವ್ಯವಹಾರವನ್ನು ಪ್ರಾರಂಭಿಸಿದರು.

MobiKwikನ ಸಹ ಸಂಸ್ಥಾಪಕಿಯಾಗಿರುವ ಉಪಾಸನಾ ಟಾಕು ಅವರ ಪ್ರಕಾರ, ಕಂಪನಿಯು 2022-2023ರ 3ನೇ ತ್ರೈಮಾಸಿಕದಲ್ಲಿ ಲಾಭವನ್ನು ಪಡೆಯುವುದಕ್ಕೆ ಪ್ರಾರಂಭಿಸಿದೆ. ಇನ್ನೊಂದೆಡೆ, ಕಂಪನಿಯ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆ ಹಾಗೂ ಗುರಿಯನ್ನು ಹೊಂದಿದ್ದಾರೆ.

ಅವರ ಈ ಫ್ಲಾಟ್‌ಫಾರಂ 560 ಕೋಟಿ ರೂ. ಆದಾಯವನ್ನು ಇತ್ತೀಚಿನ ವರ್ಷದಲ್ಲಿ ಗಳಿಸಿದೆ. 2021ರಲ್ಲಿ ಕಂಪನಿಯು 700 ಮಿಲಿಯನ್ ಡಾಲರ್‌(ಸುಮಾರು ರೂ. 5,723 ಕೋಟಿ) ಫಂಡಿಂಗ್‌ ಅನ್ನು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+