ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಎಲ್ಲರೂ 2026 ಆಗಮನಕ್ಕಾಗಿ ಸಜ್ಜಾಗಿದ್ದಾರೆ. ಆದರೆ ಇದೀಗ 2025ರ ಮೆಲುಕು ಹಾಕುವ ವಾರ. 2025ರಲ್ಲಿ ಹಲವಾರು ಬದಲಾವಣೆಗಳಾಗಿದೆ. ಅದರಲ್ಲೂ ಷೇರು ಮಾರುಕಟ್ಟೆ (Stock Market), ಬಂಗಾರದ ಬೆಲೆಯಲ್ಲಿ ವ್ಯಾಪಕ ಬದಲಾವಣೆಯನ್ನು ಕಂಡಿದ್ದೇವೆ. ಇನ್ನು ಷೇರು ಮಾರುಕಟ್ಟೆ ಹೂಡಿಕೆದಾರರಂತೂ 2025ರಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಗಳಿಸಿದ್ದಾರೆ. ಹಾಗಾಗಿ 2026ರಲ್ಲಿಯೂ ಇದೇ ರೀತಿಯ ಲಾಭ ಇರುತ್ತಾ? ಇಲ್ವಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೀಗ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ (Motilal Oswal), 2026ರಲ್ಲಿ ಉತ್ತಮ ಲಾಭ ನೀಡುವ ಸಾಧ್ಯತೆಯಿರುವ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳ (Small Cap Stocks) ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಸ್ವಿಗ್ಗಿ: ಪ್ರಸ್ತುತ ಎನ್‌ಎಸ್‌ಇಯಲ್ಲಿ ಸ್ವಿಗ್ಗಿ ಷೇರಿನ ಬೆಲೆ ₹392.80 ರೂ. ಆಗಿತ್ತು. ಕಳೆದ ಆರು ತಿಂಗಳಲ್ಲಿ ಈ ಷೇರು 3% ನಷ್ಟ ಅನುಭವಿಸಿದೆ. 2025ರಲ್ಲಿ ಮಾತ್ರ ಒಟ್ಟು 27% ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಮಾತ್ರ ಇದು ಉತ್ತಮ ವರ್ಷವಾಗಿರಲಿಲ್ಲ. ಆದರೆ, 2026ರಲ್ಲಿ ಸ್ವಿಗ್ಗಿ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ ಎಂದು ಮೋತಿಲಾಲ್ ಓಸ್ವಾಲ್ ಅಭಿಪ್ರಾಯಪಟ್ಟಿದೆ.
2. ಡಿಕ್ಸನ್ ಟೆಕ್ನಾಲಜೀಸ್: ಎನ್‌ಎಸ್‌ಇಯಲ್ಲಿ ಡಿಕ್ಸನ್ ಷೇರಿನ ಪ್ರಸ್ತುತ ಮೌಲ್ಯ ₹12,447 ರೂ. ಇದ್ದು, ಕಳೆದ ಒಂದು ತಿಂಗಳಲ್ಲೇ 16% ನಷ್ಟ ಅನುಭವಿಸಿದೆ. 2025ರಲ್ಲಿ ಒಟ್ಟಾರೆ 31% ಕುಸಿತ ದಾಖಲಾಗಿದ್ದರೂ, ಮುಂದಿನ ವರ್ಷ ಈ ಷೇರು ಲಾಭ ಗಳಿಸಲಿದೆ ಎಂದು ಬ್ರೋಕರೇಜ್ ಸಂಸ್ಥೆ ಅಭಿಪ್ರಾಯ ತಿಳಿಸಿದೆ.
3. ಸುಜ್ಲಾನ್ ಎನರ್ಜಿ: ಪ್ರಸ್ತುತ ಸುಜ್ಲಾನ್ ಎನರ್ಜಿಯ ಷೇರು ಬೆಲೆ ₹53.73. 2025ರಲ್ಲಿ ಇದುವರೆಗೆ 17.76% ನಷ್ಟ ಅನುಭವಿಸಿದೆ. ಇದರ 52 ವಾರಗಳ ಗರಿಷ್ಠ ಬೆಲೆ ₹74.30 ರೂ. ಆಗಿದೆ. ಆದರೆ 2026ರಲ್ಲಿ ಸುಜ್ಲಾನ್ ಷೇರು ಲಾಭ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
4. ಜಿಂದಾಲ್ ಸ್ಟೇನ್‌ಲೆಸ್: ಎನ್‌ಎಸ್‌ಇಯಲ್ಲಿ ಜಿಂದಾಲ್ ಸ್ಟೇನ್‌ಲೆಸ್ ಷೇರಿನ ಬೆಲೆ ₹796 ರೂ. ಆಗಿತ್ತು. ಕಳೆದ ಆರು ತಿಂಗಳಲ್ಲಿ 14.69% ಮತ್ತು 2025ರಲ್ಲಿ ಇದುವರೆಗೆ 17% ಲಾಭ ಗಳಿಸಿದೆ. ಇನ್ನು ಈ ಷೇರು 2026ರಲ್ಲಿಯೂ ಮತ್ತಷ್ಟು ಲಾಭ ನೀಡುವ ನಿರೀಕ್ಷೆಯಿದೆ ಎಂದು ಬ್ರೋಕರೇಜ್ ಸಂಸ್ಥೆ ವರದಿ ಮಾಡಿದೆ.
5. ಕೋಫೋರ್ಜ್: ಸದ್ಯ ಈ ಷೇರಿನ ಬೆಲೆ ₹1,689 ಇದ್ದು, 2025ರಲ್ಲಿ ಸುಮಾರು 10% ನಷ್ಟ ಕಂಡಿದೆ. ಮುಂದಿನ ವರ್ಷ ಈ ನಷ್ಟದಿಂದ ಮೇಲೆದ್ದು, ಮತ್ತೆ ಲಾಭ ಕಾಣುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿದೆ.
6. ಕೇನ್ಸ್ ಟೆಕ್ನಾಲಜಿ: ಎನ್‌ಎಸ್‌ಇಯಲ್ಲಿ ಕೇನ್ಸ್ ಟೆಕ್ನಾಲಜಿಯ ಪ್ರಸ್ತುತ ಷೇರು ಬೆಲೆ ₹4,099.50 ರೂ. ಆದರೆ 2025ರಲ್ಲಿ ಸುಮಾರು 40% ನಷ್ಟು ಈ ಷೇರು ನಷ್ಟ ಕಂಡಿದೆ. ಆದರೆ ಮುಂದಿನ ವರ್ಷದಲ್ಲಿ ಇದು ಮೇಲೇಳಲಿದೆ ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ.
7. ವಿ-ಮಾರ್ಟ್ ರಿಟೇಲ್: ಪ್ರಸ್ತುತ ಎನ್‌ಎಸ್‌ಇಯಲ್ಲಿ ವಿ-ಮಾರ್ಟ್ ರಿಟೇಲ್ ಷೇರಿನ ಬೆಲೆ ₹741.70 ರೂ. ಆಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರು 21% ನಷ್ಟವನ್ನು ಕಂಡಿದೆ. ಆದ್ರೆ ಮುಂದಿನ ವರ್ಷದಲ್ಲಿ ಲಾಭವಾಗೋದು ಪಕ್ಕಾ ಅಂತಿದ್ದಾರೆ ಮೋತಿಲಾಲ್ ಓಸ್ವಾಲ್.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications