ನವದೆಹಲಿ, ಮಾರ್ಚ್ 7: ರತನ್ ಟಾಟಾ ದೇಶದ ದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದು ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿರುವ ದೇಶದ ಅತ್ಯಂತ ಜನಪ್ರಿಯ ಬಿಲಿಯನೇರ್ ಇವರು ಭಾರತದ ಜನಪ್ರಿಯ ಉದ್ಯಮಿಯಷ್ಟೇ ಅಲ್ಲ. ಒಬ್ಬ ದೊಡ್ಡ ಮಾನವತಾವಧಿ ಕೂಡ ಹೌದು.
ಟಾಟಾ ಗ್ರೂಪ್ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೊಸ ಎತ್ತರಕ್ಕೆ ಏರುತ್ತಿದ್ದು, ಈ ಯಶಸ್ಸಿನ ಬಹುಪಾಲು ಶ್ರೇಯಸ್ಸು ರತನ್ ಟಾಟಾ ಮತ್ತು ಅವರ ಕುಟುಂಬಕ್ಕೆ ಸಲ್ಲುತ್ತದೆ. ಭಾರತದಲ್ಲಿನ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್ ತನ್ನ ಅಂಗಸಂಸ್ಥೆಗಳ ಮೂಲಕ ವ್ಯಾಪಕ ಶ್ರೇಣಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಗ್ರೂಪ್ ಅಡಿಯಲ್ಲಿರುವ ಹಲವಾರು ಕಂಪನಿಗಳು 1,00,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿವೆ. ಇತ್ತೀಚೆಗಷ್ಟೇ Rs 1,30,000 ಕೋಟಿ ಮಾರುಕಟ್ಟೆ ಕ್ಯಾಪ್ ಕ್ಲಬ್‌ಗೆ ಸೇರ್ಪಡೆಗೊಂಡ ಅಂತಹ ಒಂದು ಕಂಪನಿ ಟ್ರೆಂಟ್.

ಟಾಟಾ ಗ್ರೂಪ್‌ನ ಅಡಿಯಲ್ಲಿ ಅತ್ಯಂತ ಮೌಲ್ಯಯುತವಾಗಿರುವ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಟ್ರೆಂಟ್ ' ಭಾರತೀಯ ರಿಟೇಲ್ ಕಂಪನಿಯಾಗಿದ್ದು ಅದು ಭಾರತದಲ್ಲಿ ವೆಸ್ಟ್‌ಸೈಡ್, ಲ್ಯಾಂಡ್‌ಮಾರ್ಕ್ ಇತರ ಬ್ರ್ಯಾಂಡ್ ಗಳನ್ನು ನಿರ್ವಹಿಸುತ್ತದೆ. ಈಗ ರತನ್ ಟಾಟಾ ಅವರ ಸಹೋದರ ನೋಯೆಲ್ ಟಾಟಾ ನೇತೃತ್ವದಲ್ಲಿರುವ ಟ್ರೆಂಟ್ ಇಂದು ರಿಟೇಲ್ ದೈತ್ಯವಾಗಿ ಬೆಳೆದುನಿಂತಿದೆ. ಟ್ರೆಂಟ್ ಒಂದು ಕಾಲದಲ್ಲಿ ಸಿಮೋನ್ ಟಾಟಾ ನೇತೃತ್ವದಲ್ಲಿತ್ತು. ಸಿಮೋನ್ ಟಾಟಾ ರತನ್ ಟಾಟಾ ಅವರ ಮಲತಾಯಿಯಾಗಿದ್ದರು.
ಸಿಮೋನ್ ಟಾಟಾ ಹುಟ್ಟಿ ಬೆಳೆದದ್ದು ಜಿನೀವಾದಲ್ಲಿ. 23 ವರ್ಷ ವಯಸ್ಸಿನಲ್ಲಿ ಪ್ರವಾಸಿಯಾಗಿ ಭಾರತಕ್ಕೆ ಭೇಟಿ ನೀಡಿದಾಗ ರತನ್ ಟಾಟಾ ಅವರ ತಂದೆ ನವನ್ ಹೊರ್ಮುಸ್ಜಿ ಟಾಟಾ ಅವರನ್ನು ಭೇಟಿಯಾದರು. ಒಂದೆರಡು ವರ್ಷಗಳ ಕಾಲ ಜೊತೆಯಾಗಿದ್ದ ನಂತರ ಇಬ್ಬರೂ 1955 ರಲ್ಲಿ ವಿವಾಹವಾದರು. ಬಳಿಕ ಸಿಮೋನ್ ಶಾಶ್ವತವಾಗಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ನೆಲೆನಿಂತರು. 1957 ರಲ್ಲಿ ರತನ್ ಟಾಟಾ ಅವರ ಮಲತಾಯಿ ನೋಯೆಲ್ ಟಾಟಾ ಅವರಿಗೆ ಜನ್ಮ ನೀಡಿದರು.
