ಕಳೆದ ವಾರ ಆರಂಭವಾದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ (Israel-Iran War), ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಅದರಲ್ಲೂ ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಕುಸಿತದಲ್ಲೇ ಇದ್ದು, ಯಾವಾಗ ಏರಿಕೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ. ಮಾರ್ಚ್ 4, ಬುಧವಾರದಂದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ (Stock Market Crash) ಭಾರೀ ಕುಸಿತವಾಗಿದೆ. ಸೆನ್ಸೆಕ್ಸ್ 1,750 ಅಂಕಗಳನ್ನು (ಶೇ 2.2) ಇಳಿಕೆಯಾಗಿ ಆರಂಭಿಕ ವಹಿವಾಟಿನಲ್ಲಿ, ದಿನದ ಕನಿಷ್ಠ ಮಟ್ಟ 78,480.63ಕ್ಕೆ ಇಳಿದರೆ, ನಿಫ್ಟಿ 50 (Nifty 50) ಸಹ 500 ಅಂಕಗಳನ್ನು (ಶೇ 2.1) ಕಳೆದುಕೊಂಡು 24,334.85ರ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಕುಸಿತದಿಂದ ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ₹9 ಲಕ್ಷ ಕೋಟಿ ಸಂಪತ್ತು ನಷ್ಟವಾಗಿದೆ.

ಯುಎಸ್-ಇರಾನ್ ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ, ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರು ಅಪಾಯಕಾರಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ, ಭಾರತೀಯ ಷೇರು ಮಾರುಕಟ್ಟೆ ತೀವ್ರ ನಷ್ಟವನ್ನು ಅನುಭವಿಸಿತು. ಇದು ಮಾರುಕಟ್ಟೆಯಲ್ಲಿ 'ಬ್ಲಡ್‌ಬಾತ್ ವಹಿವಾಟಿ'ಗೆ ಕಾರಣವಾಯಿತು.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಕಚ್ಚಾ ತೈಲ ಬೆಲೆಗಳ ಭಾರೀ ಏರಿಕೆಗೆ ಕಾರಣವಾಯಿತು. ಇದು ಹೊಸ ಹಣದುಬ್ಬರದ ಕಳವಳಗಳನ್ನು ಸೃಷ್ಟಿಸಿದ್ದು, ಯುಎಸ್ ಫೆಡರಲ್ ರಿಸರ್ವ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬರಬೇಕಿದ್ದ ಬಡ್ಡಿದರ ಕಡಿತದ ನಿರೀಕ್ಷೆಗೆ ತೀವ್ರ ಹಿನ್ನಡೆ ನೀಡಿದೆ.
ಬುಧವಾರ ಬೆಳಿಗ್ಗೆ 9:20ರ ಸುಮಾರಿಗೆ ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ₹448 ಲಕ್ಷ ಕೋಟಿಗೆ ಕುಸಿತ ಕಂಡಿತು. ಇದು ಹಿಂದಿನ ಸೆಷನ್‌ನಲ್ಲಿದ್ದ ₹457 ಲಕ್ಷ ಕೋಟಿಗೆ ಹೋಲಿಸಿದರೆ ಸುಮಾರು ₹9 ಲಕ್ಷ ಕೋಟಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಈ ಪರಿಣಾಮ ಸದ್ಯ ಹೂಡಿಕೆದಾರರು ಭಾರೀ ನಷ್ಟದಲ್ಲಿದ್ದಾರೆ.
ಮಾರುಕಟ್ಟೆಯ ಕುಸಿತಕ್ಕೆ ಕಾರಣಗಳೇನು?:
ಯುಎಸ್-ಇರಾನ್ ಯುದ್ಧ: ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನೇ ದಿನೇ ತೀವ್ರವಾಗುತ್ತಿದೆ. ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ನಂತರ, ಯುಎಸ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಕ್ಷಿಪಣಿ ದಾಳಿಗಳು ಹೆಚ್ಚಾಗುತ್ತಿದ್ದು, ಮಂಗಳವಾರ ಇಸ್ರೇಲ್ ಟೆಹ್ರಾನ್ ಮತ್ತು ಬೈರುತ್‌ನಲ್ಲಿ ಮತ್ತೆ ದಾಳಿಗಳು ನಡೆದಿದೆ ಎನ್ನಲಾಗಿದೆ..
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ, ಯುದ್ಧವು ಮುಂದಿನ ನಾಲ್ಕರಿಂದ ಐದು ವಾರಗಳಲ್ಲಿ ಅಂತ್ಯಗೊಳ್ಳಬಹುದು. ಆದರೆ ಅದಕ್ಕಿಂತಲೂ ಹೆಚ್ಚು ದಿನ ನಡೆದರೆ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಈ ಕುರಿತು ಮಾತನಾಡಿದ್ದು, 'ಯುದ್ಧ ತೀವ್ರವಾಗಿ, ಕಚ್ಚಾ ತೈಲ ಬೆಲೆ ಏರುತ್ತಿರುವಾಗ, ಮಾರುಕಟ್ಟೆಯಲ್ಲೂ ಭಾರೀ ಕುಸಿತ ಕಾಣುತ್ತಿದೆ.' ಎಂದು ಹೇಳಿದ್ದಾರೆ.
ರೂಪಾಯಿ ಮೌಲ್ಯ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿತ: ಯುಎಸ್-ಇರಾನ್ ಯುದ್ಧದಿಂದ ಉಂಟಾದ ಹಣದುಬ್ಬರದ ನಡುವೆ, ಯುಎಸ್ ಡಾಲರ್ ಇಂಡೆಕ್ಸ್ ಬಹು-ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು. ಇದರಿಂದ ಬುಧವಾರ ಭಾರತೀಯ ರೂಪಾಯಿ 66 ಪೈಸೆ ಕುಸಿದು, ಯುಎಸ್ ಡಾಲರ್ ವಿರುದ್ಧ 92.15 ರ ಸಾರ್ವಕಾಲಿಕ ಕನಿಷ್ಠಕ್ಕೆ ತಲುಪಿತು.
ಕಚ್ಚಾ ತೈಲ ಬೆಲೆ ಏರಿಕೆ: ಯುಎಸ್-ಇರಾನ್ ಉದ್ವಿಗ್ನತೆ ನಡುವೆ, ತೈಲ ಸಾಗಾಟದಲ್ಲಿ ಅಡ್ಡಿಯಾದ ಕಾರಣ, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $82 ಡಾಲರ್‌ಗಿಂತ ಹೆಚ್ಚಾಗಿದ್ದು, ಮತ್ತು ಡಬ್ಲ್ಯುಟಿಐ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $75 ಡಾಲರ್‌ಗಿಂತ ಹೆಚ್ಚಿಗೆ ವಹಿವಾಟು ನಡೆಸುತ್ತಿದೆ.
ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಏರಿಕೆಯು ಭಾರತದ ಆರ್ಥಿಕ ಹೊರೆಯನ್ನು ಹೆಚ್ಚಿಸಿದ್ದು, ರೂಪಾಯಿಯನ್ನು ದುರ್ಬಲಗೊಳಿಸಿ, ಹಣದುಬ್ಬರವನ್ನು ಹೆಚ್ಚಿಸಿದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications