ಇತ್ತೀಚಿನ ದಿನಗಳಲ್ಲಿ ಕೆಲವು ಸಾರ್ವಜನಿಕ ವಲಯದ ಕೆಲವು ಪ್ರಮುಖ ಬ್ಯಾಂಕುಗಳು, ಬಲವಾದ ಷೇರು ಮಾರುಕಟ್ಟೆ ಚಟುವಟಿಕೆ ತೋರಿಸುತ್ತಿವೆ. ಇದರ ಜೊತೆಗೆ ಲಾಭಾಂಶ ಘೋಷಣೆ ಮತ್ತು ದೀರ್ಘಾವಧಿಯ ಲಾಭ ದರ್ಶನದಿಂದ ಹೂಡಿಕೆದಾರರ ಗಮನವನ್ನೂ ಸೆಳೆದಿವೆ. ಈ ಹಿನ್ನೆಲೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಬ್ಯಾಂಕ್ ಆಫ್ ಬರೋಡಾ (BOB) ಮತ್ತು ಕೆನರಾ ಬ್ಯಾಂಕ್‌ಗಳನ್ನು ಪ್ರಮುಖ ಹಣಕಾಸು ಅಂಶಗಳ ಆಧಾರದ ಮೇಲೆ ಹೋಲಿಸಿ ವಿಶ್ಲೇಷಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು (PSU Banks) ಬಲವಾದ ಷೇರು ಮಾರುಕಟ್ಟೆ ಚಟುವಟಿಕೆ, ಲಾಭಾಂಶ ಘೋಷಣೆ ಮತ್ತು ದೀರ್ಘಾವಧಿಯ ಲಾಭದರ್ಶನದಿಂದ ಹೂಡಿಕೆದಾರರ ಗಮನ ಸೆಳೆದಿವೆ. ಈ ಹಿನ್ನಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BoB) ಮತ್ತು ಕೆನರಾ ಬ್ಯಾಂಕ್‌ಗಳನ್ನು ಪ್ರಮುಖ ಹಣಕಾಸು ಅಂಶಗಳ ಆಧಾರದ ಮೇಲೆ ಹೋಲಿಸಿ ವಿಶ್ಲೇಷಿಸಲಾಗಿದೆ.
ಹಾಗಾದ್ರೆ ಯಾವ್ಯಾವ ಬ್ಯಾಂಕುಗಳ ಮಾರುಕಟ್ಟೆ ಮೌಲ್ಯ, ಲಾಭಾಂಶ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
2025ರ ಜುಲೈ 12ರ ಎನ್‌ಎಸ್‌ಇ ಅಂಕಿಅಂಶಗಳ ಪ್ರಕಾರ:
SBI - ₹7,21,644.78 ಕೋಟಿ
PNB - ₹1,26,364.91 ಕೋಟಿ
ಬ್ಯಾಂಕ್ ಆಫ್ ಬರೋಡಾ - ₹1,22,535.43 ಕೋಟಿ
ಕೆನರಾ ಬ್ಯಾಂಕ್ - ₹1,01,291.96 ಕೋಟಿ
ಇವುಗಳ ಪೈಕಿ SBI ಅತ್ಯಂತ ದೊಡ್ಡ ಮಾರುಕಟ್ಟೆ ಮೌಲ್ಯ ಹೊಂದಿದ ಬ್ಯಾಂಕ್ ಆಗಿದ್ದು, ಭಾರತದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ.
2025ರ ಲಾಭಾಂಶ ಘೋಷಣೆಯ ಪ್ರಕಾರ:
SBI - ₹15.90 ಪ್ರತಿ ಷೇರು
PNB - ₹2.90 ಪ್ರತಿ ಷೇರು
ಬ್ಯಾಂಕ್ ಆಫ್ ಬರೋಡಾ - ₹8.35 ಪ್ರತಿ ಷೇರು
ಕೆನರಾ ಬ್ಯಾಂಕ್ - ₹4.00 ಪ್ರತಿ ಷೇರು
ಹೂಡಿಕೆದಾರರಿಗೆ ಹೆಚ್ಚು ಲಾಭಾಂಶ ನೀಡಿದ ಬ್ಯಾಂಕ್ ಎಂದರೆ ನಿಶ್ಚಿತವಾಗಿಯೂ SBI.
ಪ್ರಸ್ತುತ ಷೇರು ಬೆಲೆ (ಜುಲೈ 12, 2025)
SBI - ₹808.60
PNB - ₹109.95
BoB - ₹236.95
ಕೆನರಾ ಬ್ಯಾಂಕ್ - ₹111.67
SBI ಷೇರು ಬೆಲೆ ಇತರ ಮೂರು ಬ್ಯಾಂಕುಗಳಿಗಿಂತ ಎತ್ತರದಲ್ಲಿದೆ, ಇದು ಮಾರುಕಟ್ಟೆಯ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಷೇರು ಗಳಿಕೆ - ದೀರ್ಘಾವಧಿಯ ಲಾಭದರ್ಶನ:
SBI ಬ್ಯಾಂಕ್:
1 ವಾರ, 1 ತಿಂಗಳು, 1 ವರ್ಷ: -0.41%, -0.79%, -5.61%
2 ವರ್ಷ, 3 ವರ್ಷ, 5 ವರ್ಷ, 10 ವರ್ಷ: +37.39%, +65.61%, +313.24%, +198.89%
PNB ಬ್ಯಾಂಕ್:
1 ವಾರ, 1 ತಿಂಗಳು, 1 ವರ್ಷ, 10 ವರ್ಷ: -0.72%, -0.23%, -7.79%, -24.10%
2 ವರ್ಷ, 3 ವರ್ಷ, 5 ವರ್ಷ: +82.08%, +255%, +213.98%
ಬ್ಯಾಂಕ್ ಆಫ್ ಬರೋಡಾ:
1 ವಾರ, 1 ತಿಂಗಳು, 1 ವರ್ಷ: +2.09%, -5.11%, -9.13%
2 ವರ್ಷ, 3 ವರ್ಷ, 5 ವರ್ಷ, 10 ವರ್ಷ: +32.24%, +140.67%, +539.12%, +53.87%
ಕೆನರಾ ಬ್ಯಾಂಕ್:
1 ವಾರ, 1 ತಿಂಗಳು, 1 ವರ್ಷ: -2.14%, -4.48%, -1.97%
2 ವರ್ಷ, 3 ವರ್ಷ, 5 ವರ್ಷ, 10 ವರ್ಷ: +68.35%, +157.78%, +434.91%, +96.54%
ದೀರ್ಘಾವಧಿಯ ದೃಷ್ಟಿಯಿಂದ ನೋಡಿದರೆ, SBI ಮತ್ತು BoB ಅತ್ಯುತ್ತಮ ಮೌಲ್ಯ ವೃದ್ಧಿ ತೋರಿಸಿವೆ. SBI ಲಾಭಾಂಶ ಮತ್ತು ಸ್ಥಿರ ಮಾರುಕಟ್ಟೆ ಸ್ಥಾನಮಾನದಿಂದ ಆಕರ್ಷಕ ಆಯ್ಕೆಯಾಗಿದರೆ, BoB ಮತ್ತು ಕೆನರಾ ಬ್ಯಾಂಕ್ ವೇಗವಂತ ಲಾಭದರ್ಶನದಿಂದ ಗಮನ ಸೆಳೆಯುತ್ತಿವೆ. PNB ಇತ್ತೀಚೆಗೆ ಹಿನ್ನಡೆಯಾದರೂ, 2-5 ವರ್ಷಗಳಲ್ಲಿ ಉತ್ತಮ ಲಾಭ ತೋರಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ತ ಸೆಳೆಯಬಹುದು.


Click it and Unblock the Notifications