ಗಿಫ್ಟ್ ನಿಫ್ಟಿ (Nifty) ಆರಂಭದಲ್ಲಿ ಸಕಾರಾತ್ಮಕವಾಗಿದ್ದರೂ, ಬುಧವಾರ ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಇಂಡೆಕ್ಸ್‌ಗಳು (Index) ಕಡಿಮೆ ಮಟ್ಟದಲ್ಲಿ ವಹಿವಾಟು ಆರಂಭಿಸಿದವು. ಆದರೂ, ಮಾರುಕಟ್ಟೆ ಓಪನ್ ಆಗುತ್ತಿದ್ದಂತೆ ಖರೀದಿಯ ವೇಗ ಹೆಚ್ಚಾಗಿ, 'ಓಪನ್ ಲೋ' ಮಾದರಿ ಉಂಟಾಯಿತು. ಅಲ್ಲದೇ ದಿನ ಸಾಗಿದಂತೆ, ಬೆಲೆಗಳು ಸ್ಥಿರವಾಗಿ ಏರುತ್ತಲೇ ಹೋಗಿದೆ. ಅಂತಿಮವಾಗಿ, ನಿಫ್ಟಿ 50 ಇಂಡೆಕ್ಸ್ 320 ಅಂಕಗಳ ಭಾರಿ ಏರಿಕೆ ಕಂಡಿತು. ಈ ಏರಿಕೆಯೊಂದಿಗೆ, ನಿಫ್ಟಿ ಹಿಂದಿನ ಮೂರು ದಿನಗಳ ಕುಸಿತದ ದಾಖಲೆಯನ್ನು ಮುರಿದು, ಇಡೀ ನಷ್ಟವನ್ನು ಸರಿದೂಗಿಸಿ ವರ್ಷದ ಅತ್ಯುನ್ನತ ಮಟ್ಟವನ್ನು ತಲುಪಿತು. ಇದು ಡಿಸೆಂಬರ್ ಸಂದರ್ಭಕ್ಕೆ ಹೊಸ ಭರವಸೆ ಎಂದು ಹೇಳಲಾಯಿತು.

ಬಿಎಸ್‌ಇ ಸೆನ್ಸೆಕ್ಸ್ 1,000 ಅಂಕಗಳಿಗೂ ಹೆಚ್ಚು ಏರಿಕೆ ಕಂಡು 85,609 ಕ್ಕೆ ತಲುಪಿದರೆ, ಬ್ಯಾಂಕ್ ನಿಫ್ಟಿ ಇಂಡೆಕ್ಸ್ 707 ಅಂಕಗಳ ಭಾರೀ ಜಿಗಿತದೊಂದಿಗೆ 59,528 ಕ್ಕೆ ತಲುಪಿತು.
ಪ್ರಭುದಾಸ್ ಲಿಲ್ಲಾಧರ್‌ನ ತಾಂತ್ರಿಕ ಸಂಶೋಧನಾ ವಿಭಾಗದ ಉಪಾಧ್ಯಕ್ಷೆ ವೈಶಾಲಿ ಪರೇಖ್, ಭಾರತೀಯ ಷೇರು ಮಾರುಕಟ್ಟೆ (Stock Market) ಸದ್ಯ ಪಾಸಿಟಿವ್ ಆಗಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು. ನಿಫ್ಟಿ 50 ಇಂಡೆಕ್ಸ್ 25,850 ರಿಂದ ಬಲವಾದ ಏರಿಕೆ ಕಂಡು 26,200 ಕ್ಕೆ ಏರಿದೆ. ಕೆಲವೇ ಸಮಯಗಳಲ್ಲಿ ಪ್ರಮುಖ ಇಂಡೆಕ್ಸ್ 26,500 ಮತ್ತು 27,200 ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ನಿಫ್ಟಿ 50 ಸೂಚ್ಯಂಕದ ಕುರಿತು ಮಾತನಾಡಿದ ವೈಶಾಲಿ ಪರೇಖ್, "ನಿಫ್ಟಿ 50 ಸೂಚ್ಯಂಕವು 25,850 ವಲಯದಿಂದ ತುಂಬಾನೇ ಏರಿಕೆಯ ಹಂತ ತಲುಪಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯನ್ನು ನಿರೀಕ್ಷಿಸಬಹುದು" ಎಂದು ಹೇಳಿದ್ದಾರೆ.
"ಇಂಡೆಕ್ಸ್ 25,750-25,800 ಬ್ಯಾಂಡ್‌ನಲ್ಲಿ ಪ್ರಮುಖ ಬೆಂಬಲವನ್ನು ಹೊಂದಿದೆ, ಇದು ಹಾಗೇ ಉಳಿಸಿಕೊಂಡರೆ ಉತ್ತಮ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ 26,500 ಮತ್ತು 27,200 ಮಟ್ಟಗಳನ್ನು ತಲುಪುವ ನಿರೀಕ್ಷೆಯಿದೆ," ಎಂದು ಪರೇಖ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ನಿಫ್ಟಿ ಇಂಡೆಕ್ಸ್ ಬಗ್ಗೆ ಮಾತನಾಡಿದ ಪರೇಖ್, "ಬ್ಯಾಂಕ್ ನಿಫ್ಟಿ ಸೂಚ್ಯಂಕವು ದೈನಂದಿನ ಚಾರ್ಟ್‌ನಲ್ಲಿ ಏರಿಕೆಯನ್ನು ತೋರಿಸಿದ್ದು, ಇದು ಮುಂದಿನ ದಿನಗಳಲ್ಲಿ ಹೊಸ ಏರಿಕೆಯನ್ನು ಕಾಣಬಹುದು" ಎಂದು ತಿಳಿಸಿದರು.
"ಇನ್ನು ಇಂಡೆಕ್ಸ್ 58,600 ವಲಯದ ಸಮೀಪ ಅಲ್ಪಾವಧಿಯ ಬೆಂಬಲವನ್ನು ಹೊಂದಿದೆ, ಇದೂ ಕೂಡಾ ಇದೇ ರೀತಿ ಮುಂದುವರೆಯಬೇಕು. ಮೇಲ್ಮಟ್ಟದಲ್ಲಿ, ಮುಂದಿನ ದಿನಗಳಲ್ಲಿ 61,400 ಮತ್ತು 63,500 ಮಟ್ಟಗಳನ್ನು ತಲುಪುವ ನಿರೀಕ್ಷೆಯಿದೆ," ಎಂದು ಪರೇಖಾ ಹೇಳಿದ್ದಾರೆ.
ಈ ಮೂಲಕ ನಿಫ್ಟಿ 50 ಇಂಡೆಕ್ಸ್ 26,100 ನಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಬ್ಯಾಂಕ್ ನಿಫ್ಟಿ ಇಂಡೆಕ್ಸ್ 59,000 ರಿಂದ 60,200 ರ ದೈನಂದಿನ ವ್ಯಾಪ್ತಿಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಇಂದು ಖರೀದಿಸಬಹುದಾದ ಷೇರುಗಳ ಕುರಿತು, ವೈಶಾಲಿ ಪರೇಖ್ ಅವರು ಇಂಟ್ರಾಡೇ ವಹಿವಾಟಿಗಾಗಿ ಮೂರು ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಅವುಗಳೆಂದರೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಕಲ್ಯಾಣ್ ಜ್ಯುವೆಲ್ಲರ್ಸ್ ಇಂಡಿಯಾ, ಮತ್ತು ಮೋರೆಪನ್ ಲ್ಯಾಬೊರೇಟರೀಸ್.
1. ಬಿಇಎಲ್: 413 ರೂ.ಗೆ ಖರೀದಿಸಿ, ಟಾರ್ಗೆಟ್ 430 ರೂ., ಸ್ಟಾಪ್ ಲಾಸ್ 408 ರೂ.
2. ಕಲ್ಯಾಣ್ ಜ್ಯುವೆಲ್ಲರ್ಸ್ ಇಂಡಿಯಾ: 496 ರೂ.ಗೆ ಖರೀದಿಸಿ, ಟಾರ್ಗೆಟ್ 510 ರೂ., ಸ್ಟಾಪ್ ಲಾಸ್ 490 ರೂ.
3. ಮೋರೆಪನ್ ಲ್ಯಾಬೊರೇಟರೀಸ್: 44 ರೂ.ಗೆ ಖರೀದಿಸಿ, ಟಾರ್ಗೆಟ್ 48 ರೂ., ಸ್ಟಾಪ್ ಲಾಸ್ 42 ರೂ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications