ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ (Israel-America And Iran War), ಭಾರತೀಯ ಷೇರು ಮಾರುಕಟ್ಟೆ (Indian Stock Market) ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ಈ ವಾರವಿಡೀ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿತ್ತು. ಅದೇ ರೀತಿ ಇಂದು (ಮಾರ್ಚ್ 13) ಕೂಡಾ ಕುಸಿತದೊಂದಿಗೆ ಮಾರುಕಟ್ಟೆ ಆರಂಭಿಕ ವಹಿವಾಟು ನಡೆಸುತ್ತಿದೆ. ಅತ್ತ ಮಧ್ಯಪ್ರಾಚ್ಯದ ಸಂಘರ್ಷ, ಗಗನಕ್ಕೇರುತ್ತಿರುವ ಕಚ್ಚಾ ತೈಲ ಬೆಲೆ ಹೂಡಿಕೆದಾರರ ನಿದ್ದೆಗೆಡಿಸುತ್ತಿದೆ. ಆರಂಭಿಕ ವಹಿವಾಟಿನೊಂದಿಗೆ ಬೆಳಿಗ್ಗೆ 9:21 ಗಂಟೆಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE)ನ ಪ್ರಮುಖ ಇಂಡೆಕ್ಸ್ ಸೆನ್ಸೆಕ್ಸ್ 672.13 ಪಾಯಿಂಟ್‌ಗಳ ಕುಸಿತ ಕಂಡು, ಶೇ.088% ರಷ್ಟು ಕುಸಿತ ಕಂಡಿತ್ತು. ಅಲ್ಲದೇ ನಿಫ್ಟಿ 50 ಸಹ 205 ಪಾಯಿಂಟ್‌ಗಳಷ್ಟು ಕುಸಿತದಲ್ಲಿ, 23,430.40 ರಲ್ಲಿ ವಹಿವಾಟು ನಡೆಸುತ್ತಿತ್ತು.

ಇದೀಗ ಬೆಳಿಗ್ಗೆ 9:42 ರ ಹೊತ್ತಿಗೆ ಬಿಎಸ್‌ಇ ಸೆನ್ಸೆಕ್ಸ್ 582 ಕುಸಿತಗಳೊಂದಿಗೆ 75,455.51 ಪಾಯಿಂಟ್‌ಗಳಿಷ್ಟಿದ್ದು, ನಿಫ್ಟಿ 50, 200 ಪಾಯಿಂಟ್‌ಗಳ ಕುಸಿತಗಳೊಂದಿಗೆ 23,442 ಕ್ಕೆ ತಲುಪಿದೆ. ಅಂತೂ ವಾರಾಂತ್ಯದ ಮಾರುಕಟ್ಟೆಯ ಆರಂಭದ ವಹಿವಾಟು ನಷ್ಟದಲ್ಲೇ ಆರಂಭವಾಗಿದೆ.
ಹೂಡಿಕೆದಾರರಲ್ಲಿ ಮನೆ ಮಾಡಿದ ಆತಂಕ
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಾಗುತ್ತಿರುವ ಬೆಲೆ ಏರಿಕೆಗಳು, ವಿಶ್ವದಾದ್ಯಂತ ಮಾಡುಕಟ್ಟೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಮಧ್ಯಪ್ರಾಚ್ಯದ ಯುದ್ಧ ಭಾರತ ಸೇರಿ, ಜಾಗತಿಕವಾಗಿ ಭಾರೀ ಪ್ರಭಾವ ಬೀರುತ್ತಿದೆ. ಅಲ್ಲದೇ ಪ್ರಮುಖ ಆಮದು ರಾಷ್ಟ್ರಗಳಲ್ಲಿ ಒಂದಾದ ಭಾರತ, ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ತೈಲ ಬೆಲೆ ಏರಿಕೆ, ಆಮದು ವೆಚ್ಚ ಹೆಚ್ಚಾದಾಗ ದೇಶದಲ್ಲಿ ಆರ್ಥಿಕ ಹೊರೆಯೂ ಹೆಚ್ಚಾಗುತ್ತಿದೆ. ಇದು ಸಾಮಾನ್ಯ ಜನರ ಮೇಲೂ ಪರಿಣಾಮ ಬೀಳಲಿದ್ದು, ಅತ್ತ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಇದೇ ಕಾರಣದಿಂದ ಹೂಡಿಕೆದಾರರು ತಮ್ಮ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.
ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣಗಳೇಣು?
ಮಾರುಕಟ್ಟೆ ಕುಸಿತಕ್ಕೆ ಮುಖ್ಯ ಕಾರಣವೇ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ. ಆದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಪ್ರಭಾವ ಬೀರುತ್ತಿದೆ.
ಕಚ್ಚಾ ತೈಲ ಬೆಲೆಗಳ ಏರಿಕೆ: ಬ್ರೆಂಟ್ ಕ್ರೂಡ್ ಆಯಿಲ್ ಸುಮಾರು $100 ಡಾಲರ್ ಅಥವಾ ಅದಕ್ಕಿಂತಲೂ ಅಧಿಕವಾಗಿ ವಹಿವಾಟು ನಡೆಸುತ್ತಿದೆ. ಇದು ಭಾರತದಂತಹ ಅತಿದೊಡ್ಡ ತೈಲ ಆಮದು ಮಾಡುವ ದೇಶಗಳಿಗೆ ಭಾರೀ ಪರಿಣಾಮ ಬೀರುತ್ತಿದೆ. ಇದರಿಂದ ಸದ್ಯ ದೇಶದಲ್ಲಿ ಹಣದುಬ್ಬರ, ಆರ್ಥಿಕ ವೆಚ್ಚ ಸೇರಿ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ವಿದೇಶಿ ಹೂಡಿಕೆದಾರರ ಮಾರಾಟ (FII Selling): ಅತ್ತ ಮಧ್ಯಪ್ರಾಚ್ಯದ ಯುದ್ಧದ ಬೆನ್ನಲ್ಲೇ, ಇತ್ತ ಎಫ್‌ಐಐಗಳು ಹಲವು ದಿನಗಳಿಂದ ಭಾರೀ ಮೊತ್ತದಲ್ಲಿ ಸೆಲ್ ಮಾಡುತ್ತಿದ್ದಾರೆ. ಇದು ಷೇರು ಮಾರುಕಟ್ಟೆ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications