2024ರ ವರ್ಷ ಕೊನೆಯಾಗಲು ಕೆಲವೇ ದಿನಗಳು ಬಾಕಿ ಇವೆ. ಎಲ್ಲರಿಗೂ ಆರ್ಥಿಕವಾಗಿ ಮತ್ತಷ್ಟು ಉತ್ತಮರಾಗಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಹೀಗಾಗಿ ಹೆಚ್ಚಿನ ಜನ ಉತ್ತಮ ರಿಟರ್ನ್ಸ್ ನೀಡುವ ಕಡೆ ಹೂಡಿಕೆ ಮಾಡಲು ಒಲವು ತೋರುತ್ತಾರೆ.
ಇನ್ನು ಹೂಡಿಕೆ ವಿಚಾರಕ್ಕೆ ಬಂದರೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಗುರಿಗಳೊಂದಿಗೆ ಹೂಡಿಕೆ ಮಾಡಿ ಎಂದು ಹೇಳಲಾಗುತ್ತದೆ. ನಿಮಗೆ ಹಣದ ಅಗತ್ಯವಿದ್ದರೆ, ನೀವು ಅಲ್ಪಾವಧಿಗೆ ಹೂಡಿಕೆ ಮಾಡುತ್ತಿರುವ ಆಯ್ಕೆಗಳನ್ನು ಅರಿಸಿಕೊಳ್ಳಬಹುದು. ಹೀಗಿದ್ದಾಗ ನೀವು ದೀರ್ಘಾವಧಿಯ ಯೋಜನೆಗಳನ್ನು ಹಾಗೆಯೇ ಮುಂದುವರಿಸಬಹುದು.

ಆರ್‌ಡಿ ಅಥವಾ ಮರುಕಳಿಸುವ ಠೇವಣಿ
ಮರುಕಳಿಸುವ ಠೇವಣಿ (RD) ನಿಯಮಿತ ಠೇವಣಿಗಳನ್ನು ಮಾಡಲು ಮತ್ತು ಹೂಡಿಕೆಯ ಮೇಲೆ ಆದಾಯವನ್ನು ಗಳಿಸಲು ಇರುವ ಬೇರೆ ಬೇರೆ ಅವಧಿಯ ಠೇವಣಿಯಾಗಿದೆ. ಸಣ್ಣ ಮೊತ್ತವನ್ನು ಮಾಸಿಕವಾಗಿ ನೀವು ಹೂಡಿಕೆ ಮಾಡಲು ಬಯಸಿದರೆ ಈ RD ಯೋಜನೆಯನ್ನು ನೀವು ಆರಿಸಿಕೊಳ್ಳಬಹುದು.
ಒಂದು ರೀತಿಯಲ್ಲಿ ನೋಡುವುದಾದರೆ ಈ ಯೋಜನೆಯು ಪಿಗ್ಗಿ ಬ್ಯಾಂಕ್ ಇದ್ದಂತೆ. ಆದರೆ ಇಲ್ಲಿ ನೀವು ಪ್ರತಿ ತಿಂಗಳು ಒಂದು ನಿರ್ಧಿಷ್ಟ ಮೊತ್ತವನ್ನು ಠೇವಣಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಯೋಜನೆ ಮುಕ್ತಾಯದ ನಂತರ ನೀವು ಬಡ್ಡಿ ಸೇರಿದಂತೆ ಒಟ್ಟು ಮೊತ್ತವನ್ನು ಪಡೆಯುತ್ತೀರಿ.
RD ಯಲ್ಲಿಯೂ ಸಹ ನೀವು 1 ವರ್ಷದಿಂದ ಹಿಡಿದು ವಿಭಿನ್ನ ಅವಧಿಯ ಆಯ್ಕೆಗಳನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ಆರಿಸಿಕೊಳ್ಳಬಹುದು. ಎಲ್ಲಾ ಬ್ಯಾಂಕ್‌ಗಳಲ್ಲಿ ಆರ್‌ಡಿ ಸೌಲಭ್ಯ ಸಿಗಲಿದೆ. ನೀವು ವಿವಿಧ ಬ್ಯಾಂಕ್‌ಗಳಲ್ಲಿ ಆರ್‌ಡಿಯಲ್ಲಿ ಲಭ್ಯವಿರುವ ಬಡ್ಡಿದರಗಳನ್ನು ಹೋಲಿಸಬೇಕು ಮತ್ತು ನೀವು ಹೆಚ್ಚಿನ ಬಡ್ಡಿಯನ್ನು ಪಡೆಯುವಲ್ಲೆಲ್ಲಾ ಹಣವನ್ನು ಹೂಡಿಕೆ ಮಾಡಬೇಕು. ನೀವು ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಆಯ್ಕೆಯನ್ನು ಸಹ ಪಡೆಯುತ್ತೀರಿ, ಆದರೆ ಅಲ್ಲಿ ಅದರ ಅವಧಿ 5 ವರ್ಷಗಳಾಗಿರುತ್ತದೆ.
