ಬೆಂಗಳೂರು, ಏಪ್ರಿಲ್ 13: ಭಾರತದ ಕೆಲವು ಆಯ್ದ ಭಾರತೀಯ ಗೇಮರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಅಪರೂಪದ ಅವಕಾಶ ಸಿಕ್ಕಿದೆ.
ಹೌದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗೇಮಿಂಗ್ ಉದ್ಯಮದ ಖ್ಯಾತನಾಮ ಯುವ ಗೇಮರ್ ಜೊತೆ ದೇಶದ ಗೇಮಿಂಗ್ ಉದ್ಯಮದ ಆಗು ಹೋಗುಗಳ ಕುರಿತು ಸಂವಾದ ನಡೆಸಿದರು. ಈ ವೇಳೆ ಆನ್ ಲೈನ್ ಜೂಜು ಮತ್ತು ಗೇಮಿಂಗ್ ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಿದರು.

ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊ ಪ್ರಕಾರ, ಏಳು ಗೇಮರ್ಸ್ ಗಳನ್ನು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಈ ಗೇಮರ್ ಗಳಲ್ಲಿ ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಠಾಣ್ ಕರ್, ಪಾಯಲ್ ಧಾರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಸೇರಿದ್ದಾರೆ. ಅಗರ್ವಾಲ್ ಮತ್ತು ಪಾಠಾಣ್ ಕರ್ ಪ್ರಧಾನಿ ಜೊತೆ ಸಂವಾದ ನಡೆಸಿರುವ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, "ಪ್ರಧಾನಿ ಅವರೊಂದಿಗಿನ ನಮ್ಮ ಇತ್ತೀಚಿನ ಸಂಭಾಷಣೆಯು ಉತ್ತೇಜನಕಾರಿಯಾಗಿತ್ತು" ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯವರೊಂದಿಗಿನ ಸಂವಾದದಲ್ಲಿ, ಉದಯೋನ್ಮುಖ ಗೇಮಿಂಗ್ ಉದ್ಯಮದ ಪ್ರಾಮುಖ್ಯತೆಯನ್ನು ಗೇಮರ್ ಗಳು ಚರ್ಚಿಸಿದರು. ಭಾರತೀಯ ಪುರಾಣಗಳಿಂದ ಗೇಮಿಂಗ್ ಉದ್ಯಮ ಹೇಗೆ ಪ್ರೇರಿತವಾಗಿದೆ ಮತ್ತು ಗೇಮಿಂಗ್ ಕ್ಷೇತ್ರಕ್ಕೆ ಗೇಮರ್ ಗಳ ಕ್ರಿಯಾತ್ಮಕವೂ ಕೊಡುಗೆಯನ್ನು ಭಾರತ ಸರ್ಕಾರ ಕೂಡಾ ಗುರುತಿಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ , ಗೇಮರ್ ಗಳು , ತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಿ ತಿಳಿದುಕೊಂಡಿರುವುದು ಮಾತ್ರವಲ್ಲದೇ, ವಿಶೇಷವಾಗಿ ಗೇಮಿಂಗ್ ಅನ್ನು ಜೂಜಾಟ ಎಂದು ತಪ್ಪು ಕಲ್ಪಿಸಿಕೊಳ್ಳವ ಬಗ್ಗೆ ಕೇಳಿದರು. 'ಕ್ಯಾ ಆಪ್ ಗೇಮಿಂಗ್ ಔರ್ ಜೂಜು ಕಿ ಲಡಾಯಿ ಫೇಸ್ ಕರ್ತೇ ಹೈನ್...?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೇಮರುಗಳು ಹಣ ಆಧಾರಿದ ಮತ್ತು ಕೌಶಲ್ಯ-ಆಧಾರಿತ ಗೇಮಿಂಗ್ ನಡುವೆ ವ್ಯತ್ಯಾಸವನ್ನು ಗುರುತಿಸುವ ಅಗತ್ಯವನ್ನು ಒತ್ತಿಹೇಳಿದರು. ಇದೇ ವೇಳೆ ಗೇಮಿಂಗ್ ಚಟಕ್ಕೆ ಸಂಬಂಧಿಸಿದ ಕಳವಳಗಳ ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
ಚರ್ಚೆಯ ನಂತರ, ಪಿಎಂ ಮೋದಿ ಅವರು ವಿಆರ್, ಮೊಬೈಲ್ ಮತ್ತು ಪಿಸಿ/ಕನ್ಸೋಲ್ ಗೇಮಿಂಗ್ ಸೇರಿದಂತೆ ವಿವಿಧ ಗೇಮ್ ಗಳ ಆಟವಾಡಿದರು. ಈ ಸಂವಹನವು ಗೇಮಿಂಗ್ ಉದ್ಯಮದ ಬೆಳೆಯುತ್ತಿರುವ ಮಹತ್ವವನ್ನು ಮತ್ತು ಅದರ ಅಭಿವೃದ್ಧಿಯಲ್ಲಿ ಸರ್ಕಾರದ ಆಸಕ್ತಿಯನ್ನು ಒತ್ತಿಹೇಳುತ್ತಿದೆ.
ಭಾರತದಲ್ಲಿ ಗೇಮಿಂಗ್ ಸಮುದಾಯವು ವಿಸ್ತಾರವಾಗಿದ್ದು, ಇದಕ್ಕೆ ಸುಮಾರು 450-550 ಮಿಲಿಯನ್ ಉತ್ಸಾಹಿ ಪ್ರೇಕ್ಷಕರು ಇದ್ದಾರೆ. ಉದ್ಯಮವು FY23 ರಲ್ಲಿ $3.1 ಶತಕೋಟಿಗೆ ಆದಾಯ ಏರಿಕೆಯನ್ನು ಕಂಡಿದೆ, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷದ $2.6 ಶತಕೋಟಿಗಿಂತ 19% ರಷ್ಟು ಗಮನಾರ್ಹ ಹೆಚ್ಚಳವಾಗಿದೆ.


Click it and Unblock the Notifications