ಟಾಟಾ ಕೆಮಿಕಲ್ಸ್‌ಗೆ 103.63 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆ

ಬೆಂಗಳೂರು, ಮಾರ್ಚ್‌ 22: ಟಾಟಾ ಕೆಮಿಕಲ್ಸ್‌ಗೆ ಆದಾಯ ತೆರಿಗೆ ಇಲಾಖೆಯು ಅನುಮತಿ ಇಲ್ಲದ ಬಡ್ಡಿಗೆ, (disallowance of interest) ಸಂಬಂಧಿಸಿದ ಉಲ್ಲಂಘನೆಗಾಗಿ 103.63 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ.

ಟಾಟಾ ಕೆಮಿಕಲ್ಸ್ ಲಿಮಿಟೆಡ್ ಮಾರ್ಚ್ 21ರ ಗುರುವಾರದಂದು ರೆಗ್ಯುಲೇಟರಿ ಫೈಲಿಂಗ್‌ ನಲ್ಲಿ1961 ರ ಸೆಕ್ಷನ್ 270 ಎ ಅಡಿಯಲ್ಲಿ ರೂ.103,63,48,806/- ಕೋಟಿ ದಂಡ ವಿಧಿಸುವ ಆದೇಶ ಆದಾಯ ತೆರಿಗೆ ಇಲಾಖೆಯ ರಾಷ್ಟ್ರೀಯ ಫೇಸ್‌ಲೆಸ್ ಅಸೆಸ್‌ಮೆಂಟ್ ಸೆಂಟರ್‌ನಿಂದ ಆದೇಶವನ್ನು ಸ್ವೀಕರಿಸಿದೆ ಎಂದು ಹೇಳಿದೆ.

ಟಾಟಾ ಕೆಮಿಕಲ್ಸ್‌ಗೆ 103.63 ಕೋಟಿ ರೂ. ದಂಡ

ದಂಡವು ಪ್ರಾಥಮಿಕವಾಗಿ ಕಾಯಿದೆಯ ಸೆಕ್ಷನ್ 36(1)(iii) ಅಡಿಯಲ್ಲಿ disallowance of interest ಎಂದು ಟಾಟಾ ಕೆಮಿಕಲ್ಸ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಟಾಟಾ ಕೆಮಿಕಲ್ಸ್ ಈ ಆದೇಶದ ವಿರುದ್ಧ ರಾಷ್ಟ್ರೀಯ ಫೇಸ್‌ಲೆಸ್ ಅಸೆಸ್‌ಮೆಂಟ್ ಅಪೀಲ್ ಸೆಂಟರ್‌ ಮುಂದೆ ಮೇಲ್ಮನವಿ ಸಲ್ಲಿಸಲಿದ್ದು, ದಂಡವನ್ನು ರದ್ದುಗೊಳಿಸುವಂತೆ ಕೋರಿದೆ.

ವಿಷಯದ ಅರ್ಹತೆ, ಪ್ರಚಲಿತದಲ್ಲಿರುವ ಕಾನೂನು ಮತ್ತು ವಕೀಲರ ಸಲಹೆಯ ಆಧಾರದ ಮೇಲೆ, ಕಂಪನಿಯು ಈ ಆದೇಶದ ವಿರುದ್ಧ ರಾಷ್ಟ್ರೀಯ ಫೇಸ್‌ಲೆಸ್ ಅಸೆಸ್‌ಮೆಂಟ್ ಅಪೀಲ್ ಸೆಂಟರ್‌ (appellate authorities) ಮುಂದೆ ಮೇಲ್ಮನವಿ ಸಲ್ಲಿಸಲು ಯೋಜಿಸುತ್ತಿದ್ದು, ಅಪೀಲೇಟ್ ಆಥೋರಿಟಿಸ್ ನಿಂದ ಅನುಕೂಲಕರವಾದ ಆದೇಶಗಳನ್ನು ನಿರೀಕ್ಷಿಸುತ್ತದೆ" ಎಂದು ಟಾಟಾ ಕೆಮಿಕಲ್ಸ್ ಹೇಳಿದೆ.

ಟಾಟಾ ಕೆಮಿಕಲ್ಸ್ ಟಾಟಾ ಸಮೂಹದ ಕಂಪನಿಯಾಗಿದೆ. ಟಾಟಾ ಕೆಮಿಕಲ್ಸ್ ಲಿಮಿಟೆಡ್‌ನ ಷೇರುಗಳು ಬಿಎಸ್‌ಇಯಲ್ಲಿ ₹3.20 ಅಥವಾ 0.31% ರಷ್ಟು ಏರಿಕೆಯಾಗಿ ₹1,035.10 ಕ್ಕೆ ಕೊನೆಗೊಂಡಿತು.

ಟಾಟಾ ಕೆಮಿಕಲ್ಸ್ ಬಗ್ಗೆ:

ಟಾಟಾ ಗ್ರೂಪ್‌ನ ಭಾಗವಾಗಿರುವ ಟಾಟಾ ಕೆಮಿಕಲ್ಸ್ ಲಿಮಿಟೆಡ್ ರಾಸಾಯನಿಕಗಳು , ಬೆಳೆ ರಕ್ಷಣೆ ಮತ್ತು ವಿಶೇಷ ರಸಾಯನಶಾಸ್ತ್ರ ಉತ್ಪನ್ನಗಳಲ್ಲಿ ಆಸಕ್ತಿ ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ನಿಗಮವಾಗಿದೆ . ಇದು ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಭಾರತ, ಯುರೋಪ್, ಉತ್ತರ ಅಮೇರಿಕಾ ಮತ್ತು ಆಫ್ರಿಕಾದಾದ್ಯಂತ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಟಾಟಾ ಕೆಮಿಕಲ್ಸ್ ಟಾಟಾ ಗ್ರೂಪ್‌ನ ಒಂದು ಭಾಗವಾಗಿದೆ.

ಟಾಟಾ ಕೆಮಿಕಲ್ಸ್ ಭಾರತದಲ್ಲಿ ಮೂರನೇ ಅತಿದೊಡ್ಡ ಸೋಡಾ ಆಶ್ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ಹೊಂದಿದೆ. ಇದು ಭಾರತದಲ್ಲಿ ಕಪಿಲ್ರಾಮ್ ವಕೀಲ್ (ದಿವಂಗತ ಭಾರತೀಯ ನ್ಯಾಯಮೂರ್ತಿ ನಾನಾಭಾಯ್ ಹರಿದಾಸ್ ಅವರ ಮೊಮ್ಮಗ) ನಿರ್ಮಿಸಿದ ಎರಡನೇ ಸೋಡಾ ಸ್ಥಾವರವಾಗಿದ್ದು, ಇದು 1944 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+