ಬೆಂಗಳೂರು, ಸೆಪ್ಟೆಂಬರ್ 22: ಕ್ರೆಡಿಟ್ ಕಾರ್ಡ್, ಮನೆ ಸಾಲ, ವಾಹನ ಸಾಲ ಹೀಗೆ ಆರ್ಥಿಕ ನೆರವು ನೀಡುವ ಯಾವುದೇ ಹಣಕಾಸು ಸಂಸ್ಥೆಯು ವ್ಯಕ್ತಿಯ ಸಾಲ ಭರಿಸುವ ಸಾಮರ್ಥ್ಯ ನೋಡುವುದು ಸಾಮಾನ್ಯ. ಸಿಬಿಲ್ ಸ್ಕೋರ್ ಎಂದರೆ ಕ್ರೆಡಿಟ್ ಮಾಹಿತಿಯ ಒಂದು ಅಂಕೆ, ಇದು ನಿಮ್ಮ ಸಾಲಗಳ ಪಾವತಿ ಸಾಮರ್ಥ್ಯವನ್ನು ತೋರಿಸುತ್ತದೆ. ಇದನ್ನು 300 ರಿಂದ 900 ರವರೆಗೆ ಅಂಕಗಳ ಆಧಾರದಲ್ಲಿ ಅಳೆಯಲಾಗುತ್ತದೆ. ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ ಅದು ಉತ್ತಮ ಕ್ರೆಡಿಟ್ ಶ್ರೇಣಿಯಾಗಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇದನ್ನು ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಪರಿಗಣಿಸುತ್ತವೆ.
CIBIL ಸ್ಕೋರ್ ನಿಮ್ಮ ಹಿಂದಿನ ಎಲ್ಲಾ ಸಾಲಗಳ ಮರುಪಾವತಿ ಇತಿಹಾಸದ ಆಧಾರದ ಮೇಲೆ ಸಿದ್ಧಪಡಿಸಲಾಗಿರುವ ಮಾರ್ಕ್ಸ್ ಕಾರ್ಡ್ ನಂತೆ ಇರುತ್ತದೆ. ಒಬ್ಬ ವ್ಯಕ್ತಿಗೆ ಅವರ ಕ್ರೆಡಿಟ್ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ 300 ರಿಂದ 900 ರ ನಡುವಿನ CIBIL ಸ್ಕೋರ್ ಅನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ನಿಮ್ಮ ಅಂಕವು ಕೆಂಪು ಮಾರ್ಕ್‌ನಲ್ಲಿದ್ದರೆ, ಅಂದರೆ ಅದು ತುಂಬಾ ಕಡಿಮೆಯಿದ್ದರೆ, ಸಾಲ ಪಡೆಯಲು ತುಂಬಾ ಕಷ್ಟವಾಗಬಹುದು ಮತ್ತು ನೀವು ಅದನ್ನು ಪಡೆದರೂ ಸಹ ನೀವು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಆದ್ದರಿಂದ, ಉತ್ತಮ ಬಡ್ಡಿದರಗಳೊಂದಿಗೆ ಸಾಲವನ್ನು ಪಡೆಯಲು, ನೀವು ಉತ್ತಮ CIBIL ಸ್ಕೋರ್ ಅನ್ನು ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಕಳಪೆ ಮಟ್ಟದಲ್ಲಿದ್ದರೆ, CIBIL ಸ್ಕೋರ್ ಅನ್ನು ಸರಿಪಡಿಸಬಹುದು, ಆದರೆ ಇದು ಒಂದು ಅಥವಾ ಎರಡು ದಿನದ ಕೆಲಸವಲ್ಲ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು.

ಕಳಪೆ CIBIL ಸ್ಕೋರ್ ಸುಧಾರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದರ ಸುಧಾರಣೆ ಹೇಗೆ ತಿಳಿಯೋಣ ಬನ್ನಿಯಾವ ತಪ್ಪುಗಳಿಂದ ಸಿಬಿಲ್ ಸ್ಕೋರ್ ಇಳಿಕೆಯಾಗುತ್ತದೆ ಎಂಬುವುದು ಅರ್ಥಮಾಡಿಕೊಳ್ಳಿ ಸಿಬಿಲ್ ಸ್ಕೋರ್ ಕಳಪೆಯಾಗಲು ಹಲವಾರು ಕಾರಣಗಳಿರಬಹುದು. ಸಾಲವನ್ನು ತೆಗೆದುಕೊಂಡ ನಂತರ ನಿಗದಿತ ಸಮಯಕ್ಕೆ ಸರಿಯಾಗಿ EMI ಪಾವತಿಸದಿರುವುದು, ಸಾಲವನ್ನು ಕಟ್ಟದೆ ಹಾಗೇ ಉಳಿಸಿಕೊಳ್ಳುವುದು, ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಅದರ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿಸದಿರುವುದು, ಕ್ರೆಡಿಟ್ ಬಳಕೆಯ ಅನುಪಾತವನ್ನು ನಿರ್ವಹಿಸದಿರುವುದು ಇತ್ಯಾದಿ. ಇದರ ಹೊರತಾಗಿ, ನೀವು ಜಂಟಿ ಸಾಲವನ್ನು ತೆಗೆದುಕೊಂಡಿದ್ದರೆ ಅಥವಾ ನೀವು ಯಾರೊಬ್ಬರ ಸಾಲದ ಜಾಮೀನುದಾರರಾಗಿದ್ದರೆ, ಆ ಸಾಲಗಾರ ಮೇಲೆ ತಿಳಿಸಿರುವ ಯಾವುದೇ ತಪ್ಪನ್ನು ಮಾಡಿದ್ದರೂ, ಇದು ನಿಮ್ಮ CIBIL ಸಹ ಪ್ರತಿಕೂಲ ಪರಿಣಾಮ ಬೀರುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಎಷ್ಟು ಸಮಯದಲ್ಲಿ ಹೆಚ್ಚಿಸಬಹುದು?
ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಅದನ್ನು ಸುಧಾರಿಸಬೇಕೆಂದು ನೀವು ಬಯಸಿದರೆ ಇದು ಹಣ ನೀಡಿ ಖರೀದಿಸುವ ಅಥವಾ ತಕ್ಷಣವೇ ಸರಿ ಮಾಡುವ ವಿಚಾರವಲ್ಲ ಎಂಬುವುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುವುದು ಒಂದು ದಿನದ ಕೆಲಸವಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಇದಕ್ಕಾಗಿ ನೀವು ಸ್ವಲ್ಪ ತಾಳ್ಮೆಯನ್ನು ಹೊಂದಿರಬೇಕು. ಯಾಕೆಂದರೆ ಇದು ನಿಧಾನಗತಿಯಲ್ಲಿ ಸುಧಾರಿಸುತ್ತದೆ. ನಿಮ್ಮ ಕೆಟ್ಟ CIBIL ಸ್ಕೋರ್‌ನಲ್ಲಿ ಸುಧಾರಣೆಗೆ ಕನಿಷ್ಠ ಆರು ತಿಂಗಳಿಂದ 1 ವರ್ಷ ತೆಗೆದುಕೊಳ್ಳಬಹುದು. ಸ್ಕೋರ್ ತುಂಬಾ ಕಡಿಮೆಯಿದ್ದರೆ ಅದು ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ಶೀಘ್ರವಾಗಿನಿಮ್ಮ ಮನಸ್ಸಿನಲ್ಲಿ ಯಾವುದೇ ತಪ್ಪು ತಿಳುವಳಿಕೆಯನ್ನು ಇಟ್ಟುಕೊಳ್ಳಬೇಡಿ.
CIBIL ಸ್ಕೋರ್ ಹೇಗೆ ಸುಧಾರಿಸುತ್ತದೆ?
ಕ್ಲೀನ್ ಮರುಪಾವತಿ ಟ್ರ್ಯಾಕ್ ರೆಕಾರ್ಡ್ ಅನ್ನು ನಿರ್ವಹಿಸಿ:
ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದರ EMI ಅನ್ನು ಸರಿಯಾದ ಸಮಯಕ್ಕೆ ಪಾವತಿಸಿ. ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ, ಅದರ ಗರಿಷ್ಠ ಮಿತಿಯ 30 ಪ್ರತಿಶತಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ಬಿಲ್ ದಿನಾಂಕದ ಒಳಗೆ ಪಾವತಿಸಿ. ಅಸುರಕ್ಷಿತ ಸಾಲಗಳನ್ನು ಪಡೆದುಕೊಳ್ಳುವುದರಿಂದ ಸಾಧ್ಯವಾದಷ್ಟು ದೂರವಿರಿ. ಸಾಲವನ್ನು ಸಂದಾಯ ಮಾಡಿದ್ದರೆ, ಅದನ್ನು ಆದಷ್ಟು ಬೇಗ ಅಕೌಂಟ್ ಕ್ಲೋಸ್ ಮಾಡಿ. ಜಂಟಿ ಸಾಲವನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಮೈನಸ್ CIBIL ಸ್ಕೋರ್ ಅನ್ನು ಗ್ರೀನ್ ಮಾರ್ಕ್ ಗೆ ತನ್ನಿ
ನಿಮ್ಮ CIBIL ಸ್ಕೋರ್ ಮೈನಸ್‌ನಲ್ಲಿದ್ದರೆ, ಸಾಲ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತವೆ. ಒಂದು ವೇಳೆ ನೀವು ಯಾವತ್ತೂ ಸಾಲವನ್ನು ತೆಗೆದುಕೊಳ್ಳದೇ ಇದ್ದರೂ ಮತ್ತು CIBIL ನ ಇತಿಹಾಸವನ್ನು ನೀವು ಹೊಂದಿರದಿದ್ದರೂ ಮೈನಸ್ CIBIL ಸ್ಕೋರ್ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರನ್ನು ನಂಬಲರ್ಹ ಎಂದು ಪರಿಗಣಿಸಬೇಕೆ ಅಥವಾ ಬೇಡವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ CIBIL ಸ್ಕೋರ್ ಅನ್ನು ಹೆಚ್ಚಿಸಲು ನಿಮಗೆ ಎರಡು ಆಯ್ಕೆಗಳಿವೆ.
ಮೊದಲು- ನೀವು ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಅದನ್ನು ಬಳಸಲು ಪ್ರಾರಂಭಿಸಿ ಮತ್ತು ಸಮಯಕ್ಕೆ ಪಾವತಿಗಳನ್ನು ಮಾಡಿ. ಇದರೊಂದಿಗೆ, ನಿಮ್ಮ ಸಾಲವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ನಿಮ್ಮ CIBIL ಸ್ಕೋರ್ ಅನ್ನು ಎರಡು ಅಥವಾ ಮೂರು ವಾರಗಳಲ್ಲಿ ನವೀಕರಿಸಲಾಗುತ್ತದೆ.
ಎರಡನೆಯ ಮಾರ್ಗವೆಂದರೆ ಬ್ಯಾಂಕ್‌ನಲ್ಲಿ ತಲಾ 10,000 ರೂಪಾಯಿಗಳ ಎರಡು ಸಣ್ಣ ಎಫ್‌ಡಿಗಳನ್ನು ಮಾಡುವುದು. ಎಫ್‌ಡಿ ತೆರೆದ ನಂತರ, ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ ಅದರ ವಿರುದ್ಧ ಸಾಲವನ್ನು ತೆಗೆದುಕೊಳ್ಳುವುದು. ಓವರ್‌ಡ್ರಾಫ್ಟ್ ಅಡಿಯಲ್ಲಿ ನಿಮ್ಮ ಎಫ್‌ಡಿಯಿಂದ ನೀವು ಹಣವನ್ನು ಹಿಂಪಡೆದ ತಕ್ಷಣ, ನಿಮ್ಮ ಲೋನ್ ಪ್ರಾರಂಭವಾಗುತ್ತದೆ ಮತ್ತು ಶೀಘ್ರದಲ್ಲೇ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ.
ಉತ್ತಮ CIBIL ಸ್ಕೋರ್ ನಿಮ್ಮ ಶಿಸ್ತುಬದ್ಧ ಕ್ರೆಡಿಟ್ ನಡವಳಿಕೆಯ ಫಲಿತಾಂಶವಾಗಿದೆ. ಇದು ನಿಮ್ಮ ಕ್ರೆಡಿಟ್ ಅರ್ಹತೆ ಮತ್ತು ನಿಮಗೆ ಕ್ರೆಡಿಟ್ ನೀಡುವುದರೊಂದಿಗೆ ಸಂಬಂಧಿಸಿದ ಅಪಾಯವನ್ನು ತೋರಿಸುತ್ತದೆ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಸ್ಕೋರ್ ಅನ್ನು ಸುಧಾರಿಸಲು ಮೇಲೆ ತಿಳಿಸಿದಂತೆ ಮಾಡಿದ್ದರೆ ಮುಂದೆ ರೆಡ್ ಮಾರ್ಕ್ ನಿಂದ ನಿಮ್ಮ ಸಿಬಿಲ್ ಸ್ಕೋರ್ ಹಸಿರು ಬಣ್ಣದತ್ತ ಬದಲಾಗುವುದರಲ್ಲಿ ಸಂಶಯವಿಲ್ಲ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications