ಬೆಂಗಳೂರು, ಏಪ್ರಿಲ್ 5: ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವನ ಸಂಗಾತಿಯ ಬಗ್ಗೆ ಒಂದಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ತಮ್ಮ ಸಂಗಾತಿಯಾಗುವವರ ಬಗ್ಗೆ ಒಬ್ಬೊಬ್ಬರು ಒಂದೊಂದು ಒಂದೊಂದು ರೀತಿಯ ಕನಸು ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ಮುಂಬೈನ 37 ರ ಹರೆಯದ ಮಹಿಳೆಯೊಬ್ಬರು ವರನ ಹುಡುಕಾಟದಲ್ಲಿ ಅವರ ನಿರೀಕ್ಷೆ ಆಕಾಂಕ್ಷೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಭಾವಿ ಪತಿಯಲಿ ಇರಬೇಕಾದ ಮಾನದಂಡಗಳು ಹಾಗೂ ನಿರೀಕ್ಷೆಗಳನ್ನು ವಿವರಿಸುವ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ಲಾಟ್‌ಫಾರ್ಮ್ X ನಲ್ಲಿ ವೈರಲ್ ಆಗಿದ್ದು, ಇದು ಚರ್ಚೆ ಹುಟ್ಟುಹಾಕಿದೆ. ಬಳಕೆದಾರರೊರಬ್ಬರು, ಸಂಭಾವ್ಯ ಪತಿಗಾಗಿ ಮಹಿಳೆಯ ನಿರ್ದಿಷ್ಟ ನಿರೀಕ್ಷೆಗಳನ್ನು ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ಆಕೆಗೆ ವರ್ಷಕ್ಕೆ ಕನಿಷ್ಠ 1 ಕೋಟಿ ರೂಪಾಯಿ ಸಂಪಾದಿಸುವ ವರ ಬೇಕು ಎಂದು ಹೇಳಿಕೊಂಡಿದ್ದಾರೆ.ಈ ಸ್ಕ್ರೀನ್‌ಶಾಟ್ ವಿವರಗಳು ಮರಾಠಿಯಲ್ಲಿದ್ದು ಅದನ್ನು ಬಳಿಕ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ.

ಮುಂಬೈನಲ್ಲಿ ಕೆಲಸ ಮಾಡುವ ಆ ಮಹಿಳೆ ಮನೆಯ ಮಾಲೀಕನಾಗಿರುವ ಅಥವಾ ನಗರದಲ್ಲಿ ಸ್ಥಿರವಾದ ಉದ್ಯೋಗ ಅಥವಾ ವ್ಯಾಪಾರ - ಉದ್ಯಮ ಹೊಂದಿರುವ ಸಂಗಾತಿಯ ಹುಡುಕಾಟದಲ್ಲಿದ್ದು, ಆತ ಉತ್ತಮ ಶಿಕ್ಷಿತ ಕುಟುಂಬದ ಹಿನ್ನೆಲೆಯಿಂದ ಬಂದಿರುವನಾಗಿರಬೇಕು. ಸರ್ಜನ್ ಅಥವಾ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಹೀಗೆ ಉತ್ತಮ ವೃತ್ತಿ ಹೊಂದಿರುವವರೂ ಅವರ ನಿರೀಕ್ಷೆಯಲ್ಲಿದ್ದಾರೆ.
ಈ ಸ್ಕ್ರೀನ್‌ಶಾಟ್ ಶೇರ್ ಮಾಡಿದ ನಂತರ, ಪೋಸ್ಟ್ 5 ಲಕ್ಷಕ್ಕೂ ಹೆಚ್ಚು ವಿವ್ಯ್ಸೂ ಪಡೆದಿದೆ. ಹಲವಾರು ಬಳಕೆದಾರರು ಈ ಪೋಸ್ಟ್‌ನ ಕಾಮೆಂಟ್ ಮಾಡಿದ್ದು ಈ ಪೈಕಿ ಬಳಕೆದಾರರೊಬ್ಬರು "ಐಟಿ ಡೇಟಾದ ಪ್ರಕಾರ, ಭಾರತದಲ್ಲಿ ಕೇವಲ 1.7 ಲಕ್ಷ ಜನರು ಕೇವಲ ಒಂದು ಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದ್ದರಿಂದ 37 ವರ್ಷ ವಯಸ್ಸಿನಲ್ಲಿ ತನ್ನ 'ಕನಸಿನ' ಸಂಗಾತಿ ಸಿಗುವ ಅವಕಾಶ 0.01% ಆಗಿದೆ ಎಂದು ಬರೆದಿದ್ದಾರೆ.
"ಮತ್ತೊಬ್ಬ ಬಳಕೆದಾರರು, "ಇದರಲ್ಲಿ ತಪ್ಪೇನಿಲ್ಲ. ಪ್ರತಿಯೊಬ್ಬರಿಗೂ ಆಯ್ಕೆ ಮಾಡುವ ಹಕ್ಕಿದೆ. ಆಕೆಗೆ ತನ್ನ ವರನನ್ನು ಆಯ್ಕೆ ಮಾಡುವ ಹಕ್ಕಿದೆ. ಹಾಗೆಯೇ, ಆಕೆಯನ್ನು ತಿರಸ್ಕರಿಸುವ ಹಕ್ಕು ಪುರುಷರಿಗೂ ಇದೆ" ಎಂದು ಪ್ರತಿಕ್ರಿಯಿಸಿದ್ದಾರೆ.
"1 ಕೋಟಿ ಗಳಿಸುವ ವರ, ಇಡೀ ಕುಟುಂಬವು ಮಾಸಿಕವಾಗಿ 30,000 ಗಳಿಸುವ ಮಹಿಳೆಯನ್ನು ಏಕೆ ಮದುವೆಯಾಗುತ್ತಾರೆ" ಎಂದು ಮತ್ತೋರ್ವ ಬಳಕೆದಾರರು ಪ್ರಶ್ನಿಸಿದ್ದಾರೆ. "ಈಕೆ ಶಾಪಿಂಗ್ ಅಮಲಿನಲ್ಲಿರುವಂತೆ ತೋರುತ್ತದೆ. ವರನಿಗೆ ಅವಶ್ಯವಿರಬೇಕಾದ ಗುಣಗಳಾದ ಜ್ಞಾನ, ಸಹನೆ, ವಾತ್ಯಲ್ಸ ,ಕುಟುಂಬದ ಹಿನ್ನಲೆ ಇತ್ಯಾದಿ ಗುಣಗಳನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆಕೆ ಬೇಕಾಗಿರುವುದು ಕೇವಲ ಹಣ" ಎಂದು ಮತ್ತೊಬ್ಬ ಬಳಕೆದಾರರು ವಿಡಂಬನೆ ಮಾಡಿದ್ದಾರೆ.
ಇನ್ನು ಮಹಿಳೆಯ ಕುಟುಂಬ ವಾರ್ಷಿಕವಾಗಿ ನಾಲ್ಕು ಲಕ್ಷ ವರಮಾನ ಹೊಂದಿದ್ದು, ಸಂಗಾತಿ ಒಂದು ವೇಳೆ ವಿದೇಶದಲ್ಲಿ ವಾಸಿಸುತ್ತಿದ್ದರೆ ಯುರೋಪ್ , ಇಟಲಿಯು ಆಕೆಯ ನಿರೀಕ್ಷೆಯ ಅಗ್ರಸ್ಥಾನದಲ್ಲಿದೆ.


Click it and Unblock the Notifications