2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ (Q3FY26) ವ್ಯವಹಾರ ನವೀಕರಣಗಳನ್ನು ಪ್ರಕಟಿಸಿದ ಬಳಿಕ, ಜನವರಿ 7ರ ಬುಧವಾರ ಬೆಳಗಿನ ವಹಿವಾಟಿನಲ್ಲಿ ಆಭರಣ ಕಂಪನಿಗಳ ಷೇರುಗಳು ಭಾರೀ ಏರಿಕೆ ಕಂಡವು. ಸೆನ್ಕೊ ಗೋಲ್ಡ್, ಟೈಟಾನ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಕಂಪನಿಗಳ ಷೇರುಗಳು ಹೂಡಿಕೆದಾರರ ಗಮನ ಸೆಳೆದವು.

ಬಿಎಸ್‌ಇಯಲ್ಲಿ ಸೆನ್ಕೊ ಗೋಲ್ಡ್ ಷೇರುಗಳು ಸುಮಾರು 14 ಶೇಕಡಾ ಏರಿಕೆಯಾಗಿದ್ದು, ದಿನದ ಗರಿಷ್ಠ ₹368.85ಕ್ಕೆ ತಲುಪಿದವು. ಟೈಟಾನ್ ಷೇರುಗಳು 4 ಶೇಕಡಾ ಏರಿಕೆಯೊಂದಿಗೆ ₹4,285 ಮಟ್ಟವನ್ನು ಮುಟ್ಟಿದರೆ, ಕಲ್ಯಾಣ್ ಜ್ಯುವೆಲ್ಲರ್ಸ್ ಷೇರುಗಳು 2.6 ಶೇಕಡಾ ಏರಿಕೆಯಾಗಿದ್ದು ₹513.65ಕ್ಕೆ ತಲುಪಿದವು.
ಹಬ್ಬದ ಕಾಲದ ಬಲವಾದ ಬೇಡಿಕೆಯ ಕಾರಣದಿಂದ ಈ ಮೂರು ಕಂಪನಿಗಳೂ ಉತ್ತಮ ವ್ಯವಹಾರ ಸಾಧನೆ ದಾಖಲಿಸಿವೆ. ಚಿನ್ನದ ಬೆಲೆ ಹೆಚ್ಚಿದ್ದರೂ ಕೂಡ, ಗ್ರಾಹಕರ ಖರೀದಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಗಳು ತಿಳಿಸಿವೆ.
ಸೆನ್ಕೊ ಗೋಲ್ಡ್ ಕಂಪನಿ ವರ್ಷದಿಂದ ವರ್ಷಕ್ಕೆ 51 ಶೇಕಡಾ ಬೆಳವಣಿಗೆ ಸಾಧಿಸಿದೆ. ಕಂಪನಿಯ ಒಟ್ಟು ವಾರ್ಷಿಕ ಆದಾಯ ಈಗ ಸುಮಾರು ₹8,000 ಕೋಟಿ ತಲುಪಿದೆ. ಇದು ಕಂಪನಿಯ ಬಲವಾದ ಬ್ರ್ಯಾಂಡ್ ಹೆಸರು ಮತ್ತು ನಿಷ್ಠಾವಂತ ಗ್ರಾಹಕರನ್ನು ತೋರಿಸುತ್ತದೆ. FY26ರಲ್ಲಿ 20 ಹೊಸ ಶೋರೂಮ್ ತೆರೆಯುವ ಗುರಿಯೊಂದಿಗೆ ಕಂಪನಿ ಮುನ್ನಡೆಯುತ್ತಿದೆ. ಮೊದಲ 9 ತಿಂಗಳಲ್ಲಿ 16 ಹೊಸ ಮಳಿಗೆಗಳನ್ನು ತೆರೆಯಲಾಗಿದೆ. FY26ಕ್ಕೆ 25 ಶೇಕಡಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.
ಟೈಟಾನ್ ಕಂಪನಿಯ ಆಭರಣ ವಿಭಾಗವು ಹಬ್ಬದ ಕಾಲದಲ್ಲಿ 41 ಶೇಕಡಾ ಬೆಳವಣಿಗೆ ಕಂಡಿದೆ. ಸರಾಸರಿ ಮಾರಾಟ ಬೆಲೆ ಹೆಚ್ಚಾದ ಕಾರಣ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಚಿನ್ನದ ನಾಣ್ಯಗಳ ಮಾರಾಟ ದ್ವಿಗುಣವಾಗಿದ್ದು, ಹೂಡಿಕೆ ಉದ್ದೇಶದ ಖರೀದಿ ಹೆಚ್ಚಿರುವುದನ್ನು ತೋರಿಸುತ್ತದೆ. ಮದುವೆ ಮತ್ತು ಹಬ್ಬದ ಋತುವಿನಲ್ಲಿ ಹೊಸ ವಿನ್ಯಾಸದ ಚಿನ್ನದ ಆಭರಣಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ. ಇತರ ವ್ಯವಹಾರಗಳಾದ ಕೈಗಡಿಯಾರ, ಕಣ್ಣಿನ ಆರೈಕೆ ಸೇರಿಸಿ, ಟೈಟಾನ್‌ನ ಒಟ್ಟು ಗ್ರಾಹಕ ವ್ಯವಹಾರ ಆದಾಯವು 40 ಶೇಕಡಾ ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ಭಾರತದಲ್ಲಿ 47 ಹೊಸ ಮಳಿಗೆಗಳನ್ನು ಕಂಪನಿ ತೆರೆಯಿದೆ.
ಕಂಪನಿಯ ಗ್ರೂಪ್ CFO ಮತ್ತು ಹೆಡ್ ಆಗಿರುವ ಸಂಜಯ್ ಬಂಕಾ ಅವರು, Q3 ಹಬ್ಬದ ಅವಧಿಯ ಬಲವಾದ ಬೇಡಿಕೆಯನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಚಿನ್ನದ ಬೆಲೆ ಏರಿಕೆಯ ಹಿನ್ನೆಲೆ ತೂಕ ಕಡಿಮೆ ಮತ್ತು ಬಜೆಟ್‌ಗೆ ಹೊಂದುವ ಆಭರಣಗಳತ್ತ ಗಮನಹರಿಸಲಾಗುತ್ತಿದೆ. ಮುಂದಿನ Q4 ಮದುವೆ ಮತ್ತು ಹಬ್ಬದ ಋತುಗಳಿಗೆ ಸಿದ್ಧರಾಗಿದ್ದು, FY26ರಲ್ಲಿ 20 ಹೊಸ ಶೋರೂಮ್‌ಗಳ ಗುರಿಯೊಂದಿಗೆ 25%ಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯ ವಿಶ್ವಾಸವಿದೆ." ಎಂದಿದ್ದಾರೆ.
ಒಟ್ಟಾರೆ, ಹಬ್ಬದ ಬೇಡಿಕೆ ಮತ್ತು ಬಲವಾದ ವ್ಯವಹಾರ ನವೀಕರಣಗಳ ಕಾರಣದಿಂದ ಆಭರಣ ಕಂಪನಿಗಳ ಷೇರುಗಳು ಹೂಡಿಕೆದಾರರಲ್ಲಿ ಧನಾತ್ಮಕ ವಿಶ್ವಾಸ ಮೂಡಿಸಿವೆ.


Click it and Unblock the Notifications