ವಿಮಾನ ಪ್ರಯಾಣ ಮಾಡುವ ಜನರಿಗೆ ಅದಾನಿ ಗ್ರೂಪ್ಸ್ ಸಿಹಿಸುದ್ದಿಯನ್ನು ನೀಡಿದೆ. ಏರ್‌ಪೋರ್ಟ್ ಲಾಂಜ್‌ಗಳಲ್ಲಿ ಎಲ್ಲಾ ಮುಖ್ಯವಾದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಲು ಅನುಮತಿಸಲಾಗಿದೆ. ಕ್ರೆಡಿಟ್ ಕಾರ್ಡ್‌ಗಳ ಮೇಲೆ ಆಗಾಗ ಹಲವು ರಿಯಾಯಿತಿ, ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಲಾಗುತ್ತದೆ. ಏರ್‌ಪೋರ್ಟ್‌ನಲ್ಲಿದ್ದಾಗ ಯಾವ ಆಫರ್‌ಗಳು ಇದೆ? ಎಂದು ಬೆರಳ ತುದಿಯಲ್ಲಿಯೇ ಚೆಕ್ ಮಾಡಬಹುದು. ಅದಕ್ಕಾಗಿ ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.
ಪ್ರಮುಖವಾದ ಎಲ್ಲಾ ಬ್ಯಾಂಕುಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ನಿರ್ವಹಣೆ ಮಾಡಲು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಈಗ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಡ್ರೀಮ್ಸ್‌ಪ್ಲೋಕ್ ಸರ್ವೀಸಸ್ ಲಾಂಜ್‌ನಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿದ ಬಳಿಕ ಅದಾನಿ ಗ್ರೂಪ್ ಈ ಘೋಷಣೆಯನ್ನು ಮಾಡಿದೆ.

ಈ ಸೇವೆಯಿಂದ ಪ್ರಯಾಣಿಕರು ಭಾರತದಾದ್ಯಂತ ವಿಮಾನ ನಿಲ್ದಾಣ ಲಾಂಜ್‌ನಲ್ಲಿ ಸುಲಭವಾಗಿ ವ್ಯವಹರಿಸಬಹುದು. ಆದರೆ ಪ್ರಯಾಣಿಕರು ಏರ್‌ಪೋರ್ಟ್ ಲಾಂಜ್‌ನಲ್ಲಿ ತಮ್ಮ ಕೆಡಿಟ್ ಕಾರ್ಡ್‌ಗೆ ಯಾವ ರಿಯಾಯಿತಿ ಇದೆ, ಸೌಲಭ್ಯಗಳು ಯಾವುವು ಸಿಗಲಿದೆ? ಎಂದು ಸುಲಭವಾಗಿ ಚೆಕ್ ಮಾಡಬಹುದು.
ಏರ್‌ಪೋರ್ಟ್ ಲಾಂಜ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಚೆಕ್ ಮಾಡುವುದು ಹೇಗೆ?
ಕ್ರೆಡಿಟ್ ಕಾರ್ಡ್ ಪಡೆಯುವಾಗಲೇ ನೀಡಿರುವ ರಿವ್ಯೂ ಗೈಡ್, ಬುಕ್‌ಲೆಟ್ ಅಥವ ಮ್ಯಾನ್ಯುವೆಲ್‌ನಲ್ಲಿ ನಿಮ್ಮ ಕಾರ್ಡ್‌ಗೆ ಇರುವ ಸೌಲಭ್ಯಗಳು, ಅದರಲ್ಲೂ ವಿಶೇಷವಾಗಿ ಲಾಂಜ್‌ನಲ್ಲಿ ಹೇಗೆ ಬಳಸಹುದು, ಸಿಗುವ ಸೌಲಭ್ಯಗಳೇನು? ಎಂಬ ಮಾಹಿತಿ ಇರುತ್ತದೆ.
* ಕ್ರೆಡಿಟ್ ಕಾರ್ಡ್ ನೀಡಿದ ಕಂಪನಿ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಕೌಂಟ್‌ಗೆ ಲಾಗಿನ್ ಆಗಿ, ಅದರಲ್ಲಿ ಲಭ್ಯವಿರುವ ಬೆನ್‌ಫಿಟ್ ವಿಭಾಗದಲ್ಲಿನ ವಿವರಗಳನ್ನು ನೋಡಿ.
* ಕಸ್ಟಮರ್ ಕೇರ್‌ಗೆ ಕರೆ ಮಾಡಿ. ಕ್ರೆಡಿಟ್ ಕಾರ್ಡ್ ಹಿಂಭಾಗದಲ್ಲಿರುವ ಕಸ್ಟ್‌ಮೇರ್ ಕೇರ್ ನಂಬರ್‌ಗೆ ಕರೆ ಮಾಡಿ ಮತ್ತು ಕಾರ್ಡ್‌ಗೆ ಲಭ್ಯವಿರುವ ಏರ್‌ಪೋರ್ಟ್ ಲಾಂಜ್ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಿರಿ.
* ಲಾಂಜ್ ಸೌಲಭ್ಯಗಳು. ವಿಮಾನ ನಿಲ್ದಾಣದ ಲಾಂಜ್ ಸೌಲಭ್ಯಗಳನ್ನು ನೀಡುವ ಕಂಪನಿಗಳು ಕೆಲವು ಸೇವೆಗಳನ್ನು ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿರುತ್ತವೆ. ಪ್ರಯಾರಿಟಿ ಪಾಸ್, ಮಾಸ್ಟರ್ ಕಾರ್ಡ್ ಲಾಂಜ್ ಅಥವ ವೀಸಾ ಲಾಂಚ್. ನಿಮ್ಮ ಕಾರ್ಡ್ ಇವುಗಳಲ್ಲಿ ಯಾವುದೇ ನೆಟ್‌ವರ್ಕ್‌ಗೆ ಸೇರಿದ್ದರೆ ನೀವು ಲಾಂಜ್ ಸೌಲಭ್ಯಗಳನ್ನು ಪಡೆಯಬಹುದು. ನಿಗದಿತ ವೆಬ್‌ಸೈಟ್‌ಗೆ ಭೇಟಿ ನೀಡಿಯೂ ಮಾಹಿತಿ ಪಡೆಯಬಹುದು.
* ಹೆಚ್ಚುವರಿ ಕಾರ್ಡ್ ಉಪಯೋಗಿಸಿ. ನಿಮ್ಮ ಕಾರ್ಡ್‌ಗೆ ಲಾಂಜ್ ಸೇವೆಗಳು ಲಭ್ಯವಿದ್ದರೆ ನೀವು ಹೆಚ್ಚುವರಿ ಕಾರ್ಡ್ ಅನ್ನು ಸಹ ಪಡೆದಿರುತ್ತೀರಿ.
* ಕಾರ್ಡ್ ಆಕ್ಸೆಸ್ ಹೇಗೆ?. ಏರ್‌ಪೋರ್ಟ್ ಲಾಂಜ್ ರಿಸೆಪ್ಷನ್‌ನಲ್ಲಿ ನಿಮ್ಮ ಕಾರ್ಡ್ ತೋರಿಸಿ, ಅಗತ್ಯವಾಗಿ ಪಾವತಿಸಬೇಕಾದ ಶುಲ್ಕ ಕಟ್ಟಿ, ಬಳಿಕ ಸೌಲಭ್ಯಗಳನ್ನು ಪಡೆದುಕೊಳ್ಳಿ.
* ಭಾರತದಲ್ಲಿ ವೆಚ್ಚ ಎಷ್ಟಾಗುತ್ತದೆ. ಭಾರತದಲ್ಲಿ ಲಾಂಜ್ ಸೌಲಭ್ಯಗಳ ಶುಲ್ಕ ಪ್ರತಿ ಭೇಟಿಗೆ 1000 ರೂ.ಗಳಿಂದ ಆರಂಭವಾಗುತ್ತದೆ. ಇದು ಲಾಂಜ್ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಭಿನ್ನ ಭಿನ್ನವಾಗಿರುತ್ತದೆ.
* ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ. ಅಪ್ಲಿಕೇಶನ್ ಆದ ಲಾಂಜ್‌ಕೀ ನಿಮಗೆ ಲಾಂಜ್ ಸೌಲಭ್ಯದ ಕುರಿತು ಮಾಹಿತಿ ನೀಡುತ್ತದೆ. ಇದನ್ನು ಬಳಕೆ ಮಾಡುವ ಮುನ್ನ ನೀವು ಕಾರ್ಡ್ ವಿವರ ಭರ್ತಿ ಮಾಡಬೇಕಿದೆ. ನಿಮ್ಮ ಕಾರ್ಡ್‌ಗೆ ಸೌಲಭ್ಯವಿದ್ದರೆ ಅನುಮತಿಸಿರುವ ಸೌಲಭ್ಯಗಳ ಮಾಹಿತಿಯನ್ನು ತೋರಿಸುತ್ತದೆ.


Click it and Unblock the Notifications