ಬ್ಯಾಂಕ್ FD/ ಫಿಕ್ಸಿಡ್ ಡೆಪಾಸಿಟ್
ನಿಮ್ಮಲ್ಲಿರುವ ಹಣವನ್ನು ಒಂದು ಒಟ್ಟು ಮೊತ್ತವಾಗಿ ಠೇವಣಿ ಮಾಡಲು ಬಯಸಿದರೆ ನೀವು FD ಅಂದರೆ ಫಿಕ್ಸೆಡ್ ಡೆಪಾಸಿಟ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಪ್ರಸ್ತುತ ಇರುವ ಅನೇಕ ಹೂಡಿಕೆಯ ಆಯ್ಕೆಗಳ ಹೊರತಾಗಿಯೂ, ಫಿಕ್ಸೆಡ್ ಡೆಪಾಸಿಟ್ ಅನ್ನು ಅತ್ಯಂತ ಆದ್ಯತೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
ಡೆಟ್ ಮ್ಯೂಚುಯಲ್ ಫಂಡ್/ ಸಾಲದ ಮ್ಯೂಚುಯಲ್ ಫಂಡ್
ನೀವು ಕೇವಲ ಒಂದು ವರ್ಷದವರೆಗೆ ಮಾತ್ರ ಹೂಡಿಕೆ ಮಾಡಲು ಇಚ್ಚಿಸಿದ್ರೆ, ನೀವು ಸಾಲದ ಮ್ಯೂಚುವಲ್ ಫಂಡ್ ಆಯ್ಕೆಯನ್ನು ಅರಿಸಿಕೊಳ್ಳುವುದು ಉತ್ತಮ. ಯಾಕೆಂದರೆ ಅದರಲ್ಲಿ 12 ತಿಂಗಳವರೆಗೆ ಮಾತ್ರ ಹಣವನ್ನು ಹೂಡಿಕೆ ಮಾಡಬಹುದು. ನೀವು ಡೆಟ್ ಫಂಡ್‌ಗಳಲ್ಲಿ ಏನೇ ಹೂಡಿಕೆ ಮಾಡಿದರೂ ಅದನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ಸಾಲ ನಿಧಿಗಳು ನಿಗದಿತ ಮುಕ್ತಾಯ ದಿನಾಂಕವನ್ನು ಹೊಂದಿರುತ್ತವೆ. ಇದರಲ್ಲೂ ನೀವು ಉತ್ತಮ ಆದಾಯವನ್ನು ಪಡೆಯಬಹುದು.
SIP
ನೀವು ಅಲ್ಪಾವಧಿಗೆ ಮಾರುಕಟ್ಟೆಯಲ್ಲಿ ಇವು ಮನಸ್ಸು ಮಾಡಿದರೆ SIP ಅನ್ನು ಸಹ ಪ್ರಾರಂಭಿಸಬಹುದು. ಇದರಲ್ಲಿಯೂ ಸಹ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬಹುದು ಮತ್ತು ಈ SIP ಅನ್ನು ಮುಚ್ಚುವ ಮೂಲಕ ನಿಮಗೆ ಬೇಕಾದಾಗ ನಿಮ್ಮ ಹಣವನ್ನು ಬಳಸಬಹುದು.
SIP ನಲ್ಲಿ ವಿವಿಧ ಯೋಜನೆಗಳಿಂದ ನೀವು ಉತ್ತಮ ಆದಾಯವನ್ನು ಪಡೆಯಬಹುದು. ಸಾಮಾನ್ಯವಾಗಿ ತಜ್ಞರು ಅದರ ಸರಾಸರಿ ಆದಾಯವನ್ನು 12 ಪ್ರತಿಶತ ಎಂದು ಪರಿಗಣಿಸುತ್ತಾರೆ. ಆದರೆ ಇದು ಮಾರುಕಟ್ಟೆ ಲಿಂಕ್ ಆಗಿರುವುದರಿಂದ, ಇದು ಅಪಾಯವನ್ನು ಒಳಗೊಂಡಿರುತ್ತದೆ, ಆದ್ದರಿಂದ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ.


Click it and Unblock the Notifications