ಯಾವುದಾದರೂ ಹಬ್ಬಗಳು ಬಂದಾಗ, ಸಾರ್ವತ್ರಿಕ ರಜೆ (Holiday) ಘೋಷಣೆಯಾದಾಗ, ಶನಿವಾರ-ಭಾನುವಾರ ಭಾರತೀಯ ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತದೆ. ಇದೀಗ ನವೆಂಬರ್ 5 ರ ಗೊಂದಲ ಹೂಡಿಕೆದಾರರಲ್ಲಿ ಮನೆ ಮಾಡಿದೆ. ಗುರು ನಾನಕ್ ಜಯಂತಿ (Guru Nanak Jayanti 2025) ಪ್ರಯುಕ್ತ ಭಾರತೀಯ ಷೇರು ಮಾರುಕಟ್ಟೆಗಳಾದ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE)ಗಳು ನಾಳೆ ಅಂದರೆ ನವೆಂಬರ್ 5 ರಂದು ಮುಚ್ಚಿರುತ್ತದೆಯೇ? ತೆರೆದಿರುತ್ತದೆಯೇ? ಎಂಬ ಪ್ರಶ್ನೆ ಮೂಡಿದೆ. ಇದೀಗ ಈ ಗೊಂದಲಗಳಿಗೆ ಸ್ಪಷ್ಟನೆ ಇಲ್ಲಿದೆ ಓದಿ.

ನವೆಂಬರ್ 5, ಗುರು ನಾನಕ್ ಜಯಂತಿ ಹಿನ್ನೆಲೆ ನಾಳೆ ಒಂದು ದಿನ ಭಾರತೀಯ ಷೇರು ಮಾರುಕಟ್ಟೆಗೆ ರಜೆ ಘೋಷಣೆ ಮಾಡಲಾಗಿದೆ. ಸಿಖ್ ಸಮುದಾಯದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಗುರುನಾನಕ್ ಜಯಂತಿ ಕೂಡಾ ಒಂದು. ಅದೇ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದು, ಈ ದಿನ ಷೇರು ಮಾರುಕಟ್ಟೆಯಲ್ಲಿ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂದು ಹೇಳಲಾಗಿದೆ.
ನವೆಂಬರ್ 5 ರಂದು ಷೇರು ಮಾರುಕಟ್ಟೆಗೆ ರಜೆ:
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ರಜಾ ದಿನಗಳ ಅಧಿಕೃತ ವೇಳಾಪಟ್ಟಿಯ ಪ್ರಕಾರ, ದೇಶದ ಹಲವು ಕಡೆಗಳಲ್ಲಿ ಗುರು ನಾನಕ್ ಜಯಂತಿಯನ್ನು ಬಹಳ ಪವಿತ್ರವಾಗಿ ಆಚರಿಸುವುದರಿಂದ ಈ ದಿನ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ನವೆಂಬರ್ 5 ರಂದು, ಈಕ್ವಿಟಿ, ಡೆರಿವೇಟಿವ್ಸ್, ಸೆಕ್ಯುರಿಟೀಸ್ ಲೆಂಡಿಂಗ್ ಆಂಡ್ ಬಾರೋಯಿಂಗ್ ಮತ್ತು ಕರೆನ್ಸಿ ಡೆರಿವೇಟಿವ್ಸ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಯಾವುದೇ ಕಾರ್ಯಾಚರಣೆ ಇರುವುದಿಲ್ಲ ಎನ್ನಲಾಗಿದೆ. ಇನ್ನು ಕ್ಯಾಲೆಂಡರ್ ಪ್ರಕಾರ ಇನ್ನು ಗುರುನಾನಕ್ ಜಯಂತಿ ಮತ್ತು ಡಿಸೆಂಬರ್ 25 ಕ್ರಿಸ್ಮಸ್ ಪ್ರಯುಕ್ತ ಮಾತ್ರ ಷೇರು ಮಾರುಕಟ್ಟೆಗೆ ರಜೆ ಇರಲಿದೆ. ಇದರೊಂದಿಗೆ ಪ್ರತೀ ಶನಿವಾರ ಮತ್ತು ಭಾನುವಾರ ಕೂಡಾ ಮುಚ್ಚಿರುತ್ತದೆ.
ನವೆಂಬರ್ 5 ರಂದು ಷೇರು ಮಾರುಕಟ್ಟೆಗೆ ರಜೆ ಇರಲಿದೆ. ಆದ್ರೆ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ಮಾತ್ರ ಭಾಗಶಃ ವಹಿವಾಟು ನಡೆಸಲಿದೆ ಎಂದು ವರದಿಯಾಗಿದೆ. ಅಂದರೆ MCX ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಮುಚ್ಚಿದ್ದರೆ, ಸಂಜೆ 5 ರಿಂದ ರಾತ್ರಿ 11:30 ಅಥವಾ 11:55 ವರೆಗೆ ಎಂದಿನಂತೆ ವಹಿವಾಟು ನಡೆಸಲಿದೆ ಎನ್ನಲಾಗಿದೆ. ಆದ್ದರಿಂದ ಈ ಟೈಮಲ್ಲಿ ಹೂಡಿಕೆದಾರರು ತನ್ನ ಸರಕು ವಹಿವಾಟು ನಡೆಸಬಹುದು.
ಗುರು ನಾನಕ್ ಜಯಂತಿ ಏಕೆ ಆಚರಿಸುತ್ತಾರೆ?
ಸಿಖ್ ಧರ್ಮದ ಸಂಸ್ಥಾಪಕ ಮತ್ತು ಸಿಖ್ ಗುರುಗುಳಾದ ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನಾಗಿ ಈ ದಿನ ಆಚರಿಸಲಾಗುತ್ತದೆ. ಇನ್ನು ಗುರು ನಾನಕ್ ಜಯಂತಿಯನ್ನು "ಗುರುಪುರಬ್" ಅಥವಾ "ಪ್ರಕಾಶ್ ಪರ್ವ್" ಅಂತಾನೂ ಕರೆಯುತ್ತಾರೆ. ಇನ್ನು ಗುರುನಾನಕ್ ಹಬ್ಬ, ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು, ಬಹುತೇಕ ನವೆಂಬರ್ ತಿಂಗಳಲ್ಲಿ ಬರುತ್ತದೆ.
ಗುರು ನಾನಕ್ ಜಯಂತಿಯಂದು ಪ್ರಪಂಚದಾದ್ಯಂತ ಸಿಖ್ ಸಮುದಾಯದವರು ಅತ್ಯಂತ ಪವಿತ್ರವಾಗಿ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ಕೀರ್ತನೆಗಳು, ಮೆರವಣಿಗೆಗಳನ್ನು ನಡೆಸಲಾಗುತ್ತದೆ. ಅಲ್ಲದೇ ಈ ದಿನ ಗುರುದ್ವಾರಗಳಲ್ಲಿ ಆಯೋಜಿಸಲಾದ ಸಮುದಾಯ ಭೋಜನಗಳನ್ನು ಸಹ ಆಯೋಜಿಸಲಾಗಿದೆ. ಗುರು ನಾನಕ್ ಅವರ ಬೋಧನೆಯನ್ನು ಇಲ್ಲಿ ಪ್ರತಿಬಿಂಬಿಸಲಿದ್ದು, ಹಲವರಿಗೆ ಸ್ಪೂರ್ತಿ ನೀಡಲಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆಯ ನಿರೀಕ್ಷೆ: ಹೂಡಿಕೆದಾರರೇ ಎಚ್ಚರ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಕಚ್ಚಾ ತೈಲ ಬೆಲೆ ಏರಿಕೆ: ನಿಮ್ಮ ಹೂಡಿಕೆ ಉಳಿಸಿಕೊಳ್ಳುವುದು ಹೇಗೆ?

ಷೇರು ಮಾರುಕಟ್ಟೆ ಅಲುಗಾಡಿಸಲು ಸಜ್ಜಾದ ಪ್ರಮುಖ ಕಂಪನಿಗಳ ರಿಸಲ್ಟ್

ಕಚ್ಚಾ ತೈಲ ಬೆಲೆ ಇಳಿಕೆ: ಈ ಷೇರುಗಳಲ್ಲಿ ಹೂಡಿಕೆ ಮಾಡಿ!

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಲಾಭ ಸಿಗುತ್ತಾ?



Click it and Unblock the Notifications