ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ (Israel, America and Iran War) ದಿನೇ ದಿನೇ ತೀವ್ರವಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆ, ಹಾರ್ಮುಜ್ ಜಲಸಂಧಿ (Hormuz) ಮುಚ್ಚುವಿಕೆಯ ಪರಿಣಾಮದಿಂದಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಮೇಲೆ ಯುದ್ಧದ ಪ್ರಭಾವ ಬೀರಿದ್ದು, ಷೇರು ಮಾರುಕಟ್ಟೆಯಂತೂ ಅಲ್ಲೋಲ ಕಲ್ಲೋಲವಾಗಿಬಿಟ್ಟಿದೆ (Stock Market Crash). ಇದೀಗ ಇಂದು (ಮಾರ್ಚ್ 9) ದೇಶೀಯ ಮಾರುಕಟ್ಟೆ ದೊಡ್ಡ ನಷ್ಟದೊಂದಿಗೆ ವಹಿವಾಟು ಆರಂಭಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 2,452 ಕುಸಿತದೊಂದಿಗೆ 76,441 ರಲ್ಲಿ ವಹಿವಾಟು ನಡೆಸುತ್ತಿದೆ. ಅತ್ತ ನಿಫ್ಟಿ 50, 723 ಅಂಕಗಳ ನಷ್ಟದೊಂದಿಗೆ 23,722 ರಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಬ್ಯಾಂಕ್ ನಿಫ್ಟಿ 2,441 ರ ಕುಸಿತದೊಂದಿಗೆ 55,339 ರಲ್ಲಿ ವಹಿವಾಟು ನಡೆಸುತ್ತಿದೆ.

ದೇಶೀಯ ಇಂಡೆಕ್ಸ್ ಕುಸಿತವು ಆರಂಭದಲ್ಲೇ ನಷ್ಟ ಎದುರಿಸುತ್ತಿದೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲೂ ಭಾರೀ ಕುಸಿತ ಕಾಣುವಂತಾಯಿತು. ಬೆಳಿಗ್ಗೆ 9:20 ಕ್ಕೆ ಸೆನ್ಸೆಕ್ಟ್ 2,130 ಮತ್ತು ನಿಫ್ಟಿ 651 ಅಂಕಗಳ ಕುಸಿತದೊಂದಿಗೆ ವಹಿವಾಟು ನಡೆಸುತ್ತಿತ್ತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 3% ಕುಸಿ ಕಂಡಿದ್ದರಿಂದ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಸುಮಾರು 13.5 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಎದುರಿಸುವಂತಾಗಿದೆ.
ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ:
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದೊಡ್ಡ ಮಟ್ಟದಲ್ಲಿ ಮಿಸೈಲ್ ಮತ್ತು ಡ್ರೋನ್ ದಾಳಿಗಳು ನಡೆಸಿದ್ದು, ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ನೂರಾರು ಸಾವು-ನೋವುಗಳು ಸಂಭವಿಸಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಮತ್ತು ಅಮೆರಿಕದ ಹಲವು ಪ್ರದೇಶಗಳ ಮೇಲೆ ಪ್ರತಿದಾಳಿ ನಡೆಸಿದೆ. ಈ ಪರಿಣಾಮ ಸದ್ಯ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆರಂಭವಾಗಿದೆ. ಈ ಪ್ರಭಾವ ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದೆ.
ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ:
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಅಲ್ಲದೇ ಕಚ್ಚಾ ತೈಲ ಬೆಲೆ ಒಂದೇ ದಿನದಲ್ಲಿ 10-13% ಏರಿಕೆ ಕಂಡು $100-105 ಡಾಲರ್ ಪ್ರತೀ ಬ್ಯಾರೆಲ್ ಮೀರಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ಮೂಲಕ ಸಾಗಿಸಲಾಗುತ್ತಿದ್ದ ಕಚ್ಚಾ ತೈಲ, ಇಂಧನಗಳಿಗೆ ಅಡ್ಡಿಯಾದ ಪರಿಣಾಮ ಈ ಬೆಲೆ ಏರಿಕೆ ಸಂಭವಿಸಿದೆ. ಭಾರತ ತನ್ನ 90% ಕ್ಕಿಂತಲೂ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ, ಸದ್ಯ ಆಮದು ವೆಚ್ಚವೂ ದುಬಾರಿಯಾಗಿದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಹಣದುಬ್ಬರ ಹೆಚ್ಚಳ, ರೂಪಾಯಿ ದುರ್ಬಲ ಈ ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ. ಅಲ್ಲದೇ ಏವಿಯೇಷನ್, ಸಿಮೆಂಟ್, ಪೇಂಟ್ಸ್, ಆಯಿಲ್ ಮಾರ್ಕೆಟಿಂಗ್ ಕಂಪನಿಗಳ ಷೇರುಗಳು ಕೂಡಾ ಕುಸಿತದತ್ತ ಸಾಗಿದೆ. ಈ ಎಲ್ಲಾ ಕಾರಣಗಳಿಂದ ಷೇರು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತಿದೆ.


Click it and Unblock the Notifications