ನೋಯೆಲ್‌ಗೆ ಜನ್ಮ ನೀಡಿದ ಕೆಲವು ವರ್ಷಗಳ ನಂತರ, ಸಿಮೋನ್ ಟಾಟಾ ಅವರು 1962 ರಲ್ಲಿ ಟಾಟಾ ಆಯಿಲ್ ಮಿಲ್ಸ್, ಲ್ಯಾಕ್ಮೆಯ ಸಣ್ಣ ಅಂಗಸಂಸ್ಥೆಯನ್ನು ಸೇರಿಕೊಂಡರು ಮತ್ತು ಕಂಪನಿಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಅವರು ಅಧ್ಯಕ್ಷರ ಶ್ರೇಣಿಗೆ ಏರಿದರು. ಸೌಂದರ್ಯ ವರ್ಧಕ ಲೋಕದಲ್ಲಿ ಲ್ಯಾಕ್ಮೆಯನ್ನು ಏಷ್ಯಾದ ಅತಿದೊಡ್ಡ ಬ್ರಾಂಡ್ ಆಗಿ ಬೆಳೆಸುವಲ್ಲಿ ಸಿಮೋನ್ ಅವರ ಪರಿಶ್ರಮ ಬಹಳ ಇತ್ತು. ಲ್ಯಾಕ್ಮೆಯ ಯಶಸ್ವಿನ ನಂತರ 1989ರಲ್ಲಿ ಸಿಮೋನ್ ಅವರು ಟಾಟಾ ಇಂಡಸ್ಟ್ರೀಸ್ ಆಡಳಿತ ಮಂಡಳಿಗೆ ನೇಮಕಗೊಂಡರು.
8 ವರ್ಷಗಳಲ್ಲಿ ಇದನ್ನು ದೊಡ್ಡ ಕಾಸ್ಮೆಟಿಕ್ ಬ್ರ್ಯಾಂಡ್ ಮಾಡಿದ ನಂತರ, ಟಾಟಾ 1996 ರಲ್ಲಿ ಹಿಂದೂಸ್ತಾನ್ ಲಿವರ್ ಲಿಮಿಟೆಡ್ (HLL) ಗೆ ಲ್ಯಾಕ್ಮೆ ಅನ್ನು ಮಾರಾಟ ಮಾಡಿತು ಮತ್ತು ಈ ಮಾರಾಟದಿಂದ ಬಂದ ಹಣದಿಂದ ಟಾಟಾ ಗ್ರೂಪ್ 'ವೆಸ್ಟ್‌ಸೈಡ್' ಹುಟ್ಟುಹಾಕಿತು. ಟ್ರೆಂಟ್ ಲಿಮಿಟೆಡ್ರಿಟೇಲ್ ಫ್ಯಾಷನ್ ಚೈನ್ "ವೆಸ್ಟ್‌ಸೈಡ್" ಮತ್ತು "ಲ್ಯಾಂಡ್‌ಮಾರ್ಕ್" ಎಂಬ ಪುಸ್ತಕದ ಅಂಗಡಿಯನ್ನು ನಿರ್ವಹಿಸುತ್ತದೆ. Lakme ಮಾರಾಟದ ನಂತರ, ಷೇರುದಾರರಿಗೆ ಟ್ರೆಂಟ್‌ನಲ್ಲಿ ಸಮಾನವಾದ ಷೇರುಗಳನ್ನು ನೀಡಲಾಯಿತು. ಸಿಮೋನ್ ಟಾಟಾ ಅವರು ಟ್ರೆಂಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ 30 ಅಕ್ಟೋಬರ್ 2006 ರವರೆಗೆ ಸೇವೆ ಸಲ್ಲಿಸಿದರು.


Click it and Unblock the Notifications