Investment Tips: ಜಸ್ಟ್‌ 250 ರೂ.ಗೆ ಈ ಎಸ್‌ಐಪಿ ಆರಂಭಿಸಿ! ಕೆಲವೇ ವರ್ಷಗಳಲ್ಲಿ ನೀವು ಆಗ್ತೀರಿ ಲಕ್ಷಾಧಿಪತಿ

ಹೂಡಿಕೆ (Investment) ಮಾಡಬೇಕೆಂಬುದು ಹಲವರು ಕನಸು. ಕೆಲವರು ಹೆಚ್ಚು ಹೂಡಿಕೆ ಮಾಡಿದ್ರೆ, ಇನ್ನೂ ಕೆಲವರು ತಾವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತಾರೆ. ಇನ್ನು ಕೆಲವೇ ಮೊತ್ತದೊಂದಿಗೆ ಹೂಡಿಕೆ ಆರಂಭಿಸಿ ಲಕ್ಷಾಂತರ ರೂಪಾಯಿ ಲಾಭಗಳಿಸಬಹುದು. ಹೌದು, ಹಾಗಿದ್ರೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡದೆಯೇ, ಚಹಾಗೆ ಖರ್ಚು ಮಾಡುವ ಹಣದಲ್ಲಿ ಲಕ್ಷಾಧಿಪತಿಗಳಾಗಬಹುದು. ಅದಕ್ಕಾಗಿ ಎಸ್‌ಬಿಐ ಮ್ಯೂಚುವಲ್‌ ಫಂಡ್‌ನ ಜನ್‌ನಿವೇಶ್‌ ಎಸ್‌ಐಪಿ (SBI Jan nivesh SIP) ಅತ್ಯುತ್ತಮ ಉದಾಹರಣೆಯಾಗಿದೆ.

ಜಸ್ಟ್‌ 250 ರೂ.ಗೆ ಈ ಎಸ್‌ಐಪಿ ಆರಂಭಿಸಿ! ನೀವೇ ಲಕ್ಷಾಧಿಪತಿ

ಹೂಡಿಕೆ ಎಂದರೆ ದೊಡ್ಡ ಮೊತ್ತದ ಹಣ ಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ, ಲಕ್ಷಾಂತರ ರೂಪಾಯಿಗಳಿಲ್ಲದೆ ಕೇವಲ ದಿನನಿತ್ಯದ ಚಹಾ ಖರ್ಚಿನಲ್ಲೇ ಕೋಟ್ಯಾಧಿಪತಿಗಳಾಗಬಹುದು. ಇದಕ್ಕೆ ಎಸ್‌ಬಿಐ ಮ್ಯೂಚುಯಲ್ ಫಂಡ್‌ನ ಜನ್‌ನಿವೇಶ್ ಎಸ್‌ಐಪಿ ಅತ್ಯುತ್ತಮ ಉದಾಹರಣೆಯಾಗಿದೆ.

ಭವಿಷ್ಯದ ದೃಷ್ಟಿಯಿಂದ ಹೆಚ್ಚಿನವರು ಹಣ ಸೇವಿಂಗ್ಸ್‌ ಮಾಡಲು ಪ್ಲಾನ್‌ ಮಾಡುತ್ತಾರೆ. ಹೆಚ್ಚಿನವರು ಹೂಡಿಕೆ ಮಾಡಿ, ಹೆಚ್ಚು ಲಾಭಗಳಿಸಬೇಕೆಂದರೆ, ಹೆಚ್ಚಿನ ಹಣ ಬೇಕಾಗುತ್ತದೆ ಅಂದುಕೊಂಡಿರುತ್ತಾರೆ. ಆದ್ರೆ ನೀವು ಪ್ರತಿದಿನ ಕುಡಿಯುವ ಚಹಾದ ಹಣದಲ್ಲೇ ನೀವು ಶ್ರೀಮಂತರಾಗಬಹುದು. ಹೌದು, ಅದಕ್ಕಾಗಿ ಎಸ್‌ಬಿಐ ಮ್ಯೂಚುವಲ್‌ ಫಂಡ್‌ನ ಜನನಿವಶ್‌ ಎಸ್‌ಐಪಿ ಶುರು ಮಾಡಿ ಅಪಾರ ಸಂಪತ್ತು ಸಂಪಾದಿಸಬಹುದು. ಅಂದರೆ ಪ್ರತಿದಿನ 8.5 ರೂ.ನಂತೆ, ತಿಂಗಳಿಗೆ 250 ರೂ ಹೂಡಿಕೆ ಮಾಡುವ ಮೂಲಕ ಈ ಹೂಡಿಕೆ ಆರಂಭಿಸಬಹುದು.

ಜನ್‌ನಿವೇಶ್ ಎಸ್‌ಐಪಿ ಎಂದರೆ ಏನು?
ಜನ್‌ನಿವೇಶ್ ಎಸ್‌ಐಪಿ ಒಂದು ವ್ಯವಸ್ಥಿತ ಹೂಡಿಕೆ ಯೋಜನೆಯಾಗಿದೆ. ಇದನ್ನು ಕಡಿಮೆ ಹಣದೊಂದಿಗೆ ನೀವು ಸ್ಟಾರ್ಟ್‌ ಮಾಡಬಹುದು. ಇದರಿಂದ ಕಡಿಮೆ ಹೂಡಿಕೆ ಮಾಡಬೇಕು ಅಂದುಕೊಂಡವರಿಗೆ ಅನುಕೂಲವಾಗಲಿದೆ. ಇನ್ನು ಇಲ್ಲಿ ನೀವು ತಿಂಗಳಿಗೆ, ವಾರಕ್ಕೂ ಹೂಡಿಕೆ ಆಯ್ಕೆಗಳನ್ನು ಮಾಡಿಕೊಳ್ಳಬಹುದು.

ಹೂಡಿಕೆ ಮಾಡಿದ ಹಣ ಎಲ್ಲಿಗೆ ಹೋಗುತ್ತದೆ? ಜನ್‌ನಿವೇಶ್ ಎಸ್‌ಐಪಿ ಮೂಲಕ ನೀವು ಹೂಡಿಕೆ ಮಾಡಲು ಶುರು ಮಾಡಿದ್ರೆ, ಆ ಹೂಡಿಕೆಯ ಹಣ ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ಗೆ ಹೋಗುತ್ತದೆ. ಇದು ಒಂದು ಹೈಬ್ರಿಡ್ ಫಂಡ್ ಆಗಿದ್ದು, ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಮ್ಮ ಹಣವನ್ನು ಇಕ್ವಿಟಿ (ಷೇರುಗಳು) ಮತ್ತು ಡೆಟ್ (ಬಾಂಡ್‌ಗಳು) ನಡುವೆ ಸ್ವಯಂಚಾಲಿತವಾಗಿ ಬದಲಾಯಿಸುವ ಮೂಲಕ ಅಪಾಯವನ್ನು ಸರಿದೂಗಿಸುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನು ಮ್ಯೂಚುಯಲ್ ಫಂಡ್ ಜಗತ್ತಿಗೆ ತರುವ ಮೂಲಕ ದೇಶಾದ್ಯಂತ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.

ಪ್ರತಿ ತಿಂಗಳು ₹250 ಹೂಡಿಕೆಯಿಂದ ಹೀಗೆ ಆರಂಭಿಸಿ? ಚಕ್ರಬಡ್ಡಿಯ (ಕಂಪೌಂಡಿಂಗ್) ಶಕ್ತಿಯಿಂದಾಗಿ, ಪ್ರತಿ ತಿಂಗಳು ಮಾಡುವ ಸಣ್ಣ ಹೂಡಿಕೆಯು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗಿ ನಿಮಗೆ ಸಿಗುತ್ತದೆ. ಇನ್ನು ನೀವು ಹೂಡಿಕೆ ಮಾಡಿದ ಹಣದ ಮೇಲಿನ ಆದಾಯವು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದರೂ, ಅವುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಭವಿಷ್ಯದ ಆದಾಯವನ್ನು ಅಂದಾಜಿಸಬಹುದು. ಉದಾಹರಣೆಗೆ, ಪ್ರತಿ ತಿಂಗಳು ₹250 ರಂತೆ ಶೇ 12% ವಾರ್ಷಿಕ ಆದಾಯದೊಂದಿಗೆ ಹೂಡಿಕೆ ಮಾಡಿದರೆ, 10 ವರ್ಷಗಳಲ್ಲಿ ನಿಮ್ಮ ಹೂಡಿಕೆಯು ₹30,000 ರೂ. ಆದ್ರೆ, ಒಟ್ಟು ಸುಮಾರು ₹69,665 ಆಗುತ್ತದೆ.

ಅದೇ ರೀತಿ, 20 ವರ್ಷಗಳಿಗೆ ₹60,000 ಹೂಡಿಕೆಯು ಸುಮಾರು ₹4.9 ಲಕ್ಷಗಳಾಗಿ, ಮತ್ತು 30 ವರ್ಷಗಳಲ್ಲಿ ನಿಮ್ಮ ₹90,000 ಹೂಡಿಕೆಯು ₹7.70 ಲಕ್ಷಗಳಾಗಿ ಪಡೆಯಬಹುದು. ಈ ಲೆಕ್ಕಾಚಾರಗಳು ಕೇವಲ ಅಂದಾಜಿನಲ್ಲಿ ಹೇಳಲಾಗಿದೆ. ಆದರೆ ಆದಾಯದ ಮೊತ್ತ ಮಾರುಕಟ್ಟೆ ಬೆಳವಣಿಗೆಗಳಿಗೆ ಸಂಬಂಧಿಸಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಖು. ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಪ್ರಾರಂಭವಾದಾಗಿನಿಂದ ವಾರ್ಷಿಕವಾಗಿ ಶೇ 11.63% ಆದಾಯವನ್ನು ನೀಡಿದೆ. ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ ಮತ್ತು ಅದರ ಹಿಂದಿನ ಆದಾಯವು ಭವಿಷ್ಯದ ಲಾಭಗಳಿಗೆ ಖಾತರಿಯಲ್ಲ ಎಂಬುದನ್ನು ಗಮನಿಸಬೇಕು.

ಹೂಡಿಕೆ ಹೇಗೆ ಪ್ರಾರಂಭಿಸುವುದು? ಜನ್‌ನಿವೇಶ್ ಎಸ್‌ಐಪಿ ಪ್ರಾರಂಭಿಸುವುದು ತುಂಬಾ ಸರಳವಾಗಿದೆ. ಮೊದಲು ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಈ ಯೋಜನೆಯು ಎಸ್‌ಬಿಐ ಯೋನೋ ಆ್ಯಪ್, ಪೇಟಿಎಂ ಮತ್ತು ಗ್ರೋಂತಹ ಮೊಬೈಲ್‌ ಆ್ಯಪ್‌ಗಳಲ್ಲಿ ಲಭ್ಯವಿದೆ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+