ಮಧ್ಯಪ್ರಾಚ್ಯದಲ್ಲಿ (Middle East) ಉಂಟಾದ ಸಂಘರ್ಷ ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅತ್ತ ಇಸ್ರೇಲ್, ಅಮೆರಿಕಾ ಮತ್ತು ಇರಾನ್ (Israel, America vs Iran) ನಡುವಿನ ಸಂಘರ್ಷ ಷೇರು ಮಾರುಕಟ್ಟೆ ಮೇಲೂ ಒತ್ತಡ ಬಿದ್ದಿದೆ. ಈ ಪರಿಣಾಮ ಕಳೆದ ವಾರವಿಡೀ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗಿತ್ತು. ಇದೀಗ ಮುಂಬರುವ ವಾರದಲ್ಲಿ ಷೇರು ಮಾರುಕಟ್ಟೆ ಹೇಗಿರಲಿದೆ ಎಂಬ ಕುತೂಹಲ ಹೂಡಿಕೆದಾರರಲ್ಲಿ ಮೂಡಿದೆ. ಹಾಗಿದ್ರೆ ನಾಳೆ (ಮಾರ್ಚ್ 9) ಷೇರು ಮಾರುಕಟ್ಟೆ (Stock Market Prediction) ಹೇಗಿರಲಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

ಇದೀಗ ಕಳೆದ ವಾರವಿಡೀ ದುರ್ಬಲ ಕಂಡಿದ್ದ ಷೇರು ಮಾರುಕಟ್ಟೆಗಳು, ಮುಂದಿನ ವಾರದಲ್ಲಿ ಹೇಗಿರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವು ಹೂಡಿಕೆದಾರರು ಈ ಕುರಿತು ಭವಿಷ್ಯ ನುಡಿದಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಷೇರು ಮಾರುಕಟ್ಟೆ ನಾಳೆ ಹೇಗಿರಲಿದೆ?
ಮುಂಬರುವ ಮಾರ್ಚ್ 9 ರಂದು ಭಾರತೀಯ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ಆರಂಭವಾಗುವ ಸಾಧ್ಯತೆಯಿದೆ. ಭಾರತೀಯ ಮಾರುಕಟ್ಟೆಗಳ ಆರಂಭಿಕ ಸೂಚಕವಾದ ಗಿಫ್ಟ್ ನಿಫ್ಟಿ, ಸೋಮವಾರ ಮತ್ತೊಂದು ತೀವ್ರ ಗ್ಯಾಪ್-ಡೌನ್ ಮೂಲಕ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇರಾನ್-ಇಸ್ರೇಲ್-ಅಮೆರಿಕ ಯುದ್ಧ ದಿನೇ ದಿನೇ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದಾಗಿ ಕಳೆದ ವಾರ ಈಕ್ವಿಟಿ ಮಾರುಕಟ್ಟೆಗಳು ಭಾರೀ ಒತ್ತಡಕ್ಕೆ ಒಳಗಾಗಿತ್ತು. ಅದೇ ಪರಿಸ್ಥಿತಿ ಮುಂದಿನ ವಾರವೂ ಮುಂದುವರೆಯುವ ಸಾಧ್ಯತೆ ಇದೆ.
ಶನಿವಾರ ಮಧ್ಯಾಹ್ನ 12:15 ರ ಸುಮಾರಿಗೆ, ಗಿಫ್ಟ್ ನಿಫ್ಟಿ ಅಥವಾ ನಿಫ್ಟಿ ಫ್ಯೂಚರ್ಸ್, ಸುಮಾರು 274 ಅಂಕಗಳು ಅಥವಾ 1.11% ರಷ್ಟು ಕುಸಿತ ಕಂಡು 24,300 ನಲ್ಲಿ ವಹಿವಾಟು ನಡೆಸಿತ್ತು. ಇದು ಮುಂದಿನ ವಾರವೂ ನಿಫ್ಟಿ 50 ಕುಸಿತದೊಂದಿಗೆ ಆರಂಭವಾಗುವ ಸಾಧ್ಯತೆಯನ್ನು ಸ್ಪಷ್ಟವಾಗಿ ಸೂಚಿಸಿದೆ. ಕಳೆದ ವಾರ ಭಾರತೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಕುಸಿತದೊಂದಿಗೆ ಅಂತ್ಯ ಕಂಡಿತ್ತು.
ಕಳೆದ ವಾರ ನಿಫ್ಟಿ 50, 2.9% ಕುಸಿತ ಕಂಡು 24,450 ರಲ್ಲಿ ತನ್ನ ವಹಿವಾಟನ್ನು ಮುಗಿಸಿತು. ಅದೇ ರೀತಿ ಸೆನ್ಸೆಕ್ಸ್ ಕೂಡ 2.9% ಇಳಿಕೆ ಕಂಡು 78,919 ರಲ್ಲಿ ಸ್ಥಿರವಾಯಿತು. ಬ್ಯಾಂಕ್ ನಿಫ್ಟಿ ಕೂಡಾ ಭಾರೀ ಕಳಪೆ ಪ್ರದರ್ಶನ ನೀಡಿತ್ತು, ಆ ಪ್ರಕಾರ 4.5% ರಷ್ಟು ಕುಸಿದು 57,783 ಕ್ಕೆ ಸಮೀಪದಲ್ಲಿ ಮುಕ್ತಾಯಗೊಂಡಿತು.
ಎನ್ರಿಚ್ ಮನಿ ಸಿಇಒ ಪೊನ್ಮುಡಿ ಆರ್ ಅವರು ಮಾರುಕಟ್ಟೆ ಬಗ್ಗೆ ಮಾತನಾಡಿದ್ದು, "ಮಾರ್ಚ್ 6, 2026 ಕ್ಕೆ ಅಂತ್ಯಗೊಂಡಿದ್ದು, ಆ ವಾರದಲ್ಲಿ, ಜಾಗತಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಕಚ್ಚಾ ತೈಲ ಬೆಲೆಗಳಲ್ಲಿನ ಏರಿಕೆಯಿಂದಾಗಿ ಭಾರತೀಯ ಇಕ್ವಿಟಿ ಮಾರುಕಟ್ಟೆಗಳು ಭಾರೀ ನಷ್ಟವನ್ನು ಕಂಡಿದೆ ಮತ್ತು ನಿರಂತರ ಮಾರಾಟದ ಒತ್ತಡಕ್ಕೆ ಒಳಗಾಗಿವೆ, ಇದು ಹೂಡಿಕೆದಾರರ ಭಾವನೆಯನ್ನು ಕುಗ್ಗಿಸುವಂತೆ ಮಾಡಿದೆ." ಎಂದು ಹೇಳಿದ್ದಾರೆ. ಜಾಗತಿಕ ಅನಿಶ್ಚಿತತೆಗಳು ಮತ್ತು ಏರುತ್ತಿರುವ ಇಂಧನ ಬೆಲೆಗಳು ಈ ದುರ್ಬಲತೆಗೆ ಪ್ರಮುಖ ಕಾರಣವಾಗಿವೆ ಎಂದು ಹೇಳಿದ್ದಾರೆ.
ಕುಸಿತದ ಹಿಂದಿನ ಕಾರಣವೇನು?
ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ವಿಶೇಷವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವೇ ಮುಖ್ಯ ಕಾರಣವಾಗಿದೆ. ಈ ಪರಿಸ್ಥಿತಿಯಿಂದಾಗಿ ಜಾಗತಿಕ ತೈಲ ಸಾಗಣೆಯ ಬಹುಮುಖ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೂ ಪರಿಣಾಮ ಬಿದ್ದಿದೆ. ಈ ಅನಿಶ್ಚಿತತೆಯು ವಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಿತು, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $90-95 ಬೆಲೆಯನ್ನು ದಾಟಿತು.
ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಭಾರತಕ್ಕೆ ದೊಡ್ಡ ಅಡ್ಡಿಯಾಗಿ ಮಾರ್ಪಟ್ಟಿದೆ. ಏಕೆಂದರೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರ ವಾಗಿದ್ದು, ತೈಲ ಬೆಲೆಗಳಲ್ಲಿನ ನಿರಂತರ ಹೆಚ್ಚಳವು ಭಾರತದ ಮೇಲೂ ಪ್ರಭಾವ ಬೀರಲಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications