For Quick Alerts
ALLOW NOTIFICATIONS  
For Daily Alerts

FASTag ಹೈಬ್ರಿಡ್ ಲೇನ್ ಗಳ ಅವಧಿ ಫೆಬ್ರವರಿ 15ರ ತನಕ ವಿಸ್ತರಣೆ

By ಅನಿಲ್ ಆಚಾರ್
|

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫೆಬ್ರವರಿ 15ರ ತನಕ ಹೈಬ್ರಿಡ್ ಲೇನ್ ಗಳು ಕಾರ್ಯ ನಿರ್ವಹಿಸುತ್ತವೆ ಎಂದು ಸರ್ಕಾರದಿಂದ ತಿಳಿಸಲಾಗಿದೆ. ಜನವರಿ 1ರ ಶುಕ್ರವಾರದಿಂದ FASTag ಕಡ್ಡಾಯ ಎಂದು ಘೋಷಿಸಲಾಗಿತ್ತು. ಆದರೆ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಹೈಬ್ರಿಡ್ ಲೇನ್ ಗಳಲ್ಲಿ FASTag ಮತ್ತು ನಗದು ಎರಡೂ ಬಗೆಯಲ್ಲಿ ಪಾವತಿ ಮಾಡಬಹುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಸ್ಪಷ್ಟನೆ ನೀಡಿದೆ. "ಡಿಸೆಂಬರ್ 1, 2017ಕ್ಕೂ ಮುಂಚೆ ಮಾರಾಟ ಮಾಡಿದ M ಮತ್ತು N ಕ್ಯಾಟಗರಿ ವಾಹನಗಳಿಗೆ ಜನವರಿ 1, 2021ರಿಂದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು FASTag ಕಡ್ಡಾಯ ಮಾಡಿದೆ," ಎಂದು ಗುರುವಾರ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

2021ರ ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು2021ರ ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

M ಕ್ಯಾಟಗರಿ ಅಂದರೆ ಕನಿಷ್ಠ ನಾಲ್ಕು ಚಕ್ರದ ವಾಹನ ಆಗಿದ್ದು, ಅದರಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಂಥದ್ದು. ಇನ್ನು N ಕ್ಯಾಟಗರಿ ವಾಹನ ಅಂದರೆ, ಕನಿಷ್ಠ ನಾಲ್ಕು ಚಕ್ರದ ವಾಹನವಾಗಿದ್ದು, ಅದನ್ನು ಸರಕು ಸಾಗಣೆ ಮತ್ತು ಜನರನ್ನು ಒಯ್ಯುವುದಕ್ಕೂ ಬಳಸುವಂಥದ್ದು.

FASTag ಹೈಬ್ರಿಡ್ ಲೇನ್ ಗಳ ಅವಧಿ ಫೆಬ್ರವರಿ 15ರ ತನಕ ವಿಸ್ತರಣೆ

FASTag ಲೇನ್ ಗಳಲ್ಲಿ FASTag ಮೂಲಕ ಪಾವತಿ ಮಾತ್ರ ಸ್ವೀಕರಿಸುವುದು ಮುಂದುವರಿಯುತ್ತದೆ.

English summary

FASTag Hybrid Lane Extended Till February 15, 2021

Government has extended FASTag hybrid lane till February 15, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X